POLICE BHAVAN KALABURAGI

POLICE BHAVAN KALABURAGI

12 February 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ಮನೋಹರ  ಹೊಟಕರ  ಸಾ: ಭಾರ್ಶಿ ಹಾಲ ವಸತಿ ಪ್ಲಾಟ ನಂ 71 ಭವಾನಿ ನಿಲಯ ಪೊಲೀಸ ಹೇಲಿಪ್ಯಾಟ ಮೈದಾನದ ಹತ್ತಿರ ಸೇಡಂ ರಸ್ತೆ ಕಲಬುರಗಿ ರವರ ಮದುವೆಯು ದಿನಾಂಕ: 29.05.2013 ರಂದು ವಿಜಯಲಕ್ಷ್ಮೀ ಕಲ್ಯಾಣ ಮಂಟಪ ಆರ್.ಟಿ.ಓ ಆಫೀಸ ಹತ್ತಿರ ಕಲಬುರಗಿಯಲ್ಲಿ ಮನೋಹರ ತಂದೆ ಫಕೀರಪ್ಪಾ  ಹೋಟಕರ  ಇವರೊಂದಿಗೆ ಸಮಾಜ  ಹಿರಿಯರ ಹಾಗೂ  ನೆಂಟರ ಸಮಕ್ಷಮ ಸಂಪ್ರದಾಯದ ಪ್ರಕಾರ ಜರುಗಿರುತ್ತದೆ. ಮದುವೆಯಲ್ಲಿ 6 ತೊಲೆ ಬಂಗಾರ, 25 ಸಾವಿರ ರೂಪಾಯಿ ಹೀಗೆ ಅಂದಾಜು ಮದುವೆಯ ವೆಚ್ಚ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ಒಂದು ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ನಂತರ ನನ್ನ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಸೇರಿಕೊಂಡು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದು ನನ್ನ ಗಂಡ ಮನೋಹರ ಇತನು ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ದಿನಾಲೂ ನನ್ನ ಗಂಡ ನನಗೆ ಹೊಡೆ ಬಡೆ ಮಾಡುತ್ತಿದ್ದನು. ನೀನು ನಿನ್ನ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹಣ ತಂದರೆ ಮಾತ್ರ ನಿನಗೆ ಮನೆಯಲ್ಲಿಟ್ಟುಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾನು ಇತ್ತೀಚೆಗೆ 2 ತಿಂಗಳಿಂದ ನನ್ನ ತವರುಮನೆಯಾದ ಕಲಬುರಗಿಯಲ್ಲಿ  ಇದ್ದು, ದಿನಾಂಕ 02-02-2016 ರಂದು 2-30 ಗಂಟೆ ಸುಮಾರಿಗೆ ನನ್ನ ಗಂಡನು ತವರು ಮನೆಗೆ ಬಂದು ನನಗೆ ಸಾಲವಾಗಿರುತ್ತದೆ ನಿನ್ನ ತಂದೆ ತಾಯಿಯವರಿಂದ  4 ಲಕ್ಷ ರೂಪಾಯಿ ಹಣ ಕೊಡಿಸು ಇಲ್ಲದಿದ್ದರೆ ನಾನು ನಿನಗೆ ಇಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಸಿಕ್ಕಾಪಟ್ಟೆ ಹೊಡೆಯುವಾಗ ನನ್ನ ತಾಯಿ ಲಿಂಬಾಬಾಯಿ , ವೈನಿಯರಾದ ರಂಜನಾ, ಇವರು ಬಂದು ಜಗಳ ಬಿಡಿಸಿರುತ್ತಾರೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹೇಳಿದ ನನ್ನ ಗಂಡ ಮನೋಹರ ಮತ್ತು ಮಾವ ಫಕೀರಪ್ಪಾ ಅತ್ತೆ  ಸೋಜರ ಬಾಯಿ, ಮೈದುನ ಅನಂತ, ನಾದಿನಿ ಕವಿತಾ, ರೂಪಾ ಸಂಗೀತಾ ,ಸವಿತಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-01-2016 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಎಗಮ್ಮ ಇಬ್ಬರು ಕರಜಗಿ ರೋಡಿಗೆ ವಾಯು ವಿಹಾರಕ್ಕೆ ಹೋಗಿದ್ದು ನಾವಿಬ್ಬರು ವಾಯು ವಿಹಾರ ಮಾಡಿಕೊಂಡು ಮರಳಿ ಕರಜಗಿ ರೋಡಿನ ಕಡೆಯಿಂದ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ನಮ್ಮೂರಿನ ನೀರಿನ ಟಾಕಿ ಹತ್ತಿರ ಅಂದಾಜು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಬರುತ್ತಿದ್ದಾಗ ಎದರುಗಡೆಯಿಂದ ನಮ್ಮೂರಿನ ಸೋಮಣ್ಣ ತಂದೆ ಮುತ್ತಣ್ಣ ಕನ್ನೋಟ್ಟಿ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ತಾಯಿಗೆ ಡಿಕ್ಕಿಪಡಿಸಿದನು, ಸದರಿ ಡಿಕ್ಕಿಯಿಂದ ನನ್ನ ತಾಯಿಯ ಏಡಗೈ ಭುಜದ ಹತ್ತಿರ ಗುಪ್ತಗಾಯ, ಎಡಕಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬಲ ಮೋಳಕಾಲಿಗೆ ಬಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿತ್ತು, ಹಾಗೂ ಮೈ ಕೈಗೆ ಸಣ್ಣ ಪುಟ್ಟ ತರಚಿದ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಆಗ ನಾನು ಮತ್ತು ಅದೆ ಸಮಯಕ್ಕೆ ಬಂದ ನಮ್ಮೂರಿನ ದಾನಪ್ಪ ವಾಂಗಿ, ಬಸು ಮೇತ್ರಿ, ಬಸುಗೌಡ ಬಿರಾದಾರ ಎಲ್ಲರೂ ಕೂಡಿ ನನ್ನ ತಾಯಿಯನ್ನು ಉಪಚರಿಸಿದೆವು, ಸದರಿ ನಮ್ಮ ತಾಯಿಗೆ ಡಿಕ್ಕಿಯಾದ ಮೋಟರ ಸೈಕಲ ನಂ ನೋಡಿದ್ದು ಅದರ ನಂಬರ ಕೆಎ-32 ಕ್ಯೂ-3816 ಅಂತಾ ಇರುತ್ತದೆ. ನಂತರ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನನ್ನ ತಾಯಿಯನ್ನು ಒಂದು ಖಾಸಗಿ ವಾಹನದಲ್ಲಿ ಸೋಲ್ಲಾಪೂರದ ಕೋಠಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ಅಂತಾ ಶ್ರೀ ಸಂಜಿವಕುಮಾರ ತಂದೆ ಅಶೋಕ ಮೇತ್ರಿ ಸಾ|| ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 February 2016

Kalaburagi District Reported Crimes

ಗೃಹಣಿಗೆ ಕಿರುಕಳ ನೇಡಿದ ಪ್ರಕರಣ :
ಸೇಡಂ ಠಾಣೆ : ಗಾಯಾಳು ಶ್ರೀಮತಿ ಜಯಶ್ರೀ ಇವಳಿಗೆ ವಿಚಾರಣೆ ಮಾಡಿದ್ದು ಸದರಿಯವಳು ಹೇಳಿಕೆ ಕೊಡಲು ಅರ್ಹಳಿರುವದಿಲ್ಲ ಅಂತಾ ವೈದ್ಯಾಧಿಕಾರಿಗಳಿಂದ ಧೃಡೀಕರಣ ಪಡೆದುಕೊಂಡು ನಂತರ ಅಲ್ಲಿ ಹಾಜರಿದ್ದ ಗಾಯಾಳುವಿನ ತಂದೆಯಾದ ಶ್ರೀ ನಾಗಣ್ಣ ತಂದೆ ವೀರಸಂಗಪ್ಪ ಬೇಲಕಟ್ಟಿ ಸಾ:ಸೇಡಂ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತನ್ನ ಮಗಳಾದ ಜಯಶ್ರೀ ಇವಳ ಮದುವೆಯು 8-9 ವರ್ಷಗಳ ಹಿಂದೆ ತೇಲಕೂರ ಗ್ರಾಮದ ನಾಗೇಂದ್ರಪ್ಪ ಪೋಚಟ್ಟಿ ಇವನೊಂದಿಗೆ ಮಾಡಿಕೊಟ್ಟಿದ್ದು, ಅವರು ಹೊಟ್ಟೆಪಾಡಿಗಾಗಿ ಅಗ್ಗಿ ಬಸವೇಶ್ವರ ಕಾಲೊನಿಯಲ್ಲಿ ಬಂದು ವಾಸವಾಗಿದ್ದು , ನಂತರ ಸದರಿ ನಾಗೇಂದ್ರಪ್ಪನು ನನ್ನ ಮಗಳಿಗೆ ದಿನಾಲು ವಿನಾಕಾರಣ ಅವಾಚ್ಯವಾಗಿ ಬೈಯುವದು ಹೊಡೆಬಡೆ ಮಾಡುವದು, ನೀನು ಸರಿಯಾಗಿ ಅಡುಗೆ ಮಾಡಿಕೊಡುವದಿಲ್ಲ, ನೀನು ಇದ್ದು ಏನು ಮಾಡುತ್ತಿ ಸತ್ತು ಹೋಗು ಅಂತಾ ಹೇಳಿ ಮಾನಸಿಕ ಹಾಗು ದೈಹಿಕ ಹಿಂಸೆ ಕೊಡುತ್ತಿದ್ದನು. ನಾವು ಅವಳಿಗೆ ಮತ್ತು ಅವಳ ಗಂಡನಿಗೆ ಸರಿಯಾಗಿ ಇರುವ ಕುರಿತು ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 06/02/2016 ರಂದು ಮುಂಜಾನೆ 10-30 ಗಂಟೆಗೆ ನನ್ನ ಮಗಳಾದ ಜಯಶ್ರೀ ಇವಳು ನಮ್ಮ ಮನೆಗೆ ಬಂದು ತನಗೆ ತನ್ನ ಗಂಡನು ಹೊಡೆ ಮಾಡುತ್ತಿದ್ದು ನನಗೆ ಗಂಡನಿಂದ ಸಾಕಾಗಿದೆ ಅಂತಾ ನಮ್ಮ ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚೀರಾಡಹತ್ತಿದಳು. ಆಗ ನಾನು ಮತ್ತು ನನ್ನ ಹೆಂಡತಿ ಮೈಮೇಲೆ ನೀರು ಹಾಕಿ ಬೆಂಕಿ ಆರಿಸಿದ್ದೇವೆ. ನಂತರ ಅವಳಿಗೆ ನಾವು ಸೇಡಂ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗಳು ಉಪಚಾರ ಪಡೆಯುತ್ತಿದ್ದಾಳೆ. ನಾಗೇಂದ್ರಪ್ಪ ತಂದೆ ದೇವೆಂದ್ರಪ್ಪ ಪೋಚಟ್ಟಿ ಸಾ:ತೇಲಕೂರ ಹಾ:ವ: ಅಗ್ಗಿ ಬಸವೇಶ್ವರ ಕಾಲೊನಿ ಸೇಡಂ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ನೀಡಿದ್ದು ಆ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿಯ ಗಾಯಾಳು ಮೈಸುಟ್ಟುಕೊಂಡಿದ್ದ ಜಯಶ್ರೀ ಗಂಡ ನಾಗೇಂದ್ರಪ್ಪ ಪೊಚಟ್ಟಿ, ಇವಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೇ ದಿನಾಂಕ 11-02-2016 ರಂದು ಮೃತಪಟ್ಟಿರುತಯ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಸಂತರಾವ ತಂದೆ ಶ್ರೀನಿವಾಸರಾವ ಕುಲಕರ್ಣಿ ಸಾ|| ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ 07-02-2016 ರಂದು ಮುಂಜಾನೆ 6.30 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಶೀಲಾ ಕುಲಕರ್ಣಿ ಇಬ್ಬರೂ ಪಂಡರಾಪೂರ ದರ್ಶನ ಕುರಿತು ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ 08-02-2016 ರಂದು ರಾತ್ರಿ 9.15 ಗಂಟೆಗೆ ಬಂದಿರುತ್ತೇವೆ ಮನೆಗೆ ಬಂದು ಬಾಗೀಲ ಕೀಲಿ ತೆರೆದು ಬಾಗೀಲು ತೆರೆಯಲು ಹೋದಾಗ ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ತೆರೆಯಬೇಕು ಅಂತಾ ಹೋದಾಗ ಹಿಂದಿನ ಬಾಗೀಲು ತೆರೆದಿದ್ದು ಇದ್ದು ನಾವು ಒಳಗೆ ಹೋಗಿ ನೋಡಲು ಮನೆಯಲ್ಲಿದ್ದ  ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿ ಆಗಿ ಬಿದ್ದಿದವು ನಾನು ನಮ್ಮ ಅಲಮಾರದಲ್ಲಿದ್ದ ಸಾಮಾನುಗಳು ನೋಡಲು 40 ಗ್ರಾಂ ಬಂಗಾರದ 2 ಪಾಟಲಿಗಳು, 50 ಗ್ರಾಂ ಬಂಗಾರದ ಬಿಲವಾರ, 35 ಗ್ರಾಂ 3 ಎಳೆಯ ಸರ 35 ಗ್ರಾಂ ಮಂಗಳಸೂತ್ರ, 05 ಗ್ರಾಂ ಮುತ್ತಿನ ಸರ 03 ಗ್ರಾಂ ಗಟ್ಟಿ ಬಂಗಾರ ಹೀಗೆ ಒಟ್ಟು 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ & ನಗದು ಹಣ 38000/-ರೂ ಇರಲಿಲ್ಲ ಇನ್ನೊಂದು ರೂಮೀನಲ್ಲಿ ಇಟ್ಟಿದ್ದ ಅಂದಾಜು 15 ತೊಲೆಯ ಬಂಗಾರದ ಆಭರಣಗಳು & 1.1/2 (ಒಂದುವರೆ ಕೆ.ಜಿ) ಬೆಳ್ಳಿಯ ಸಾಮಾಗ್ರಿಗಳು ಇರುತ್ತವೆ. ಕಾರಣ ಅಲಮಾರದಲ್ಲಿದ್ದ 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ ಹಾಗೂ ನಗದು ಹಣ 38000/-ರೂ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲಿಟರ ಮುರಿದು ಒಳಗೆ ಪ್ರವೇಶಮಾಡಿ ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 February 2016

Kalaburagi District Reported Crimes

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಸುಮಾರು 5-6 ವರ್ಷಗಳ ಹಿಂದೆ ಮಾಲಗತ್ತಿ ಗ್ರಾಮದ  ಬಾಗಪ್ಪಾ ಇವರ ಮಗನಾದ ಮಲ್ಲಿಕಾರ್ಜುನ ಇವನೊಂದಿಗೆ  ಮದುವೆ ಮಾಡಿಕೊಟ್ಟಿದ್ದು ಸದ್ಯ ನನ್ನ ಮಗಳಿಗೆ ಮೂರು ವರ್ಷದ ಹೆಣ್ಣು ಮಗಳು ಇರುತ್ತಾಳೆ.  ಹೀಗಿದ್ದು  ಮಾಲಗತ್ತಿಯಲ್ಲಿನ  ಶರಣಪ್ಪಾ  ಕೋನಳ್ಳಿ  ಇತನು  ನನ್ನ  ಮಗಳೊಂದಿಗೆ  ಮೈ  ಕೈ ಮುಟ್ಟಿ  ಮಾತನಾಡುವದು,  ಚುಡಾಯಿಸುವದು  ಮಾಡುತ್ತಿದ್ದನು  ಈ ಬಗ್ಗೆ  ನನ್ನ  ಅಳಿಯ  ಮತ್ತು  ಅವರ  ಮನೆಯವರು  ಹಾಗೂ  ನಾನು ಶರಣಪ್ಪನಿಗೆ  ನನ್ನ ಮಗಳಿಗೆ  ಮದುವೆ ಆಗಿ ಒಂದು  ಮಗು  ಇದೆ ಈ ರೀತಿ  ಮಾಡಿದರೆ ಅವಳ ಸಂಸಾರ  ಹಾಳಾಗುತ್ತದೆ ಅಂತಾ  ಹೇಳಿದರೂ  ಕೂಡ  ಆತನು  ಕೇಳುತ್ತಿರಲಿಲ್ಲಾ ತನ್ನ ಚಾಳಿ ಬಿಟ್ಟಿರಲಿಲ್ಲಾ. ಹೀಗಿದ್ದು   ದಿನಾಂಕ 06/02/2016 ರಂದು ಸಾಯಂಕಾಲ ನನ್ನ ಅಳಿಯನಾದ ಮಲ್ಲಿಕಾರ್ಜುನ ಮಾಲಗತ್ತಿ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ, ನಿನ್ನ ಮಗನ್ನು ನಮ್ಮೂರ ಶರಣಪ್ಪಾ ತಂದೆ ಸಾಬಣ್ಣಾ ಕೊನಳ್ಳಿ ಇತನು ಮದ್ಯಾನ್ನ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಇವಳಿಗೆ ಹೆದರಿಸಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ಸುಮಂಗಲಾ ನನ್ನ ಮಾವ ಬಸವರಾಜ ಎಲ್ಲರೂ ಕೂಡಿಕೊಂಡು ಮಾಲಗತ್ತಿಗೆ ಬಂದು ಊರಲ್ಲಿ ವಿಚಾರಿಸಲಾಗಿ ನನ್ನ ದೊಡ್ಡ ಅಳಿಯ ಸೂರ್ಯಕಾಂತ ಇತನು ತಿಳಿಸಿದ್ದೆನೆಂದರೆ, ನಮ್ಮೂರ ಶರಣಪ್ಪಾ ಇತನು ಪೂಜಾ ಇವಳಿಗೆ ಇಂದು ಮದ್ಯಾನ್ನ 02-00 ಗಂಟೆಯ ಸುಮಾರಿಗೆ ನಾನು ಹನುಮಾನ ದೇವರ ಗುಡಿಯ ಹತ್ತಿರ ಕುಳಿತಾಗ ಶರಣಪ್ಪಾ ಕೊನಳಿ ಇತನು ಕರೆದುಕೊಂಡು ಹೋಗುವುದು ನಾನು ನೋಡಿರುತ್ತೇನೆ ಅಂತಾ ತಿಳಿಸಿದಾಗ.  ನಾವೆಲ್ಲರು  ಕೂಡಿ ಅಂದಿನಿಂದ  ವಾಡಿ, ಚಿತ್ತಾಪೂರ,  ದಂಡೋತಿ,  ಟೆಂಗಳಿ,  ಮಾಡಬೂಳ,  ಮತ್ತು ಇತರೆ ಕಡೆ ಹುಡಿಕಾಡಿದರೂ  ಸಿಕ್ಕಿರುವದಿಲ್ಲಾ.   ನನ್ನ ಮಗಳಿಗೆ  ಶರಣಪ್ಪಾ  ಕೋನಳ್ಳಿ  ಇತನು ಹೆದರಿಸಿ  ಪುಸಲಾಯಿಸಿ  ಹಠಸಂಬೋಗ  ಮಾಡುವ  ಉದ್ದೇಶದಿಂದ ಅಪಹರಿಸಿಕೊಂಡು  ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-09/02/2016 ರಂದು ರಾತ್ರಿ 7-30 ಪಿ.ಎಮ್ ದ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಮಹಮ್ಮದ ಇಸ್ಲಾಂ ಮುತ್ತಗಿ ಇತನ ಹತ್ತಿರ ವಿದ್ದ ಕೆಎ-32 ಇಇ-9607 ನೇದ್ದು ಮೋಟಾರ ಸೈಕಲ ತೆಗೆದುಕೊಂಡು ಖಾಸಗಿ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಬರೋಣ ಅಂತಾ ನಾವಿಬ್ಬರೂ ಕೊಡಿಕೊಂಡು ಸದರ ಮೋ.ಸೈಕಲ ಮೇಲೆ ಹೊರಟು ಸದರ ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಹಮ್ಮದ ಇಸ್ಲಾಂ ಹಿಂದುಗಡೆ ಕುಳಿತುಕೊಂಡಿದ್ದು ನಮ್ಮಂತೆ  ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ತಂದೆ ರಸೂಲಸಾಬ ಇವರಿಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ನಮ್ಮ ಹಿಂದುಗಡೆ ಕಲಬುರಗಿಗೆ ಹೊರಟ್ಟಿದ್ದು. ನಾವುಗಳು ಮುಗುಟಾ ಕ್ರಾಸ್ ದಾಟಿ ವೇರ ಹೌಸ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಮೋ.ಸೈಕಲ ಸಮೇತ ರೊಡಿನ ಪಕ್ಕದಲ್ಲಿ ಬಿದ್ದೆವು ನಮ್ಮ ಹಿಂದುಗಡೆ ಬರುತ್ತಿದ್ದ ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ಇವರಿಬ್ಬರೂ ಬಂದು ನಮಗೆ ಎಬ್ಬಿಸಿದರು. ನನಗೆ ಬಲಗೈ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಂತಾಗಿರುತ್ತದೆ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ನಂತರ ಮಹಮ್ಮದ ಇಸ್ಲಾಂ ಇತನಿಗೆ ನೋಡಲಾಗಿ ಬಲಗಾಲು ಹಾಗೂ ಬೆರಳು ಹತ್ತಿರ ಭಾರಿ ರಕ್ತಗಾಯವಾಗಿ ಬಲಗಾಲು ಮುರಿದಂತಾಗಿರುತ್ತದೆ. ಹಾಗೂ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ನಂತರ ನಮ್ಮ ಗ್ರಾಮದವರು ಜಿ.ವ್ಹಿ.ಆರ್. ಅಂಬಿಲೈನ್ಸಗೆ ಪೋನ್ ಮಾಡಿ ಕರೆಯಿಸಿ ನನಗೆ ಹಾಗೂ ಮಹಮ್ಮದ ಇಸ್ಲಾಂ ಇಬ್ಬರಿಗೆ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಸದರಿ ಮಹಮ್ಮದ ಇಸ್ಲಾಂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಉಮರ ತಂದೆ ಇಲಿಯಾಸ ನಾಲವಾರ ಸಾ : ದಂಡೋತಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲ;ಇಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 28/29/01/2016 ರಂದು ಯಾರೋ ಅಪರಿಚಿತ ಕಳ್ಳರು ಸೊಂತ ಗ್ರಾಮದ ಶ್ರೀ ಚಂದ್ರಶೇಖರ ಸ್ಮಾರಕ ಸರ್ಕಾರಿ ¥Ëæಢ ಶಾಲೆಯ ಕೊಣೆಯಲ್ಲಿ ಇಟ್ಟ 8 ಬ್ಯಾಟರಿಗಳು ಅ.ಕಿ. 8ರಿಂದ 10 ಸಾವಿರ ರೋಪಾಯಿ ಬೆಲೆಬಾಳುವ ಬ್ಯಾಟರಿಗಳನ್ನು ರಾತ್ರಿ ವೇಳೆಯಲ್ಲಿ ಶಾಲೆಯ ಕೊಣೆಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 09-02-2016 ರಂದು ಹಾವಳಗಾ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದರಾಯ ಭೋಸಗಿ  ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರೇಣುಕಾ ಸಕ್ಕರೆ ಕಾರ್ಖಾನೆ ಹತ್ತಿರ ಹಾವಳಗಾ ರೋಡಿಗೆ ಹೋಗುತಿದ್ದಾಗ   ನಮ್ಮ ಎದುರಿನಿಂದ ಎರಡು ಟಿಪ್ಪರಗಳು ಬರುತಿದ್ದು, ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು   ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1916 ಅ.ಕಿ 5,00,000/-ರೂ 2) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1917 ಅ.ಕಿ 5,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲ;ಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.