POLICE BHAVAN KALABURAGI

POLICE BHAVAN KALABURAGI

07 April 2017

Kalaburagi District Reported Crimes

 ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ರೂಪಚೆಂದ್ತಂದೆ ಶಾಹು ಚವ್ಹಾಣ ಸಾ: ನೀಲೆಗಾಂವ ತಾ: ತುಳಜಾಪೂರ ಜಿ; ಉಸ್ಮನಾಬಾದ್‌  ರವರು ದಿನಾಂಕ: 06/04/2017 ರಂದು ಬೆಳಗ್ಗೆ ಜೀರೊಳ್ಳಿ ತಾಂಡಾದಲ್ಲಿ ನಿಂಬಾಜಿ ಚವ್ಹಾಣ ಇವರ ಮನೆಯಲ್ಲಿ ಹೊಸದಾಗಿ ಬೀಗಸ್ತನ ಮಾಡಿದ್ದು ಮದುವೆ ದಿನಾಂಕ ತೆಗೆಯಲು ನೀಲೆಗಾಂವದಿಂದ ಜಿರೋಳ್ಳಿ ಗ್ರಾಮಕ್ಕೆ ನಮ್ಮ ಮೋಟಾರ್ಸೈಕಲ್ನಂ; ಎಮ್ಹೆಚ್‌ 25- ಝಡ್‌-5463 ಬಜಾಜ್ಡಿಸ್ಕವರಿ ಮೋಟಾರ್ಸೈಕಲ್ಮೇಲೆ ನಮ್ಮ ತಮ್ಮ ಕಿಶೋರ ಮತ್ತು ನಮ್ಮ ಸಂಬಂದಿ ಮೋಹನ್ತಂದೆ ನರಸಿಂಗ ರಾಠೋಡ ಇವರು ಮತ್ತು ಇನ್ನೊಂದು ಮೋಟಾರ್ಸೈಕಲ್ಮೇಲೆ ನಮ್ಮ ಕಾಕಾ ಶಂಕರ ಚವ್ಹಾಣ ಮತ್ತು ಸುರೇಶ ತಂದೆ ತಾರು ಜಾದವ ಇವರು ಕೂಡಿ ಬಂದಿದ್ದರು. ದಿನಾಂಕ: 06/04/2017 ರಂದು ಸಾಯಂಕಾಲ 5-00 ಘಂಟೆಗೆ ನಮ್ಮ ಕಾಕನಾದ ಶಂಕರ ಚವ್ಹಾಣ ಇವರು ಫೊನ್ಮಾಡಿ ವಿಷಯ ತಿಳಿಸಿದ್ದೇನೆಂದರೆ; ಸಾಯಂಕಾಲ 4-30 ಗಂಟೆಗೆ ಜೀರೊಳ್ಳಿ ಗ್ರಾಮಕ್ಕೆ ಹೋಗಿ ಮರಳಿ ನಮ್ಮೂರಿಗೆ ಬರಲು ಆಳಂದ - ವಾಗ್ದರಿ ರೋಡಿನ ಮುಖಾಂತರ ಎಮ್ಹೆಚ್‌ 25- ಝಡ್‌-5463 ಬಜಾಜ್ಡಿಸ್ಕವರಿ ಮೋಟಾರ್ಸೈಕಲ್ಮೇಲೆ ಕಿಶೋರ ಮತ್ತು ಮೋಹನ್ಇವರು ಕೂಡಿ ವಾಗ್ದರಿ ಕಡೆಗೆ ಹೊಗುತ್ತಿದ್ದಾಗ ಕಿಶೋರ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದನು. ನಾನು ಮತ್ತು ಸರೇಶ ಅವರ ಹಿಂದಿನಿಂದ ಇನ್ನೊಂದು ಮೋಟಾರ ಸೈಕಲ್ಮೇಲೆ ಹೋಗುತ್ತಿದ್ದಾಗ ಜಿಡಗಾ ಕಮಾನ ಹತ್ತಿರ ದಾಟಿ ಸ್ವಲ್ಪ ಮುಂದೆ ಹೋದಾಗ ಎದುರಿನಿಂದ ಅಂದರೆ ವಾಗ್ದರಿ ಕಡೆಯಿಂದ ಒಬ್ಬ ಲಾರಿ ನಂ ಟಿ.ಎನ್‌ 28- .ಎಫ್‌-4083 ನೇದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೆ ಕಿಶೋರ ಇವರ ಮೋಟಾರ್ಸೈಕಲ್ಗೆ ಲಾರಿ ಡಿಕ್ಕಿಪಡಿಸಿ ಅಪಘಾತ ಮಾಡಿರುವದರಿಂದ ಅವರು ಕೆಳಗಡೆ ಬಿದ್ದಾಗ ಮೋಹನ್ಇತನಿಗೆ ಹಣೆಗೆ ಹೊಟ್ಟೆಗೆ ಬಾಯಿಗೆ ಅಲ್ಲಲ್ಲಿ ಭಾರಿಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ ಸದ್ಯ ಕಲಬುರಗಿಗೆ ಆಸ್ಪತ್ರೆಗೆ ಅಂಬುಲೆನ್ಸದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕಿಶೋರ ಈತನಿಗೆ ತಲೆಗೆ ಹಣೆಗೆ ಕಾಲಿಗೆ ಕೈಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಎಂದು ತಿಳಿಸಿದರು. ನಂತರ ನಾವು ಗಾಬರಿಯಾಗಿ ನಮ್ಮ ಸಂಬಂದಿಕರು ಕೂಡಿ ಆಳಂದಕ್ಕೆ ಬಂದು ನೋಡಲು ಕಿಶೋರ ಈತನಿಗೆ ತಲೆಗೆ, ಹಣೆಗೆ, ಎದೆಗೆ, ಎರಡು ಕಾಲಿಗೆ ಬಾರಿಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು, ಎಡ ಕೈ ಮುರಿದು ಮೃತಪಟ್ಟಿದ್ದನು. ಅಪಘಾತ ಮಾಡಿದ ಲಾರಿ ಸ್ಥಳದಲ್ಲಿಯೇ ನಿಂತಿದ್ದು ಚಾಲಕನು ಓಡಿ ಹೋಗಿದ್ದನು. ಅವನ ಹೆಸರು ರಮೇಶ ತಂದೆ ವೆಂಕಟರಮಣ ಸಾ: ಪೈತುಂಬಾರೈ ತಾ: ಮುಸರಿ ತಮಿಳುನಾಡು ಎಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಬೇಗಂ ಗಂಡ ಸೈಯ್ಯದ ಜಿಲಾನಿ ಗಲ್ಪಾಡ ಸಾಃ ಆಂದೊಲಾ ತಾಃ ಜೇವರಗಿ ಇವರ ಹೋಲ ನಮ್ಮೂರ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ ನಮ್ಮ ಹೊಲದ ಪಕ್ಕದ ಸೈಯ್ಯದ ಮುಜೀಬ ಹುಸೇನ ಇವರ ಹೊಲ ಇದ್ದು ಅವರ ಹೊಲ ನಮ್ಮೂರ ಸೈಯ್ಯದ ಜಾಫರ್ ಹುಸೇನ ಇವರು ಪಾಲಿಗೆ ಮಾಡಿರುತ್ತಾರೆ ಅವರು ನಮ್ಮ ಹೊಲದಲ್ಲಿ ದನಗಳು ಬಿಟ್ಟಿದಾಗ ಕೇಳಿದರೆ ಅವರಿಗೂ ನಮಗೂ 2 ತಿಂಗಳ ಹಿಂದೆ ಜಗಳ ಆಗಿರುತ್ತದೆ ಅದರಿಂದ ಅವರಿಗೂ ನಮಗೂ ವೈಮನಸ್ಸು ಇರುತ್ತದೆ. ಮತ್ತು ಅವರು ನಾನು ಹೊಲಕ್ಕೆ ಹೋಗುವಾಗ ಮತ್ತು ಬರುವಾಗ ನೊಡಿ ಅವಾಚ್ಯವಾಗಿ ಬೈಯುವುದು ಮಾಡುತ್ತಾ ಬಂದಿರುತ್ತಾರೆ ನಾನು ಎಲ್ಲಿ ಅವರ ಸಂಗಡ ಜಗಳ ಅಂತಾ ಸುಮ್ಮನಿದ್ದೆನು  ದಿನಾಂಕ 02.04.2017 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ 1) ಸೈಯ್ಯದ ಜಾಫರ್ ಹುಸೇನ ಗಲ್ಪಾಡ, 2)ಸೈಯದ ಸಾದೀಕ ಹುಸೇನ @ ಸದ್ದು 3) ಸೈಯ್ಯದ ಹುಸೇನ ತಂದೆ ಸೈಯದ ಕಾಸಿಂ ಹುಸೇನ 4) ದವಲತಬಿ ಗಂಡ ಖಾಜಾ ಹುಸೇನ ಕೂಕನೂರ 5)ಮೌಲಾಲಿ ತಂದೆ ಖಾಜಾ ಹುಸೇನ ಕೂಕನೂರ 6) ನಬೀಸಾ ತಂದೆ ಖಾಜಾ ಹುಸೇನ ಕೂಕನೂರ 7) ಇಸ್ಮಾಯಿಲ್ ತಂದೆ ಖಾಜಾ ಹುಸೇನ ಕೂಕನೂರ 8) ಸಾಜೀದಾ ಗಂಡ ಅನ್ವರ ಪಾಷಾ 9)ಸಾಧಿಕಾ ಗಂಡ ಜಾಫರ್ ಹುಸೇನ 10) ಅನ್ವರ ತಂದೆ ಮಹ್ಮದ್ ಹುಸೇನ ಸಾಃ ಎಲ್ಲರೂ ಆಂದೊಲಾ ಇವರು ಕೂಡಿಕೊಂಡು ನಮ್ಮ ಮನೆಯ ಎದುರುಗಡೆ ಬಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ನಾನು ಅವರಿಗೆ ನನಗೆ ಯಾಕೆ? ಬೈಯುತ್ತಿದ್ದಿರಿ ಅಂತಾ ಅಂದಾಗ ಸೈಯದ ಜಾಫರ್ ಹುಸೇನ ಇತನು ಏ ಬೊಸಡಿ ನನಗೆ ಎದುರು ಮಾತನಾಡುತಿ ನೀನಗೆ ಸೊಕ್ಕು ಬಹಳ ಬಂದಿದೆ ರಂಡಿ ಅಂತಾ ಅವಾಚ್ಯವಾಗಿ ಬೈಯ್ದು ನನ್ನ ಎರಡು ಕೈ ಒತ್ತಿ ಹಿಡಿದು ಬಳೆ ಒಡೆದಿರುತ್ತಾನೆ ಕೂದಲೂ ಹಿಡಿದು ಜಗ್ಗಿ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು  ಸೈಯದ ಸಾದೀಕ ಹುಸೇನ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿರುತ್ತಾನೆ. ಸಾಜೀದಾ ಇವಳು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದಿರುತ್ತಾಳೆ, ಉಳಿದವರೆಲ್ಲರೂ ಈ ರಂಡಿದು ಓಣಿಯಲ್ಲಿ ಬಹಳ ನಡೆದಿದೆ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿರುತ್ತಾರೆ. ಮತ್ತು  ಸೈಯದ ಜಾಫರ್ ಹುಸೇನ ಇತನು  ಏ ಬೊಸಡಿ ಇನ್ನೊಮ್ಮೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಂಗಣ್ಣ ಮಡಿವಾಳ ಸಾ: ಬಿದ್ದಾಪೂರ ಕಾಲೋನಿ ಕಲಬುರಗಿ ರವರ ಮತ್ತು ರಾಜಶೇಖರ ತಂದೆ ಶರಣಪ್ಪಾ  ರವರ ಮಧ್ಯ ಹೊಲದ ಪಾಲಿಸ ಸಂಬಂಧ ತಂಟೆ ತಕರಾರು ಇದ್ದು ದಿನಾಂಕ 04-04-17 ರಂದು 07:30 ಪಿ.ಎಮ್ ಕ್ಕೆ ಕರಜಗಿ ಗ್ರಾಮದ ಆಯಿ ಮುತ್ಯಾನ ಮನೆಯ ಮುಂದೆ ಸದರಿ ರಾಜಶೇಖರ ತಂದೆ ಶರಣಪ್ಪಾ ಸಂಗಡ 8 ಜನರು ಎಲ್ಲರು ಸಾ : ಕರಜಗಿ ಮತ್ತು ಕೋಳಕುರ ಗ್ರಾಮದವರು ಕುಡಿಕೊಂಡು  ಗುಂಪು ಕಟ್ಟಿಕೊಂಡು ಬಂದು ಫೀರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾಕು ಮತ್ತು ಕೈ ಯಿಂದ ಹೊಡೆ ಬಡೆ ಮಾಡಿದ್ದರಿಂದ ಕೈಗೆ, ಹೊಟ್ಟೆಗೆ, ಬೆನ್ನಿಗೆ ರಕ್ತಗಾಯ ಪಡೆಸಿ ಜೀವದ ಭಯ ಹಾಕಿದ್ದು  ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀ ಸುರೇಶ ತಂದೆ ಲಕ್ಷ್ಮೀಪುತ್ರ ಸಾ : ದೇಶಮುಖ ಗಲ್ಲಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ 04/02/17 ರಂದು ರಾತ್ರಿ 10.30 ಕ್ಕೆ ತನ್ನ ಮೋಟಾರ ಸೈಕಲ ನಂ.ಕೆಎ.32 ಕ್ಯೂ.2792 ಅ.ಕಿ.25000/-ರೂ ನೇದ್ದು ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ ಕಾಣಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 06.04.2016 ರಂದು ಮುಂಜಾನೆ ಶ್ರೀ ಸಂಗಪ್ಪ ತಂದೆ ಗುರಪ್ಪ ಕರಕಿಹಳ್ಳಿ ಸಾಃ ಕೆಲ್ಲೂರ ತಾಃ ಜೇವರಗಿ  ಮತ್ತು ನನ್ನ ಹೆಂಡತಿ ಕಾಶಿಬಾಯಿ ಸೋಸೆ ಆಶ್ವಿನ ಮೂವರು ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದಿನ ಮನೆಯವರಾದ 1)  ಭಗವಂತರಾಯ ತಂದೆ ಬಸವರಾಜ ಹಂಚಿನಾಳ, 2) ಪರಶುರಾಮ ತಂದೆ ಬಸವರಾಜ ಹಂಚಿನಾಳ 3) ಶಾಂತಬಾಯಿ ಗಂಡ ಬಸವರಾಜ 4) ಬಸವರಾಜ ತಂದೆ ಮಲ್ಲೇಶಿ ಹಂಚಿನಾಳ ಸಾಃ ಎಲ್ಲರು ಕೆಲ್ಲೂರ ಎಲ್ಲರು ಕೂಡಿಕೊಂಡು ನಮ್ಮ ಮನೆಯ ಅಂಗಳದಲ್ಲಿ ಬಂದು ನಮಗೆ ಎಲೇ ಹೊಲೆಯ ಸೂಳಿ ಮಕ್ಕಳೆ ನೀಮ್ಮ ಸೊಕ್ಕ ಬಹಳ ಆಗ್ಯಾದ ನೀಮ್ಮ ಮನೆ ಕಿತ್ತಿ ಹಾಕುತ್ತೆವೆ ನೀವು ಇಲ್ಲಿ ಇರಬಾರದು ಅಂತ ಅವ್ಯಾಚ್ಯ ಶಬ್ದಗಳಿಂದ  ಬೈಯುತ್ತಿದ್ದಾಗ ನಾನು ಅವರಿಗೆ ವಿನಾಕಾರಣ ನಮಗೆ ಯಾಕೆ? ಬೈಯುತ್ತಿದ್ದಿರಿ ಅಂದಿದ್ದಕ್ಕೆ  ಅವರು ನನಗೆ ಜೋರಾಗಿ ದಬ್ಬಿದಾಗ ನಾನು ನೇಲಕ್ಕೆ ಬಿದ್ದೆನು.  ನನ್ನ ಹೆಂಡತಿಗೆ  ಬೈದು, ಅವಳ ಮೈ ಮೇಲಿನ ಸೀರೆ ಎಳೆದು ಅವಳಿಗೂ ದಬ್ಬಿದ್ದಾರೆ & ನನ್ನ ಸೋಸೆ ಆಶ್ವಿನಿ  ತುಂಬು ಗರ್ಬಿಣಿ ಇದ್ದು ಇವಳ ಮೇಲೂ ಹಲ್ಲೆ ಮಾಡಲಿಕ್ಕೆ ಪ್ರಯತ್ನಿಸಿರುತ್ತಾರೆ. ಈಗ ಎರಡು ದಿವಸಗಳ ಹಿಂದೆ ನನ್ನ ಅಳಿಯನ ಕಾರು ನಮ್ಮ ಮನೆಯ ಮುಂದೆ ನಿಂತಾಗ ಭಗವಂತರಾಯ ಇತನು ತನ್ನ ಟ್ರ್ಯಾಕ್ಟರನ್ನು ಹಾಯಿಸಿ ಕಾರು ಜಖಂ ಮಾಡಿದ್ದನ್ನು ಕೇಳಿದಾಗ ಅವರಿಗು ನಮಗು ಜಗಳ ಆಗಿದ್ದು ಅದಕ್ಕೆ ಅವರು ಇವತ್ತು ನಮ್ಮ ಮನೆಯವರೆಗೆ ಬಂದು  ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ನಮಗೆ ಊರು ಬಿಟ್ಟು ನಮ್ಮ ಮನೆಯನ್ನು ಮತ್ತೊಬ್ಬರಿಗೆ ಮಾರಬೇಕೆಂದು ಬೇದರಿಸಿರುತ್ತಾರೆ.  ಅಲ್ಲದೆ ಮುಂದೆ  ಈ ಮನೆಯಲ್ಲಿ ಸಂಸಾರ ಮಾಡಲು ಕಷ್ಟವಾಗುತ್ತದೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: