POLICE BHAVAN KALABURAGI

POLICE BHAVAN KALABURAGI

04 June 2013

GULBARGA DISTRICT REPORTED CRIMES

ಹುಡಗ ಕಾಣೆಯಾದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ, ಬಸಣಗೌಡ ತಂದೆ ಸಿದ್ರಾಮಪ್ಪಾ ಬೋರೆಡ್ಡಿ ಸಾ; ಪೊಲೀಸ್ ಕ್ವಾಟರ್ಸ ಕೆ.ಎಸ್.ಆರ್.ಪಿ. ಕ್ಯಾಂಪ್ ತಾಜ ಸುಲ್ತಾನಪೂರ ಗುಲಬರ್ಗಾರವರು ನನ್ನ ಮಗನಾದ ದೇವಗೌಡ ಬೋರಡ್ಡಿ  ವಯಾ| 12 ವರ್ಷ ಇತನು ದಿನಾಂಕ.28-5-2013 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಹೋರಗಡೆ ಆಟವಾಡಿ ಬರುತ್ತೇನೆ ಅಂತಾ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ನಮ್ಮ ಸಮ್ಮಂದಿಕರು  ಮತ್ತು ಅವನ ಗೆಳೆಯರೆಲ್ಲರ ಹತ್ತಿರ ವಿಚಾಸಿದರೂ ಪತ್ತೆಯಾಗಿರುವುದಿಲ್ಲಾ. ಆತನ ಚಹರೆ ಪಟ್ಟಿ ಎತ್ತರ 4 5’’ಮೈಕಟ್ಟು, ತಳ್ಳನೆಯ ಮೈಕಟ್ಟು, ಸಾಧಗಪ್ಪು ಮೈಬಣ್ಣ, ಉದ್ದನೆಯ ಮೂಗು,ಅಗಲವಾದ ಹಣೆ, ಮುಂದಿನ ಮೇಲಿನ ಹಲ್ಲು ಸ್ವಲ್ಪ ಮುಂದೆ  ಉದ್ದವಾಗಿರುತ್ತವೆ. 7ನೇತರಗತಿಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾನೆ. ಬಿಸ್ಕಿಟ ಕಲರ ಚೌಕಡಿ ಚಕ್ಸ ಶರ್ಟ,ಆಕಾಶ ಕಲರ ನೀಲಿ ಪ್ಯಾಂಟ ಧರಿಸಿರುತ್ತಾನೆ. ಕನ್ನಡ ಮತ್ತು ಹಿಂದಿ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 281/2013 ಕಲಂ, ಹುಡಗ ಕಾಣೆಯಾದ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263631 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
24 ವರ್ಷದ ಹುಡಗನಿಗೆ ಹಾವು ಕಡಿತದಿಂದ ಸಾವು:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:02/06/2013 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಊಟ ಮಾಡಿಕೊಂಡು ನಾನು ಮತ್ತು  ಅಜೇಯ ತಂದೆ ರಾಮಪ್ರಸಾದ  ವಯಾ||18 ವರ್ಷ ಸಾ:ರಾಮನಗರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಹಾ::ಬೇಲೂರ ಕ್ರಾಸ ಸುಗುರೇಶ್ವರ ದಾಲ ಮಿಲ್ ಗುಲಬರ್ಗಾ ಇತನು ಅಲ್ಲದೆ ಇತರೆ ಸುಗುರೇಶ್ವರ ದಾಲ ಮಿಲ್ಲದಲ್ಲಿ ಕೆಲಸ ಮಾಡುವವರು  ಸುಗುರೇಶ್ವರ ದಾಲ ಮಿಲದ ಗೇಟಿನ ಹೊರಗಡೆ ಇರುವ ರೂಮಿನಲ್ಲಿ ಮಲಗಿಕೊಂಡಿದ್ದಾಗ ಅಜೇಯ ಇತನು ಒಮ್ಮೇಲೆ ಚೀರಾಡುತ್ತಾ ಹಾವು ಕಚ್ಚಿದೆ ಅಂತಾ ಚಿರಾಡುತ್ತಿರುವಾಗ ಎಲ್ಲರೂ ಎದ್ದು ನೋಡಲು ಅಜೇಯ ಇತನಿಗೆ ಎಡಗೈ ಹಸ್ತದ ಮಣಿ ಕಟ್ಟಿಗೆ ಹಾವು ಕಚ್ಚಿದ್ದು ಹಾಗೆ ಇದ್ದು ಎಲ್ಲರೂ ಅಜೇಯನಿಗೆ ಕೈಜಾಡಿಸಲು ಹೇಳಿದಾಗ ಅಜೇಯ ಇತನು ಕೈಜಾಡಿಸಿದಾಗ ಹಾವು ಕೆಳಗೆ ಬಿದ್ದು  ಕೋಣೆಯಿಂದ ಹೊರಗಡೆ ಹೋಯಿತು ಮಿಲ್ಲ ಮಾಲಿಕರಿಗೆ ಪೋನಮಾಡಿ ಅವರ ಕಾರಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಅಜೇಯ ಇತನ ಸ್ಥಿತಿ ಸಿರಿಯಸ್ಸ್‌ ಆಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದಾಗ ವೈಧ್ಯರು ಆತನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಅಜೇಯ ಇತನು ಹಾವು ಕಚ್ಚಿ ಮೃತಪಟ್ಟಿರುವದರಿಂದ ಶ್ರೀ ರಮೇಶಕುಮಾರ ತಂದೆ ಶ್ರೀಲಾಲ ಮುಖಿಯ್ಯಾ ವಯಾ 18 ವರ್ಷ ಸಾ: ಸದಾನಂದಪುರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಇತನು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಆರ್‌ ನಂ:15/2013 ಕಲಂ 174 ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: