POLICE BHAVAN KALABURAGI

POLICE BHAVAN KALABURAGI

14 April 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ ರೇವಣಸಿದ್ದಪ್ಪ ಕೊರಳ್ಳಿ ಮತ್ತು ನನ್ನ ತಮ್ಮ ಶಿವಪ್ಪ , ಶಿವಪ್ಪನ ಹೆಂಡತಿ ಮಲ್ಲವ್ವ ಮೂರು ಜನರು ನಮ್ಮ ಮನೆಯ ಮುಂದೆ ಇದ್ದಾಗ, ನನ್ನ ತಮ್ಮ ಶಿವಪ್ಪನ ಹೆಂಡತಿಯ ಅಣ್ಣನಾದ ಅಪ್ಪಾಶಾ ಈತನ ಮಕ್ಕಳಾದ 1) ಬಸವರಾಜ ತಂದೆ ಅಪ್ಪಾಸಾಬ ಪಾಟೀಲ 2) ಬಾಬು ತಂದೆ ಅಪ್ಪಾಸಾಬ ಪಾಟೀಲ 3) ಶರಣು ತಂದೆ ಅಪ್ಪಾಸಾಬ ಪಾಟೀಲ 4) ರುದ್ರಗೌಡ ತಂದೆ ಅಪ್ಪಾಸಾಬ ಪಾಟೀಲ 5) ಸಿದ್ದು ತಂದೆ ಅಪ್ಪಾಸಾಬ ಪಾಟೀಲ ಸಾ|| ಎಲ್ಲರೂ ಆಲಹಳ್ಳಿ (ಅಳ್ಳೊಳ್ಳಿ) ತಾ|| ಸಿಂದಗಿ ಎಲ್ಲರೂ ನನ್ನ ತಮ್ಮ ಮೃತ ಮಲ್ಲಿಕಾರ್ಜುನ ಈತನ ಮನೆಗೆ ಬಂದು, ಸದರಿ ಮನೆಯಲ್ಲಿ ಬಾಡಿಗೆ ಇದ್ದ ಸುರೇಶ ತಂದೆ ನಿಂಗಪ್ಪ ಬಿರಾದಾರ (ಗಣಿಹಾರ) ಇವರ ಹತ್ತಿರ ಬಂದು, ಈ ಮನಿ ನಮ್ಮ ಹೆಸರಿಗಿ ಆದ, ನೀವು ಮನಿ ಕಾಲಿ ಮಾಡ್ರಿ ಅಂತಾ ಹೇಳಿದರೂ, ಅದಕ್ಕೆ ಸುರೇಶ ಬಿರಾದಾರ ಇವರು ನಮ್ಮ ಹತ್ತಿರ ಬಂದು, ಏನ್ರಿ ಮನಿ ಬಾಡಗಿ ಕೊಟ್ಟಿದ್ದು ನೀವು, ಈಗ ಇವರು ಬಂದು ಮನಿ ಕಾಲಿ ಮಾಡ್ರಿ ಅಂತಾ ಹೇಳ್ತಾಇದ್ದಾರೆ ಎಂದು ನಮ್ಮ ಹತ್ತಿರ ಬಂದು ಹೇಳಿದನು. ಅದ್ಕಕೆ ನಾನು ಸದರಿಯವರಿಗೆ ಕೇಳಲು ಹೊದಾಗ, ಬಸವರಾಜ ಈತನು ಮಗನೆ ಇದರಲ್ಲಿ ತಲೆ ಹಾಕಲು ನೀನು ಯಾರು ಎಂದು ಬೈದು ಕೈಯಿಂದ ನನ್ನ ಮೂಗಿನ ಮೇಲೆ ಚೂರಿದನು. ನಂತರ ಬಾಬು ಪಾಟೀಲ ಈತನು ಈ ಮಗನಿಗೆ ಕಲಾಸ ಮಾಡು ಎಂದು ಅಲ್ಲಿಯೆ ಬಿದ್ದ ಬಡಿಗೆಯನ್ನು ತಗೆದುಕೊಂಡು ಬಂದು  ನನ್ನ ಬೆನ್ನಿನ ಮೇಲೆ ಹೊಡೆದನು. ಆಗ ಅಲ್ಲೆ ಇದ್ದ ನನ್ನ ತಮ್ಮ ಶಿವಪ್ಪ ಮತ್ತು ಆತನ ಹೆಂಡತಿ ಮಲ್ಲವ್ವ ಇವರು ಜಗಳ ಬಿಡಿಸಲು ಬಂದಾಗ, ಶಿವಪ್ಪ ಈತನಿಗೆ ಶರಣು ಪಾಟೀಲ ಮತ್ತು ರುದ್ರಗೌಡ ಪಾಟೀಲ ಇಬ್ಬರು ಕೈಯಿಂದ ಬಲಗಣ್ಣಿನ ಮೇಲೆ ಹಾಗೂ ಮೈಕೈಗೆ ಹೊಡೆದರು, ಮಲ್ಲವ್ವ ಇವಳಿಗೆ ಸಿದ್ದು ಈತನು ಕೈಯಿಂದ ದಬ್ಬಿದನು, ಇದರಿಂದ ಅವಳು ಕೆಳಗೆ ಬಿದ್ದಿದ್ದು, ಅವಳಿಗೂ ಸಹ ಮೈ ಕೈಗೆ ಗುಪ್ತಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹನೆ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2014 ರಂದು ರಾತ್ರಿ 9;00 ಗಂಟೆಗೆ ಮತೀನ ಪಟೇಲ ರವರ ಹೊಲದಲ್ಲಿ ಅಕ್ರಮವಾಗಿ ಸಂಗೃಹಿಸಿಟ್ಟ ಮರಳನ್ನು ಜೆ.ಸಿ.ಬಿ, ಮತ್ತು ಹಿಟಾಚಿಯಿಂದ ಟ್ರ್ಯಾಕ್ಟರನಲ್ಲಿ ತುಂಬುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿ ಹಾಗು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರಿಗೆ ಹಾಗು ಮಾನ್ಯ ತಹಸೀಲ್ದಾರ ಸಾಹೇಬರಿಗೆ ವಿಷಯ ತಿಳಿಸಿ ಬರಮಾಡಿಕೊಂಡೆನು. ನಂತರ ಪಂಚರು ಹಾಗು ಮಾನ್ಯ ತಹಸೀಲ್ದಾರರು ಹಾಗು ಮಾನ್ಯ ಸಿಪಿಐ ಸಾಹೇಬರು ಮತ್ತು ನಾವುಗಳು ಮತೀನ ಪಟೇಲ ರವರ ಹೊಲದಿಂದ ಸ್ವಲ್ಪ ದೂರು ನಮ್ಮ ವಾಹನಗಳು ನಿಲ್ಲಿಸಿ ಸ್ವಲ್ಪ ನಡೆದುಕೊಂಡು ಹೋಗಿ ನೋಡಲಾಗಿ ಮತೀನ ಪಟೇಲ ರವರ ಹೊಲದಲ್ಲಿ ಒಬ್ಬ ವ್ಯಕ್ತಿ ಹಿಟಾಚಿಯಿಂದ ಅಲ್ಲಿ ಸಂಗೃಹಿಸಿದ ಮರಳನ್ನು ಟ್ರ್ಯಾಕ್ಟರ ಟ್ರಾಯಲಿಯಲ್ಲಿ ಹಾಕುತ್ತಿದ್ದನು. ಆಗ ನಾವು ಸದರಿ ಹಿಟಾಚಿ ಚಾಲಕನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಶಾಹಿದ ತಂದೆ ದಿಲಾವರ ಅನ್ಸಾರಿ ಸಾ|| ಶಾದಿ ಮೊಹಲ್ಲಾ ತಾ|| ಬರಿ, ಜಿಲ್ಲಾ ಗಯಾ (ಬಿಹಾರ) ಹಾ|||| ಅಫಜಲಪೂರ ಅಂತಾ ಹೇಳಿದನು, ನಂತರ ಸದರಿಯವನಿಗೆ ಕುಲಂಕುಷವಾಗಿ ವಿಚಾರಿಸಲಾಗಿ ಹೇಳಿದ್ದೇನೆಂದರೆ, ನಮ್ಮ ಮಾಲಿಕರಾದ ಮತೀನ ಪಟೇಲ ಹಾಗು ಮೋಸಿನ ಪಟೇಲ ರವರು ಹೇಳಿದಂತೆ ಸದರಿ ಹಿಟಾಚಿ ಮತ್ತು ಜೇ.ಸಿ.ಬಿ ಮೂಲಕ ಕಳ್ಳತನದಿಂದ ಬೀಮಾ ನದಿಯಲ್ಲಿಯ ಮರಳನ್ನು ಟ್ರ್ಯಾಕ್ಟರನಲ್ಲಿ ಹಾಕಿಕೊಂಡು ನಮ್ಮ ಮಾಲಕರಾದ ಮತೀನ ಪಟೇಲ ರವರ ಹೊಲದಲ್ಲಿ ಅಕೃಮವಾಗಿ ಸಂಗೃಹಿಸಲಾಗಿದ್ದು ಇರುತ್ತದೆ. ಸದ್ಯ ಇಲ್ಲಿ ನಾನೊಬ್ಬನೆ ಇರುತ್ತೇನೆ ಅಂತಾ ಹೇಳಿದ್ದು ಪಂಚರ ಸಮಕ್ಷಮದಲ್ಲಿ  ಅಂದಾಜು 100 ಟ್ರಿಪ್ ದಿಂದ 150 ಟ್ರ್ಯಾಕ್ಟರ್ ಟ್ರಿಪ್ ಮರಳನ್ನು ಅಕ್ರಮವಾಗಿ ಸಂಗೃಹಿಸಿದ್ದು ಇತ್ತು, ಜೇ.ಸಿ.ಬಿ ನಂಬರ ನೋಡಲಾಗಿ ಕೆ.-28 ಎಮ್-7134 ಅಂತಾ ಇತ್ತು ನಂತರ ಹಿಟಾಚಿ ಚಸ್ಸಿ ನಂ ನೋಡಲಾಗಿ ಎಡಿ-07-09-5982 ಅಂತಾ ಇತ್ತು, ಅಲ್ಲೆ ಇದ್ದ ಟ್ರ್ಯಾಕ್ಟರ ನೊಡಲಾಗಿ ಅದರ ನಂಬರ ಇರಲಿಲ್ಲ, ಅದರ ಇಂಜಿನ್ ನಂಬರ ಎಸ್324  ಸಿ24258 ಅಂತಾ ಇದ್ದು ಸದರಿಯವುಗ ಳನ್ನು ಜಪ್ತಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶೇಖ ಮಕಬೂಬಲ ಅಹಿಮದ ರವರು ದಿನಾಂಕ 13-04-2014 ರಂದು ಸಾಯಂಕಾಲ 5-00 ಗಂಟೆಗೆ ಆಳಂದ ಚೆಕ್ಕ ಪೋಸ್ಟ ದಿಂದ  ಶಹಾಬಜಾರ ನಾಕಾ ರೋಡ  ಮೇಲೆ ಫಿರ್ಯಾದಿ  ನಡೆದುಕೊಂಡು  ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಪಿ.ಎಫ.ಐ ಆಫೀಸ ಕ್ರಾಸ್ ಎದುರಿನ ರೋಡಿನ ಮೇಲೆ  ಮೋಟಾರ ಸೈಕಲ ನಂಬರ ಕೆಎ-32 ಜೆ-4377 ರ ಸವಾರನು ಶಹಾ ಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ  ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಸಿದ್ದಣ್ಣಾ ತಂದೆ ಬೀಮಶ್ಯಾ ಸಾ|| ಗಂಜ್ ಕಾಲೊನಿ ಗುಲಬರ್ಗಾ.ಇವರು ಜೋಶಿ ಕಾಂಪ್ಲೇಕ್ಸ್ ಕಲಾಯಿ ಗಲ್ಲಿಯಲ್ಲಿ ಬರುವ ಸುಮಿತ್ ಪ್ಲಾಸ್ಟೀಕ್ ಅಂಗಡಿಗೆ ಪ್ಲಾಸ್ಟೀಕ್ ವಸ್ತುಗಳು ಖರೀದಿ ಮಾಡಲು ಹೋದಾಗ ಆರೋಪಿತಳಾದ ಪದ್ಮಾವತಿ ಗಂಡ ಶಾಂತಕುಮಾರ ಇವಳು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ  ನಮ್ಮ ಅಂಗಡಿಗೆ ಯಾಕೆ ಬಂದ್ದಿದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 April 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 12-04-2014 ರಂದು 0915 ಪಿ.ಎಮ್ ಕ್ಕ ನೇಹರು ಗಂಜ ನಗರೇಶ್ವರ ಶಾಲೆಯ ಎದರುಗಡೆ ಹುಮನಾಬಾದ ರೋಡಿನಲ್ಲಿ ಲಾರಿ ನಂ. ಎಮ್.ಎಚ್. 18 ಎಎ 7867 ನೇದ್ದರ ಚಾಲಕನು ತನ್ನ ಲಾರಿಯನ್ನು ಎಮ್.ಎ.ಟಿ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸೈಕಲ ಮೇಲೆ ರೋಡ ದಾಟುತ್ತಿದ್ದ ಮೃತ ಬಾಲಾಜಿ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಆತನ ಮೇಲೆ ಲಾರಿ ಹಾಯಿಸಿ ಲಾರಿ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಲ್ಲಿ ಭಾರಿ ರಕ್ತಗಾಯ ಹೊಂದಿದ ಬಾಲಾಜಿ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಗಂಗೂಬಾಯಿ ಗಂಡ ಬಾಲಾಜಿ ಪಾಟೀಲ,  ಸಾಃ ಶಿವಾಜಿ ನಗರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 12-04-2014 ರಂದು ಅಫಜಲಪೂರ ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರು ಕೂಡಿಕೊಂಡು ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 3 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜುಜಾಡುತ್ತಿದ್ದ 3 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಮಳೆಪ್ಪ ತಂದೆ ಶರಣಪ್ಪ ದೇಸಾಯಿ 2. ಜಗನ್ನಾಥ ತಂದೆ ಪೀರಪ್ಪ ಕೋರಿ 3. ಸಂತೋಷ ತಂದೆ ಚಂದ್ರಶಾ ನಾವಿ ಸಾ|| ಎಲ್ಲರು ಅಫಜಲಪೂರ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  1420- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಪೂರ ಟಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ. ದಶರಥ  ತಂದೆ  ಯಂಕಪ್ಪಾ  ನಾಟಿಕಾರ ಸಾಃ ಉಡುಗಿ ತಾಃ ಸೇಡಂ ಇವರು ಎರಡು ದಿವಸಗಳ ಹಿಂದೆ ನಮ್ಮ ತಮ್ಮನಾದ ಸಿದ್ದು ಹಾಗೂ ನಮ್ಮ ಗ್ರಾಮದ ಬಸಣ್ಣಾ ದಂಡಗುಂಡ ಇವರಿಬ್ಬರೂ ಶಾಲೆಗೆ ಹೋಗುವಾಗ ಒಬ್ಬರಿಗೊಬ್ಬರು ಬಾಯಿ ಬಡಿದು ಜಗಳ ಮಾಡಿಕೊಂಡಿದ್ದು ಇತ್ತು. ಅದೇ ವೈಮನಸ್ಸಿನಿಂದ ದಿನಾಂಕ:12-04-2014 ರಂದು ಬೆಳಿಗ್ಗೆ 10 00 ಗಂಟೆಯ ಸುಮಾರಿಗೆ  ನಾನು ಮತ್ತು ಪಂಚಾಯತ ಆಪರೇಟರನಾದ ಶಹಾಬೊದ್ದಿನ್ ಇಬ್ಬರೂ ಮಾತಾಡುತ್ತಾ ಪಂಚಾಯತ ಆಫೀಸ್ ಮುಂದುಗಡೆ ಕುಳಿತ್ತಿದ್ದಾಗ, ನಮ್ಮ ಗ್ರಾಮದ ಬಸವರಾಜ ತಂದೆ ಮರಿಯಣ್ಣ ದಂಡಗುಂಡ ಮತ್ತು ತಾಜೋದ್ದಿನ್ ತಂದೆ ಹಮೀದ್ ಖುರೇಶಿ ಇವರಿಬ್ಬರೂ ಕೂಡಿಕೊಂಡು ಬಂದವರೇ ಅವರಲ್ಲಿಯ ಬಸವರಾಜ ದಂಡಗುಂಡ ಇತನು ನನಗೆ ಅವಾಚ್ಯ ಶಬ್ದ್ಗಳಿಂದ ಬೈದು ಕೈಯಿಂದ ಕಪಾಳ ಮೇಲೆ ಹೊಡೆದು ಜಾತಿನಿಂದನೆ ಮಾಡಿ ಖಲಾಸ ಮಾಡಬೇಕು ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 April 2014

Gulbarga District Reported Crimes

ಕುಖ್ಯಾತ 2 ಜನ ಸರಗಳ್ಳರ ಬಂಧನ, ನಾಡ ಪಿಸ್ತೋಲ & 5 ಲಕ್ಷ ಮೌಲ್ಯದ ಬಂಗಾರದ ಸ್ವತ್ತು ಜಪ್ತಿ :
ಫರತಾಬಾದ ಠಾಣೆ : ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯ ಡಾಲರ್ಸ ಕಾಲೋನಿಯ ಹತ್ತಿರ ನಡೆದ ಶೂಟೌಟ ಪ್ರಕರಣ ಮತ್ತು ಗುಲಬರ್ಗಾ ನಗರದಲ್ಲಿರುವ ಎಂ.ಬಿ ನಗರ ಪೊಲೀಸ ಠಾಣೆ ಮತ್ತು ವಿಶ್ವವಿದ್ಯಾಲಯದ ಪೊಲೀಸ ಠಾಣೆಯಲ್ಲಿ ವರದಿಯಾಗಿರುವ ಸರಗಳ್ಳತನ ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು. ಐ.ಪಿ.ಎಸ್.  ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಉಮೇಶ ಪಿ.ಎಸ್.ಐ ಫರತಾಬಾದ ಠಾಣೆ, ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಮನೋಹರ ಸಿ.ಹೆಚ್.ಸಿ, ಅರ್ಜುನ ಎ.ಹೆಚ್.ಸಿ ಮಹ್ಮದ ರಪಿಯೋದ್ದೀನ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾರ್ಜುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ವೀರಶೆಟ್ಟಿ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಹುಸೇನಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಮಗ್ದುಮ ಅಲಿ ಸಿಪಿಸಿ, ಸುಧಾ ಮಪಿಸಿ, ರವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕಃ 11-04-2014 ರಂದು ಈ ಕೆಳಕಂಡ ಕುಖ್ಯಾತ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತರು ವಿಚಾರಣೆ ಕಾಲಕ್ಕೆ ಗುಲಬರ್ಗಾ ನಗರದ ಗಣೇಶ ನಗರ, ರಾಜಾಪುರ ರಿಂಗ್ ರೋಡ್, ಭರತ ನಗರ ತಾಂಡಾ, ಜಯ ನಗರ, ಡಾಲರ್ಸ ಕಾಲೋನಿ ಹಾಗೂ ಜೇವರಗಿಯಲ್ಲಿ ಹೆಣ್ಣು ಮಕ್ಕಳ ಕೊರಳಲ್ಲಿಯ ಬಂಗಾರದ ಮಂಗಳ ಸೂತ್ರ ಕಿತ್ತುಕೊಂಡ ಬಗ್ಗೆ ಪತ್ತೆಯಾಗಿದ್ದು, ಸದರಿ ಆರೋಪಿತರಿಂದ 15 ತೊಲೆ ಬಂಗಾರದ ಚಿನ್ನಾಭರಣಗಳು, ಮೊಬಾಯಿಲ್ ಪೊನ್, ಒಂದು ನಾಡ ಪಿಸ್ತೋಲ, ಹಾಗು ಸರಗಳ್ಳತನ ಮಾಡಲು ಬಳಸಿದ ಮೋಟಾರ ಸೈಕಲ್ ಹೀಗೆ ಒಟ್ಟು ಸುಮಾರು 5,00,000/- ರೂ. ಬೆಲೆ ಬಾಳುವ ಸ್ವತ್ತನ್ನು ಜಪ್ತಿ ಮಾಡಿರುತ್ತಾರೆ.
 ದಸ್ತಗಿರಿ ಮಾಡಿದ ಆರೋಪಿತರ ಹೆಸರು 1.   ಅರುಣ ತಂದೆ  ಗುರುನಾಥ ಡಂಘೆ  ಸಾಃ ಅಮೀನಾ ಮೋಹಲ್ಲಾ ಚಿತ್ತಾಪೂರ ತಾಃ ಚಿತ್ತಾಪೂರ ಹಾ.ವಃ ಸೀತನೂರ ತಾ.ಜಿಃ ಗುಲಬರ್ಗಾ 2. ಬಿಲಾಲ ಮಹ್ಮದ ಬಿಲಾಲ ತಂದೆ ಅಬ್ದುಲ ಹೈ  ಶೇಖ ಸಾ : ಕೇಶವ ನಗರ, ಆನಂದ ನಗರ ಹತ್ತಿರ ಪುಣೆ, ಹಾಲಿ ವಸ್ತಿ ಗುಲಷನ್ ಅರಾಫತ ಕಾಲೋನಿ ಹಾಗರಗಾ ರೋಡ್ ಗುಲಬರ್ಗಾ ರವರನ್ನು ದಸ್ತಗೀರ ಮಾಡಿದ್ದು ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಪತ್ತೆ ತಂಡಕ್ಕೆ ರೂ 10,000/- ಬಹುಮಾನ ನೀಡಿದ್ದಾರೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಹಣಮಂತ ತಂದೆ ಜೇಟ್ಟಪ್ಪಾ ಕುಂಟನೂರ  ಸಾ:ಸೀತನೂರ ತಾ: ಜಿ: ಗುಲಬರ್ಗಾ ರವರ ಅಣ್ಣತಮ್ಮಕೀಯ ದೇವಪ್ಪಾ ಕುಂಟನೂರ ಇವರು ಸಿರನೂರ ಗ್ರಾಮದಲ್ಲಿ ಯಲ್ಲಮ್ಮಾ ದೇವಿಯ ದೇವರ ಕಾರ್ಯ ಮಾಡಿದ್ದರಿಂದ ನಾನು ಸೀತನೂರ ಗ್ರಾಮದಿಂದ ಮೋಟಾರ ಸೈಕಲ ನಂ ಕೆಎ-32 ಎಕ್ಸ್-1567 ನೆದ್ದರ ಮೇಲೆ  ಹೊರಟಿರುತ್ತೆನೆ. ಮುಂದೆ ಸಾಯಂಕಾಲ 5.30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ  ಕೇಂದ್ರ ಕಾರಾಗೃಹದ ಹತ್ತಿರ ಸಿರನೂರ ಗ್ರಾಮದ  ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ರೋಡಿನ ಎಡಗಡೆಯಿಂದ ಬಲಗಡೆಗೆ ಬಂದು ವೇಗದ ಹತೋಟಿ ತಪ್ಪಿ ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ರೋಡಿನ ಕೆಳಗೆ ಬಲಗಡೆಯ ತೆಗ್ಗಿನಲ್ಲಿ ನಿಲ್ಲಿಸಿರುತ್ತಾನೆ.ಸದರಿ ಘಟನೆಯಿಂದ ನನಗೆ ಬಲಗೈಗೆ ಮೊಳಕೈ ಹತ್ತಿರ,ಅಂಗೈಯ ಮೇಲೆ ಮತ್ತು ಬಲಗಾಲಿನ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ.ನಂತರ ಸದರಿ ಟಿಪ್ಪರ ನಂಬರ ನೋಡಲಾಗಿ ಜಿಎ-02 ವ್ಹಿ- 7505 ನೆದ್ದು ಇರುತ್ತದೆ,ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪಂಡಿತ ತಂದೆ ಲಕ್ಷ್ಮಣ ಮಡ್ನೆ  ಸಾ: ಭವಾನಿ ಟೆಂಪಲ ಹತ್ತಿರ ಕಮಲ ನಗರ  ಗುಲಬರ್ಗಾ  ರವರು ದಿನಾಂಕ 11-04-2014 ರಂದು ಸಾಯಂಕಾಲ 5-15 ಗಂಟೆಗೆ ಸುಪರ ಮಾರ್ಕೇಟಕ್ಕೆ ಹೋಗುವ ಸಲುವಾಗಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಅಟೋರೀಕ್ಷಾ ನಂ: ಕೆಎ 32-5922 ನೆದ್ದರಲ್ಲಿ ಕುಳಿತು ಎಸ್.ವಿ.ಪಿ.ಸರ್ಕಲ್ ಮುಖಾಂತರ ಸುಪರ ಮಾರ್ಕೇಟ ಕಡೆಗೆ ಹೋಗುವಾಗ ಜಗತ ಸರ್ಕಲ್ ಹತ್ತಿರ ನಾನು ಅಟೋರೀಕ್ಷಾ ಚಾಲಕನಿಗೆ ಅಟೋ ನಿಧಾನವಾಗಿ ಚಲಾಯಿಸಲು ತಿಳಿಸಿದರೂ ಕೂಡಾ ತನ್ನ ಅಟೋರೀಕ್ಷಾವನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ತಿರಾಂದಾಜ ಟಾಕೀಜ ಕಡೆಯಿಂದ ಮೋ/ಸೈಕಲ್ ನಂಕೆಎ 32 ಎಕ್ಸ 8743 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಂದಾಕೊಂದು ವಾಹನಗಳು ಡಿಕ್ಕಿ ಆಗಿದ್ದರಿಂದ ಅಟೋರೀಕ್ಷಾ ಪಲ್ಟಿ ಆಗಿದ್ದರಿಂದ ನನಗೆ  ಮತ್ತು ಅಟೋರೀಕ್ಷಾ ಚಾಲಕ  ಮುರಳಿಧರನಿಗೆ ಗಾಯಗಳಾಗಿದ್ದು  ಮೋ/ಸೈಕಲ್ ಸವಾರನು ತನ್ನ ವಾಹನ ಅಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.