ಬಾಲ್ಯ ವಿವಾಹ ತಡೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಶೈಲ ತಂದೆ ಬಾಬುರಾವ ಬರ್ದಿ ಸಾ: ಮೇಳಕುಂದಾ (ಬಿ) ಸಂಗಡ ಇನ್ನೂ 22 ಜನರು ಕುಡಿಕೊಂಡು ದಿನಾಂಕ 10-04-2017
ರಂದು
ಮೇಳಕುಂದಾ (ಬಿ) ಗ್ರಾಮದ ಶ್ರೀ ಬೋಗಲಿಂಗೇಶ್ವರ ದೇವ ಸ್ಥಾನದಲ್ಲಿ ಅಪ್ರಾಪ್ತ
ಬಾಲಕಿಯಾದ ಶಿವಲಿಂಗಮ್ಮಾ ವ: 16 ವರ್ಷ ಇವಳಿಗೆ ಮದುವೆ ನಿಶ್ಚಯಿಸಿದ್ದು.
ಸದರಿ ಮದುವೆ ಬಾಲ್ಯವಿವಾಹ ಮಾಡಬಾರದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಇತರೆ
ಸಾಮಾಜಸೇವಕರ ತಿಳಿಹೇಳಿದರು ಕೇಳದೆ ಇರುವದರಿಂದ ಸದರಿ ಯವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಶ್ರೀ
ಚಿಕ್ಕ ವೆಂಕಟ ರಮಣಪ್ಪಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕಲಬುರಗಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 04-04-2017 ರಂದು ಶ್ರೀ ಪ್ರಕಾಶ ತಂದೆ ಮಲಕಾಜಪ್ಪಾ ಅಂಗಡಿ ಸಾ: ದೇವಿನಗರ ಕಲಬುರಗಿ ಮತ್ತು ಅವನ
ಚಿಕ್ಕಪ್ಪಾ ಇಬ್ಬರು ತಮ್ಮ ಮೋ ಸೈಕಲ ನಂ ಕೆಎ 32 ಯು 9512 ನೇದ್ದರ ಮೇಲೆ ಕಲಬುರಗಿಯಿಂದ ಹೋಗುತ್ತಿರುವಾಗ ಕೊಳ್ಳೂರ ಗ್ರಾಮ ದಾಟಿ 1/2 ಕಿಮಿ ದೂರ ಹೋಗುತ್ತಿದ್ದಾಗ ಎದುರಿನಿಂದ ಬಂದ ಕ್ರೋಜರ ಜೀಪ ನಂ ಎಪಿ 23 ವೈ 8227 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-04-2017 ರಂದು
ರಾತ್ರಿ ಯಲ್ಲಪ್ಪಾ ತಂದೆ ರಾಣಪ್ಪಾ ಎಂಟಮನ ಸಾ:
ನದಿಸಿನ್ನೂರ ಇವನು ಸರಾಯಿ ಕುಡಿದ ನಶೆಯಲ್ಲಿ ತೋರಾಡುತ್ತಾ ಮನೆಗೆ ಬಂದು ಜೋಲಿ ಹೋಗಿ ಮನೆಯ
ಮುಂದಿನ ಕಟ್ಟೆಯ ಮೇಲೆ ಬಿದಿದ್ದರಿಂದ ತಲೆಗೆ ಬಾರಿ ಪೆಟ್ಟಗಿ ಬೇಹುಷಾಗಿದ್ದರಿಂದ ಉಪಚಾರ ಕುರಿತು
ಆಸ್ಪತ್ರೆ ಸೇರಿಕೆ ಮಾಡಿದ್ದು ಉಪಚಾರದಿಂದ ಗುಣಮುಖ ನಾಗದೆ ದಿನಾಂಕ 04-04-2017 ರಂದು ರಾತ್ರಿ 11 ಗಂಟೆಗೆ ಜಿಜಿಹೆಚ್ ಆಸ್ಪತೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರೇಣುಕಾ
ಗಂಡ ಯಲ್ಲಪ್ಪಾ ಎಂಟಮನ ಸಾ: ನದಿಸಿನ್ನೂರ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment