POLICE BHAVAN KALABURAGI

POLICE BHAVAN KALABURAGI

12 February 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ಮನೋಹರ  ಹೊಟಕರ  ಸಾ: ಭಾರ್ಶಿ ಹಾಲ ವಸತಿ ಪ್ಲಾಟ ನಂ 71 ಭವಾನಿ ನಿಲಯ ಪೊಲೀಸ ಹೇಲಿಪ್ಯಾಟ ಮೈದಾನದ ಹತ್ತಿರ ಸೇಡಂ ರಸ್ತೆ ಕಲಬುರಗಿ ರವರ ಮದುವೆಯು ದಿನಾಂಕ: 29.05.2013 ರಂದು ವಿಜಯಲಕ್ಷ್ಮೀ ಕಲ್ಯಾಣ ಮಂಟಪ ಆರ್.ಟಿ.ಓ ಆಫೀಸ ಹತ್ತಿರ ಕಲಬುರಗಿಯಲ್ಲಿ ಮನೋಹರ ತಂದೆ ಫಕೀರಪ್ಪಾ  ಹೋಟಕರ  ಇವರೊಂದಿಗೆ ಸಮಾಜ  ಹಿರಿಯರ ಹಾಗೂ  ನೆಂಟರ ಸಮಕ್ಷಮ ಸಂಪ್ರದಾಯದ ಪ್ರಕಾರ ಜರುಗಿರುತ್ತದೆ. ಮದುವೆಯಲ್ಲಿ 6 ತೊಲೆ ಬಂಗಾರ, 25 ಸಾವಿರ ರೂಪಾಯಿ ಹೀಗೆ ಅಂದಾಜು ಮದುವೆಯ ವೆಚ್ಚ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ಒಂದು ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ನಂತರ ನನ್ನ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಸೇರಿಕೊಂಡು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದು ನನ್ನ ಗಂಡ ಮನೋಹರ ಇತನು ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ದಿನಾಲೂ ನನ್ನ ಗಂಡ ನನಗೆ ಹೊಡೆ ಬಡೆ ಮಾಡುತ್ತಿದ್ದನು. ನೀನು ನಿನ್ನ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹಣ ತಂದರೆ ಮಾತ್ರ ನಿನಗೆ ಮನೆಯಲ್ಲಿಟ್ಟುಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾನು ಇತ್ತೀಚೆಗೆ 2 ತಿಂಗಳಿಂದ ನನ್ನ ತವರುಮನೆಯಾದ ಕಲಬುರಗಿಯಲ್ಲಿ  ಇದ್ದು, ದಿನಾಂಕ 02-02-2016 ರಂದು 2-30 ಗಂಟೆ ಸುಮಾರಿಗೆ ನನ್ನ ಗಂಡನು ತವರು ಮನೆಗೆ ಬಂದು ನನಗೆ ಸಾಲವಾಗಿರುತ್ತದೆ ನಿನ್ನ ತಂದೆ ತಾಯಿಯವರಿಂದ  4 ಲಕ್ಷ ರೂಪಾಯಿ ಹಣ ಕೊಡಿಸು ಇಲ್ಲದಿದ್ದರೆ ನಾನು ನಿನಗೆ ಇಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಸಿಕ್ಕಾಪಟ್ಟೆ ಹೊಡೆಯುವಾಗ ನನ್ನ ತಾಯಿ ಲಿಂಬಾಬಾಯಿ , ವೈನಿಯರಾದ ರಂಜನಾ, ಇವರು ಬಂದು ಜಗಳ ಬಿಡಿಸಿರುತ್ತಾರೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹೇಳಿದ ನನ್ನ ಗಂಡ ಮನೋಹರ ಮತ್ತು ಮಾವ ಫಕೀರಪ್ಪಾ ಅತ್ತೆ  ಸೋಜರ ಬಾಯಿ, ಮೈದುನ ಅನಂತ, ನಾದಿನಿ ಕವಿತಾ, ರೂಪಾ ಸಂಗೀತಾ ,ಸವಿತಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-01-2016 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಎಗಮ್ಮ ಇಬ್ಬರು ಕರಜಗಿ ರೋಡಿಗೆ ವಾಯು ವಿಹಾರಕ್ಕೆ ಹೋಗಿದ್ದು ನಾವಿಬ್ಬರು ವಾಯು ವಿಹಾರ ಮಾಡಿಕೊಂಡು ಮರಳಿ ಕರಜಗಿ ರೋಡಿನ ಕಡೆಯಿಂದ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ನಮ್ಮೂರಿನ ನೀರಿನ ಟಾಕಿ ಹತ್ತಿರ ಅಂದಾಜು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಬರುತ್ತಿದ್ದಾಗ ಎದರುಗಡೆಯಿಂದ ನಮ್ಮೂರಿನ ಸೋಮಣ್ಣ ತಂದೆ ಮುತ್ತಣ್ಣ ಕನ್ನೋಟ್ಟಿ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ತಾಯಿಗೆ ಡಿಕ್ಕಿಪಡಿಸಿದನು, ಸದರಿ ಡಿಕ್ಕಿಯಿಂದ ನನ್ನ ತಾಯಿಯ ಏಡಗೈ ಭುಜದ ಹತ್ತಿರ ಗುಪ್ತಗಾಯ, ಎಡಕಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬಲ ಮೋಳಕಾಲಿಗೆ ಬಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿತ್ತು, ಹಾಗೂ ಮೈ ಕೈಗೆ ಸಣ್ಣ ಪುಟ್ಟ ತರಚಿದ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಆಗ ನಾನು ಮತ್ತು ಅದೆ ಸಮಯಕ್ಕೆ ಬಂದ ನಮ್ಮೂರಿನ ದಾನಪ್ಪ ವಾಂಗಿ, ಬಸು ಮೇತ್ರಿ, ಬಸುಗೌಡ ಬಿರಾದಾರ ಎಲ್ಲರೂ ಕೂಡಿ ನನ್ನ ತಾಯಿಯನ್ನು ಉಪಚರಿಸಿದೆವು, ಸದರಿ ನಮ್ಮ ತಾಯಿಗೆ ಡಿಕ್ಕಿಯಾದ ಮೋಟರ ಸೈಕಲ ನಂ ನೋಡಿದ್ದು ಅದರ ನಂಬರ ಕೆಎ-32 ಕ್ಯೂ-3816 ಅಂತಾ ಇರುತ್ತದೆ. ನಂತರ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನನ್ನ ತಾಯಿಯನ್ನು ಒಂದು ಖಾಸಗಿ ವಾಹನದಲ್ಲಿ ಸೋಲ್ಲಾಪೂರದ ಕೋಠಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ಅಂತಾ ಶ್ರೀ ಸಂಜಿವಕುಮಾರ ತಂದೆ ಅಶೋಕ ಮೇತ್ರಿ ಸಾ|| ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: