POLICE BHAVAN KALABURAGI

POLICE BHAVAN KALABURAGI

11 December 2014

Kalaburagi District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಪುಷ್ಪಾಬಾಯಿ ಗಂಡ ಗಣೇಶ ಝಾಢಮುಖೆ ಸಾಃ ಎಂ.ಜಿ ರೋಡ್, 01 ನೇ ಕ್ರಾಸ ಎಂ.ಬಿ ನಗರ ಕಲಬುರಗಿ ಇವರು ದಿನಾಂಕಃ 02/12/2014 ರಂದು ಮದ್ಯಾಹ್ನ 01:30 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿ ಊಟ ಮಾಡಿ ಮನೆಯ ಬಾಗಿಲಿಗೆ ಚಿಲಕ ಹಾಕಿ ಮೇನ್ ಗೇಟ್ ಸಮೀಪ ಕೂತುಕೊಂಡಿದ್ದು ನಂತರ 02:00 ಪಿ.ಎಂ. ಕ್ಕೆ ಮನೆಯ ಬಾಗಿಲು ತೆರೆದು ಬೆಡ್ ರೂಮ್ ಒಳಗಡೆ ಹೋಗಿ ನೋಡಲಾಗಿ ಅಲೆಮಾರಿ ತೆರೆದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳು ನಗದು ಹಣ  ಒಟ್ಟು 76,300/- ರೂ. ನೇದ್ದವುಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಹಿಂದುಗಡೆಯಿಂದ ಕಂಪೌಂಡ ಜಿಗಿದು ಮನೆಯೊಳಗೆ ಬಂದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ: 10-12-2014 ರಂದು ಬೆಳಿಗ್ಗೆ  ಲಾರಿ ನಂ ಎ.ಪಿ-23, ವಾಯಿ-2259 ನೇದ್ದರಲ್ಲಿ ಪಡಿತರ ದಾನ್ಯ ಅಕ್ರಮವಾಗಿ ಕಲಬುರಗಿ  ಕಡೆಗೆ ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು, ನಾನು  ಮತ್ತು  ಶ್ರೀ ನಜೀರ ಅಹ್ಮದ ಆಹಾರ ನಿರೀಕ್ಷಕರು ರವರೊಂದಿಗೆ ಜೇವರಗಿ ಪೊಲೀಸ್ ಠಾಣೆಗೆ ಬಂದು ಅಲ್ಲಿ ಸಿಬ್ಬಂದಿ ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರ ಸಿಪಿಐ ಸಾಹೇಬರು ಮತ್ತು ಸಿಬ್ಬಂದಿ ಜನರೊಂದಿಗೆ ಕಲಬುರಗಿ ರೋಡಿನ ಕಡೆಗೆ ಹೋಗಿ ಜೇವರಗಿ ಪಟ್ಟಣದ ರದ್ದವಾಡಿ ಕ್ರಾಸ ಹತ್ತಿರ ನಿಂತು ಲಾರಿಗಳನ್ನು ಚಕ್ ಮಾಡುತ್ತಿದ್ದಾಗ, ಅಂದಾಜು ಬೆಳಿಗ್ಗೆ 04.30 ಗಂಟೆಗೆ ಜೇವರಗಿ ಪಟ್ಟಣದ ಕಡೆಯಿಂದ ಲಾರಿ ನಂ ಎ.ಪಿ-23, ವಾಯಿ-2259 ಒಂದು ಲಾರಿ ಬಂದಿದ್ದು ಅದಕ್ಕೆ ಕೈ ಮಾಡಿ ನಿಲ್ಲಿಸಿ ಅದರ ಚಾಲಕನಿಗೆ ಲಾರಿಯಲ್ಲಿದ್ದ ಮಾಲಿನ ಬಗ್ಗೆ ದಾಖಲಾತಿಗಳು ಕೇಳಲು ಅವನ ಹತ್ತಿರ ಯಾವುದೇ ದಾಖಲಾತಿ ಇರುವದಿಲ್ಲಾ. ಅಂತ ಹೇಳಿದನು ನಾವು ಲಾರಿಯ ಮೇಲೆ ಹೋಗಿ ಚೆಕ್ ಮಾಡಿ ಪರಿಶೀಲಿಸಲಾಗಿ ಅದರಲ್ಲಿದ್ದ ಪ್ಲಾಸ್ಟಿಕ ಚೀಲಗಳಲ್ಲಿ ಮತ್ತು ಗೋಣಿ ಚೀಲಗಳಲ್ಲಿ ಪಡಿತರ ದಾನ್ಯಕ್ಕೆ ಸಂಬಂಧಿಸಿದ ಅಕ್ಕಿಗಳಾಗಿದ್ದು, ಪ್ರತಿಯೊಂದು ಚೀಲದಲ್ಲಿ ಸುಮಾರು 40 ರಿಂದ 50 ಕೆ.ಜಿ ಅಕ್ಕಿ ಇರುವದು ಕಂಡುಬರುತ್ತದೆ. ಲಾರಿಯಲ್ಲಿ ಸುಮಾರು ಒಟ್ಟು 295 ಬ್ಯಾಗ ಇರಬಹುದು  ಅವುಗಳ ಅಂದಾಜು ಮೊತ್ತ 1.37.500=0 ಆಗಬಹುದು ಲಾರಿ ಚಾಲಕನಿಗೆ ಈ ಬಗ್ಗೆ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾದೀಕ ತಂದೆ ಮಹ್ಮದ ಇಬ್ರಾಹಿಂಸಾಬ ಸಾ: ಜಹಿರಾಬಾದ ಅಂತ ಹೇಳಿ ಅವನು ಜೇವರಗಿ ಪಟ್ಟಣದ ಗಂಜ್‌ದಲ್ಲಿ ತುಂಬಿಕೊಂಡು ಗುಜರಾತ ರಾಜ್ಯಕ್ಕೆ ತಗೆದುಕೊಂಡು ಹೋಗುತ್ತಿರುವದಾಗಿ ಹೇಳಿದನು. ನಂತರ ಆರೋಪಿ ಮತ್ತು ಲಾರಿ ಸಮೇತ ಮುದ್ದೇ ಮಾಲಿನೊಂದಿಗೆ ಜೇವರಿಗಿ ಠಾಣೆಗೆ ಬಂದು ಶ್ರೀ.  ದೌಲತರಾಯ ತಂದೆ ಭಗವಂತರಾಯ ಪಾಟೀಲ ಆಹಾರ ನಿರೀಕ್ಷಕರು ತಹಸೀಲ ಕಾರ್ಯಾಲಯ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಟಕಾಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ,ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಬಸಣ್ಣ ಕಟ್ಟಿಮನಿ ಸಾ|| ಜೇವರ್ಗಿ (ಬಿ) ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 460/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೋಬೈಲನಲ್ಲಿ ಪ್ರಚೋದನಾಕಾರಿ ಶಬ್ದ ಬಳಿಸಿದವನ ಬಂಧನ :
ಜೇವರ್ಗಿ ಠಾಣೆ : ಮಹಿಬೂಬ ತಂದೆ ಬಾಬು ನಾಯಕೋಡಿ (ಟೇಲರ್)  ಈತನು ತನ್ನ ಮೋಬಾಯಿಲ್‌ ಸಂಖ್ಯೆ 9972689346 ನೇದ್ದರ ವಾಟ್ಸ-ಆಪ್‌ ಕಾಂಟ್ಯಾಕ್ಟ್ ಪ್ರೋಫೈಲ್‌ ಗೆ ಒಸಾಮಾ-ಬಿನ್‌-ಲಾಡೆನ್‌ ಭಾವ ಚಿತ್ರ ಹಾಕಿ ಡು.ಆರ್‌.ಡೈ”  ಎಂದು ಪ್ರಚೋದನಾಕಾರಿ ಬರಹ ಹಾಕಿದ್ದಾನೆ, ಲಾಡೆನ್‌ ಒಬ್ಬ ಉಗ್ರ ಸಂಘಟನೆಯಾದ ಅಲ್‌-ಖಾಯಿದೆ ಮುಖ್ಯಸ್ಥನಾಗಿದ್ದು ಈತ ಜಗತ್ತಿನ ಅಮೇರಿಕಾ ಭಾರತ ಪಾಕಿಸ್ತಾನ ಅಲ್ಲದೆ ಅಫಘಾನಿಸ್ತಾನದಲ್ಲಿ ಸಾವಿರಾರು ಅಮಾಯಕರ ಪ್ರಾಣ ತೆಗೆದು ರಕ್ತ ಪಾತ ಮಾಡಿದವನ ಭಾವಚಿತ್ರ ಬಳಸಿದ್ದಲ್ಲದೆ ಡೂ ಆರ್‌ ಡೈಎಂದು ನಮೂದಿಸಿದ್ದು ಇಂತಹ ಪ್ರಚೋದನಕಾರಿ ಬರಹ ಬರೆದು ಮುಸ್ಲೀಂ ಯುವ ಜನಾಂಗಕ್ಕೆ ಪ್ರಚೋದನೆ ಗೊಳಪಡಿಸುತ್ತಿದ್ದಾನೆ. ಅಂತಾ ಶ್ರೀ ವಿರೇಶ ತಂದೆ ವಿಶ್ವನಾಥ ಪಾಟೀಲ ಸಾ : ಜೇವರ್ಗಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ವಾಹೀದಾ ತಂದೆ ಮಹಿಬೂಬ ಶೇಖ್ ಇವರ ಅಕ್ಕಳಾದ ಜಾಹೇದಾ ಗಂಡ ಖದೀರ ಖಾನ ಇವರ ಮಗುವಿಗೆ ಆರಾಮವಿಲ್ಲದ ಕಾರಣ ನಾನು ನಿನ್ನೆ ದಿನಾಂಕಃ 09/12/2014 ರಂದು ಮದ್ಯಾಹ್ನ 03 ಗಂಟೆಗೆ ಭರತನಗರ ತಾಂಡಾದ ಮನೆಗೆ ಹೋಗಿರುತ್ತೇನೆ. ನಂತರ ಮಗುವಿಗೆ ಬಹಳಷ್ಟು ಆರಾಮವಿಲ್ಲದ ಕಾರಣ ನಾನು ರಾತ್ರಿ ಸುಮಾರು 11:30 ಗಂಟೆಗೆ ನಾನು ನನ್ನ ತಮ್ಮನಾದ ಅಬ್ದುಲ್ ರೌಫ್ ಈತನಿಗೆ ಕರೆದುಕೊಂಡು ಬರಲು ಮನೆಯಿಂದ ಹೊರಗೆ ಹೋಗುತ್ತಿರುವಾಗ ನಮ್ಮ ಅಕ್ಕನ ಮನೆಯ ಎದುರಗಡೆ ಇರುವ ಅರುಣಾ ಗಂಡ ಮೋಹನ ಹಾಗು ರಾಜಶ್ರೀ ಗಂಡ ಸಂತೋಷ, ಶ್ರೀಕಾಂತ ತಂದೆ ಕಿಶನ, ಸಂತೋಷ ತಂದೆ ಕಿಶನ, ಅಪರ್ಣಾ ತಂದೆ ಮನೋಹರ ಇವರೆಲ್ಲರೂ ಬಂದವರೇ ನನಗೆ ತಡೆದು ನಿಲ್ಲಿಸಿ ಕೈಯಿಂದ ಬೆನ್ನಿನ ಮೇಲೆ, ಕಾಲಿನಿಂದ ಹೊಟ್ಟೆಯ ಮೇಲೆ, ಬಡಿಗೆಯಿಂದ ಬಲಕೈ ಬೆರಳುಗಳ ಮೇಲೆ ಹೊಡೆದು ಗುಪ್ತಗಾಯ ಮತ್ತು ತರಚಿದ ಗಾಯಪಡಿಸಿರುತ್ತಾರೆ. ನನ್ನ ಅಕ್ಕಳಾದ ನಜಮಾ ಇವಳಿಗೂ ಕೈ ಬಟ್ಟು ಮುರಿದು ಕೈಯಿಂದ ಹೊಡೆದಿರುತ್ತಾರೆ ಹಾಗು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಗೌರಿಶಂಕರ ತಂದೆ ಗುರಣ್ಣಾ ಅಂಗಡಿ ಸಾಃ ಆಂದೊಲಾ ಹಾಃವಃ ಜೇವರಗಿ ಇವರು  ದಿನಾಂಕ :  10-12-2014  ರಂದು 20.30  ಗಂಟೆಗೆ ಸತ್ತಾರ ಪೆಟ್ರೊಲ ಪಂಪ ಸಮೀಪ ಜೇವರ್ಗೀ ಶಹಾಪುರ ಮುಖ್ಯ ರಸ್ತೆಯ ಮೇಲೆ ನನ್ನ ದೊಡ್ಡಪ್ಪ ಬಸವರಾಜ ತಂದೆ ಶಿವಲಿಂಗಪ್ಪ ಅಂಗಡಿ ಇವರು ನಂಬರ ಪ್ಲೇಟ ಇಲ್ಲದ ಮೊಟಾರ ಸೈಕಲ ನಂ ಚೆಸ್ಸಿ ನಂ MBLKC10EPCGK00723   ನೇದ್ದನ್ನು ಚಲಾಯಿಸಿಕೊಂಡು ಜೇವರಗಿ ಕಡೆಯಿಂದ ಆಂದೊಲಕ್ಕೆ ಹೊಗುತ್ತಿದ್ದಾಗ, ಆ ವೇಳೆಗೆ ಅವನ ಮುಂದುಗಡೆ ಟ್ರ್ಯಾಕ್ಟರ್  ನಂ ಕೆ.ಎ-28 ಟಿಬಿ- 7655, ಟ್ರ್ಯಾಲಿ ನಂ ಕೆ.ಎ. -28ಟಿಬಿ.- 4106 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನಲ್ಲಿ ಹಿಂದೆ ವಾಹನ ಬರುವುದನ್ನು ನೊಡದೆ ಒಮ್ಮಲೇ ಬ್ರೇಕ್ ಹಾಕಿದ್ದಕ್ಕೆ ನನ್ನ ದೊಡ್ಡಪ್ಪ ಚಾಲಯಿಸುತ್ತಿದ್ದ ಮೊಟಾರ ಸೈಕಲ್ ಟ್ರ್ಯಾಕ್ಟರ ಟ್ರ್ಯಾಲಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಕ್ಕೆ ಅವನಿಗೆ ಹಣೆಯ ಮೇಲ್ಬಾಗದಲ್ಲಿ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 December 2014

Kalaburagi District Reported Crimes

ದರೋಡೆ ಮಾಡಲು ಪ್ರಯತ್ನಿಸಿ ಹಲ್ಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶ್ಯಾ ಕೇಶ್ವಾರ ಸಾ : ಡೊಂಗರಗಾಂವ ರವರು ದಿನಾಂಕ:07/12/2014 ರಂದು ನನ್ನದು ಸಾಯಂಕಾಲ 7-00 ಗಂಟೆಯಿಂದ ಮರುದಿವಸ ಬೆಳಿಗ್ಗೆ 7-00 ಗಂಟೆಯವರೆಗೆ ಕರ್ತವ್ಯವಿದ್ದ ಪ್ರಯುಕ್ತ ನಾನು ಸಾಯಂಕಾಲ 7-00 ಗಂಟೆ ಸುಮಾರಿಗೆ ಸದರಿ ಟಾವರಿಗೆ ಬಂದು ಕರ್ತವ್ಯದ ಮೇಲಿದ್ದೆನು. ಸದರಿ ದಿನಾಂಕದಂದು ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಟಾವರದ ಹತ್ತಿರ ಇದ್ದ ಕೋಣೆಯಲ್ಲಿ ನಾನು ಕುಳಿತುಕೊಂಡಿದ್ದೆ. ಅಂದಾಜು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಟಾವರಿನ ಗೇಟ ತೆರೆಯುವ ಸಪ್ಪಳ ಕೇಳಿಸಿತು. ಅದಕ್ಕೆ ನಾನು ಬಾಗಿಲು ತೆರೆದು ಹೊರಗೆ ಬಂದು ನೋಡಲಾಗಿ, ಗೇಟ ಹತ್ತಿರ ಸುಮಾರು 8-10 ಜನರು ನಿಂತುಕೊಂಡಿದ್ದು. ಅದರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಗುಲೇರನಿಂದ ಕಲ್ಲು ಹೊಡೆಯಲು ಆ ಕಲ್ಲು ನನ್ನ ಗದ್ದಕ್ಕೆ ಬಡಿಯಿತು ಅದಕ್ಕೆ ನಾನು ಅಂಜಿ ನನ್ನ ರೂಮಿನಲ್ಲಿ ಹೋಗಿ, ಬಾಗಿಲು ಬಂದು ಮಾಡಿಕೊಂಡು ಒಳಗಿನಿಂದ ನನ್ನ ಮೊಬೈಲ ಮುಖಾಂತರ ಟೆಕ್ನಿಶಿಯನ್ನಾದ ಉಮೇಶ ಇವರಿಗೆ ಫೋನ ಮಾಡಿ, ಯಾರೋ 8-10 ಜನರು ಟಾವರ ಸಮೀಪದಲ್ಲಿದ್ದ ಬ್ಯಾಟರಿಗಳನ್ನು ಕದಿಯಲು ಬಂದಿದ್ದಾರೆ ಬೇಗನೇ ಬನ್ನಿ ಅಂತಾ ಹೇಳಿ ನನ್ನ ಮೊಬೈಲದಲ್ಲಿದ್ದ ಸಿಮ್ ಹೊರಗೆ ತೆಗದು ಬಿಸಾಕಿರುತ್ತೇನೆ. ಅಷ್ಟರಲ್ಲಿ ಬಂದಿದ ಜನರ ಪೈಕಿ 3-4 ಜನರು ನನ್ನ ರೂಮಿನ ಮೇಲೆರಿ ಪತ್ರಾಗಳನ್ನು ಸರಿಸಿ ಒಳಗೆ ಇಳಿದು ಬಂದು ಆ ಪೈಕಿ ಒಬ್ಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನಗೆ ಹೊಡೆದನು.  ಅದರಿಂದ ನನ್ನ ತಲೆಯ ಮುಂಭಾಗಕ್ಕೆ ರಕ್ತಗಾಯವಾಗಿ ರಕ್ತ ಸೋರಹತ್ತಿತ್ತು ಇನ್ನೂಳಿದವರ ಪೈಕಿ ಒಬ್ಬನು ಇಟ್ಟಿಗೆಯಿಂದ ಹೊಡೆಯಲು ನನ್ನ ಎಡಕಾಲ ಮೊಳಕಾಲಿಗೆ ಮತ್ತು ಬಲಗೈ ಮುಂಗೈಗೆ ಗುಪ್ತಗಾಯವಾಯಿತು ನಂತರ ಅವರೆಲ್ಲರೂ ನನ್ನನ್ನು ರೂಮಿನಿಂದ ಹೊರಗೆ ಎಳೆದು ರೂಮಿನ ಹಿಂದುಗಡೆ ಒಯ್ದು ಎರಡು ಕಾಲು ಮತ್ತು ಕೈಗಳನ್ನು ವೈರಿನಿಂದ ಕಟ್ಟಿ ಸಂದಿಯಲ್ಲಿ ಹಾಕಿ ಮೇಲುಗಡೆ ಕಬ್ಬಿಣದ ರ್ಯಾಕ್ಸ ಹಾಕಿರುತ್ತಾರೆ. ಅಷ್ಟರಲ್ಲಿ ನಮ್ಮ ಟೆಕ್ನೀಶಿಯನ್ ಉಮೇಶ ಮತ್ತು ಇತರರು ನಮ್ಮ ಟಾವರ ಹತ್ತಿರ ಬಂದಿರುವ ಸಪ್ಪಳ ಕೇಳಿ ನಾನು ಜೋರಾಗಿ ಬಿದ್ದಲ್ಲಿಂದ ಚಿರಾಡಲು ಅಲ್ಲಿಗೆ ಬಂದಿರುವ ಸುಮಾರು 8-10 ಜನರು ಟಾವರ ಹಿಂದುಗಡೆ ಇದ್ದ ಗುಡ್ಡದಲ್ಲಿ ಓಡಿ ಹೋದರು. ಹಾಗೆ ಓಡಿ ಹೋಗುವಾಗ ನನ್ನಲ್ಲಿದ್ದ ಮೊಬೈಲನ್ನು ಕಸಿದುಕೊಂಡಿರುತ್ತಾರೆ. ಸದರಿ ಜನರು ಅಂದಾಜು 25 ರಿಂದ 30 ವರ್ಷ ವಯಸ್ಸಿನವರಿದ್ದು ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 27-11-2014 ರಂದು 5 ಪಿಎಂದಿಂದ 6 ಪಿಎಂದ ಅವಧಿಯಲ್ಲಿ ಅಪರಿಚಿತ ಗಂಡು ಮನುಷ್ಯನು ಕೆರೆ ಭೋಸಗಾ ಕ್ರಾಸ ಕಡೆಯಿಂದ ಕಲಬುರಗಿ ಕಡೆಗೆ  ನಡೆದುಕೊಂಡು, ರೋಡಿನ ಎಡಗಡೆಯಿಂದ ಬರುವಾಗ ಯಾವುದೋ ವಾಹನ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಅಪರಿಚಿತನಿಗೆ ಅಪಘಾತಪಡಿಸಿ ಭಾರಿ ರಕ್ತಗಾಯಗೊಳಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು ಅಂಬುಲೈನ್ಸ ಗಾಡಿಯವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿದ್ದುಸದರ ವ್ಯಕ್ತಿಯು  ದಿನಾಂಕ 27-11-2014 ರಂದು ಆದ ರಸ್ತೆ ಅಪಘಾತಗಳಿಂದ ಉಪಚಾರ ಹೊಂದುತ್ತಾ ಗುಣ ಮುಖವಾಗದೇ ಇಂದು ದಿನಾಂಕ 09-12-2014 ರಂದು ಸಂಜೆ 5-30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಲಕ್ಷ್ಮೀಕಾಂತ ತಂದೆ ನಾಗೇಂದ್ರಪ್ಪಾ ಪಾಟೀಲ್ ಸಾ|| ಚೌಡೇಶ್ವರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಲಾಲಸಾಬ ತಂದೆ ಬಾಲೇಸಾಬ ಕಡಮೂಡ ಸಾ|| ಮಾಡಿಯಾಳ ರವರು ದಿನಾಂಕ 08-12-14 ರಂದು 1830 ಗಂಟೆಗೆ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ ಇತನನ್ನು ಆತನ ಮನೆಯ ಮುಂದೆ ಘಟಾರ ನೀರಿನ ಸಂಭಂಧ ಕೇಳಲು ಹೋದಾಗ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ ಆತನ ಸಂಗಡ ಮೂರು ಜನರು ತನಗೂ ಹಾಗೂ ತನ್ನ ತಮ್ಮನಾದ ವಜೀರಸಾಬನಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ತಡೆದು ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 December 2014

Kalaburagi District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗರಾಜ ತಂದೆ ಮಲ್ಲೇಶಪ್ಪಾ ತೆಗನೂರ ಸಾಃ ಪೌರ ಕಾರ್ಮಿಕರ ಕಾಲೋನಿ ಕಲಬುರಗಿ ರವರು ಹಾಗು ಅಂಜಲಿ ತಂದೆ ಪ್ರಕಾಶ ಭರಣಿ ಇಬ್ಬರೂ ಈಗ ಸುಮಾರು 01 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು . ದಿನಾಂಕಃ 08/12/2014 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಸದರಿ ಅಂಜಲಿ ಇವಳು ಫಿರ್ಯಾದಿ ವಾಸವಾಗಿರುವ ಪ್ಲಾಟ ನಂ. 43 ಪೌರ ಕಾರ್ಮಿಕರ ಕಾಲೋನಿಯ ಮನೆಗೆ ಬಂದಿದ್ದು, ಸದರಿ ಅಂಜಲಿಯ ಅಣ್ಣಂದಿರಾದ 1) ಸಂದೀಪ ಭರಣಿ 2) ಪವನ ಭರಣಿ 3) ತಾಯಿಯಾದ ಕಮಲಾಬಾಯಿ ಅವರ ಸಂಗಡ 4) ಕಿಟ್ಯಾ 5) ಪಪ್ಪು ಪುಟಗೆ ಹಾಗು ಇತರೆ 10-15 ಜನರು ಕೂಡಿಕೊಂಡು ಫಿರ್ಯಾದಿಯ ಮನೆಯೊಳಗೆ ಬಂದು ಫೀರ್ಯಾದಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಫಿರ್ಯಾದಿಯ ಅಕ್ಕಳಾದ ಪಾರ್ವತಿ ಇವಳ ಮನೆಯೊಳಗೆ ಕೈಯಲ್ಲಿ ಬಡಿಗೆ ಹಾಗು ಚಾಕು ಹಿಡಿದುಕೊಂಡು ಹೋಗಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆ, ಚಾಕು, ತಲವಾರು ಹಾಗು ಕೈಗಳಿಗೆ ಹೊಡೆ ಬಡೆ ಮಾಡಿ ಎಡಗಣ್ಣಿನ ಮೇಲೆ, ಬಲ ಕಪಾಳದ ಮೇಲೆ, ಬಲಗಾಲಿನ ಮೊಳಕಾಲಿನ ಕೆಳಗೆ ಹೊಡೆದು ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-12-2014 ರಂದು ಅಂದಾಜು ರಾತ್ರಿ ಶ್ರೀ ಶಂಕರ ತಂದೆ ಗುರುಪಾದಪ್ಪಾ ಪಸಾರೆ ಸಾ ಅಫಜಲಪೂರ ರವರಿಗೆ  ಯಾರೊ ಪೋನ ಮಾಡಿ ನಿಮ್ಮ ತಮ್ಮ ಭೀಮರಾಯ ಈತನು ಸೂರ್ಯಕಾಂತ ತಂದೆ ಗಂಗಣ್ಣ ಗುಣಾರಿ ಈತನು ನಡೆಸುತ್ತಿದ್ದ ಮೋ/ಸೈ ಮೇಲೆ ಅವನೊಂದಿಗೆ ಅಫಜಲಪೂರದ ಬಸವೇಶ್ವರ ಸರ್ಕಲ ಹತ್ತಿರ ಬರುತ್ತಿದ್ದಾಗ ಎಕ್ಸಿಡೆಂಟ ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಮ್ಮ ಭೀಮರಾಯ ಹಾಗೂ ಸೂರ್ಯಕಾಂತ ಗುಣಾರಿ ಇಬ್ಬರು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲದ ಶ್ರೀ ಭಾಗ್ಯವಂತಿ ಕಾಮಾನದಿಂದ ಘತ್ತರಗಿ ರೋಡಿನ ಕಡೆಗೆ ಅಂದಾಜು 50 ಪೀಟ ಅಂತರದಲ್ಲಿ ರೋಡಿನ ಮೇಲೆ ಇಬ್ಬರ ಶವಗಳು ಬಿದ್ದಿದ್ದನ್ನು ನೋಡಿ ಗುರುತಿಸಿದೆನು, ನನ್ನ ತಮ್ಮನ ತಲೆಗೆ ಬಾರಿ ಪೆಟ್ಟಾಗಿ ಪೂರ್ತಿ ಜಜ್ಜಿದಂತೆ ಆಗಿ ಬಾರಿ ರಕ್ತಗಾಯವಾಗಿತ್ತು. ಹಾಗೂ ಸೂರ್ಯಕಾಂತ ಈತನ ಎದೆಗೆ ಹಾಗೂ ಹೊಟ್ಟೆಗೆ ಬಾರಿ ಒಳಪೆಟ್ಟುಗಳು ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರು, ಅವರ ಪಕ್ಕದಲ್ಲಿಯೆ ಇಬ್ಬರು ಕುಳಿತುಕೊಂಡು ಬರುತ್ತಿದ್ದ ಮೋ/ಸೈ ಬಿದ್ದಿದ್ದು ಅದರ ಕೆಎ-28 ಹೆಚ್- 7305 ಇರುತ್ತದೆ. ನನ್ನ ತಮ್ಮ ಮತ್ತು ಸೂರ್ಯಕಾಂತ ಗುಣಾರಿ ಇಬ್ಬರು ಘತ್ತರಗಿ ರೋಡಿನ ಕಡೆಯಿಂದ ಬಸವೇಶ್ವರ ಸರ್ಕಲ ಕಡೆಗೆ ಕಮಾನ ಹತ್ತಿರ ಬರುತ್ತಿದ್ದಾಗ ಎದುರುಗಡೆಯಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮ ಹಾಗೂ ಸೂರ್ಯಕಾಂತ ಇವರು ಬರುತ್ತಿದ್ದ ಮೋ/ಸೈ ಕ್ಕೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಧನಶೆಟ್ಟಿ ತಂದೆ ಶರಣಪ್ಪಾ ಕೋರೆ ಸಾಃ ಮನೆ ನಂ. ಇ.ಡಬ್ಲೂ.ಎಸ್ 29, ಗುಬ್ಬಿ ಕಾಲೋನಿ ಸೇಡಂ ರೋಡ್ ಕಲಬುರಗಿ ರವರು ದಿನಾಂಕ : 08/12/2014 ರಂದು ಖಾಸಗಿ ಕೆಲಸದ ನಿಮಿತ್ಯ ನಾನು ಮತ್ತು ನನ್ನ ಮಗನಾದ ಮಲ್ಲಿಕಾರ್ಜುನ ಇಬ್ಬರು ಓಂ ನಗರ ಗೇಟಿನ ಎದುರುಗಡೆ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಹಿಂದಿನಿಂದ ಆಟೋ ನಂ. ಕೆ.ಎ 32 ಬಿ 0285 ನೇದ್ದರ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ನನ್ನ ಬಲಭಾಗದ ಟೊಂಕದ ಕೆಳಗೆ ಜೋರಾಗಿ ಡಿಕ್ಕಿ ಪಡಿಸಿದರ ಪರಿಣಾಮ ನಾನು ರೋಡಿನ ಮೇಲೆ ಬಿದ್ದೆನು. ನನ್ನ ಬಲಭಾಗದ ಟೊಂಕದ ಹತ್ತಿರ ಭಾರಿ ಒಳಪೆಟ್ಟಾಗಿರುತ್ತದೆ. ನಂತರ ಆಟೋ ಚಾಲಕ ತನ್ನ ಆಟೋವನ್ನು ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಶರಣಪ್ಪ ಹತ್ತಿ ಸಾ: ಮನೆ ನಂ. 2/2-87 ಹನುಮಾನ ಗುಡಿಯ ಹತ್ತಿರ ಹತ್ಯಾನಗಲ್ಲಿ ಆಳಂದ ಹಾ.ವ: ಹಾಲಪ್ಪ ನಿವಾಸ ಕೊಬಾ ಪ್ಲಾಟ ಇವರ ಮನೆಯಲ್ಲಿ ಬಾಡಿಗೆ ಕಲಬುರಗಿ ರವರು ದಿನಾಂಕ 22/11/2014 ರಂದು ನನ್ನ ಕೆಲಸದ ನಿಮಿತ್ಯ ಮೋಟಾರ ಸೈಕಲ್ ಮೇಲೆ ಬಂದು ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ಆಳಂದ ಗ್ರಾಮಕ್ಕೆ ಬಸ್ಸಿನಿಂದ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ 9-30 ಪಿ.ಎಂ.ಕ್ಕೆ ಬಂದು ನೋಡಲಾಗಿ ಸ್ಥಳದಲ್ಲಿಯೆ ಇಟ್ಟ ನನ್ನ ಮೋಟಾರ ಸೈಕಲ್ ಇರಲಿಲ್ಲಾ. ಈ ಬಗ್ಗೆ ನಾನು ಇತರೆ ಸ್ಥಳ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲಾ  ಪೊಲೀಸ್ ಠಾಣೆಗೆ ಮಾಹಿತಿ ಸಹ ನೀಡಿರುತ್ತೇನೆ. ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ವಿ-6971 ನೇದ್ದರ ಇಂಜನ್ ನಂ. HA10EA9HF99767 ಚೆಸ್ಸಿ ನಂ. MBLHA10EJ9HF51395 ರ ಮಾಡಲ್ ನಂ. 2009 ಬ್ಲ್ಯಾಕ್ ಬಣ್ಣದ್ದು  ಅ.ಕಿ. 25,000/- ರೂ ಬೇಲೆ ಬಾಳುವುದು ಯಾರೋ ಕಳ್ಳರು   ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರಿಮತಿ ಭೃಮರಾಂಭೆ ಗಂಡ ಸಂಗ್ರಾಮ ಉಚ್ಛೇದ ಸಾ|| ಆಂಜನೆಯ ನಗರ ಹಳೇ ಆರ್.ಟಿ. ಕ್ರಾಸ್ ಕಲಬುರಗಿ ಇವರನ್ನು ಹಿರಿಯರೆಲ್ಲರೂ ಕೂಡಿ ಸಂಗ್ರಾಮ ಉಚ್ಛೇದ  ಇವರೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರದಕ್ಷಿಣಿ ಅಂತಾ 1.05.000/- ಮತ್ತು 2 ತೋಲಾ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೋಟ್ಟಿರುತ್ತಾರೆ ಮದುವೆ ಆದ 1 ತಿಂಗಳು ನಂತರ ವ್ಯಾಸಾಂಗ ಕುರಿತು ಕಲಬುರಗಿಯ ಆಂಜನೆಯ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಾಗಿರುತ್ತೇವೆ. ಕೇವಲ 15 ದಿನಗಳವರೆಗೆ ನನ್ನೊಂದಿಗೆ ಸರಿಯಾಗಿದ್ದು ನಂತರ ತನ್ನ ಮನೆಯವರ ಮಾತು ಕೇಳಿ ನೀನು ನನಗೆ ಇಷ್ಟವಿಲ್ಲ ಅಂತಾ ಹೊಡೆಯುವುದು ಕಿರುಕುಳ ಕೊಡುವುದು ಮತ್ತು ನಿನ್ನ ಮತ್ತು ಮನೆಯ ಜವಾಬ್ದಾರಿ ಹೊರಲು ನನಗೆ ಸಾದ್ಯವಿಲ್ಲ ನಿನ್ನ ತಂದೆ ನಿವ್ರತ್ತನಾಗಿದ್ದಾನೆ ಅವರ ಹತ್ತಿರ ಸಾಕಷ್ಟು ಹಣವಿದೆ ಅವರಿಂದ 5 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಮಾತ್ರ ನಿನ್ನೊಂದಿಗೆ ಜೀವನ ಮಾಡುತ್ತೇನೆ ಇಲ್ಲವಾದರೆ ನಿನಗೆ ಮತ್ತು ನಿಮ್ಮ ತಂದೆಯವರಿಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಹೆದರಿಸುತ್ತಿದ್ದನು ವಿಷಯ ಬಗ್ಗೆ ನಮ್ಮ ತಂದೆ ಹಿರಿಯರ ಸಮ್ಮುಖದಲ್ಲಿ ತಿಳಿಸಿ ಹೇಳಿದಾಗ ಕೂಡ ತನ್ನ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾನೆ. ನನ್ನ ಪತಿಯ ತಾಯಿ ಕಲಾವತಿ ನನ್ನ ಚಿಕ್ಕ ಅತ್ತೆ ದುಶಿಲಾ ಮೈದುನರಾದ ರಮೇಶ,ಉಮೇಶ ಮತ್ತ್ತು ಸಂಬಂದಿಕನಾದ ಶೇಖಪ್ಪಾ ಕೋಡದೂರ ಇವರೆಲ್ಲರೂ ನಾನು ಊರೊಗೆ ಹೋದಾಗ ರಂಡಿ,ಬೋಸಡಿ ಅಂತಾ ಕೂದಲು ಹಿಡಿದು ಎಳದಾಡಿ ಹೊಡೆದು ಮನೆಯಿಂದ ಹೊರಗೆ ದಬ್ಬಿ ನಿನ್ನ ತವರು ಮನೆಯಿಂದ 5 ಲಕ್ಷ ರೂಗಳು ತೆಗೆದುಕೊಂಡರೆ ನಮ್ಮ ಮನೆಗೆ ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ಬೈದಿರುತ್ತಾರೆ, ದಿನಾಂಕ 14.11.2014 ರಂದು ಬೆಳಗ್ಗೆ 7 ಗಂಟೆಗೆ ನನ್ನ ಗಂಡ ಸಂಗ್ರಾಮ ಸೂಳಿ, ಚೀನಾಲಿ, ರಂಡಿ ಅಂತಾ ಬೈದು ಹೊಡೆದು ಓಡಿ ಹೋಗಿರುತ್ತಾನೆ ಆದ್ದರಿಂದ ದಯಾಳುಗಾಳದ ತಾವುಗಳು ನನಗೆ ಕ್ರೂರವಾಗಿ ಹಿಂಸೆ ಕೊಟ್ಟ ನನ್ನ ಗಂಡ ಅತ್ತೆ, ಅತ್ತೆಯ ತಂಗಿ, ಮೈದುನರು ಮತ್ತು ಸಂಬಂದಿಕರು ಹಾಗೂ ನನ್ನ ಗಂಡನ ಸ್ನೇಹಿತ ವಿರೇಶ ಪಾಟೀಲ ಇವರು ದೈಹಿಕ ಹಾಗು ಮಾನಸಿಕ ಹಿಂಸೆ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.