ಕಳ್ಳತನ
ಪ್ರಕರಣ:
ಫರತಬಾದ
ಪೊಲೀಸ್ ಠಾಣೆ:ಶ್ರೀ ಬಸವರಾಜ
ತಂದೆ ಶರಣಪ್ಪಾ ಸಬಶೇಟ್ಟಿ ಸಾ: ಫರಹತಾಬಾದ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ:03-06-2013
ರಂದು ಬೆಳಗ್ಗೆ 8-00 ಗಂಟೆಗೆ ನನ್ನ ಮೆಡಿಕಲ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿಕೊಂಡು
ರಾತ್ರಿ 8-00 ಗಂಟೆಗೆ ಮಳೆ ಬರುತ್ತಿದ್ದರಿಂದ ಅಂಗಡಿ ಮುಚ್ಚಿ ಸೆಟ್ಟರದ ಕೀಲಿ ಹಾಕಿಕೊಂಡು ಮನೆಗೆ
ಹೋಗಿರುತ್ತೆನೆ. ಬೆಳಗ್ಗೆ 6-00 ಗಂಟೆಗೆ ಮನೆಯಲ್ಲಿ ಇದ್ದಾಗ ನನಗೆ ನಮ್ಮ ಅಂಗಡಿಯ ಪಕ್ಕದ ಮನೆಯ ಬಸವ
ಜ್ಯೋತಿ ಎಲೆಕ್ಟ್ರೀಲ್ ಮತ್ತು ಮೊಬೈಯಲ್ ಅಂಗಡಿಯ ಬಸವರಾಜ ತಂದೆ ಈಶ್ವರಾಜ ಹಲಬುರ್ಗಿ ಇವರು ಫೊನ
ಮಾಡಿ ನನ್ನ ಅಂಗಡಿ ಮತ್ತು ನಿಮ್ಮ ಮೇಡಿಕಲ್ ಅಂಗಡಿಗಳ
ಸೆಟ್ಟರಗಳ ಕೀಲಿ ಒಡೆದು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು
ಅಂಗಡಿಗೆ ಬಂದು ನೋಡಲು ನಗದು ಹಣ 6,800=00 ರೂ. ಗಳನ್ನು ಕಳ್ಳತನ ಮಾಡಿರುತ್ತಾರೆ. ಅಲ್ಲದೆ ಈಶ್ವರಾಜ ಹಲಬುರ್ಗಿ ಇವರ
ಅಂಗಡಿಯ ಕೀಲಿ ಕೈಗಳನ್ನು ಮುರಿದು ಸೆಟ್ಟರಗೆ ಹಾಕಿ ಕೀಲಿಯನ್ನು ಕಬ್ಬಿಣದ ರಾಡಿನಿಂದ ಮುರಿದು ಅವರ
ಅಂಗಡಿಯಲ್ಲಿ ಕೌಂಟರದಲ್ಲಿ ಇದ್ದ ನಗದು ಹಣ 1,800=00 ರೂ. ಗಳನ್ನು ಕಳ್ಳತವಾಗಿರುತ್ತವೆ. ಹೀಗೆ ಒಟ್ಟು 8,600=00 ರೂಪಾಯಿಗಳನ್ನು ಕಳ್ಳತನ ಮಾಡಿರುತ್ತಾರೆ.
ಮತ್ತು ಕಲಬುರ್ಗಿ ಇವರ ದಾಲ್ ಮಿಲ್ಲಿನ ತೂಕ ಮಾಡುವ ಯಂತ್ರದ ಕೊಣೆಯ ಕೀಲಿ ಮುರಿದಿದ್ದು ಇರುತ್ತದೆ.ಯಾರೋ
ನಾಲ್ಕು ಜನ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಮಡು ಹೋಗಿರುತ್ಥಾರೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:80/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ಗ್ರಾಮೀಣ
ಪೊಲೀಸ್ ಠಾಣೆ:ದಿನಾಂಕ:02/06/2013
ರಂದು ರಾಜೇಶ್ವರದಿಂದ ಮದುವೆ ಮುಗಿಸಿಕೊಂಡು ಗುಲಬರ್ಗಾಕ್ಕೆ ಸಾಯಂಕಾಲ 5:30 ಗಂಟೆಗೆ ಸುಮಾರಿಗೆ ವಾಣಿಜ್ಯ ತೆರಿಗೆ ಕಛೇರಿಯ ಮುಂದೆ ಬರುತ್ತಿದ್ದಾಗ ಮುಂದೆ
ಹೋಗುತ್ತಿರುವ ಬಸ್ಸ್ ನಂ ಕೆಎ 36 ಎಪ್ 1169 ನೇದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಅಲಕ್ಷತನದಿಂದ ನಡೆಸಿಕೊಂಡು ಒಮ್ಮೇಲೆ ಬ್ರೇಕ ಹಾಕಿದ್ದರಿಂದ ನಮ್ಮ ಬುಲೋರೊ ವಾಹನ ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಬೂಲೇರೋ ವಾಹನದ
ಜೀಪಿನ ಮುಂದಿನ ಭಾಗ ಜಖಂ ಗೊಂಡಿದ್ದು ಅಲ್ಲದೇ ನನಗೆ ಎದೆಗೆ ಬಲಪಕ್ಕೆಗೆ
ಹಾಗೂ ಗದ್ದಕ್ಕೆ ಪೆಟ್ಟಾಗಿರುತ್ತದೆ. ಸದರಿ ಬಸ್ಸ ಚಾಲಕ ತನ್ನ ಬಸ್ಸನ್ನು
ನಿಲ್ಲಿಸದೇ ಹಾಗೇಯೇ ಹೋಗಿರುತ್ತಾನೆ ಅಂತಾ ಶ್ರೀ ಅಮೃತಪ್ಪ ತಂದೆ
ಚಂದ್ರಾಮಪ್ಪ ಪಾಟೀಲ ಸಾ:ಸೀರ ನೂರ ತಾ: ಗುಲಬರ್ಗಾ ಹಾ:ವ:ಅತ್ತರ ಕಂಪೌಂಡ ಗಾಜೀಪುರ ಗುಲಬರ್ಗಾ
ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 282/2013 ಕಲಂ. 279 337 ಐಪಿಸಿ . ಸಂಗಡ 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ:ದಿನಾಂಕ:04-06-2013 ರಂದು ಸಾಯಂಕಾಲ 6-00 ಗಂಟೆ
ಸುಮಾರಿಗೆ ಮಹಿಬೂಬ ನಗರದಲ್ಲಿರುವ ಮೋಶಿನ ಇವರ ಹೊಸ್ ಕಟ್ಟಡ ಹಿಂದೆ ರಾಮಜಿ ನಗರ ರೋಡಿನ ಮೇಲೆ ಯುಸಫಅಲಿ
ಈತನು ರೋಡಿನ ಮೇಲೆ ಪಕ್ಕದಲ್ಲಿ ಕುಳಿತಾಗ ಇನ್ನೋವಾ ಕಾರ ನಂ. ಕೆಎ-32 ಎಮ್-5747 ನೇದ್ದರ ಚಾಲಕನು
ತನ್ನ ಇನ್ನೊವಾ ಕಾರನ್ನು ಮಹಿಬೂಬ ನಗರ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ
ಪಕ್ಕಕ್ಕೆ ಕುಳಿತ ಯುಸುಫ ಅಲಿ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಸಮೇತ ಓಡಿ
ಹೋಗಿರುತ್ತಾನೆ ಯುಸುಫ ಅಲಿ ಇತನು ಭಾರಿ ಗುಪ್ತಗಾಯ ಮತ್ತು ರಕ್ತಗಾಯಹೊಂದಿದ್ದರಿಂದ ಉಪಚಾರ
ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾತ್ರಿ 10-05 ಗಂಟೆ ಯುಸೂಪ ಅಲಿ ಮೃತ
ಪಟ್ಟಿರುತ್ಥಾನೆ ಶ್ರೀ, ಮಹ್ಮದ ತೌಫಿಕ ತಂದೆ ಯುಸುಫ ಅಲಿ ಉಃ ಟಂ.ಟಂ ಚಾಲಕ, ಜಾಃ ಮುಸ್ಲಿಂ, ಸಾಃ ಕೊಯಿರಿ ಬಿಲ್ಡಿಂಗ ಹತ್ತಿರ ಮಹಿಬೂಬ ನಗರ
ಗುಲಬರ್ಗಾರವರು ದೂರು ಸಲ್ಲಿಸಿದ ಸಾರೆಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ. 34/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment