ಗೃಹಣಿಗೆ ಕಿರುಕಳ ನೇಡಿದ ಪ್ರಕರಣ :
ಸೇಡಂ ಠಾಣೆ : ಗಾಯಾಳು ಶ್ರೀಮತಿ ಜಯಶ್ರೀ ಇವಳಿಗೆ ವಿಚಾರಣೆ ಮಾಡಿದ್ದು ಸದರಿಯವಳು ಹೇಳಿಕೆ ಕೊಡಲು
ಅರ್ಹಳಿರುವದಿಲ್ಲ ಅಂತಾ ವೈದ್ಯಾಧಿಕಾರಿಗಳಿಂದ ಧೃಡೀಕರಣ ಪಡೆದುಕೊಂಡು ನಂತರ ಅಲ್ಲಿ ಹಾಜರಿದ್ದ
ಗಾಯಾಳುವಿನ ತಂದೆಯಾದ ಶ್ರೀ ನಾಗಣ್ಣ ತಂದೆ ವೀರಸಂಗಪ್ಪ ಬೇಲಕಟ್ಟಿ ಸಾ:ಸೇಡಂ ಈತನ ಹೇಳಿಕೆ
ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತನ್ನ ಮಗಳಾದ ಜಯಶ್ರೀ ಇವಳ ಮದುವೆಯು 8-9 ವರ್ಷಗಳ ಹಿಂದೆ
ತೇಲಕೂರ ಗ್ರಾಮದ ನಾಗೇಂದ್ರಪ್ಪ ಪೋಚಟ್ಟಿ ಇವನೊಂದಿಗೆ ಮಾಡಿಕೊಟ್ಟಿದ್ದು, ಅವರು ಹೊಟ್ಟೆಪಾಡಿಗಾಗಿ ಅಗ್ಗಿ ಬಸವೇಶ್ವರ ಕಾಲೊನಿಯಲ್ಲಿ ಬಂದು
ವಾಸವಾಗಿದ್ದು , ನಂತರ ಸದರಿ ನಾಗೇಂದ್ರಪ್ಪನು ನನ್ನ ಮಗಳಿಗೆ ದಿನಾಲು ವಿನಾಕಾರಣ
ಅವಾಚ್ಯವಾಗಿ ಬೈಯುವದು ಹೊಡೆಬಡೆ ಮಾಡುವದು, ನೀನು ಸರಿಯಾಗಿ ಅಡುಗೆ ಮಾಡಿಕೊಡುವದಿಲ್ಲ, ನೀನು ಇದ್ದು ಏನು ಮಾಡುತ್ತಿ ಸತ್ತು ಹೋಗು ಅಂತಾ ಹೇಳಿ ಮಾನಸಿಕ ಹಾಗು
ದೈಹಿಕ ಹಿಂಸೆ ಕೊಡುತ್ತಿದ್ದನು. ನಾವು ಅವಳಿಗೆ ಮತ್ತು ಅವಳ ಗಂಡನಿಗೆ ಸರಿಯಾಗಿ ಇರುವ ಕುರಿತು
ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 06/02/2016 ರಂದು ಮುಂಜಾನೆ 10-30
ಗಂಟೆಗೆ ನನ್ನ ಮಗಳಾದ ಜಯಶ್ರೀ ಇವಳು ನಮ್ಮ ಮನೆಗೆ ಬಂದು ತನಗೆ ತನ್ನ ಗಂಡನು ಹೊಡೆ ಮಾಡುತ್ತಿದ್ದು
ನನಗೆ ಗಂಡನಿಂದ ಸಾಕಾಗಿದೆ ಅಂತಾ ನಮ್ಮ ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ
ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚೀರಾಡಹತ್ತಿದಳು. ಆಗ ನಾನು ಮತ್ತು ನನ್ನ ಹೆಂಡತಿ ಮೈಮೇಲೆ
ನೀರು ಹಾಕಿ ಬೆಂಕಿ ಆರಿಸಿದ್ದೇವೆ. ನಂತರ ಅವಳಿಗೆ ನಾವು ಸೇಡಂ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ
ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗಳು
ಉಪಚಾರ ಪಡೆಯುತ್ತಿದ್ದಾಳೆ. ನಾಗೇಂದ್ರಪ್ಪ ತಂದೆ ದೇವೆಂದ್ರಪ್ಪ ಪೋಚಟ್ಟಿ ಸಾ:ತೇಲಕೂರ ಹಾ:ವ:
ಅಗ್ಗಿ ಬಸವೇಶ್ವರ ಕಾಲೊನಿ ಸೇಡಂ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ
ಹೇಳಿಕೆ ನೀಡಿದ್ದು ಆ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿಯ
ಗಾಯಾಳು ಮೈಸುಟ್ಟುಕೊಂಡಿದ್ದ ಜಯಶ್ರೀ ಗಂಡ ನಾಗೇಂದ್ರಪ್ಪ ಪೊಚಟ್ಟಿ, ಇವಳು ಆಸ್ಪತ್ರೆಯಲ್ಲಿ ಉಪಚಾರ
ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೇ ದಿನಾಂಕ 11-02-2016 ರಂದು ಮೃತಪಟ್ಟಿರುತಯ್ತಾಳೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಸಂತರಾವ ತಂದೆ ಶ್ರೀನಿವಾಸರಾವ ಕುಲಕರ್ಣಿ ಸಾ|| ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ
07-02-2016 ರಂದು ಮುಂಜಾನೆ 6.30 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ
ಶೀಲಾ ಕುಲಕರ್ಣಿ ಇಬ್ಬರೂ ಪಂಡರಾಪೂರ ದರ್ಶನ ಕುರಿತು ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ
08-02-2016 ರಂದು ರಾತ್ರಿ 9.15 ಗಂಟೆಗೆ ಬಂದಿರುತ್ತೇವೆ ಮನೆಗೆ ಬಂದು ಬಾಗೀಲ ಕೀಲಿ ತೆರೆದು
ಬಾಗೀಲು ತೆರೆಯಲು ಹೋದಾಗ ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ತೆರೆಯಬೇಕು ಅಂತಾ ಹೋದಾಗ ಹಿಂದಿನ
ಬಾಗೀಲು ತೆರೆದಿದ್ದು ಇದ್ದು ನಾವು ಒಳಗೆ ಹೋಗಿ ನೋಡಲು ಮನೆಯಲ್ಲಿದ್ದ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿ ಆಗಿ ಬಿದ್ದಿದವು ನಾನು
ನಮ್ಮ ಅಲಮಾರದಲ್ಲಿದ್ದ ಸಾಮಾನುಗಳು ನೋಡಲು 40 ಗ್ರಾಂ ಬಂಗಾರದ 2 ಪಾಟಲಿಗಳು, 50 ಗ್ರಾಂ ಬಂಗಾರದ ಬಿಲವಾರ, 35 ಗ್ರಾಂ 3 ಎಳೆಯ ಸರ 35 ಗ್ರಾಂ ಮಂಗಳಸೂತ್ರ, 05 ಗ್ರಾಂ ಮುತ್ತಿನ ಸರ 03 ಗ್ರಾಂ ಗಟ್ಟಿ ಬಂಗಾರ ಹೀಗೆ
ಒಟ್ಟು 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ & ನಗದು ಹಣ 38000/-ರೂ ಇರಲಿಲ್ಲ ಇನ್ನೊಂದು ರೂಮೀನಲ್ಲಿ
ಇಟ್ಟಿದ್ದ ಅಂದಾಜು 15 ತೊಲೆಯ ಬಂಗಾರದ ಆಭರಣಗಳು & 1.1/2 (ಒಂದುವರೆ ಕೆ.ಜಿ) ಬೆಳ್ಳಿಯ ಸಾಮಾಗ್ರಿಗಳು ಇರುತ್ತವೆ. ಕಾರಣ
ಅಲಮಾರದಲ್ಲಿದ್ದ 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ ಹಾಗೂ ನಗದು ಹಣ
38000/-ರೂ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲಿಟರ ಮುರಿದು ಒಳಗೆ ಪ್ರವೇಶಮಾಡಿ ಕಳುವುಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment