POLICE BHAVAN KALABURAGI

POLICE BHAVAN KALABURAGI

09 December 2014

Kalaburagi District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗರಾಜ ತಂದೆ ಮಲ್ಲೇಶಪ್ಪಾ ತೆಗನೂರ ಸಾಃ ಪೌರ ಕಾರ್ಮಿಕರ ಕಾಲೋನಿ ಕಲಬುರಗಿ ರವರು ಹಾಗು ಅಂಜಲಿ ತಂದೆ ಪ್ರಕಾಶ ಭರಣಿ ಇಬ್ಬರೂ ಈಗ ಸುಮಾರು 01 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು . ದಿನಾಂಕಃ 08/12/2014 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಸದರಿ ಅಂಜಲಿ ಇವಳು ಫಿರ್ಯಾದಿ ವಾಸವಾಗಿರುವ ಪ್ಲಾಟ ನಂ. 43 ಪೌರ ಕಾರ್ಮಿಕರ ಕಾಲೋನಿಯ ಮನೆಗೆ ಬಂದಿದ್ದು, ಸದರಿ ಅಂಜಲಿಯ ಅಣ್ಣಂದಿರಾದ 1) ಸಂದೀಪ ಭರಣಿ 2) ಪವನ ಭರಣಿ 3) ತಾಯಿಯಾದ ಕಮಲಾಬಾಯಿ ಅವರ ಸಂಗಡ 4) ಕಿಟ್ಯಾ 5) ಪಪ್ಪು ಪುಟಗೆ ಹಾಗು ಇತರೆ 10-15 ಜನರು ಕೂಡಿಕೊಂಡು ಫಿರ್ಯಾದಿಯ ಮನೆಯೊಳಗೆ ಬಂದು ಫೀರ್ಯಾದಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಫಿರ್ಯಾದಿಯ ಅಕ್ಕಳಾದ ಪಾರ್ವತಿ ಇವಳ ಮನೆಯೊಳಗೆ ಕೈಯಲ್ಲಿ ಬಡಿಗೆ ಹಾಗು ಚಾಕು ಹಿಡಿದುಕೊಂಡು ಹೋಗಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆ, ಚಾಕು, ತಲವಾರು ಹಾಗು ಕೈಗಳಿಗೆ ಹೊಡೆ ಬಡೆ ಮಾಡಿ ಎಡಗಣ್ಣಿನ ಮೇಲೆ, ಬಲ ಕಪಾಳದ ಮೇಲೆ, ಬಲಗಾಲಿನ ಮೊಳಕಾಲಿನ ಕೆಳಗೆ ಹೊಡೆದು ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-12-2014 ರಂದು ಅಂದಾಜು ರಾತ್ರಿ ಶ್ರೀ ಶಂಕರ ತಂದೆ ಗುರುಪಾದಪ್ಪಾ ಪಸಾರೆ ಸಾ ಅಫಜಲಪೂರ ರವರಿಗೆ  ಯಾರೊ ಪೋನ ಮಾಡಿ ನಿಮ್ಮ ತಮ್ಮ ಭೀಮರಾಯ ಈತನು ಸೂರ್ಯಕಾಂತ ತಂದೆ ಗಂಗಣ್ಣ ಗುಣಾರಿ ಈತನು ನಡೆಸುತ್ತಿದ್ದ ಮೋ/ಸೈ ಮೇಲೆ ಅವನೊಂದಿಗೆ ಅಫಜಲಪೂರದ ಬಸವೇಶ್ವರ ಸರ್ಕಲ ಹತ್ತಿರ ಬರುತ್ತಿದ್ದಾಗ ಎಕ್ಸಿಡೆಂಟ ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಮ್ಮ ಭೀಮರಾಯ ಹಾಗೂ ಸೂರ್ಯಕಾಂತ ಗುಣಾರಿ ಇಬ್ಬರು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲದ ಶ್ರೀ ಭಾಗ್ಯವಂತಿ ಕಾಮಾನದಿಂದ ಘತ್ತರಗಿ ರೋಡಿನ ಕಡೆಗೆ ಅಂದಾಜು 50 ಪೀಟ ಅಂತರದಲ್ಲಿ ರೋಡಿನ ಮೇಲೆ ಇಬ್ಬರ ಶವಗಳು ಬಿದ್ದಿದ್ದನ್ನು ನೋಡಿ ಗುರುತಿಸಿದೆನು, ನನ್ನ ತಮ್ಮನ ತಲೆಗೆ ಬಾರಿ ಪೆಟ್ಟಾಗಿ ಪೂರ್ತಿ ಜಜ್ಜಿದಂತೆ ಆಗಿ ಬಾರಿ ರಕ್ತಗಾಯವಾಗಿತ್ತು. ಹಾಗೂ ಸೂರ್ಯಕಾಂತ ಈತನ ಎದೆಗೆ ಹಾಗೂ ಹೊಟ್ಟೆಗೆ ಬಾರಿ ಒಳಪೆಟ್ಟುಗಳು ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರು, ಅವರ ಪಕ್ಕದಲ್ಲಿಯೆ ಇಬ್ಬರು ಕುಳಿತುಕೊಂಡು ಬರುತ್ತಿದ್ದ ಮೋ/ಸೈ ಬಿದ್ದಿದ್ದು ಅದರ ಕೆಎ-28 ಹೆಚ್- 7305 ಇರುತ್ತದೆ. ನನ್ನ ತಮ್ಮ ಮತ್ತು ಸೂರ್ಯಕಾಂತ ಗುಣಾರಿ ಇಬ್ಬರು ಘತ್ತರಗಿ ರೋಡಿನ ಕಡೆಯಿಂದ ಬಸವೇಶ್ವರ ಸರ್ಕಲ ಕಡೆಗೆ ಕಮಾನ ಹತ್ತಿರ ಬರುತ್ತಿದ್ದಾಗ ಎದುರುಗಡೆಯಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮ ಹಾಗೂ ಸೂರ್ಯಕಾಂತ ಇವರು ಬರುತ್ತಿದ್ದ ಮೋ/ಸೈ ಕ್ಕೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಧನಶೆಟ್ಟಿ ತಂದೆ ಶರಣಪ್ಪಾ ಕೋರೆ ಸಾಃ ಮನೆ ನಂ. ಇ.ಡಬ್ಲೂ.ಎಸ್ 29, ಗುಬ್ಬಿ ಕಾಲೋನಿ ಸೇಡಂ ರೋಡ್ ಕಲಬುರಗಿ ರವರು ದಿನಾಂಕ : 08/12/2014 ರಂದು ಖಾಸಗಿ ಕೆಲಸದ ನಿಮಿತ್ಯ ನಾನು ಮತ್ತು ನನ್ನ ಮಗನಾದ ಮಲ್ಲಿಕಾರ್ಜುನ ಇಬ್ಬರು ಓಂ ನಗರ ಗೇಟಿನ ಎದುರುಗಡೆ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಹಿಂದಿನಿಂದ ಆಟೋ ನಂ. ಕೆ.ಎ 32 ಬಿ 0285 ನೇದ್ದರ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ನನ್ನ ಬಲಭಾಗದ ಟೊಂಕದ ಕೆಳಗೆ ಜೋರಾಗಿ ಡಿಕ್ಕಿ ಪಡಿಸಿದರ ಪರಿಣಾಮ ನಾನು ರೋಡಿನ ಮೇಲೆ ಬಿದ್ದೆನು. ನನ್ನ ಬಲಭಾಗದ ಟೊಂಕದ ಹತ್ತಿರ ಭಾರಿ ಒಳಪೆಟ್ಟಾಗಿರುತ್ತದೆ. ನಂತರ ಆಟೋ ಚಾಲಕ ತನ್ನ ಆಟೋವನ್ನು ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಶರಣಪ್ಪ ಹತ್ತಿ ಸಾ: ಮನೆ ನಂ. 2/2-87 ಹನುಮಾನ ಗುಡಿಯ ಹತ್ತಿರ ಹತ್ಯಾನಗಲ್ಲಿ ಆಳಂದ ಹಾ.ವ: ಹಾಲಪ್ಪ ನಿವಾಸ ಕೊಬಾ ಪ್ಲಾಟ ಇವರ ಮನೆಯಲ್ಲಿ ಬಾಡಿಗೆ ಕಲಬುರಗಿ ರವರು ದಿನಾಂಕ 22/11/2014 ರಂದು ನನ್ನ ಕೆಲಸದ ನಿಮಿತ್ಯ ಮೋಟಾರ ಸೈಕಲ್ ಮೇಲೆ ಬಂದು ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ಆಳಂದ ಗ್ರಾಮಕ್ಕೆ ಬಸ್ಸಿನಿಂದ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ 9-30 ಪಿ.ಎಂ.ಕ್ಕೆ ಬಂದು ನೋಡಲಾಗಿ ಸ್ಥಳದಲ್ಲಿಯೆ ಇಟ್ಟ ನನ್ನ ಮೋಟಾರ ಸೈಕಲ್ ಇರಲಿಲ್ಲಾ. ಈ ಬಗ್ಗೆ ನಾನು ಇತರೆ ಸ್ಥಳ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲಾ  ಪೊಲೀಸ್ ಠಾಣೆಗೆ ಮಾಹಿತಿ ಸಹ ನೀಡಿರುತ್ತೇನೆ. ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ವಿ-6971 ನೇದ್ದರ ಇಂಜನ್ ನಂ. HA10EA9HF99767 ಚೆಸ್ಸಿ ನಂ. MBLHA10EJ9HF51395 ರ ಮಾಡಲ್ ನಂ. 2009 ಬ್ಲ್ಯಾಕ್ ಬಣ್ಣದ್ದು  ಅ.ಕಿ. 25,000/- ರೂ ಬೇಲೆ ಬಾಳುವುದು ಯಾರೋ ಕಳ್ಳರು   ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರಿಮತಿ ಭೃಮರಾಂಭೆ ಗಂಡ ಸಂಗ್ರಾಮ ಉಚ್ಛೇದ ಸಾ|| ಆಂಜನೆಯ ನಗರ ಹಳೇ ಆರ್.ಟಿ. ಕ್ರಾಸ್ ಕಲಬುರಗಿ ಇವರನ್ನು ಹಿರಿಯರೆಲ್ಲರೂ ಕೂಡಿ ಸಂಗ್ರಾಮ ಉಚ್ಛೇದ  ಇವರೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರದಕ್ಷಿಣಿ ಅಂತಾ 1.05.000/- ಮತ್ತು 2 ತೋಲಾ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೋಟ್ಟಿರುತ್ತಾರೆ ಮದುವೆ ಆದ 1 ತಿಂಗಳು ನಂತರ ವ್ಯಾಸಾಂಗ ಕುರಿತು ಕಲಬುರಗಿಯ ಆಂಜನೆಯ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಾಗಿರುತ್ತೇವೆ. ಕೇವಲ 15 ದಿನಗಳವರೆಗೆ ನನ್ನೊಂದಿಗೆ ಸರಿಯಾಗಿದ್ದು ನಂತರ ತನ್ನ ಮನೆಯವರ ಮಾತು ಕೇಳಿ ನೀನು ನನಗೆ ಇಷ್ಟವಿಲ್ಲ ಅಂತಾ ಹೊಡೆಯುವುದು ಕಿರುಕುಳ ಕೊಡುವುದು ಮತ್ತು ನಿನ್ನ ಮತ್ತು ಮನೆಯ ಜವಾಬ್ದಾರಿ ಹೊರಲು ನನಗೆ ಸಾದ್ಯವಿಲ್ಲ ನಿನ್ನ ತಂದೆ ನಿವ್ರತ್ತನಾಗಿದ್ದಾನೆ ಅವರ ಹತ್ತಿರ ಸಾಕಷ್ಟು ಹಣವಿದೆ ಅವರಿಂದ 5 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಮಾತ್ರ ನಿನ್ನೊಂದಿಗೆ ಜೀವನ ಮಾಡುತ್ತೇನೆ ಇಲ್ಲವಾದರೆ ನಿನಗೆ ಮತ್ತು ನಿಮ್ಮ ತಂದೆಯವರಿಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಹೆದರಿಸುತ್ತಿದ್ದನು ವಿಷಯ ಬಗ್ಗೆ ನಮ್ಮ ತಂದೆ ಹಿರಿಯರ ಸಮ್ಮುಖದಲ್ಲಿ ತಿಳಿಸಿ ಹೇಳಿದಾಗ ಕೂಡ ತನ್ನ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾನೆ. ನನ್ನ ಪತಿಯ ತಾಯಿ ಕಲಾವತಿ ನನ್ನ ಚಿಕ್ಕ ಅತ್ತೆ ದುಶಿಲಾ ಮೈದುನರಾದ ರಮೇಶ,ಉಮೇಶ ಮತ್ತ್ತು ಸಂಬಂದಿಕನಾದ ಶೇಖಪ್ಪಾ ಕೋಡದೂರ ಇವರೆಲ್ಲರೂ ನಾನು ಊರೊಗೆ ಹೋದಾಗ ರಂಡಿ,ಬೋಸಡಿ ಅಂತಾ ಕೂದಲು ಹಿಡಿದು ಎಳದಾಡಿ ಹೊಡೆದು ಮನೆಯಿಂದ ಹೊರಗೆ ದಬ್ಬಿ ನಿನ್ನ ತವರು ಮನೆಯಿಂದ 5 ಲಕ್ಷ ರೂಗಳು ತೆಗೆದುಕೊಂಡರೆ ನಮ್ಮ ಮನೆಗೆ ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ಬೈದಿರುತ್ತಾರೆ, ದಿನಾಂಕ 14.11.2014 ರಂದು ಬೆಳಗ್ಗೆ 7 ಗಂಟೆಗೆ ನನ್ನ ಗಂಡ ಸಂಗ್ರಾಮ ಸೂಳಿ, ಚೀನಾಲಿ, ರಂಡಿ ಅಂತಾ ಬೈದು ಹೊಡೆದು ಓಡಿ ಹೋಗಿರುತ್ತಾನೆ ಆದ್ದರಿಂದ ದಯಾಳುಗಾಳದ ತಾವುಗಳು ನನಗೆ ಕ್ರೂರವಾಗಿ ಹಿಂಸೆ ಕೊಟ್ಟ ನನ್ನ ಗಂಡ ಅತ್ತೆ, ಅತ್ತೆಯ ತಂಗಿ, ಮೈದುನರು ಮತ್ತು ಸಂಬಂದಿಕರು ಹಾಗೂ ನನ್ನ ಗಂಡನ ಸ್ನೇಹಿತ ವಿರೇಶ ಪಾಟೀಲ ಇವರು ದೈಹಿಕ ಹಾಗು ಮಾನಸಿಕ ಹಿಂಸೆ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: