POLICE BHAVAN KALABURAGI

POLICE BHAVAN KALABURAGI

16 December 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ದಿನಾಂಕ 15-12-2015 ರಂದು ತಮ್ಮ ಸಂಭಂದಿಕರ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ನಾನು ಮತ್ತು ತನ್ನ ಗೆಳೆಯ ಶಿವಪುತ್ರ ತಂದೆ ಬಾಬುರಾವ ಇಬ್ಬರು ಕೂಡಿ ಆತನ ಮೋ.ಸೈಕಲ್ ನಂ ಕೆಎ-39-ಎಲ್-2325 ನೇದ್ದನು ತೆಗೆದುಕೊಂಡು ಕಮಲಾಪೂರಕ್ಕೆ  ಬಂದು ಅಲ್ಲಿಂದ ಬಾಚನಾಳ ಗ್ರಾಮಕ್ಕೆ ಹೋಗುವ ಕುರಿತು, ಹೋಗುತ್ತಿರುವಾಗ ಶಿವಪುತ್ರನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ 1515 ಗಂಟೆ ಸುಮಾರಿಗೆ ಕಮಲಾಪೂರದ ಮಾಟುರ ಪೆಟ್ರೋಲ್ ಪಂಪ್ ಹತ್ತಿರ ರೋಡಿನ ಪಕ್ಕದ ಗುಟದ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗುಟದ ಕಲ್ಲಿನ ಮೇಲೆ ಬಿದ್ದಿದರಿಂದ ನನಗೆ ಭಾರಿ ಗಾಯವಾಗಿದ್ದು, ಶಿವಪುತ್ರನಿಗೆ ಎಡಭಾಗದ ಎದೆಗೆ, ಪಕ್ಕಗೆ ಎಡತೋಳಿನ ಹತ್ತಿರ ಬಾಯಿಂದ, ಮೂಗಿನಿಂದ ಮತ್ತು ಕಿವಿಯಿಂದ ರಕ್ತಬಂದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಅಂತಾ ಶ್ರೀ ಗುರುಪ್ಪ @ ಗುರುನಾಥ ಸಾ; ಕಲ್ಮೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ನನ್ನ ಮಗ ದೇವಿಂದ್ರಪ್ಪ ಮತ್ತು ಮುಧೋಳ ಗ್ರಾಮದ ಅಶೋಕ ಇಬ್ಬರೂ ಕೂಡಿಕೊಂಡು ಮೊಟಾರು ಸೈಕಲ್ ನಂ-KA32-Y-1311 ನೇದ್ದರ ಮೇಲೆ ಸೇಡಂಕ್ಕೆ ಹೋಗಿದ್ದು ಸಾಯಂಕಾಲ 07-15 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ರಾಜಪ್ಪ ತಂದೆ ದೇವಿಂದ್ರಪ್ಪ ಪೂಜಾರಿ ಫೋನ ಮಾಡಿ ತಿಳಿಸಿದ್ದೇನೆಂದರೆ, ಇಂದು 07-00 ಪಿ.ಎಮ್.ಕ್ಕೆ ನಾನು ಮತ್ತು ಸುನಿಲ್ ತಂದೆ ಸೂರ್ಯಕಾಂತ ಪೂಜಾರಿ ಇಬ್ಬರು ಕೂಡಿ ಟ್ರಾಕ್ಟರ ನಂ-KA-32-TA-7880/7881 ನೇದ್ದನ್ನು ತೆಗೆದುಕೊಂಡು ತರನಳ್ಳಿ ಗ್ರಾಮದಿಂದ ಸೇಡಂ ಕಡೆಗೆ ಹೋಗುವಾಗ, ತರನಳ್ಳಿ ಕ್ರಾಸ್ ಸ್ವಲ್ಪ ಹತ್ತಿರ ಇರುವಾಗ, ಟ್ರಾಕ್ಟರ ನಡೆಯಿಸುತ್ತಿದ್ದ ಸುನೀಲ್ ತನ್ನ ವಶದಲ್ಲಿದ್ದ ಟ್ರಾಕ್ಟರ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೊಟಾರು ಸೈಕಲಗೆ ಡಿಕ್ಕಿಪಡೆಯಿಸಿದ್ದರಿಂದ ನಿಮ್ಮ ಮಗನಾದ ದೇವಿಂದ್ರಪ್ಪನಿಗೆ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಅಶೋಕ ಇತನಿಗೆ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದಾಗ  ನಾನು ಮತ್ತು ಕಾಚೂರಿನ ಸಿದ್ದಪ್ಪ ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿತ್ತು. ಕಾರಣ ಈ ಅಪಘಾತ ಮಾಡಿ ಓಡಿಹೋದ ಟ್ರಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀಮತಿ. ನಾಗಮ್ಮ ಗಂಡ ರೇವಣಸಿದ್ದಪ್ಪ ಪೂಜಾರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 05.12.2015 ರಂದು 12:15 ಗಂಟೆಯಿಂದ 12:45 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ಜೇವರಗಿಯ ತಹಸೀಲದಾರರ ಕಾರ್ಯಾಲಯದ ಮುಂದೆ ನಿಲ್ಲಿಸಿದ ನನ್ನ ಹಿರೊ ಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟಾರು ಸೈಕಲ್ ನಂ ಕೆ.ಎ32ಇಹೆಚ್‌3043 ಅಂ.ಕಿ 24.000/- ರೂ ಕಿಮ್ಮತ್ತಿನದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು. ಕಳ್ಳತನವಾದ ನನ್ನ ಮೋಟಾರು ಸೈಕಲ್‌ ಅನ್ನು ಇಲ್ಲಿಯವರೆಗೆ ಎಲ್ಲ ಕಡೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ಶ್ರೀ ಶಿವಾನಂದ ತಂದೆ ಈರಣ್ಣ ಹೂಗಾರ ಸಾ|| ಸೊನ್ನ ತಾ|| ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಾವು ಕಚ್ಚಿ ಬಾಲಕ ಮೃತಪಟ್ಟ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 14-12-2015ರಂದು ಸಾಯಂಕಾಲ 5:00ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಅರವಿಂದ ತಂದೆ ಶಿವಶಂಕರ ಗಾಯಕವಾಡ ವ|| 6ವರ್ಷ ಈತನ್ನು ಕರೆದುಕೊಂಡು ನಾನು ಪಾಲಿಗೆ ಮಾಡಿದ ಚಂದ್ರಕಾಂತ ಅರಳಿ ಮಠ ಇವರ ಹೋಲದಲ್ಲಿ ನಿರು ಬಿಟ್ಟು ಮೋಟಾರು ಬಂದ ಮಾಡಲು ಹೋಗುತ್ತಿದ್ದಾಗ ನನ್ನ ಮುಂದೆ ನನ್ನ ಮಗ ಹೋಗುತ್ತಿದ್ದನು ನಾನು ಅವನಹಿಂದೆ ಹೋಗುತ್ತಿದ್ದೇನು ನಾವಿಬ್ಬರು ಹೋಗುತ್ತಿದ್ದಾಗ ಒಮ್ಮೆಲೆ ಗೋಧಿ ಹೋಲದಿಂದ ಒಂದು ಹಾವು ಬಂದು ನನ್ನ ಮಗನ ಏಡಗಾಲಿನ ಪಾದದ ಹತ್ತಿರ ಇರುವ ಹಡ್ಡಿಗೆ ಕಚ್ಚಿತು ಆಗ ನಾನು ನನ್ನ ಮಗನ್ನು ನಮ್ಮೂರಿಗೆ ಕರೆದುಕೊಂಡು ಬಂದು ನಾನು ಮತ್ತು ನನ್ನ ಹೆಂಡತಿ ಸೋನಾಲಿ ತಂದೆ ದೇವಿಂದ್ರ ತಾಯಿ ವಜಾಬಾಯಿ ಎಲ್ಲರೂ ಕೂಡಿ ನನ್ನ ಮಗನಿಗೆ ಹಾವು ಕಚ್ಚಿದ್ದಕ್ಕೆ ಗೌಂಟಿ ಔಷದ ಕೋಡಿಸಿರುತ್ತೆವೆ  ಆಗ ನನ್ನ ಮಗ ಗುಣಮುಖನಾದಂತೆ ಕಂಡಿರುತ್ತಾನೆ ಆದರೆ ಇಂದು ದಿನಾಂಕ 15-12-215ರಂದು ಮದ್ಯಾಹ್ನ 1:00ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಹಾಗೂ ನನ್ನ ತಂದೆ ತಾಯಿ ಎಲ್ಲರೂ ಮನೆಯಲ್ಲಿದ್ದಾಗ ನನ್ನ ಮಗ ಹಾವು ಕಚ್ಚಿದ್ದರಿಂದ ಅದರ ವಿಷ ಹೆಚ್ಚಾಗಿ ಏಕಾ ಏಕಿ ಒದ್ದಡುತಿದ್ದನು ನಾವು ಅವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಏನ್ನುವಷ್ಟರಲ್ಲಿ ನನ್ನ ಮಗ ಮೃತ ಪಟ್ಟಿರುತ್ತಾನೆ ನಂತರ ನನ್ನ ಮಗನ ಶವವನ್ನು ನಮ್ಮೂರಿನ ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ತಂದು ಹಾಕಿ ಈಗ ಠಾಣೆಗೆ ಬಂದಿರುತ್ತೆನೆ  ನನ್ನ ಮಗನಿಗೆ ಹಾವು ಕಚ್ಚಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವಶಂಕರ ತಂದೆ ದೇವೆಂದ್ರ ಗಾಯಕವಾಡ ಸಾ||ಶೇಷಗೀರಿವಾಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಭೀಮಬಾಯಿ ಗಂಡ ಗುರಪ್ಪ ಮಳಗಿ ಸಾ ಶಹಾಬಜಾರ ಹರಿಜನವಾಡಾ, ಬಸವಲಿಂಗ ನಗರ ಕಲಬುರಗಿ ರವರ ಮೊಮ್ಮಗನಾದ ರುಕ್ಕಪ್ಪ ತಂದೆ ಭೀಮಶಾ ಇತನು ದಿನಾಂಕ 12/12/2015 ರಂದು ರಾತ್ರಿ 10 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿಯೆ ಟಿ.ವಿ ನೋಡುತ್ತಾ ಕುಳಿತ್ತಿದ್ದ ನನ್ನ ಮೊಮ್ಮಗನಿಗೆ ನಾಗೇಶ ರಾಮನಗರ (ಸೆಲ್ ನಂ. 9741049567 ) ಎಂಬಾತನು ಬಂದು ಕರೆದುಕೊಂಡು ಹೋಗಲು ಬಂದಾಗ ನಾನು ನನ್ನ ಮೊಮ್ಮಗನಿಗೆ ತಡೆದು ಊಟ ಮಾಡಿ ಹೋಗು ಎಂದಾಗ ಇಲ್ಲಾ ನಾಗೇಶ ಬಂದಿದ್ದಾನೆ ಆತನ ಸಂಗಡ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು  ನನ್ನ ಮೊಮ್ಮಗ ಹಾಗು ಮೇಲೆ ತಿಳಿಸಿದ ನಾಗೇಶ ರಾಮನಗರ (ಪೂನಾ) ರಾಜು ದುಬೈ ಕಾಲೋನಿ (ಅಡುಗೆ ಕೆಲಸ) ಕಿಟ್ಟಿ ಬ್ರಹ್ಮಪೂರ, ಈ ಮೂರು ಜನರು ಕೂಡಿಕೊಂಡು ಚನ್ನವೀರ ನಗರ ಅಂಬಾ ಭವಾನಿ ಗುಡಿಯ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ರಾತ್ರಿ ಸುಮಾರು 11 ಗಂಟೆಯಿಂದ 12 ಗಂಟೆಯವರೆಗೆ ನನ್ನ ಮೊಮ್ಮಗನಿಗೆ ಮಾರಕಾಸ್ತ್ರಗಳಿಂದ ಕೊಲ್ಲುವ ಉದ್ದೇಶದಿಂದ ಸಿಕ್ಕಾಪಟ್ಟೆಯಾಗಿ ಹೊಡೆದು ಹಾಕಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ಅಲ್ಲಿ ಅಪಘಾತವಾಗಿರಬಹುದು ತಿಳಿದು ನನ್ನ ಮೊಮ್ಮಗನಿಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡಮೀಟ್ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 December 2015

Kalaburagi District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 14.12.2015 ರಂದು 01:೦0 ಗಂಟೆಯಿಂದ ೦2:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ಬಸವೇಶ್ವರ ಕಾಲೋನಿಯಲ್ಲಿನ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು ಸ್ಯಾಮ್ಸಂಗ್ ಎಲ್.ಇ.ಡಿ ಟಿ.ವಿ ಮತ್ತು ಒಂದು ಡಿಟಿಎಚ್‌ ಬಾಕ್ಸ್ ಅಂ.ಕಿ 15.000/- ರೂ. ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಶಿವಲಿಂಗಪ್ಪ ತಂದೆ ಕಲ್ಲಪ್ಪ ಚೆಟ್ಟಿ ಸಾ|| ಬಸವೇಶ್ವರ ನಗರ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ರಮೇಶ ತಂದೆ ಭಿಮಣ್ಣಾ ನಡಗಟ್ಟಿ ಸಾ|| ಹಾಗರಗುಂಡಗಿ ಹಾ||ವ|| ಪ್ಲಾಟ ನಂ. 02 ಗೋದುತಾಯಿ ಕಾಲೋನಿ ಕಲಬುರಗಿ ಇವರು ತನ್ನ ಹಿರೋ ಸ್ಟ್ಲೆಂಡರ್‌ ಪ್ಲಸ್‌  ಮೊಟರ್‌ ಸೈಕಲ್‌‌ ನಂ. ಕೆಎ 32 ಇಹೆಚ್‌-6844 ನೇದ್ದು ಅ:ಕಿ:30000/- (ಚಾಸಿಸ್‌ ನಂ. MBLHA10AMEHM71612. ಇಂಜಿನ್‌ ನಂ. HA10EJEHM13392) ಖರಿದಿಸಿರುತ್ತೆನೆ. ದಿನಾಲು ಸದರಿ ವಾಹನದ ಮೇಲೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದೆನು. ದಿನಾಂಕ:04/11/2015 ರಂದು ಬೆಳಗ್ಗೆ ನನ್ನ ಕಾಕಾನಾದ ಚಂದ್ರಕಾಂತ ನಡಗಟ್ಟಿ ಇವರು ಬಂದು ನನಗೆ ನಗರದಲ್ಲಿ ಕೆಲಸವಿದೆ ಮೋಟರ್‌ ಸೈಕಲ್‌ನ್ನು ಬಿಟ್ಟು ಹೋಗಲು ಹೇಳಿದ್ದರಿಂದ ನಾನು ಸದರಿ ಮೋಟರ್‌ ಸೈಕಲ್‌ನ್ನು ಮನೆಯ ಮುಂದೆ ನಿಲ್ಲಿಸಿ ಅದರ ಚಾವಿಯನ್ನು ಕೊಟ್ಟು ಕೆಲಸಕ್ಕೆ ಹೋಗಿದ್ದು  ದಿನಾಂಕ:04/11/2015 ರಂದೆ  12 ಪಿಎಮ್‌ ಸುಮಾರಿಗೆ ನಮ್ಮ ಕಾಕಾ ಚಂದ್ರಕಾಂತ ನನಗೆ ಫೊನ್‌ ಮಾಡಿ ತಿಳಿಸಿದ್ದೆನಂದರೆ, ಮೋಟರ್‌ ಸೈಕಲ್‌ ಎಲ್ಲಿ ನಿಲ್ಲಿಸಿದ್ದಿ ಕಾಣುತಿಲ್ಲ ಅಂತ ಹೇಳಿದ್ದರಿಂದ ನಾನು ಮನೆಯ ಮುಂದೆ ನಿಲ್ಲಿಸಿ ಬಂದಿರುತ್ತೆನೆ ಅಂತ ಹೇಳಿದ್ದು, ಸದರಿಯವರು ಮೊಟರ್‌ ಸೈಕಲ್‌ ಕಾಣುತ್ತಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ ನಾನು ಮನೆಗೆ ಬಂದು ನೋಡಲಾಗಿ ವಾಹನ ಇರಲಿಲ್ಲ. ನಂತರ ನಾನು ಮತ್ತು ನಮ್ಮ ಕಾಕಾ ಅದೇ ದಿವಸ ಪೊಲಿಸ್‌ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದು ಇರುತ್ತದೆ. ನಂತರ ಇಲ್ಲಿಯವರೆಗೆ ಎಲ್ಲಾ ಕಡೆಯಲ್ಲಿ ಹುಡಕಾಡಿ ನೋಡಲಾಗಿ ಎಲ್ಲಿಯು ಸಿಕ್ಕಿರುವದಿಲ್ಲ. ಕಾರಣ ಕಳುವಾದ ನನ್ನ ಮೊಟರ್‌ ಸೈಕಲ್‌ ನಂ ಕೆಎ 32 ಇಹೆಚ್‌-6844 ಅ:ಕಿ:30,000/-  ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 12/12/2015 ರಂದು ನಾನು ಕಲಬುರಗಿಯಲ್ಲಿದ್ದಾಗ ನನ್ನ ತಾಯಿಯಾದ ಮುಸರತ್ ಜಹಾನ ಇವರು ನನಗೆ ಪೋನ ಮಾಡಿ ತಿಳಿಸಿದೇನೆಂದರೆ ನಿನ್ನ ಹೆಂಡತಿ ಆಯಿಶಾ ಇವಳು ಮುಂಜಾನೆ 10-30 ಗಂಟೆಗೆ ಸಣ್ಣ ಮಗನಾದ ಮಹಮ್ಮದ ಖುರ್ಖಾನ ಇತನಿಗೆ ಎತ್ತಿಕೊಂಡು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೂ ವಾಪಸ ಮನೆಗೆ ಬಮದಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಕಲಬುರಗಿಯ ರೈಲ್ವೆ ಸ್ಟೇಷನ , ಬಸ ನಿಲ್ದಾಣ , ಬಂದೆನವಾಜ ದರ್ಗಾ ಕಡೆ ಮತ್ತು ಇತರೆ ಕಡೆಗಳಲ್ಲಿ ರಾತ್ರಿ  ವರೆಗು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಮತ್ತು ಶಹಾಬಾದದಲ್ಲಿ ನನ್ನ ತಂದೆ ಮಹ್ಮದ ಅನ್ವರ ಪಾಶಾ , ನನ್ನ ತಾಯಿ ನುಸರತ ಜಹಾನ ಮತ್ತು ನನ್ನ ತಮ್ಮನಾದ ಮಹ್ಮದ ಅಕ್ಬರ  ಎಲ್ಲಾರೂ ಕೂಡಿ ಶಹಾಬಾದದ ರೈಲ್ವೆ ಸ್ಟೇಷನ , ಬಸ್ ನಿಲ್ದಾಣದ ಮಾರ್ಕೆಟ ಏರಿಯಾ, ಇತರೆ ಕಡೆಗಳಲ್ಲಿ ಮತ್ತು ಇಲ್ಲಿಯವರೆಗೆ ಇಲ್ಲಾ ಬೀಗರು ನೆಂಟರ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ . ನನ್ನ ಹೆಂಡತಿ ಮತ್ತು ನನ್ನ ಮಗ ಮಹ್ಮದ ಖುರ್ಖಾನ ಇಬ್ಬರು ನಿನ್ನೆಯಿಂದ ಇಲ್ಲಿವರೆಗೆ ಬಂದಿರುವುದಿಲ್ಲಾ  ಅಂತಾ ಶ್ರೀ ಮಹ್ಮದ ಅಮ್ಜದ್ ತಂದೆ ಅನ್ವರ ಪಾಶಾ ಸಾ: ವೀರಸಾವರಕರ ಮಾರ್ಗ ಸ್ಟೇಷನ ರೋಡ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

11 December 2015

Kalaburagi District Reported Crimes.

ರಾಘವೇಂದ್ರನಗರ  ಠಾಣೆ : ದಿನಾಂಕ:10/12/2015 ರಂದು ಮಧ್ಯಾನ 12.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ವಿಜಯಕುಮಾರ ತಂದೆ ಸಂಗಮೇಶ್ವರ ಪಾಟೀಲ್‌ ವ:50 ವರ್ಷ ಜಾ:ಲಿಂಗಾಯತ ಉ:ಸರ್ಕಾರಿ ನೌಕರ ಸಾ:ಗೋದುತಾಯಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಎನ್‌.ವಿ ಕಾಲೇಜದಲ್ಲಿ ನನ್ನ ಕೆಲಸ ವಿದ್ದ ಕಾರಣ ದಿನಾಂಕ:27/11/2015 ರಂದು ಮಧ್ಯಾನ 2.00 ಗಂಟೆ ಸುಮಾರಿಗೆ ನನ್ನ ಹೀರೊ ಹೊಂಡಾ ಸ್ಪೇಂಡರ್‌ ಪ್ಲಸ್‌‌ ಮೋಟಾರ ಸೈಕಲ ನಂ.ಕೆಎ.32 ಇಸಿ.2856 ನೇದ್ದನ್ನು ಕಲಬುರಗಿ ನಗರದ ಎನ್‌.ವಿ ಕಾಲೇಜದಲ್ಲಿ ಆವರಣದಲ್ಲಿ ನಿಲ್ಲಿಸಿ ನಾನು ಕಾಲೇಜನಲ್ಲಿ ಹೋಗಿ ಮರಳಿ ಮಧ್ಯಾನ 3.00 ಗಂಟೆಗೆ ಬಂದಾಗ ನನ್ನ ವಾಹನ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ವಾಹನ ಸಿಕ್ಕಿರುವದಿಲ್ಲಾ ಆದ್ದರಿಂದ ನಾನು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಯಾರೋ ಕಳ್ಳರು ನನ್ನ   ಹೀರೊ ಹೊಂಡಾ ಸ್ಪೇಂಡರ್‌ ಪ್ಲಸ್‌‌  ಮೋಟಾರ ಸೈಕಲ ನಂ.ಕೆಎ.32 ಇಸಿ.2856 Chassis Number.MBLHA10AMCHJ31141, Engine Number.HA10EJCHJ07187 ಅ.ಕಿ.33750/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೊಡಬೇಕಾಗಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.156/15 ಕಲಂ:379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಗ್ರಾಮೀಣ  ಠಾಣೆ : ದಿನಾಂಕ 1012-15  ರಂದು  ಮಧ್ಯಾಹ್ನ 12-45 ಗಂಟೆಗೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ 1257 ನಾಗರಾಜ ಇವರು ಠಾಣೆಗೆ ಹಾಜರಾಗಿ  ಮಾನ್ಯ 5ನೇ ಹೆಚ್ಚುವರಿ ಜೆ.ಎಂ.ಎಫ.ಸಿ.ಕೋರ್ಟ ಕಲಬುರಗಿ  ಕಲಂ 200 ಸಿಅರಪಿಸಿ ಪ್ರಕಾರ ಹೊರಡಿಸಿ ಪಿ.ಸಿ. ನಂ 1044/15 ನೇದ್ದು ಹಾಜರಪಡಿಸಿದ್ದರ ಸಾರಾಂಶವೆನೆಂದೆರೆ, ಫಿರ್ಯಾದಿದಾರಳಾದ ಶ್ರೀಮತಿ ಫಾತೀಮಾ ಇವಳ ಮದುವೆಯು ಸುಮಾರು 9 ವರ್ಷಗಳ ಹಿಂದೆ ಸಾದಿಕಶೇಕ ಇವನೊಂದಿಗೆ ಮಾಹಾಗಾಂವ ವಾಡಿಯಲ್ಲಿ ಮದುವೆಯಾಗಿ ತನ್ನ ಗಂಡನ ಮನೆಯಾದ ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮಕ್ಕೆ ಹೋಗಿ ತನ್ನ ಗಂಡನು ಖಾಸಗಿ ಕೆಲಸದ ನಿಮಿತ್ಯ ಬೋಮನವಾಡ ವೈಲೀ ಪಾರ್ಲೆ ಬಾಂಬೆಯಲ್ಲಿ ಉಳಿದುಕೊಂಡಿದ್ದು, ಅವಳ ಗಂಡ ಮನೆಯವರು ಸುಮಾರು  5 ವರ್ಷಗಳ ವರೆಗೆ ಸರಿಯಾಗಿ ನೋಡಿಕೊಂಡಿದ್ದು, ನಂತರ ಫಿರ್ಯಾದಿದಾರಳಿಗೆ ಒಂದು ಗಂಡು, ಒಂದು ಹೆಣ್ಣು ಮಗು ಹುಟ್ಟಿದ್ದು. ಆದಾದನಂತರ  ಅವಳ ಗಂಡನ ಮನೆಯವರಾದ 1)ಅವಳ ಗಂಡ ಸಾದೀಕ ಹಾಗೂ ಅವಳ ಗಂಡ ಮನೆಯವರಾದ ಮಸ್ತಾನಬೀ, ಇಸ್ಮಾಯಿಲಸಾಬ, ಜಾಫರ, ಇಸ್ಮಾಯಿಲಸಾಬ,  ಇವರೆಲ್ಲರೂ ಇನ್ನೂ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ 1ಲಕ್ಷ ರೂ. 1 ತೊಲಿ ಬಂಗಾರ, ಒಂದು ಹಿರೋ ಹೊಂಡಾ ಮೋಟಾರ ಸೈಕಲ ತೆಗೆದುಕೊಂಡು ಬಾ ಅಂತಾ ಅಂದಾಗ ನನ್ನ ತವರು ಮನೆಯವರು ಬಡವರಿದ್ದು, ಕೊಡುವುದು ಆಗುವುದಿಲ್ಲಾ ಅಂದಿದ್ದಕ್ಕೆ ದಿನಾಲೂ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡಿ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು.ಅಲ್ಲದೇ  ದಿನಾಂಕ 25-06-15 ರಂದು ಮುಂಬೈಯಲ್ಲಿ ಎ ರಂಡಿ ನೀನು ಒಂದು ತೋಲಿ ಬಂಗಾರ, 1 ಲಕ್ಷ ರೂ. ಒಂದು ಹಿರೋ ಹೊಂಡಾ ಮೋಟಾರ ಸೈಕಲ ತಂದರೆ ಮಾತ್ರ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಿನ್ನ ಮಕ್ಕಳಿಗೆ ಶಾಲೆಗೆ ಹಣ ಸಹಿತ ಬೇಕಾಗಿರುತ್ತದೆ ಅಂತಾ ಅಂದು  ಅವಳ ಗಂಡ ಬಡಿಗೆಯಿಂದ ಬೆನ್ನ ಮೇಲೆ ಕಾಲಿನ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಮನೆಯಿಂದ ಹೊರೆಗೆ ಹಾಕಿರುತ್ತಾನೆ. ಅಲ್ಲದೇ ಮಸ್ತಾನಬೀ, ಇಸ್ಮಾಯಿಲಸಾಬ,  ಇಸ್ಮಾಯಿಲಸಾಬ ತಂದೆ ಖಾಜಾಸಾಬ ಇವರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಸಿಕ್ಕಾಪಟ್ಟೆ  ಹೊಡೆ ಬಡಿ ಮಾಡಿದ್ದು, ನಾನು ಎಷ್ಟು ಬೇಡಿಕೊಂಡರು ಮನೆಯೊಳೆಗೆ ಕರೆದುಕೊಳ್ಳದೇ ಬಾಗಿಲು ಹಾಕಿಕೊಂಡಿರುತ್ತಾರೆ. ನಂತರ ನಾನು, ನನ್ನ ತವರು ಮನೆಯಾದ ಜಾಫರಾಬಾದಕ್ಕೆ ಬಂದಾಗ ದಿನಾಂಕ 27-06-15 ರಂದು ಆರೋಪಿತರಾದ  ಸಾದೀಕ, ಮಸ್ತಾನಬೀ, ಇಸ್ಮಾಯಿಲಸಾಬ, ಜಾಫರ, ಇಸ್ಮಾಯಿಲಸಾಬ, ಭಾನುಬೇಗಂ ಇವರೆಲ್ಲರೂ ಸಮಾನ ಉದ್ದೇಶದಿಂದ ಜಾಫರಾಬಾದಕ್ಕೆ ಬಂದಿರುತ್ತಾರೆ. ದಿನಾಂಕ 28-06-15 ರಂದು ಮತ್ತೆ ಕಲಬುರಗಿ ಜಾಫರಾಬಾದದ ಫಿರ್ಯಾದಿ ಮನೆಗೆ ಹೋಗಿ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ  ತಲೆಯ ಮೇಲೆ ಕೂದಲು ಹಿಡಿದಿದ್ದು ಕೈಯಿಂದ ಬೆನ್ನ ಮೇಲೆ ಹೊಡೆದಿದ್ದು ಬಡಿಗೆಯಿಂದ ಬೆನ್ನಿಗೆ ಮತ್ತು ಇವರೆಲ್ಲರೂ ಫಿರ್ಯಾದಿದಾರಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ.ಎಂಬ ಇತ್ಯಾದಿಯಾಗಿ ಫಿರ್ಯಾದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 465/15 ಕಲಂ 498(ಎ),323,324,504, 506  ಸಂಗಡ 149 ಐಪಿಸಿ ಮತ್ತು ಕಲಂ 3 ಮತ್ತು 4 ಡಿ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.