POLICE BHAVAN KALABURAGI

POLICE BHAVAN KALABURAGI

13 April 2015

Kalaburagi District Reported Crimes

ಕೊಲೆ ಆರೋಪಿತರ ಬಂಧನ :
ಚೌಕ ಠಾಣೆ : ದಿನಾಂಕ 07.04.2015 ರಂದು ರಾತ್ರಿ 9 ಗಂಟೆಯ ಸುಮಾರಿಗೆ ದುಬೈ ಕಾಲೋನಿಯಲ್ಲಿ  ಮಲ್ಲು @ ಮಲ್ಲಿಕಾರ್ಜುನ ಇತನಿಗೆ ಚಂದ್ರು ಕೊತಲಿ, ಉಮೇಶ ಕೊತಲಿ, ರಮೇಶ ಕೊತಲಿ ಇವರು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು  ಈಗ ಸುಮಾರು ಒಂದು ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ ನಡೆಸಲು ಬೇರೆ ಅಟೊ ಕೊಡಿಸು ಅಂತ  ಚಂದ್ರು ಕೊತಲಿಗೆ ಪದೇ ಪದೇ ಕೇಳುತ್ತ ಬಂದಿದ್ದು, ಇದೆ ವಿಷಯವಾಗಿ ಆರೋಪಿತರಾದ 1) ವೀರೆಶ ವೀರ್ಯೆ ತಂದೆ ದತ್ತು ಸಲಾರೆ ಸಾಃ ಕೊತ್ತಲಿ ತಾಃ ಆಳಂದ ಹಾಃವಃ ಫಿಲ್ಟರ್ ಬೆಡ್ ಹತ್ತಿರ ರಾಜು ಗಾಂದಿ ನಗರ ಕಲಬುರಗಿ, 2) ಸೈಬಣ್ಣ ತಂದೆ ಗುಲಾಬಚಂದ ಸಗರ ಸಾಃ ದುಬೈ ಕಾಲೋನಿ ಕಲಬುರಗಿ 3) ಚಂದ್ರು @ ಚಂದ್ರಕಾಂತ ತಂದೆ ಸಾತಲಿಂಗಪ್ಪ ಕೊತಲಿ 4) ರಮೇಶ ತಂದೆ ಸಾತಲಿಂಗಪ್ಪ ಕೊತಲಿ 5) ಉಮೇಶ ತಂದೆ ಸಾತಲಿಂಗಪ್ಪ ಕೊತಲಿ 6) ಅಂಬು @ ಅಂಬರೀಶ ತಂದೆ ಸಿದ್ದಪ್ಪ ಕೊಳಕರ ಸಾ: ಎಲ್ಲರು ದುಬೈ ಕಾಲೋನಿ ಕಲಬುರಗಿ ರವರು ಕೂಡಿಕೊಂಡು ಜಂಬ್ಯಾದಿಂದ ಹೊಡೆದು ಕೊಲೆ ಮಾಡಿದ್ದು,
      ಮಾನ್ಯ ಶ್ರೀ ಬಿ. ಮಹಾಂತೇಶ ಅಪರ ಎಸ್.ಪಿ.ಸಾಹೇಬ ಕಲಬುರಗಿ ಮಾರ್ಗದರ್ಶನದಲ್ಲಿ ಶ್ರೀ ಉದಯಕುಮಾರ ಎಂ.ಬಿ. ಡಿ.ಎಸ್.ಪಿ. ಸಾಹೇಬ (ಬಿ) ಉಪ ವಿಭಾಗ ಕಲಬುರಗಿ ರವರು ಮತ್ತು  ಚೌಕ ಪೊಲೀಸ ಠಾಣೆಯ ಅಧಿಕಾರಿ ಪ್ರದೀಪಕೊಳ್ಳಾ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಮತ್ತು ಸಿಬ್ಬಂದಿಯವರಾದ ಮಹಾಂತೇಶ ಪಿಸಿ 716ಅಲೋಕ ಪಿಸಿ 1008  ಶಿವಾನಂದ ಯಡ್ರಾಮಿ ಪಿಸಿ 992, ಬಂದೇನವಾಜ ಪಿಸಿ 429, ಮೊಶೀನ ಪಿಸಿ 811 ಕೂಡಿಕೊಂಡು ರಾಣೇಸ್ಪಿರದರ್ಗಾ ಹತ್ತಿರ ಆರೋಪಿತರ ಇರವಿಕೆಯ ಬಗ್ಗೆ ಖಚಿತವಾದ ಮಾಹಿತಿಯ ಮೇರೆಗೆ ದಿನಾಂಕ 13.04.15 ರಂದು 10 ಗಂಟೆಯ ಸುಮಾರಿಗೆ ದಸ್ತಗಿರಿ ಮಾಡಿ, ದಸ್ತಗಿರಿ ನಿಯಮ ಪಾಲಿಸಿ ನ್ಯಾಯಾಂಗ ಬಂದನ ಕುರಿತು ಕಳುಹಿಸಿದ್ದು ಇರುತ್ತದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಈರಮ್ಮ ಗಂಡ ಭಂಡಯ್ಯ ಸ್ಥಾವರಮಠ ಸಾ: ಹಿತ್ತಲಶೀರೂರ ಇವರು ಮನೆ ಜಾಗದ ಸಂಬಂಧ ದಿನಾಂಕ 11-04-2015 ರಂದು ಕಲ್ಯಾಣಿ ತಂದೆ ಅಮೃತ ಸರಸಂಬಿ ಸಂಗಡ 05 ಜನರು ಎಲ್ಲರೂ ಸಾ|| ಹಿತ್ತಲಶಿರೂರ. ರವರು ಕೂಡಿಕೊಂಡು ಜಗಳ ತಗೆಯುವ ಉದ್ದೇಶ ದಿಂದ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ತಲೆಯ ಮೇಲಿನ ಕೂದಲು ಹಿಡೆದು ಜಗ್ಗಾಡಿ ಮಾನ ಭಂಗಕ್ಕೆ ಯತ್ನಿಸಿ ಕೈಯಿಂದ  ಹೊಡೆ ಬಡೆ ಮಾಡಿ  ಜೀವ ಭಯ ಪಡೆಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12 April 2015

Kalaburagi Dist Reported Crimes

ಅಂತರ ರಾಜ್ಯ ವಂಚನೆಕೋರರ ಬಂಧನ
ಪತ್ರಿಕಾ ಪ್ರಕಟಣೆ
       ಆಂದ್ರ ಮೂಲದ ಹೈದ್ರಾಬಾದ ನಿವಾಸಿ ಶ್ರೀ ಪಿ.ರಮಣ್ಣರೆಡ್ಡಿ ತಂದೆ ವೆಂಕಟರಾಮಪ್ಪಾ  ಪಿ ಪಸಕು ಇವರು ದಿ:11-04-2015 ರಂದು ಬೆಳಿಗ್ಗೆ ಬ್ರಹ್ಮಪೂರ ಪೊಲೀಸ್ ಠಾಣೆಗೆ ಹಾಜರಾಗಿ ಸುಮಾರು 6 ತಿಂಗಳ ಹಿಂದೆ ತಾನುಕಲಬುರಗಿಯಲ್ಲಿ ಕೆಲಸದ ಮೇಲೆ ಬಂದಾಗ ಬೆಂಗಳೂರಿನ ನಿವಾಸಿ ಪರಮೇಶ್ವರ ಎಂಬುವವರ ಮುಖಾಂತರ ಜಾಕೀರ ಹುಸೇನ ಮತ್ತು ಜಾವೀದ ಎಂಬುವರ ಪರಿಚಯವಾಗಿದ್ದು ನಂತರ ಪಿ.ರಮಣ್ಣರೆಡ್ಡಿ ಇವರಿಗೆ ರೈಸ್ ಪುಲ್ಲಿಂಗ್ ಐಟಂ ತೆಗೆದುಕೊಳ್ಳು ಅದಕ್ಕೆ 10 ಲಕ್ಷ ರೂ ಖರ್ಚು ಬರುತ್ತದೆ ನಂತರ ನಿನಗೆ ಅದರಿಂದ 5 ಕೋಟಿ ರೂ ಲಾಭವಾಗಬಹುದು ಅಂತ ನಂಬಿಗೆ ಬರುವ ರೀತಿಯಲ್ಲಿ ಹೇಳಿ ಅದನ್ನು ಒಂದು ತಿಂಗಳ ಅವಧಿಯಲ್ಲಿ ರೈಸ್ ಪುಲ್ಲಿಂಗ್ ಐಟಂ ತಂದು ಕೊಡುವುದಾಗಿ ಹೇಳಿ ಜನೇವರಿಯಲ್ಲಿ ಮುಂಗಡವಾಗಿ ನಗದು 5 ಲಕ್ಷ ರೂ ಹಣ ತೆಗೆದುಕೊಂಡಿದ್ದು ಅವಧಿ ಮೀರಿದರೂ ಅವರು ಮಾತಿನಂತೆ ನಡೆದುಕೊಳ್ಳದೇ ಮತ್ತು ರೈಸ್ ಪುಲ್ಲಿಂಗ್ ಐಟಂ ಕೊಡದೇ ತಮಗೆ ಆರೋಗ್ಯ ಸರಿ ಇಲ್ಲಾ ಅಂತ ಹೇಳಿ ದಿನ ಹಾಕಿ ಅವರು ಹೈದ್ರಾಬಾದದಲ್ಲಿದ್ದಾಗ ಫೋನ ಮಾಡಿ ಮತ್ತೆ 5 ಲಕ್ಷ ರೂ ತೆಗೆದುಕೊಂಡು ಬಾ ನಿನಗೆ ರೈಸ್ ಪುಲ್ಲಿಂಗ್ ಐಟಂ ಕೊಡುತ್ತೇವೆ ಅಂತ ಹೇಳಿ ಕಲುಬುರಗಿಗೆ ಬರುವಂತೆ ಹೇಳಿದಾಗ ಪಿ. ರಮಣರೆಡ್ಡಿ ಇವರು ತನ್ನ ಸಹೋದರನಾದ ಮಹೇಶ ಇವರೊಂದಿಎಗ ದಿನಾಂಕ 06-04-15 ರಂದು ಹಣದೊಂದಿಗೆ ಕಲಬುರಗಿಗೆ ಬಂದು ಸೆಂಟ್ರಲ್ ಪಾರ್ಕ ಪಕ್ಕದಲ್ಲಿರುವ ಗೋಲ್ಡನ್ ರಿಜೇನ್ಸಿನಲ್ಲಿ ರೂಮ ಬಾಡಿಗೆ ಹಿಡಿದು ಉಳಿದಿದ್ದು ಎರಡು ದಿವಸದ ಮೇಲೆ  ಜಾಕೀರ ಮತ್ತು ಜಾವೀದ ಇವರು ಪಿ ರಮಣರೆಡ್ಡಿ ಹತ್ತಿರ ಹೋಗಿ ನಿಮಗೆ ರೈಸ್ ಪುಲ್ಲಿಂಗ್ ಐಟಂ ನ್ನು ಗುರುವಾರ ದಿವಸ ಕೊಡುವದಾಗಿ ಹೇಳಿ ಪುನಃ 1 ಲಕ್ಷ ರೂ ಬೇಕೆಂದು ಸುಳ್ಳು ಹೇಳಿ ಹಣ ತೆಗೆದುಕೊಂಡು ಹೋಗಿ ಪುನಃ ಮಾತಿನಂತೆ ಗುರುವಾರ ದಿವಸ ಅವರು ರೈಸ್ ಪುಲ್ಲಿಂಗ್ ಐಟಂ ಕೊಡದೇ ಇದ್ದ ಕಾರಣ ಸದರಿಯವರ ಮೇಲೆ ಅನುಮಾನ ಬಂದು  ಅವರಿಗೆ ಪೋನ ಮೂಲಕ ಸಂಪರ್ಕ ಮಾಡಿದಾಗ ದಿನಾಂಕ 11-04-2015 ರಂದು ಶನಿವಾರ ದಿವಸ ಬೆಳಿಗ್ಗೆ ಬಹುಮನಿ ಲಾಡ್ಜಿನ ರೂಮ ನಂ 104 ರಲ್ಲಿ ರೈಸ್ ಪುಲ್ಲಿಂಗ್ ಐಟಂ ಕೊಡುತ್ತೇವೆ ಅಲ್ಲಿಗೆ ಬಾ ಅಂತ ಹೇಳಿದ್ದು ಅವರ ಹೇಳಿಕೆ ಮತ್ತು ನಡತೆಯಿಂದ ಅವರು  ಭಯ ಪಟ್ಟು ಅವರಿಂದ ಮೋಸ ಹೋಗುವ ಸಾದ್ಯತೆ ಮನಗಂಡು ಈ ಮಾಹಿತಿಯನ್ನು ತಕ್ಷಣ ಬ್ರಹ್ಮಪೂರ ಪೊಲೀಸ್ ಠಾಣೆಗೆ ತಿಳಿಸಿ ಸಹಾಯ ಕೋರಿದ್ದು, ಈ ಎಲ್ಲಾ ಮಾಹಿತಿ ಆಧಾರವಾಗಿ ಮಾನ್ಯ ಅಮಿತ ಸಿಂಗ್ ಐಪಿಎಸ್, ಪೊಲೀಸ್ ಅಧೀಕ್ಷಕರು ಕಲಬುರಗಿ, ಮತ್ತು ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಂತೆ ಶ್ರೀ ಮಹಾನಿಂಗ ಬಿ ನಂದಗಾಂವಿ ಡಿ.ಎಸ್.ಪಿ (ಎ) ಉಪ-ವಿಭಾಗ ಕಲಬುರಗಿ ಇವರ ನೇತೃತ್ವದಲ್ಲಿ ಶ್ರೀ. ರಾಜಶೇಖರ ಹಳಿಗೋದಿ ಪಿ.ಐ ಸ್ಟೇಷನ ಬಜಾರ, ಶ್ರೀ.ಡಿ.ಸಿ ರಾಜಣ್ಣಾ ವೃತ ನಿರೀಕ್ಷಕರು ಗ್ರಾಮೀಣ ವೃತ, ಶ್ರೀ. ವಾಹೀದ ಕೊತವಾಲ್ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆ.ಶ್ರೀ. ಮಹಾದೇವಪ್ಪ ದಿಡ್ಡಿಮನಿ ಪಿ.ಎಸ್.ಐ ಅಶೋಕ ನಗರ ಪೊಲೀಸ ಠಾಣೆ, ಕುಮಾರಿ ಶೈಲಾ ಪ್ಯಾಟಿಶೇಟ್ಟರ ಮ.ಪಿ.ಎಸ್.ಐ ಮತ್ತು ಶ್ರೀಮತಿ ಎಸ್. ಎಸ್. ತೇಲಿ ಪಿಎಸ್ಐ (ಕಾ.ಸೂ)ರವರು ತಮ್ಮ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ ,ರಾಮು ಪವಾರ, ಪ್ರಶಾಂತ, ಶಿವಲಿಂಗಪ್ಪ, ದೇವಿಂದ್ರಪ್ಪ, ಮಹೇಶ ರವರೊಂದಿಗೆ ಬಹುಮನಿ ಲಾಡ್ಜಿಗೆ ಧಾವಿಸಿ ದಾಳಿ ಮಾಡಿ ಆರೋಪಿಗಳಾದ 1] ಜಾವೀದ ತಂದೆ ಅಲ್ಲಾವೂದ್ದಿನ ಖೇಳಗಿ ಸಾ// ವಿಜಾಪೂರ 2] ಇಮ್ರಾನ ತಂದೆ ಖಾಜಾಸಾಬ ಇಂಡಿಕರ್ ಸಾ// ವಿಜಾಪೂರ 3] ಝರೆಪ್ಪಾ ತಂದೆ ವೀರಣ್ಣಾ ಗೌರೆ ಸಾ// ವಿಜಾಪೂರ 4] ಮಹ್ಮದ ತಂದೆ ಮಹಿಬೂಬ ಖುರೇಶಿ ಸಾ// ಸಾಂಗ್ಲಿ 5] ಹೇಮಂತ ತಂದೆ ಶಿವಾಜಿ ಗಾಯಕವಾಡ ಸಾ/ ಸಾಂಗ್ಲಿ 6] ಸುನೀಲ ತಂದೆ ಭೀಮರಾವ ನಲೋಡೆ ಜಿ/ ಸಾಂಗ್ಲಿ 7] ವೈಭವ ತಂದೆ ವಸಂತ ಪವಾರ ಜಿ/ ಸಾಂಗ್ಲಿ ಇವರನ್ನು ಹಿಡಿದುಕೊಂಡು ಅವರಿಂದ ನಗದು ಹಣ 4,00,000=00 ರೂ ಮತ್ತು ರೈಸ್ ಪುಲ್ಲಿಂಗ್ ಐಟಂ ಎಂದು ಹೇಳಲಾದ ಪ್ಯಾಕ ಮಾಡಿದ ವಸ್ತು ವಶಪಡಿಸಿಕೊಂಡಿದ್ದು ದಾಳಿ ಕಾಲಕ್ಕೆ ಇನ್ನೊಬ್ಬ ಮುಖ್ಯ ಆರೋಪಿ ಯುಸೂಫ @ ಸಮೀರ ಮತ್ತು ಜಾಕೀರ ಹುಸೇನ  ಎಂಬುವವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ.
         ರೈಸ್ ಪುಲ್ಲಿಂಗ್ ಐಟಂ ಎಂದು ಹೇಳಲಾದ ಪ್ಯಾಕ ಮಾಡಿದ ವಸ್ತು ಅಪಾಯಕಾರಿ ಆಗಿರುವುದಾಗಿ ಆರೋಪಿಗಳ & ಪಿ ರಮಣರೆಡ್ಡಿ ಇವರ ವಿಚಾರಣೆಯಲ್ಲಿ ತಿಳಿದು ಬಂದಿದ್ದು ಈ ವಸ್ತು ಬಾಂಬ ನಿಷ್ಕ್ರೀಯ ದಳ ಮತ್ತು ವೈಜ್ಞಾನಿಕ ತಜ್ಞರಿಂದ ಪರೀಕ್ಷಿಸುವ ಸಲುವಾಗಿ ಅದನ್ನು ಯಥಾಸ್ತಿತಿ ಕಾಯ್ದಿರಿಸಲಾಗಿದೆ. ತನಿಖೆಯಲ್ಲಿ ಮಹಾರಾಷ್ಟ್ರ ಸಾತಾರ ಜಿಲ್ಲೆಯ ಜಾವೀದ ಎಂಬುವವನು ಸಹ ಇದೇ ರೀತಿ ಮೇಲ್ಕಂಡ ಆರೋಪಿಗಳಿಗೆ ಇದೇ ವ್ಯವಹಾರಕ್ಕಾಗಿ 28 ಲಕ್ಷ 50 ಸಾವಿರ ರೂ ಕೊಟ್ಟು ಮೋಸ ಹೋಗಿರುವುದಾಗಿ ತಿಳಿದು ಬಂದಿದ್ದು ಇನ್ನೂ ಸಾಕಷ್ಟು ಜನ ಆರೋಪಿಗಳಿಂದ ಮೋಸ ಹೋಗಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದ್ದು ಆರೋಪಿಗಳ ಮೇಲೆ ನಂಬಿಗೆ ದ್ರೋಹ ಮತ್ತು ವಂಚನೆ ಅಪರಾಧ ಅಡಿಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಲ್ಲಾ 7 ಜನ ಆರೋಪಿಗಳನ್ನು ತನಿಖೆ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅಪಘಾತ ಪ್ರಕರಣಗಳು:
ಜೇವರ್ಗಿ ಪೊಲೀಸ ಠಾಣೆ: ದಿನಾಂಕ 11.04.2015 ರಂದು ಸಿದ್ದರಾಮ ತಂದೆ ವಿಜಯಕುಮಾರ ನಾಗರೆಡ್ಡಿ ಸಾ|| ಹಾವನುರ ಠಾಣೆಗೆ ಹಾಜರಾಗಿ ದಿನಾಂಕ 11-04-2015 ರಂದು ತಾನು ಟಿಪ್ಪರ್ ನಂ ಕೆ.ಎ32ಸಿ1999 ನೇದ್ದರಲ್ಲಿ ಕುಳಿತುಕೊಂಡು ಕಲಬುರಗಿ ಕಡೆಗೆ ಹೋಗುತ್ತಿರುವಾಗ ಚಾಲಕನು ಟಿಪ್ಪರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಜೇವರ್ಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರುಗಡೆ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಟಿಪ್ಪರನ  ಮುಂದೆ ಹೋಗುತ್ತಿದ್ದ ಟಿಪ್ಪರ್ ಕೆ.ಎ332451 ನೇದ್ದರ ಚಾಲಕನು ಒಮ್ಮೆಲೆ ಬ್ರೇಕ್‌ ಹಾಕಿದ್ದರಿಂದ ನಮ್ಮ ಟಿಪ್ಪರ್ ಮುಂದಿನ ಟಿಪ್ಪರ್‌ಗೆ ಡಿಕ್ಕಿ ಪಡಿಸಿ ನಾವು ಕುಳಿತಿದ್ದ ಟಿಪ್ಪರನ ಮುಂಬಾಗ ಪೂರ್ತಿ ಜಖಂ ಗೊಂಡಿತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ: 11/04/2015 ರಂದು ಸಾಯಂಕಾಲ 4=30 ಗಂಟೆಯ ಸುಮಾರಿಗೆ ಶ್ರೀಮತಿ ಶಂಕ್ರಮ್ಮಾ ಗಂಡ ಭೀಮಶಾ ಸಾ: ಇಟಗಾ ಇವರು ಕಲಬುರಗಿಯ ಕೆ.ಇ.ಬಿ.ಆಫೀಸ್ ಹತ್ತಿರದ ಪರಿವಾರ ಹೊಟೇಲ ಎದುರಿನ ರೋಡ ಮೇಲೆ ನಡೆದುಕೊಂಡು ಎಸ್.ವಿ.ಪಿ.ಸರ್ಕಲ್ ರೋಡ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಮೋ/ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ಶಂಕ್ರಮ್ಮಾ ಗಂಡ ಭೀಮಶಾ ಸಾ: ಇಟಗಾಇವರಿಗೆ ಅಪಘಾತಮಾಡಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋದ ಬಗ್ಗೆ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

11 April 2015

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅರವಿಂದ ತಂದೆ ಅರ್ಜುನ ಹಾದಿಮನಿ ಸಾ:ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರು  ದಿನಾಂಕ:10/04/2015 ರಂದು ಬೆಳಗ್ಗೆ ಅಣ್ಣನಿಗೆ ರೊಟ್ಟಿ ಕೊಟ್ಟು ಮನೆಗೆ ಬರುತ್ತಿರುವಾಗ ಕಲ್ಯಾಣಿ ಪೆಟ್ರೋಲ ಬಂಕ ಹತ್ತಿರ ವಿರೇಶ ಮತ್ತು ಬನ್ನಿ ಎಂಬುವರು ಮೋಟಾರ ಸೈಕಲ ಮೇಲೆ ಬಂದು ನಮ್ಮ ಮೋಟಾರ ಸೈಕಲ ಮೇಲೆ ಕೂಡು ಅಲ್ಲಿಯವರೆಗೆ ಒಯ್ದು ಬಿಡುತ್ತೇವೆ ಅಂತಾ ನನ್ನನ್ನು ಕೂಡಿಸಿಕೊಂಡು ರಾಮಮಂದಿರ ಹತ್ತಿರ ಒಯ್ದು ಕೆಳಗೆ ಕೆಡವಿ ಭೋಸಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ವಿರೇಶ ಮತ್ತು ಬನ್ನಿ ಇವರು ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದರು ವಿಷ್ಣು ಎಂಬಾತನು ಒಂದು ರಾಡ ತಂದು ರಾಡಿನಿಂದ ನನ್ನ ತಲೆಯ ಹಿಂಭಾಗದಲ್ಲಿ ಹೊಡೆದನು. ಸಾಗರ ಇತನು ಬಡಿಗೆಯಿಂದ ಎಡಗಾಲ ಕಪಗಂಡ ಮೇಲೆ ಬೆನ್ನಿನ ಮೇಲೆ ಹೊಡೆಹತ್ತಿದನು ಆಗ ಯಾರೋ ಇಬ್ಬರೂ ಬಂದು ನನಗೆ ಬಿಡಿಸಿ ಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಜಮುನಾಬಾಯಿ ಗಂಡ ಸೋಮು ರಾಠೋಡ ಸಾ:ವಿದ್ಯಾನಗರ ಸೇಡಂ ಇವರ ಗಂಡ ದಿನಾಂಕ 09-04-2015 ರಂದು ರಾತ್ರಿ 10-00 ಗಂಟೆಗೆ ನನ್ನ ಗಂಡ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಬಂದ ನಂತರ ಲಾಡ್ಲಾಪುರ ಗ್ರಾಮಕ್ಕೆ ಜಾತ್ರೆ ಪ್ರಯುಕ್ತ ಹೋಗಿ ಬರುತ್ತೇನೆ. ಅಂತಾ ಮೋಟಾರ ಸೈಕಲ ನಂಬರ ಕೆಎ-32ಇಬಿ-8346 ನೇದ್ದರ ಮೇಲೆ ನನ್ನ ಗಂಡ ಮತ್ತು ನನ್ನ ಅಕ್ಕನ ಮಗನಾದ ಪ್ರದೀಪ ತಂದೆ ಚಂದರ ರಾಠೋಡ ಇಬ್ಬರು ಕೂಡಿಕೊಂಡು ಮನೆಯಿಂದ ಹೋದರು. ನಂತರ ರಾತ್ರಿ 11-30 ಗಂಟೆಯ ಸುಮಾರಿಗೆ ನನ್ನ ಅಕ್ಕನ ಮಗನಾದ ಪ್ರದೀಪ ರಾಠೋಡ ಇವನು ಫೋನ ಮಾಡಿ ತಿಳಿಸಿದ್ದೇನೆಂದರೆ ಲಾಡ್ಲಾಪುರ ಜಾತ್ರೆಗೆ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಮಳಖೇಡ ಗ್ರಾಮ ದಾಟಿ ಚಿತ್ತಾಪುರ ರೋಡಿನ ಮೇಲೆ ರಸ್ತೆಯ ಬ್ರಿಜ್ ಕಾಮಗಾರಿ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಒಂದು ಮೋಟಾರ ಸೈಕಲ ನಂಬರ ಕೆಎ-32 ವೈ-0584 ನೇದ್ದರ ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಬಂದು ನಮ್ಮ ಮೊಟಾರ ಸೈಕಲಗೆ ಡಿಕ್ಕಿಹೊಡೆದು ರಸ್ತೆ ಅಪಘಾತಪಡಿಸಿದಾಗ ನಾವಿಬ್ಬರು ರೋಡಿನ ಮೇಲೆ ಬಿದ್ದಾಗ ನನಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತು ಒಳಪೆಟ್ಟಾಗಿದ್ದು, ಮತ್ತು ಮೋಟಾರ ಸೈಕಲ ನಡೆಸುತ್ತಿದ್ದ ನನ್ನ ಕಾಕಾ ಸೋಮು ರಾಠೋಡ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದು ನಾಲಿಗೆ ಕಚ್ಚಿರುತ್ತದೆ ಅಂತಾ ತಿಳಿಸಿ ಮಳಖೇಡ ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ತಿಳಿಸಿದಾಗ ನಾನು ಹಾಗು ನನ್ನ ಅಕ್ಕನ ಗಂಡ ಚಂದರ ನನ್ನ ಅಕ್ಕ ಅನಿತಾ ಇಬ್ಬರೂ ಕೂಡಿ ಮಳಖೇಡ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಳಖೇಢ ಆಸ್ಪತ್ರೆಯಿಂದ ನನ್ನ ಗಂಡನಿಗೆ ಗುಲಬರ್ಗಾ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.