POLICE BHAVAN KALABURAGI

POLICE BHAVAN KALABURAGI

16 December 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ದಿನಾಂಕ 15-12-2015 ರಂದು ತಮ್ಮ ಸಂಭಂದಿಕರ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ನಾನು ಮತ್ತು ತನ್ನ ಗೆಳೆಯ ಶಿವಪುತ್ರ ತಂದೆ ಬಾಬುರಾವ ಇಬ್ಬರು ಕೂಡಿ ಆತನ ಮೋ.ಸೈಕಲ್ ನಂ ಕೆಎ-39-ಎಲ್-2325 ನೇದ್ದನು ತೆಗೆದುಕೊಂಡು ಕಮಲಾಪೂರಕ್ಕೆ  ಬಂದು ಅಲ್ಲಿಂದ ಬಾಚನಾಳ ಗ್ರಾಮಕ್ಕೆ ಹೋಗುವ ಕುರಿತು, ಹೋಗುತ್ತಿರುವಾಗ ಶಿವಪುತ್ರನು ತನ್ನ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ 1515 ಗಂಟೆ ಮಾರಿಗೆ ಕಮಲಾಪೂರದ ಮಾಟುರ ಪೆಟ್ರೋಲ್ ಪಂಪ್ ಹತ್ತಿರ ರೋಡಿನ ಪಕ್ಕದ ಗುಟದ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗುಟದ ಕಲ್ಲಿನ ಮೇಲೆ ಬಿದ್ದಿದರಿಂದ ನನಗೆ ಭಾರಿ ಗಾಯವಾಗಿದ್ದು, ಶಿವಪುತ್ರನಿಗೆ ಎಡಭಾಗದ ಎದೆಗೆ, ಪಕ್ಕಗೆ ಎಡತೋಳಿನ ಹತ್ತಿರ ಬಾಯಿಂದ, ಮೂಗಿನಿಂದ ಮತ್ತು ಕಿವಿಯಿಂದ ರಕ್ತಬಂದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಅಂತಾ ಶ್ರೀ ಗುರುಪ್ಪ @ ಗುರುನಾಥ ಸಾ; ಕಲ್ಮೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ನನ್ನ ಮಗ ದೇವಿಂದ್ರಪ್ಪ ಮತ್ತು ಮುಧೋಳ ಗ್ರಾಮದ ಅಶೋಕ ಇಬ್ಬರೂ ಕೂಡಿಕೊಂಡು ಮೊಟಾರು ಸೈಕಲ್ ನಂ-KA32-Y-1311 ನೇದ್ದರ ಮೇಲೆ ಸೇಡಂಕ್ಕೆ ಹೋಗಿದ್ದು ಸಾಯಂಕಾಲ 07-15 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ರಾಜಪ್ಪ ತಂದೆ ದೇವಿಂದ್ರಪ್ಪ ಪೂಜಾರಿ ಫೋನ ಮಾಡಿ ತಿಳಿಸಿದ್ದೇನೆಂದರೆ, ಇಂದು 07-00 ಪಿ.ಎಮ್.ಕ್ಕೆ ನಾನು ಮತ್ತು ಸುನಿಲ್ ತಂದೆ ಸೂರ್ಯಕಾಂತ ಪೂಜಾರಿ ಇಬ್ಬರು ಕೂಡಿ ಟ್ರಾಕ್ಟರ ನಂ-KA-32-TA-7880/7881 ನೇದ್ದನ್ನು ತೆಗೆದುಕೊಂಡು ತರನಳ್ಳಿ ಗ್ರಾಮದಿಂದ ಸೇಡಂ ಕಡೆಗೆ ಹೋಗುವಾಗ, ತರನಳ್ಳಿ ಕ್ರಾಸ್ ಸ್ವಲ್ಪ ಹತ್ತಿರ ಇರುವಾಗ, ಟ್ರಾಕ್ಟರ ನಡೆಯಿಸುತ್ತಿದ್ದ ಸುನೀಲ್ ತನ್ನ ವಶದಲ್ಲಿದ್ದ ಟ್ರಾಕ್ಟರ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೊಟಾರು ಸೈಕಲಗೆ ಡಿಕ್ಕಿಪಡೆಯಿಸಿದ್ದರಿಂದ ನಿಮ್ಮ ಮಗನಾದ ದೇವಿಂದ್ರಪ್ಪನಿಗೆ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಅಶೋಕ ಇತನಿಗೆ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದಾಗ  ನಾನು ಮತ್ತು ಕಾಚೂರಿನ ಸಿದ್ದಪ್ಪ ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿತ್ತು. ಕಾರಣ ಈ ಅಪಘಾತ ಮಾಡಿ ಓಡಿಹೋದ ಟ್ರಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀಮತಿ. ನಾಗಮ್ಮ ಗಂಡ ರೇವಣಸಿದ್ದಪ್ಪ ಪೂಜಾರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 05.12.2015 ರಂದು 12:15 ಗಂಟೆಯಿಂದ 12:45 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ಜೇವರಗಿಯ ತಹಸೀಲದಾರರ ಕಾರ್ಯಾಲಯದ ಮುಂದೆ ನಿಲ್ಲಿಸಿದ ನನ್ನ ಹಿರೊ ಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟಾರು ಸೈಕಲ್ ನಂ ಕೆ.ಎ32ಇಹೆಚ್‌3043 ಅಂ.ಕಿ 24.000/- ರೂ ಕಿಮ್ಮತ್ತಿನದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು. ಕಳ್ಳತನವಾದ ನನ್ನ ಮೋಟಾರು ಸೈಕಲ್‌ ಅನ್ನು ಇಲ್ಲಿಯವರೆಗೆ ಎಲ್ಲ ಕಡೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ಶ್ರೀ ಶಿವಾನಂದ ತಂದೆ ಈರಣ್ಣ ಹೂಗಾರ ಸಾ|| ಸೊನ್ನ ತಾ|| ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಾವು ಕಚ್ಚಿ ಬಾಲಕ ಮೃತಪಟ್ಟ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 14-12-2015ರಂದು ಸಾಯಂಕಾಲ 5:00ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಅರವಿಂದ ತಂದೆ ಶಿವಶಂಕರ ಗಾಯಕವಾಡ ವ|| 6ವರ್ಷ ಈತನ್ನು ಕರೆದುಕೊಂಡು ನಾನು ಪಾಲಿಗೆ ಮಾಡಿದ ಚಂದ್ರಕಾಂತ ಅರಳಿ ಮಠ ಇವರ ಹೋಲದಲ್ಲಿ ನಿರು ಬಿಟ್ಟು ಮೋಟಾರು ಬಂದ ಮಾಡಲು ಹೋಗುತ್ತಿದ್ದಾಗ ನನ್ನ ಮುಂದೆ ನನ್ನ ಮಗ ಹೋಗುತ್ತಿದ್ದನು ನಾನು ಅವನಹಿಂದೆ ಹೋಗುತ್ತಿದ್ದೇನು ನಾವಿಬ್ಬರು ಹೋಗುತ್ತಿದ್ದಾಗ ಒಮ್ಮೆಲೆ ಗೋಧಿ ಹೋಲದಿಂದ ಒಂದು ಹಾವು ಬಂದು ನನ್ನ ಮಗನ ಏಡಗಾಲಿನ ಪಾದದ ಹತ್ತಿರ ಇರುವ ಹಡ್ಡಿಗೆ ಕಚ್ಚಿತು ಆಗ ನಾನು ನನ್ನ ಮಗನ್ನು ನಮ್ಮೂರಿಗೆ ಕರೆದುಕೊಂಡು ಬಂದು ನಾನು ಮತ್ತು ನನ್ನ ಹೆಂಡತಿ ಸೋನಾಲಿ ತಂದೆ ದೇವಿಂದ್ರ ತಾಯಿ ವಜಾಬಾಯಿ ಎಲ್ಲರೂ ಕೂಡಿ ನನ್ನ ಮಗನಿಗೆ ಹಾವು ಕಚ್ಚಿದ್ದಕ್ಕೆ ಗೌಂಟಿ ಔಷದ ಕೋಡಿಸಿರುತ್ತೆವೆ  ಆಗ ನನ್ನ ಮಗ ಗುಣಮುಖನಾದಂತೆ ಕಂಡಿರುತ್ತಾನೆ ಆದರೆ ಇಂದು ದಿನಾಂಕ 15-12-215ರಂದು ಮದ್ಯಾಹ್ನ 1:00ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಹಾಗೂ ನನ್ನ ತಂದೆ ತಾಯಿ ಎಲ್ಲರೂ ಮನೆಯಲ್ಲಿದ್ದಾಗ ನನ್ನ ಮಗ ಹಾವು ಕಚ್ಚಿದ್ದರಿಂದ ಅದರ ವಿಷ ಹೆಚ್ಚಾಗಿ ಏಕಾ ಏಕಿ ಒದ್ದಡುತಿದ್ದನು ನಾವು ಅವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಏನ್ನುವಷ್ಟರಲ್ಲಿ ನನ್ನ ಮಗ ಮೃತ ಪಟ್ಟಿರುತ್ತಾನೆ ನಂತರ ನನ್ನ ಮಗನ ಶವವನ್ನು ನಮ್ಮೂರಿನ ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ತಂದು ಹಾಕಿ ಈಗ ಠಾಣೆಗೆ ಬಂದಿರುತ್ತೆನೆ  ನನ್ನ ಮಗನಿಗೆ ಹಾವು ಕಚ್ಚಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವಶಂಕರ ತಂದೆ ದೇವೆಂದ್ರ ಗಾಯಕವಾಡ ಸಾ||ಶೇಷಗೀರಿವಾಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಭೀಮಬಾಯಿ ಗಂಡ ಗುರಪ್ಪ ಮಳಗಿ ಸಾ ಶಹಾಬಜಾರ ಹರಿಜನವಾಡಾ, ಬಸವಲಿಂಗ ನಗರ ಕಲಬುರಗಿ ರವರ ಮೊಮ್ಮಗನಾದ ರುಕ್ಕಪ್ಪ ತಂದೆ ಭೀಮಶಾ ಇತನು ದಿನಾಂಕ 12/12/2015 ರಂದು ರಾತ್ರಿ 10 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿಯೆ ಟಿ.ವಿ ನೋಡುತ್ತಾ ಕುಳಿತ್ತಿದ್ದ ನನ್ನ ಮೊಮ್ಮಗನಿಗೆ ನಾಗೇಶ ರಾಮನಗರ (ಸೆಲ್ ನಂ. 9741049567 ) ಎಂಬಾತನು ಬಂದು ಕರೆದುಕೊಂಡು ಹೋಗಲು ಬಂದಾಗ ನಾನು ನನ್ನ ಮೊಮ್ಮಗನಿಗೆ ತಡೆದು ಊಟ ಮಾಡಿ ಹೋಗು ಎಂದಾಗ ಇಲ್ಲಾ ನಾಗೇಶ ಬಂದಿದ್ದಾನೆ ಆತನ ಸಂಗಡ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು  ನನ್ನ ಮೊಮ್ಮಗ ಹಾಗು ಮೇಲೆ ತಿಳಿಸಿದ ನಾಗೇಶ ರಾಮನಗರ (ಪೂನಾ) ರಾಜು ದುಬೈ ಕಾಲೋನಿ (ಅಡುಗೆ ಕೆಲಸ) ಕಿಟ್ಟಿ ಬ್ರಹ್ಮಪೂರ, ಈ ಮೂರು ಜನರು ಕೂಡಿಕೊಂಡು ಚನ್ನವೀರ ನಗರ ಅಂಬಾ ಭವಾನಿ ಗುಡಿಯ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ರಾತ್ರಿ ಸುಮಾರು 11 ಗಂಟೆಯಿಂದ 12 ಗಂಟೆಯವರೆಗೆ ನನ್ನ ಮೊಮ್ಮಗನಿಗೆ ಮಾರಕಾಸ್ತ್ರಗಳಿಂದ ಕೊಲ್ಲುವ ಉದ್ದೇಶದಿಂದ ಸಿಕ್ಕಾಪಟ್ಟೆಯಾಗಿ ಹೊಡೆದು ಹಾಕಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ಅಲ್ಲಿ ಅಪಘಾತವಾಗಿರಬಹುದು ತಿಳಿದು ನನ್ನ ಮೊಮ್ಮಗನಿಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡಮೀಟ್ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: