POLICE BHAVAN KALABURAGI

POLICE BHAVAN KALABURAGI

11 December 2014

Kalaburagi District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಪುಷ್ಪಾಬಾಯಿ ಗಂಡ ಗಣೇಶ ಝಾಢಮುಖೆ ಸಾಃ ಎಂ.ಜಿ ರೋಡ್, 01 ನೇ ಕ್ರಾಸ ಎಂ.ಬಿ ನಗರ ಕಲಬುರಗಿ ಇವರು ದಿನಾಂಕಃ 02/12/2014 ರಂದು ಮದ್ಯಾಹ್ನ 01:30 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿ ಊಟ ಮಾಡಿ ಮನೆಯ ಬಾಗಿಲಿಗೆ ಚಿಲಕ ಹಾಕಿ ಮೇನ್ ಗೇಟ್ ಸಮೀಪ ಕೂತುಕೊಂಡಿದ್ದು ನಂತರ 02:00 ಪಿ.ಎಂ. ಕ್ಕೆ ಮನೆಯ ಬಾಗಿಲು ತೆರೆದು ಬೆಡ್ ರೂಮ್ ಒಳಗಡೆ ಹೋಗಿ ನೋಡಲಾಗಿ ಅಲೆಮಾರಿ ತೆರೆದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳು ನಗದು ಹಣ  ಒಟ್ಟು 76,300/- ರೂ. ನೇದ್ದವುಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಹಿಂದುಗಡೆಯಿಂದ ಕಂಪೌಂಡ ಜಿಗಿದು ಮನೆಯೊಳಗೆ ಬಂದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ: 10-12-2014 ರಂದು ಬೆಳಿಗ್ಗೆ  ಲಾರಿ ನಂ ಎ.ಪಿ-23, ವಾಯಿ-2259 ನೇದ್ದರಲ್ಲಿ ಪಡಿತರ ದಾನ್ಯ ಅಕ್ರಮವಾಗಿ ಕಲಬುರಗಿ  ಕಡೆಗೆ ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು, ನಾನು  ಮತ್ತು  ಶ್ರೀ ನಜೀರ ಅಹ್ಮದ ಆಹಾರ ನಿರೀಕ್ಷಕರು ರವರೊಂದಿಗೆ ಜೇವರಗಿ ಪೊಲೀಸ್ ಠಾಣೆಗೆ ಬಂದು ಅಲ್ಲಿ ಸಿಬ್ಬಂದಿ ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರ ಸಿಪಿಐ ಸಾಹೇಬರು ಮತ್ತು ಸಿಬ್ಬಂದಿ ಜನರೊಂದಿಗೆ ಕಲಬುರಗಿ ರೋಡಿನ ಕಡೆಗೆ ಹೋಗಿ ಜೇವರಗಿ ಪಟ್ಟಣದ ರದ್ದವಾಡಿ ಕ್ರಾಸ ಹತ್ತಿರ ನಿಂತು ಲಾರಿಗಳನ್ನು ಚಕ್ ಮಾಡುತ್ತಿದ್ದಾಗ, ಅಂದಾಜು ಬೆಳಿಗ್ಗೆ 04.30 ಗಂಟೆಗೆ ಜೇವರಗಿ ಪಟ್ಟಣದ ಕಡೆಯಿಂದ ಲಾರಿ ನಂ ಎ.ಪಿ-23, ವಾಯಿ-2259 ಒಂದು ಲಾರಿ ಬಂದಿದ್ದು ಅದಕ್ಕೆ ಕೈ ಮಾಡಿ ನಿಲ್ಲಿಸಿ ಅದರ ಚಾಲಕನಿಗೆ ಲಾರಿಯಲ್ಲಿದ್ದ ಮಾಲಿನ ಬಗ್ಗೆ ದಾಖಲಾತಿಗಳು ಕೇಳಲು ಅವನ ಹತ್ತಿರ ಯಾವುದೇ ದಾಖಲಾತಿ ಇರುವದಿಲ್ಲಾ. ಅಂತ ಹೇಳಿದನು ನಾವು ಲಾರಿಯ ಮೇಲೆ ಹೋಗಿ ಚೆಕ್ ಮಾಡಿ ಪರಿಶೀಲಿಸಲಾಗಿ ಅದರಲ್ಲಿದ್ದ ಪ್ಲಾಸ್ಟಿಕ ಚೀಲಗಳಲ್ಲಿ ಮತ್ತು ಗೋಣಿ ಚೀಲಗಳಲ್ಲಿ ಪಡಿತರ ದಾನ್ಯಕ್ಕೆ ಸಂಬಂಧಿಸಿದ ಅಕ್ಕಿಗಳಾಗಿದ್ದು, ಪ್ರತಿಯೊಂದು ಚೀಲದಲ್ಲಿ ಸುಮಾರು 40 ರಿಂದ 50 ಕೆ.ಜಿ ಅಕ್ಕಿ ಇರುವದು ಕಂಡುಬರುತ್ತದೆ. ಲಾರಿಯಲ್ಲಿ ಸುಮಾರು ಒಟ್ಟು 295 ಬ್ಯಾಗ ಇರಬಹುದು  ಅವುಗಳ ಅಂದಾಜು ಮೊತ್ತ 1.37.500=0 ಆಗಬಹುದು ಲಾರಿ ಚಾಲಕನಿಗೆ ಈ ಬಗ್ಗೆ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾದೀಕ ತಂದೆ ಮಹ್ಮದ ಇಬ್ರಾಹಿಂಸಾಬ ಸಾ: ಜಹಿರಾಬಾದ ಅಂತ ಹೇಳಿ ಅವನು ಜೇವರಗಿ ಪಟ್ಟಣದ ಗಂಜ್‌ದಲ್ಲಿ ತುಂಬಿಕೊಂಡು ಗುಜರಾತ ರಾಜ್ಯಕ್ಕೆ ತಗೆದುಕೊಂಡು ಹೋಗುತ್ತಿರುವದಾಗಿ ಹೇಳಿದನು. ನಂತರ ಆರೋಪಿ ಮತ್ತು ಲಾರಿ ಸಮೇತ ಮುದ್ದೇ ಮಾಲಿನೊಂದಿಗೆ ಜೇವರಿಗಿ ಠಾಣೆಗೆ ಬಂದು ಶ್ರೀ.  ದೌಲತರಾಯ ತಂದೆ ಭಗವಂತರಾಯ ಪಾಟೀಲ ಆಹಾರ ನಿರೀಕ್ಷಕರು ತಹಸೀಲ ಕಾರ್ಯಾಲಯ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಟಕಾಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ,ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಬಸಣ್ಣ ಕಟ್ಟಿಮನಿ ಸಾ|| ಜೇವರ್ಗಿ (ಬಿ) ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 460/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೋಬೈಲನಲ್ಲಿ ಪ್ರಚೋದನಾಕಾರಿ ಶಬ್ದ ಬಳಿಸಿದವನ ಬಂಧನ :
ಜೇವರ್ಗಿ ಠಾಣೆ : ಮಹಿಬೂಬ ತಂದೆ ಬಾಬು ನಾಯಕೋಡಿ (ಟೇಲರ್)  ಈತನು ತನ್ನ ಮೋಬಾಯಿಲ್‌ ಸಂಖ್ಯೆ 9972689346 ನೇದ್ದರ ವಾಟ್ಸ-ಆಪ್‌ ಕಾಂಟ್ಯಾಕ್ಟ್ ಪ್ರೋಫೈಲ್‌ ಗೆ ಒಸಾಮಾ-ಬಿನ್‌-ಲಾಡೆನ್‌ ಭಾವ ಚಿತ್ರ ಹಾಕಿ ಡು.ಆರ್‌.ಡೈ”  ಎಂದು ಪ್ರಚೋದನಾಕಾರಿ ಬರಹ ಹಾಕಿದ್ದಾನೆ, ಲಾಡೆನ್‌ ಒಬ್ಬ ಉಗ್ರ ಸಂಘಟನೆಯಾದ ಅಲ್‌-ಖಾಯಿದೆ ಮುಖ್ಯಸ್ಥನಾಗಿದ್ದು ಈತ ಜಗತ್ತಿನ ಅಮೇರಿಕಾ ಭಾರತ ಪಾಕಿಸ್ತಾನ ಅಲ್ಲದೆ ಅಫಘಾನಿಸ್ತಾನದಲ್ಲಿ ಸಾವಿರಾರು ಅಮಾಯಕರ ಪ್ರಾಣ ತೆಗೆದು ರಕ್ತ ಪಾತ ಮಾಡಿದವನ ಭಾವಚಿತ್ರ ಬಳಸಿದ್ದಲ್ಲದೆ ಡೂ ಆರ್‌ ಡೈಎಂದು ನಮೂದಿಸಿದ್ದು ಇಂತಹ ಪ್ರಚೋದನಕಾರಿ ಬರಹ ಬರೆದು ಮುಸ್ಲೀಂ ಯುವ ಜನಾಂಗಕ್ಕೆ ಪ್ರಚೋದನೆ ಗೊಳಪಡಿಸುತ್ತಿದ್ದಾನೆ. ಅಂತಾ ಶ್ರೀ ವಿರೇಶ ತಂದೆ ವಿಶ್ವನಾಥ ಪಾಟೀಲ ಸಾ : ಜೇವರ್ಗಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ವಾಹೀದಾ ತಂದೆ ಮಹಿಬೂಬ ಶೇಖ್ ಇವರ ಅಕ್ಕಳಾದ ಜಾಹೇದಾ ಗಂಡ ಖದೀರ ಖಾನ ಇವರ ಮಗುವಿಗೆ ಆರಾಮವಿಲ್ಲದ ಕಾರಣ ನಾನು ನಿನ್ನೆ ದಿನಾಂಕಃ 09/12/2014 ರಂದು ಮದ್ಯಾಹ್ನ 03 ಗಂಟೆಗೆ ಭರತನಗರ ತಾಂಡಾದ ಮನೆಗೆ ಹೋಗಿರುತ್ತೇನೆ. ನಂತರ ಮಗುವಿಗೆ ಬಹಳಷ್ಟು ಆರಾಮವಿಲ್ಲದ ಕಾರಣ ನಾನು ರಾತ್ರಿ ಸುಮಾರು 11:30 ಗಂಟೆಗೆ ನಾನು ನನ್ನ ತಮ್ಮನಾದ ಅಬ್ದುಲ್ ರೌಫ್ ಈತನಿಗೆ ಕರೆದುಕೊಂಡು ಬರಲು ಮನೆಯಿಂದ ಹೊರಗೆ ಹೋಗುತ್ತಿರುವಾಗ ನಮ್ಮ ಅಕ್ಕನ ಮನೆಯ ಎದುರಗಡೆ ಇರುವ ಅರುಣಾ ಗಂಡ ಮೋಹನ ಹಾಗು ರಾಜಶ್ರೀ ಗಂಡ ಸಂತೋಷ, ಶ್ರೀಕಾಂತ ತಂದೆ ಕಿಶನ, ಸಂತೋಷ ತಂದೆ ಕಿಶನ, ಅಪರ್ಣಾ ತಂದೆ ಮನೋಹರ ಇವರೆಲ್ಲರೂ ಬಂದವರೇ ನನಗೆ ತಡೆದು ನಿಲ್ಲಿಸಿ ಕೈಯಿಂದ ಬೆನ್ನಿನ ಮೇಲೆ, ಕಾಲಿನಿಂದ ಹೊಟ್ಟೆಯ ಮೇಲೆ, ಬಡಿಗೆಯಿಂದ ಬಲಕೈ ಬೆರಳುಗಳ ಮೇಲೆ ಹೊಡೆದು ಗುಪ್ತಗಾಯ ಮತ್ತು ತರಚಿದ ಗಾಯಪಡಿಸಿರುತ್ತಾರೆ. ನನ್ನ ಅಕ್ಕಳಾದ ನಜಮಾ ಇವಳಿಗೂ ಕೈ ಬಟ್ಟು ಮುರಿದು ಕೈಯಿಂದ ಹೊಡೆದಿರುತ್ತಾರೆ ಹಾಗು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಗೌರಿಶಂಕರ ತಂದೆ ಗುರಣ್ಣಾ ಅಂಗಡಿ ಸಾಃ ಆಂದೊಲಾ ಹಾಃವಃ ಜೇವರಗಿ ಇವರು  ದಿನಾಂಕ :  10-12-2014  ರಂದು 20.30  ಗಂಟೆಗೆ ಸತ್ತಾರ ಪೆಟ್ರೊಲ ಪಂಪ ಸಮೀಪ ಜೇವರ್ಗೀ ಶಹಾಪುರ ಮುಖ್ಯ ರಸ್ತೆಯ ಮೇಲೆ ನನ್ನ ದೊಡ್ಡಪ್ಪ ಬಸವರಾಜ ತಂದೆ ಶಿವಲಿಂಗಪ್ಪ ಅಂಗಡಿ ಇವರು ನಂಬರ ಪ್ಲೇಟ ಇಲ್ಲದ ಮೊಟಾರ ಸೈಕಲ ನಂ ಚೆಸ್ಸಿ ನಂ MBLKC10EPCGK00723   ನೇದ್ದನ್ನು ಚಲಾಯಿಸಿಕೊಂಡು ಜೇವರಗಿ ಕಡೆಯಿಂದ ಆಂದೊಲಕ್ಕೆ ಹೊಗುತ್ತಿದ್ದಾಗ, ಆ ವೇಳೆಗೆ ಅವನ ಮುಂದುಗಡೆ ಟ್ರ್ಯಾಕ್ಟರ್  ನಂ ಕೆ.ಎ-28 ಟಿಬಿ- 7655, ಟ್ರ್ಯಾಲಿ ನಂ ಕೆ.ಎ. -28ಟಿಬಿ.- 4106 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನಲ್ಲಿ ಹಿಂದೆ ವಾಹನ ಬರುವುದನ್ನು ನೊಡದೆ ಒಮ್ಮಲೇ ಬ್ರೇಕ್ ಹಾಕಿದ್ದಕ್ಕೆ ನನ್ನ ದೊಡ್ಡಪ್ಪ ಚಾಲಯಿಸುತ್ತಿದ್ದ ಮೊಟಾರ ಸೈಕಲ್ ಟ್ರ್ಯಾಕ್ಟರ ಟ್ರ್ಯಾಲಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಕ್ಕೆ ಅವನಿಗೆ ಹಣೆಯ ಮೇಲ್ಬಾಗದಲ್ಲಿ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: