ರಾಘವೇಂದ್ರನಗರ ಠಾಣೆ : ದಿನಾಂಕ:10/12/2015 ರಂದು ಮಧ್ಯಾನ 12.00 ಗಂಟೆಗೆ
ಪಿರ್ಯಾದಿದಾರರಾದ ಶ್ರೀ ವಿಜಯಕುಮಾರ ತಂದೆ
ಸಂಗಮೇಶ್ವರ ಪಾಟೀಲ್ ವ:50 ವರ್ಷ ಜಾ:ಲಿಂಗಾಯತ ಉ:ಸರ್ಕಾರಿ ನೌಕರ ಸಾ:ಗೋದುತಾಯಿ ಕಾಲೋನಿ
ಕಲಬುರಗಿ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಎನ್.ವಿ ಕಾಲೇಜದಲ್ಲಿ ನನ್ನ ಕೆಲಸ ವಿದ್ದ ಕಾರಣ ದಿನಾಂಕ:27/11/2015 ರಂದು
ಮಧ್ಯಾನ 2.00 ಗಂಟೆ ಸುಮಾರಿಗೆ ನನ್ನ ಹೀರೊ ಹೊಂಡಾ ಸ್ಪೇಂಡರ್ ಪ್ಲಸ್ ಮೋಟಾರ ಸೈಕಲ
ನಂ.ಕೆಎ.32 ಇಸಿ.2856 ನೇದ್ದನ್ನು ಕಲಬುರಗಿ ನಗರದ ಎನ್.ವಿ ಕಾಲೇಜದಲ್ಲಿ ಆವರಣದಲ್ಲಿ ನಿಲ್ಲಿಸಿ
ನಾನು ಕಾಲೇಜನಲ್ಲಿ ಹೋಗಿ ಮರಳಿ ಮಧ್ಯಾನ 3.00 ಗಂಟೆಗೆ ಬಂದಾಗ ನನ್ನ ವಾಹನ ಇರಲಿಲ್ಲ ನಾನು
ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ವಾಹನ ಸಿಕ್ಕಿರುವದಿಲ್ಲಾ ಆದ್ದರಿಂದ ನಾನು ತಡವಾಗಿ
ಠಾಣೆಗೆ ಬಂದಿರುತ್ತೇನೆ. ಕಾರಣ ಯಾರೋ ಕಳ್ಳರು ನನ್ನ
ಹೀರೊ ಹೊಂಡಾ ಸ್ಪೇಂಡರ್ ಪ್ಲಸ್
ಮೋಟಾರ ಸೈಕಲ ನಂ.ಕೆಎ.32 ಇಸಿ.2856 Chassis Number.MBLHA10AMCHJ31141,
Engine Number.HA10EJCHJ07187 ಅ.ಕಿ.33750/-ರೂ
ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೊಡಬೇಕಾಗಿ ಅಂತಾ
ಪಿರ್ಯಾದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.156/15 ಕಲಂ:379 ಐಪಿಸಿ
ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ 1012-15 ರಂದು
ಮಧ್ಯಾಹ್ನ 12-45 ಗಂಟೆಗೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ
1257 ನಾಗರಾಜ ಇವರು ಠಾಣೆಗೆ ಹಾಜರಾಗಿ ಮಾನ್ಯ
5ನೇ ಹೆಚ್ಚುವರಿ ಜೆ.ಎಂ.ಎಫ.ಸಿ.ಕೋರ್ಟ ಕಲಬುರಗಿ
ಕಲಂ 200 ಸಿಅರಪಿಸಿ ಪ್ರಕಾರ ಹೊರಡಿಸಿ ಪಿ.ಸಿ. ನಂ 1044/15 ನೇದ್ದು ಹಾಜರಪಡಿಸಿದ್ದರ
ಸಾರಾಂಶವೆನೆಂದೆರೆ, ಫಿರ್ಯಾದಿದಾರಳಾದ ಶ್ರೀಮತಿ ಫಾತೀಮಾ ಇವಳ ಮದುವೆಯು ಸುಮಾರು 9 ವರ್ಷಗಳ
ಹಿಂದೆ ಸಾದಿಕಶೇಕ ಇವನೊಂದಿಗೆ ಮಾಹಾಗಾಂವ ವಾಡಿಯಲ್ಲಿ ಮದುವೆಯಾಗಿ ತನ್ನ ಗಂಡನ ಮನೆಯಾದ ಆಳಂದ
ತಾಲೂಕಿನ ಗೋಳಾ (ಬಿ) ಗ್ರಾಮಕ್ಕೆ ಹೋಗಿ ತನ್ನ ಗಂಡನು ಖಾಸಗಿ ಕೆಲಸದ ನಿಮಿತ್ಯ ಬೋಮನವಾಡ ವೈಲೀ
ಪಾರ್ಲೆ ಬಾಂಬೆಯಲ್ಲಿ ಉಳಿದುಕೊಂಡಿದ್ದು, ಅವಳ ಗಂಡ ಮನೆಯವರು ಸುಮಾರು 5 ವರ್ಷಗಳ ವರೆಗೆ ಸರಿಯಾಗಿ ನೋಡಿಕೊಂಡಿದ್ದು, ನಂತರ
ಫಿರ್ಯಾದಿದಾರಳಿಗೆ ಒಂದು ಗಂಡು, ಒಂದು ಹೆಣ್ಣು ಮಗು ಹುಟ್ಟಿದ್ದು. ಆದಾದನಂತರ ಅವಳ ಗಂಡನ ಮನೆಯವರಾದ 1)ಅವಳ ಗಂಡ ಸಾದೀಕ ಹಾಗೂ ಅವಳ
ಗಂಡ ಮನೆಯವರಾದ ಮಸ್ತಾನಬೀ, ಇಸ್ಮಾಯಿಲಸಾಬ, ಜಾಫರ, ಇಸ್ಮಾಯಿಲಸಾಬ, ಇವರೆಲ್ಲರೂ ಇನ್ನೂ ತವರು ಮನೆಯಿಂದ ವರದಕ್ಷಿಣೆ
ರೂಪದಲ್ಲಿ 1ಲಕ್ಷ ರೂ. 1 ತೊಲಿ ಬಂಗಾರ, ಒಂದು ಹಿರೋ ಹೊಂಡಾ ಮೋಟಾರ ಸೈಕಲ ತೆಗೆದುಕೊಂಡು ಬಾ ಅಂತಾ
ಅಂದಾಗ ನನ್ನ ತವರು ಮನೆಯವರು ಬಡವರಿದ್ದು, ಕೊಡುವುದು ಆಗುವುದಿಲ್ಲಾ ಅಂದಿದ್ದಕ್ಕೆ ದಿನಾಲೂ
ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡಿ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ
ಕೊಡುತ್ತಿದ್ದರು.ಅಲ್ಲದೇ ದಿನಾಂಕ 25-06-15
ರಂದು ಮುಂಬೈಯಲ್ಲಿ ಎ ರಂಡಿ ನೀನು ಒಂದು ತೋಲಿ ಬಂಗಾರ, 1 ಲಕ್ಷ ರೂ. ಒಂದು ಹಿರೋ ಹೊಂಡಾ ಮೋಟಾರ
ಸೈಕಲ ತಂದರೆ ಮಾತ್ರ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಿನ್ನ ಮಕ್ಕಳಿಗೆ ಶಾಲೆಗೆ ಹಣ ಸಹಿತ
ಬೇಕಾಗಿರುತ್ತದೆ ಅಂತಾ ಅಂದು ಅವಳ ಗಂಡ
ಬಡಿಗೆಯಿಂದ ಬೆನ್ನ ಮೇಲೆ ಕಾಲಿನ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಮನೆಯಿಂದ ಹೊರೆಗೆ
ಹಾಕಿರುತ್ತಾನೆ. ಅಲ್ಲದೇ ಮಸ್ತಾನಬೀ, ಇಸ್ಮಾಯಿಲಸಾಬ,
ಇಸ್ಮಾಯಿಲಸಾಬ ತಂದೆ ಖಾಜಾಸಾಬ ಇವರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ
ಸಿಕ್ಕಾಪಟ್ಟೆ ಹೊಡೆ ಬಡಿ ಮಾಡಿದ್ದು, ನಾನು
ಎಷ್ಟು ಬೇಡಿಕೊಂಡರು ಮನೆಯೊಳೆಗೆ ಕರೆದುಕೊಳ್ಳದೇ ಬಾಗಿಲು ಹಾಕಿಕೊಂಡಿರುತ್ತಾರೆ. ನಂತರ ನಾನು,
ನನ್ನ ತವರು ಮನೆಯಾದ ಜಾಫರಾಬಾದಕ್ಕೆ ಬಂದಾಗ ದಿನಾಂಕ 27-06-15 ರಂದು ಆರೋಪಿತರಾದ ಸಾದೀಕ, ಮಸ್ತಾನಬೀ, ಇಸ್ಮಾಯಿಲಸಾಬ, ಜಾಫರ,
ಇಸ್ಮಾಯಿಲಸಾಬ, ಭಾನುಬೇಗಂ ಇವರೆಲ್ಲರೂ ಸಮಾನ ಉದ್ದೇಶದಿಂದ ಜಾಫರಾಬಾದಕ್ಕೆ ಬಂದಿರುತ್ತಾರೆ.
ದಿನಾಂಕ 28-06-15 ರಂದು ಮತ್ತೆ ಕಲಬುರಗಿ ಜಾಫರಾಬಾದದ ಫಿರ್ಯಾದಿ ಮನೆಗೆ ಹೋಗಿ ಆರೋಪಿತರೆಲ್ಲರೂ
ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ತಲೆಯ ಮೇಲೆ
ಕೂದಲು ಹಿಡಿದಿದ್ದು ಕೈಯಿಂದ ಬೆನ್ನ ಮೇಲೆ ಹೊಡೆದಿದ್ದು ಬಡಿಗೆಯಿಂದ ಬೆನ್ನಿಗೆ ಮತ್ತು ಇವರೆಲ್ಲರೂ
ಫಿರ್ಯಾದಿದಾರಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ.ಎಂಬ
ಇತ್ಯಾದಿಯಾಗಿ ಫಿರ್ಯಾದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 465/15 ಕಲಂ
498(ಎ),323,324,504, 506 ಸಂಗಡ 149 ಐಪಿಸಿ
ಮತ್ತು ಕಲಂ 3 ಮತ್ತು 4 ಡಿ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment