POLICE BHAVAN KALABURAGI

POLICE BHAVAN KALABURAGI

06 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:04/06/2013 ರಂದು ಮುಂಜಾನೆ 10:30 ಗಂಟೆ ಸುಮಾರಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಜಬ್ಬಾರ ಇತನು ಪೋನ ಮಾಡಿ ಗುಲಬರ್ಗಾ– ಸೇಡಂ ರಿಂಗ  ರೋಡಿಗೆ ಇರುವ ಮೇಜೆಸ್ಟೀಕ ಫಂಕ್ಷನ ಹಾಲ ಎದುರುಗಡೆ ಹನೀಪಾ ಗಂಡ ಮಹ್ಮದ ಹುಸೇನ ವಯಾ||65 ಸಾ|| ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರ ಶಹಾ ಶಾಲೆ ಹತ್ತಿರ ಗುಲಬರ್ಗಾ ಇವರು ಆಟೋದಿಂದ ಇಳಿದು ರೋಡ ಕ್ರಾಸ ಮಾಡುತ್ತಿರುವಾಗ ಖರ್ಗೆ ಪೆಟ್ರೋಲ ಪಂಪ ಕಡೆಯಿಂದ ಕಾರ ನಂ ಕೆಎ 29 ಎಮ್‌ 6311 ನೇದ್ದರ ಚಾಲಕ  ಕಾರನ್ನು ಅತೀ ವೇಗ ಅಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಹೊಡೆದು ಕಾರನ್ನು ಅಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ತಲೆಯ ಹಿಂದೆ ಬಾರಿರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಮಾತಾಡುವ ಸ್ಥಿತಿಯಲ್ಲಿರದೇ ಇರುವದರಿಂದ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮಾಡಿದ್ದು ಆಸ್ಪತ್ರೆಯವರು 20,000/- ರೂ ಗಳು ಕಟ್ಟಬೇಕು ಅಂತ ಹೇಳಿದ್ದರಿಂದ ನನ್ನ ಹತ್ತಿರ ಹಣ ಇಲ್ಲದೆ ಇರುವದರಿಂದ ಸರಕಾರಿ ಆಸ್ಪತ್ರೆಗೆ ಸಾಯಂಕಾಲ 4:45 ಗಂಟೆಯ ಸುಮಾರಿಗೆ ಸೇರಿಕೆ ಮಾಡಿರುತ್ತೇನೆ.  ಉಪಚಾರದಿಂದ ಗುಣ ಮುಖವಾಗದೆ ದಿನಾಂಕ:05/06/2013 ರಂದು ಮಧ್ಯರಾತ್ರಿ ಮೃತಪಟ್ಟಿರುತ್ತಾಳೆ ಅಂತ ಶ್ರೀ ನವಾಬ ತಂದೆ ಮಹ್ಮದ ಹುಸೇನ ಸಾ:ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರಶಹಾ ಶಾಲೆ ಹತ್ತಿರ ಗುಲಬರ್ಗಾ ರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 286/2013 ಕಲಂ 279, 304 (ಎ) ಐಪಿಸಿ ಸಂ. 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:05/06/2013 ರಂದು ಸಾಯಂಕಾಲ ಬೇಲೂರ (ಜೆ) ಸೀಮಾಂತರದಲ್ಲಿ ಬರುವ ಮಾಲಪೂರಿ ಕಂಕರ ಮಶೀನ ಹತ್ತಿರ ಇಸ್ಪೇಟ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಖಚಿತ ಬಾತ್ಮಿ ಮೇರೆಗೆ ಆನಂದರಾವ ಎಸ್ ಎನ್‌ ಪಿಎಸ್‌‌ಐ (ಕಾ&ಸು) ಗುಲ್ಬರ್ಗಾ ಗ್ರಾಮೀಣ ಠಾಣೆ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸಿರಾಜ ಅಹ್ಮದ ತಂದೆ ಮಹೆಬೂಬ ವ;36 ವರ್ಷ ಉ: ಮೆಕ್ಯಾನಿಕ ಸಾ: ಮಹೆಬೂಬ ನಗರ ಗುಲಬರ್ಗಾ , ಅಜ್ಮಲ ಅಹ್ಮದ ತಂದೆ ಎಕಬಾಲ ಅಹ್ಮದ ವ:37 ವರ್ಷ ಉ: ದಲ್ಲಾಳಿ ಕೆಲಸ ಸಾ: ಮಹೆಬೂಬ ನಗರ ಗುಲಬರ್ಗಾ, ಸೈಯ್ಯದ ಬಬಲೂ ತಂದೆ ಶಬ್ಬೀರ ಅಲಿ ವ:29 ವರ್ಷ ಉ: ಮೆಕ್ಯಾನಿಕ  ಕೆಲಸ ಸಾ: ತಾಜ ಫಂಕ್ಷನ ಹಾಲ ಹಿಂದೆ ಮಹೆಬೂಬ ನಗರ ಗುಲಬರ್ಗಾ,ಹೈದರಸಾಬ ತಂದೆ ಯಾಸೀನಸಾಬ ವ:53 ವರ್ಷ ಉ:ಹಣ್ಣಿನ ವ್ಯಾಪರ ಸಾ: ಬಿಲಾಲಬಾದ ಗುಲಬರ್ಗಾ,ಗುಲಾಮ ರಸೂಲ ತಂದೆ ಮಹ್ಮದ ನಬೀ ವ:39 ವರ್ಷ ಉ: ಬಟ್ಟೆ ವ್ಯಾಪರ ಸಾ: ಹಪ್ತ ಗುಮ್ಮಜ ಗುಲಬರ್ಗಾ ,ಸಾಜೀದ ಅಹ್ಮದ ತಂದೆ ಶಫೀ ಅಹ್ಮದ ವ:38 ವರ್ಷ ಉ;ಖಾಸಗಿ ಕೆಲಸ ಸಾ: ಸಂತ್ರಸವಾಡಿ ಗುಲಬರ್ಗಾ, ಅಮಜದ ತಂದೆ ಶಮ್ಮಶೀರ ಅಲಿ ವ:48 ವರ್ಷ ಉ:ವ್ಯಾಪರ ಸಾ:  ರೋಜಾ (ಬಿ) ಗುಲಬರ್ಗಾ, ಮಹ್ಮದ ಸಲೀಮ ತಂದೆ  ಮಹ್ಮದ ಬುರಾನ ವ:29 ವರ್ಷ ಉ: ವ್ಯಾಪರ ಸಾ: ಖಾಜ ಕಾಲನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿ ನಗದು ಹಣ 35640/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 287/2013 ಕಲಂ, 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕೊಲೆ ಪ್ರಕರಣ:

ಮುದೋಳ ಪೊಲೀಸ್ ಠಾಣೆ:ಲಚಮಪ್ಪಾ ತಂದೆ ಕಾಶಪ್ಪಾ ಕಾಳಾ, ಶಾಮಪ್ಪಾ ತಂದೆ ಬಿಚ್ಚಪ್ಪಾ, ಮಲ್ಲೇಶ ತಂದೆ ಬಸಪ್ಪಾ ಮೂರು ಜನರು ಕೂಡಿಕೊಂಡು  ದಿನಾಂಕ:05-06-2013 ರಂದು ಸಾಯಂಕಾಲ  4-30 ಗಂಟೆಯ ಸುಮಾರಿಗೆ ಮುಧೋಳ ಬಸ್ಸಸ್ಟ್ಯಾಂಡ ಪಕ್ಕದಲ್ಲಿರುವ ನಾಗೇಶ ತಂದೆ ಹಣಮಂತು ಇವರ ಪಾಸ್ಟ್ ಫುಡ್ ಹೋಟೆಲಿಗೆ ನಾಸ್ಟಾ ಮಾಡಲು ಹೋಗಿ ಮೂರು ಜನರು ನಾಸ್ಟಾ ಮಾಡಿದ್ದು, ಲಚಮಪ್ಪಾ ಇವನು ಇನ್ನೊಂದು ಸಿಂಗಲ್ ಪ್ಲೇಟ್ ನಾಸ್ಟಾ ಕೊಡು ಅಂತಾ ಕೇಳಿದಾಗ ಹೊಟೆಲದವನಾದ ನಾಗೇಶ ಇವನು ಸಿಂಗಲ್ ಪ್ಲೇಟ್ ನಾಸ್ಟಾ ಕೊಡುವುದಿಲ್ಲಾ ಅಂತಾ ಹೇಳಿ ನಾಗೇಶನು ಇತನು ಲಚಮಪ್ಪನಿಗೆ ಜಾತಿ ನಿಂದನೆ ಮಾಡಿ ಕೈಗಳಿಂದ ಲಚಮಪ್ಪನಿಗೆ ಹೊಟ್ಟೆಗೆ ಹೊಡೆದು ಕೈ ಹಿಡಿದು ದಬ್ಬಿಸಿಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ನಾಗೇಶನು ಅಡುಗೆ ಮಾಡಲು ಉಪಯೋಗಿಸುವ ಕಬ್ಬಿಣದ ರಾಡನ್ನು ತಗೆದುಕೊಂಡು ಲಚಮಪ್ಪನ ತಲೆಯ ಹಿಂಬಾಗಕ್ಕೆ, ಎದೆಗೆ ಹೊಡೆದು ಒಳ ಪೆಟ್ಟು ಮಾಡಿದಾಗ ಜೋರಾಗಿ ಹೊಡೆದು ಒಳ ಪೆಟ್ಟು ಮಾಡಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಒದ್ದಾಡುತ್ತಾ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಜಾತಿ ನಿಂದನೆ ಮಾಡಿ ಹೊಡೆದು ಕೊಲೆ ಮಾಡಿದ ನಾಗೇಶ ತಂದೆ ಹಣಮಂತು ಜಾ|| ಕಬ್ಬಲಿಗೇರ ಸಾ|| ಮುಧೋಳ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಮೃತನ ತಾಯಿಯಾದ ಶ್ರೀಮತಿ ಮುತ್ಯಮ್ಮ ಗಂಡ ಕಾಶಪ್ಪಾ ಕಾಳಾ ವ|| 50 ಉ|| ಕೂಲಿ ಜಾ|| ಮಾದಿಗ ಸಾ|| ಮದನಾ ಗ್ರಾಮ ಇವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 107/2013 ಕಲಂ:302 ಐ.ಪಿ.ಸಿ ಮತ್ತು 3 (1) (10)  ಎಸಸಿ/ಎಸಟಿ ಪಿಎ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

05 June 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ  ಬಸವರಾಜ ತಂದೆ ಶರಣಪ್ಪಾ ಸಬಶೇಟ್ಟಿ ಸಾ: ಫರಹತಾಬಾದ ತಾ:ಜಿ: ಗುಲಬರ್ಗಾ ರವರು   ನಾನು ದಿನಾಂಕ:03-06-2013 ರಂದು ಬೆಳಗ್ಗೆ 8-00 ಗಂಟೆಗೆ ನನ್ನ ಮೆಡಿಕಲ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿಕೊಂಡು ರಾತ್ರಿ 8-00 ಗಂಟೆಗೆ ಮಳೆ ಬರುತ್ತಿದ್ದರಿಂದ ಅಂಗಡಿ ಮುಚ್ಚಿ ಸೆಟ್ಟರದ ಕೀಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ಬೆಳಗ್ಗೆ 6-00 ಗಂಟೆಗೆ ಮನೆಯಲ್ಲಿ ಇದ್ದಾಗ ನನಗೆ ನಮ್ಮ ಅಂಗಡಿಯ ಪಕ್ಕದ ಮನೆಯ ಬಸವ ಜ್ಯೋತಿ ಎಲೆಕ್ಟ್ರೀಲ್ ಮತ್ತು ಮೊಬೈಯಲ್ ಅಂಗಡಿಯ ಬಸವರಾಜ ತಂದೆ ಈಶ್ವರಾಜ ಹಲಬುರ್ಗಿ ಇವರು ಫೊನ ಮಾಡಿ  ನನ್ನ ಅಂಗಡಿ ಮತ್ತು ನಿಮ್ಮ ಮೇಡಿಕಲ್ ಅಂಗಡಿಗಳ ಸೆಟ್ಟರಗಳ ಕೀಲಿ ಒಡೆದು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಅಂಗಡಿಗೆ ಬಂದು ನೋಡಲು ನಗದು ಹಣ 6,800=00 ರೂ. ಗಳನ್ನು ಕಳ್ಳತನ ಮಾಡಿರುತ್ತಾರೆ. ಅಲ್ಲದೆ ಈಶ್ವರಾಜ ಹಲಬುರ್ಗಿ ಇವರ ಅಂಗಡಿಯ ಕೀಲಿ ಕೈಗಳನ್ನು ಮುರಿದು ಸೆಟ್ಟರಗೆ ಹಾಕಿ ಕೀಲಿಯನ್ನು ಕಬ್ಬಿಣದ ರಾಡಿನಿಂದ ಮುರಿದು ಅವರ ಅಂಗಡಿಯಲ್ಲಿ ಕೌಂಟರದಲ್ಲಿ ಇದ್ದ ನಗದು ಹಣ 1,800=00 ರೂ. ಗಳನ್ನು ಕಳ್ಳತವಾಗಿರುತ್ತವೆ. ಹೀಗೆ ಒಟ್ಟು 8,600=00 ರೂಪಾಯಿಗಳನ್ನು ಕಳ್ಳತನ ಮಾಡಿರುತ್ತಾರೆ. ಮತ್ತು ಕಲಬುರ್ಗಿ ಇವರ ದಾಲ್ ಮಿಲ್ಲಿನ ತೂಕ ಮಾಡುವ ಯಂತ್ರದ ಕೊಣೆಯ ಕೀಲಿ ಮುರಿದಿದ್ದು ಇರುತ್ತದೆ.ಯಾರೋ ನಾಲ್ಕು ಜನ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಮಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:80/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:02/06/2013 ರಂದು ರಾಜೇಶ್ವರದಿಂದ ಮದುವೆ ಮುಗಿಸಿಕೊಂಡು ಗುಲಬರ್ಗಾಕ್ಕೆ  ಸಾಯಂಕಾಲ 5:30 ಗಂಟೆಗೆ ಸುಮಾರಿಗೆ  ವಾಣಿಜ್ಯ ತೆರಿಗೆ ಕಛೇರಿಯ ಮುಂದೆ ಬರುತ್ತಿದ್ದಾಗ ಮುಂದೆ ಹೋಗುತ್ತಿರುವ ಬಸ್ಸ್‌‌‌ ನಂ ಕೆಎ 36 ಎಪ್‌ 1169 ನೇದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಅಲಕ್ಷತನದಿಂದ  ನಡೆಸಿಕೊಂಡು ಒಮ್ಮೇಲೆ ಬ್ರೇಕ ಹಾಕಿದ್ದರಿಂದ ನಮ್ಮ ಬುಲೋರೊ  ವಾಹನ ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಬೂಲೇರೋ ವಾಹನದ ಜೀಪಿನ ಮುಂದಿನ ಭಾಗ ಜಖಂ ಗೊಂಡಿದ್ದು ಅಲ್ಲದೇ ನನಗೆ ಎದೆಗೆ  ಬಲಪಕ್ಕೆಗೆ  ಹಾಗೂ ಗದ್ದಕ್ಕೆ ಪೆಟ್ಟಾಗಿರುತ್ತದೆ. ಸದರಿ ಬಸ್ಸ ಚಾಲಕ ತನ್ನ ಬಸ್ಸನ್ನು ನಿಲ್ಲಿಸದೇ  ಹಾಗೇಯೇ  ಹೋಗಿರುತ್ತಾನೆ ಅಂತಾ ಶ್ರೀ ಅಮೃತಪ್ಪ ತಂದೆ ಚಂದ್ರಾಮಪ್ಪ ಪಾಟೀಲ ಸಾ:ಸೀರ ನೂರ ತಾ: ಗುಲಬರ್ಗಾ ಹಾ:ವ:ಅತ್ತರ ಕಂಪೌಂಡ ಗಾಜೀಪುರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 282/2013 ಕಲಂ. 279  337 ಐಪಿಸಿ . ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ:ದಿನಾಂಕ:04-06-2013 ರಂದು  ಸಾಯಂಕಾಲ 6-00 ಗಂಟೆ ಸುಮಾರಿಗೆ ಮಹಿಬೂಬ ನಗರದಲ್ಲಿರುವ ಮೋಶಿನ ಇವರ ಹೊಸ್ ಕಟ್ಟಡ ಹಿಂದೆ ರಾಮಜಿ ನಗರ ರೋಡಿನ ಮೇಲೆ ಯುಸಫಅಲಿ ಈತನು ರೋಡಿನ ಮೇಲೆ ಪಕ್ಕದಲ್ಲಿ ಕುಳಿತಾಗ ಇನ್ನೋವಾ ಕಾರ ನಂ. ಕೆಎ-32 ಎಮ್-5747 ನೇದ್ದರ ಚಾಲಕನು ತನ್ನ ಇನ್ನೊವಾ ಕಾರನ್ನು ಮಹಿಬೂಬ ನಗರ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕಕ್ಕೆ ಕುಳಿತ ಯುಸುಫ ಅಲಿ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಯುಸುಫ ಅಲಿ ಇತನು ಭಾರಿ ಗುಪ್ತಗಾಯ ಮತ್ತು ರಕ್ತಗಾಯಹೊಂದಿದ್ದರಿಂದ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾತ್ರಿ  10-05 ಗಂಟೆ ಯುಸೂಪ ಅಲಿ ಮೃತ ಪಟ್ಟಿರುತ್ಥಾನೆ ಶ್ರೀ, ಮಹ್ಮದ ತೌಫಿಕ ತಂದೆ ಯುಸುಫ ಅಲಿ ಉಃ ಟಂ.ಟಂ ಚಾಲಕ, ಜಾಃ ಮುಸ್ಲಿಂ, ಸಾಃ ಕೊಯಿರಿ ಬಿಲ್ಡಿಂಗ ಹತ್ತಿರ ಮಹಿಬೂಬ ನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರೆಂಶದ ಮೇಲಿಂದ ಠಾಣೆ ಗುನ್ನೆ  ನಂ: ಗುನ್ನೆ ನಂ. 34/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

   

04 June 2013

GULBARGA DISTRICT REPORTED CRIMES

ಹುಡಗ ಕಾಣೆಯಾದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ, ಬಸಣಗೌಡ ತಂದೆ ಸಿದ್ರಾಮಪ್ಪಾ ಬೋರೆಡ್ಡಿ ಸಾ; ಪೊಲೀಸ್ ಕ್ವಾಟರ್ಸ ಕೆ.ಎಸ್.ಆರ್.ಪಿ. ಕ್ಯಾಂಪ್ ತಾಜ ಸುಲ್ತಾನಪೂರ ಗುಲಬರ್ಗಾರವರು ನನ್ನ ಮಗನಾದ ದೇವಗೌಡ ಬೋರಡ್ಡಿ  ವಯಾ| 12 ವರ್ಷ ಇತನು ದಿನಾಂಕ.28-5-2013 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಹೋರಗಡೆ ಆಟವಾಡಿ ಬರುತ್ತೇನೆ ಅಂತಾ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ನಮ್ಮ ಸಮ್ಮಂದಿಕರು  ಮತ್ತು ಅವನ ಗೆಳೆಯರೆಲ್ಲರ ಹತ್ತಿರ ವಿಚಾಸಿದರೂ ಪತ್ತೆಯಾಗಿರುವುದಿಲ್ಲಾ. ಆತನ ಚಹರೆ ಪಟ್ಟಿ ಎತ್ತರ 4 5’’ಮೈಕಟ್ಟು, ತಳ್ಳನೆಯ ಮೈಕಟ್ಟು, ಸಾಧಗಪ್ಪು ಮೈಬಣ್ಣ, ಉದ್ದನೆಯ ಮೂಗು,ಅಗಲವಾದ ಹಣೆ, ಮುಂದಿನ ಮೇಲಿನ ಹಲ್ಲು ಸ್ವಲ್ಪ ಮುಂದೆ  ಉದ್ದವಾಗಿರುತ್ತವೆ. 7ನೇತರಗತಿಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾನೆ. ಬಿಸ್ಕಿಟ ಕಲರ ಚೌಕಡಿ ಚಕ್ಸ ಶರ್ಟ,ಆಕಾಶ ಕಲರ ನೀಲಿ ಪ್ಯಾಂಟ ಧರಿಸಿರುತ್ತಾನೆ. ಕನ್ನಡ ಮತ್ತು ಹಿಂದಿ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 281/2013 ಕಲಂ, ಹುಡಗ ಕಾಣೆಯಾದ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263631 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
24 ವರ್ಷದ ಹುಡಗನಿಗೆ ಹಾವು ಕಡಿತದಿಂದ ಸಾವು:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:02/06/2013 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಊಟ ಮಾಡಿಕೊಂಡು ನಾನು ಮತ್ತು  ಅಜೇಯ ತಂದೆ ರಾಮಪ್ರಸಾದ  ವಯಾ||18 ವರ್ಷ ಸಾ:ರಾಮನಗರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಹಾ::ಬೇಲೂರ ಕ್ರಾಸ ಸುಗುರೇಶ್ವರ ದಾಲ ಮಿಲ್ ಗುಲಬರ್ಗಾ ಇತನು ಅಲ್ಲದೆ ಇತರೆ ಸುಗುರೇಶ್ವರ ದಾಲ ಮಿಲ್ಲದಲ್ಲಿ ಕೆಲಸ ಮಾಡುವವರು  ಸುಗುರೇಶ್ವರ ದಾಲ ಮಿಲದ ಗೇಟಿನ ಹೊರಗಡೆ ಇರುವ ರೂಮಿನಲ್ಲಿ ಮಲಗಿಕೊಂಡಿದ್ದಾಗ ಅಜೇಯ ಇತನು ಒಮ್ಮೇಲೆ ಚೀರಾಡುತ್ತಾ ಹಾವು ಕಚ್ಚಿದೆ ಅಂತಾ ಚಿರಾಡುತ್ತಿರುವಾಗ ಎಲ್ಲರೂ ಎದ್ದು ನೋಡಲು ಅಜೇಯ ಇತನಿಗೆ ಎಡಗೈ ಹಸ್ತದ ಮಣಿ ಕಟ್ಟಿಗೆ ಹಾವು ಕಚ್ಚಿದ್ದು ಹಾಗೆ ಇದ್ದು ಎಲ್ಲರೂ ಅಜೇಯನಿಗೆ ಕೈಜಾಡಿಸಲು ಹೇಳಿದಾಗ ಅಜೇಯ ಇತನು ಕೈಜಾಡಿಸಿದಾಗ ಹಾವು ಕೆಳಗೆ ಬಿದ್ದು  ಕೋಣೆಯಿಂದ ಹೊರಗಡೆ ಹೋಯಿತು ಮಿಲ್ಲ ಮಾಲಿಕರಿಗೆ ಪೋನಮಾಡಿ ಅವರ ಕಾರಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಅಜೇಯ ಇತನ ಸ್ಥಿತಿ ಸಿರಿಯಸ್ಸ್‌ ಆಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದಾಗ ವೈಧ್ಯರು ಆತನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಅಜೇಯ ಇತನು ಹಾವು ಕಚ್ಚಿ ಮೃತಪಟ್ಟಿರುವದರಿಂದ ಶ್ರೀ ರಮೇಶಕುಮಾರ ತಂದೆ ಶ್ರೀಲಾಲ ಮುಖಿಯ್ಯಾ ವಯಾ 18 ವರ್ಷ ಸಾ: ಸದಾನಂದಪುರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಇತನು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಆರ್‌ ನಂ:15/2013 ಕಲಂ 174 ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.