POLICE BHAVAN KALABURAGI

POLICE BHAVAN KALABURAGI

16 October 2012

GULBARGA DISTRICT REPORTED CRIMES


ಹಲ್ಲೆ ಮಾನಭಂಗಕ್ಕೆ ಪ್ರಯತ್ನ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಧೂಳಮ್ಮಾ ಗಂಡ ಹಣಮಯ್ಯಾ ಗುತ್ತೇದಾರ ಸಾ: ಭೂಸನೂರ ರವರು ಮನೆಯಲ್ಲಿ ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆಗೆ ಊಟ ಮಾಡಿ ಮಲಗಿಕೊಂಡಿದ್ದಾಗ ಮಧ್ಯರಾತ್ರಿ  00-15 ಗಂಟೆ ಸುಮಾರಿಗೆ  ವಿಜಯಕುಮಾರ ತಂದೆ ಬಾಬುರಾವ ಖೇತ್ರಿ ಮತ್ತು ಪರಸುರಾಮ ತಂದೆ ನರಸಿಂಗ ಹೊಟ್ಕರ ಇವರುಗಳು ನನ್ನ ಮನೆಯಲ್ಲಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮಾನಭಂಗಕ್ಕೆ ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 88/2012 ಕಲಂ 448, 323, 354, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಮಶಾಕ ತಂದೆ ಶಬ್ಬೀರಸಾಬ ಹೊನಗುಂಟಾ ಸಾ: ತರನಳ್ಳಿ  ತಾ:ಚೀತಾಪೂರ ಜಿ||ಗುಲಬರ್ಗಾ ರವರು ನಾನು  ಮತ್ತು ಖಾಸಿಂ ತಂದೆ ಮೋದೀನ @ ಬಾಬುಮಿಯ್ಯ ಸಾ: ತರನಳ್ಳಿ  ತಾ:ಚೀತಾಪೂರ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ  ನಂ ಕೆಎ-34 ಯು-8364 ನೇದ್ದರ ಮೇಲೆ ದಿನಾಂಕ:14/10/2012 ರಂದು ಆಳಂದ ಚೆಕ್ಕ ಪೋಸ್ಟ ಹತ್ತಿರ ಬರುತ್ತಿದ್ದಾಗ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ನಡೆಯಿಸಿ ಅಪಘಾತ ಪಡಿಸಿದನು. ನನಗೆ ಮತ್ತು ಖಾಸಿಂ ಇತನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 331/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ: 15/10/12 ರಂದು 5 ಪಿಎಮ ಸುಮಾರಿಗೆ ಆಳಂದ ರಸ್ತೆಯ ಕೃಷಿ ಸಂಶೋಧನೆ ಕೇಂದ್ರದ ಕಂಪೌಂಡ ಹತ್ತಿರ ಇರುವ ಮುಳ್ಳಿನ ಕಂಟಿಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಜೂಜಾಟವಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅಲಿಮೋದ್ದಿನ ತಂದೆ ಫಕರೊದ್ದಿನ ಅಂಕಣೆ, ಕರಣ ತಂದೆ ರಾಜಕುಮಾರ ಠಾಕೂರ, ವಿಜಯಕುಮಾರ ತಂದೆ ನಾರಯಣರಾವ , ಮಹಮದ ನುಮಾನ ತಂದೆ ಅಬ್ದಲ ಗಫಾರ , ಪಿರೋಜ ತಂದೆ ಅಬ್ದುಲ ರಹುಫ್, ಲಕ್ಷ್ಮಿಕಾಂತ ತಂದೆ ಪುಂಡಲೀಕರಾವ,ಮುಜೀಬ ತಂದೆ ಖಾಸಿಂ ಅಲಿ, ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  ರೂ. 31710/- ರೂ ಹಾಗೂ ಇಸ್ಪೇಟ ಎಲೆಗಳನ್ನು  ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 332/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಹನದ ಮೇಲೆ ಪ್ರಯಾಣಿಕರನ್ನು ಕೂಡಿಸಿಕೊಂಡು ಹೋಗುತ್ತಿರುವ ಚಾಲಕ ಮೇಲೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:15/10/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಉಪಳಾಂವ ಕ್ರಾಸ ಹತ್ತಿರ ರಾಹುಲ ತಂದೆ ಶಾಂತಪ್ಪ ಕಟ್ಟಿಮನಿ ಸಾ: ಸಂಜೀವ ನಗರ ಗುಲಬರ್ಗಾ ಇತನು ತನ್ನ ಕ್ರೋಜರ ವಾಹನ ಕೆಎ-32 ಬಿ-0305 ನೇದ್ದರ ಚಾಲಕ ತನ್ನ ವಾಹನದ ಟಾಪ ಮೇಲೆ ಪ್ರಯಾಣಿಕರನ್ನು ಅಪಾಯದ ರೀತಿಯಲ್ಲಿ ಕೂಡಿಸಿಕೊಂಡು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸುತ್ತಿರುವಾಗ ಆತನ ಮೇಲೆ ಠಾಣೆ ಗುನ್ನೆ ನಂ: 333/2012 ಕಲಂ 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

15 October 2012

GULBARGA DISTRICT REPORTED CRIMES


7 ವರ್ಷದ ಅನಾಥ ಹುಡಗಿ ಸಾವು:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಸುವರ್ಣಲತಾ ತಂದೆ ಯಲ್ಲಪ್ಪಾ ಚಂದ್ರಗಿರಿ ಅಧೀಕ್ಷಕರು ಸರಕಾರಿ ಬುದ್ದಿ ಮಾಧ್ಯ ಬಾಲಕಿಯರ ಬಾಲ ಮಂದಿರ ಗುಲಬರ್ಗಾರವರು ತಮ್ಮ ಬಾಲ ಮಂದಿರದಲ್ಲಿ ಲಕ್ಷ್ಮಿ ಎಂಬ 7 ವರ್ಷದ ಅನಾಥ ಹುಡುಗಿ ಇವಳು ವಾಸಿಸುತ್ತಿದ್ದು ಇವಳಿಗೆ  ದಿನಾಂಕ 13-10-2012  ರಂದು ಮುಂಜಾನೆ 8 ಗಂಟೆ ಸುಮಾರಿಗೆ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿಯವಳು ಗುಣ ಮುಖವಾಗದೆ ಮೃತಪಟ್ಟಿದ್ದು, ಸದರಿ ಮೃತಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 16/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ಮಹ್ಮದ ಇಸೂಫ ತಂದೆ ಗುಡುಬಾಯಿ ಖುರೇಷಿ ಸಾ|| ಚೆಡಿ ಹೋಟೆಲ್ ಗೋದರಶಾ ಮಜೀದ ಹತ್ತಿರ ಅಮಲಿ ಮೊಹಲ್ಲಾ ಗುಲಬರ್ಗಾವರು ದಿನಾಂಕ: 13/10/2012 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಮಗನಾದ ಅನ್ವರನ ಗೆಳೆಯರಾದ  ಮುಬಿನ್ ತಂದೆ ಅಬ್ದುಲ್ ಹಮೀದ, ವಾಸಿಂ ತಂದೆ ಆದಮ್ ಬಂದು ನಾವು ಮತ್ತು ಅನ್ವರ ಕೂಡಿ ಮೋಟಾರ ಸೈಕಲ್ ಮೇಲೆ ಬಸ್ಸ ಸ್ಟ್ಯಾಂಡ್ ಕಡೆಯಿಂದ ಮನೆಗೆ ಬರುತ್ತಿರುವಾಗ ದಿನಾಂಕ:13/10/2012 ರಂದು ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಕೋರ್ಟ ಹತ್ತಿರ ಕಲೀಲ್ @ ಕಲ್ಯಾ ಹಾಗೂ ಇನ್ನೊಬ್ಬ  ಬಂದು ನಮಗೆ ಬೇದರಿಕೆ ಹಾಕಿ ನಿಲ್ಲಿಸಿ ಅನ್ವರನಿಗೆ ಯಾವುದೋ ಅಟೋದಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾರೆ ನಾವು ಅನ್ವರನಿಗೆ ಅಲ್ಲಲ್ಲಿ ಹುಡುಕಾಡಿದರೂ ಸಿಗಲಿಲ್ಲಾ ಅಂತಾ ಬಂದು ಹೇಳಿದ್ದರಿಂದ ನಾನು ಮತ್ತು ನನ್ನ  ಹಿರಿ ಮಗ ಅಮಜದ ಕೂಡಿ ಅನ್ವರನಿಗೆ ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ  ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ಕಲೀಲ್ @ ಕಲ್ಯಾ ಮತ್ತು ಇನ್ನೊಬ್ಬನು  ಕೂಡಿಕೊಂಡು   ಅನ್ವರನಿಗೆ ಯಾವುದೋ ಕಾರಣದಿಂದ ಅಂಜಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ, 341, 363,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ನಶರತ ಕೌಸರ ತಂದೆ ಇಸ್ಮಾಯಿಲಸಾಬ ಅತ್ತಾರ ಸಾ:ಕೊಂಡಗೂಳಿ ತಾ: ಜೇವರ್ಗಿ ಮುಖ್ಯ  ಗುರುಗಳು ಸರಕಾರಿ ಪ್ರೌಡ ಶಾಲೆ ಕೊಂಡಗೂಳಿ ವರು ನಮ್ಮ ಶಾಲೆಯಲ್ಲಿ ದಿನಾಂಕ 13-10-2012 ರ ರಾತ್ರಿ 8 ಗಂಟೆಯಿಂದ ದಿ:14-10-2012 ರ ಬೆಳಿಗ್ಗೆ 5-10 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ಕಳ್ಳರು ಶಾಲೆಯ ಕೋಣೆಯಲ್ಲಿಟ್ಟಿದ್ದ ನಾಲ್ಕು ಎಸ್.ಎಮ್.ಎಫ್ ಬ್ಯಾಟರಿಗಳು ಹಾಗೂ ಎರಟು ಪೆಟ್ರೋಮ್ಯಾಕ್ಸಗಳು ಶಾಲೆಯ ಕೋಣೆಯ ಬಾಗಿಲ ಕೊಂಡಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿದ ಠಾಣೆ ಗುನ್ನೆ ನಂ 110/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಮೈಬೂಬ ತಂದೆ ಅಬ್ದುಲ್ ಗಪೂರ ಮುಜಾವರ 28 ವರ್ಷ, ಸಾ: ಮುಜಾವರಗಲ್ಲಿ ಅಕ್ಕಲಕೊಟ ರವರು ನಾನು ಮತ್ತು ಅಹಮದ ಮುಜಾವರ ಕೂಡಿಕೊಂಡು  ದಿನಾಂಕ: 14/10/2012 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಎಮ್ ಹೆಚ್-13 ಬಿಡಿ-8070 ನೇದ್ದರ ಮೇಲೆ ಅಕ್ಕಲಕೋಟದಿಂದ ಗುಲಬರ್ಗಾಕ್ಕೆ ಸಂಭಂದಿಕರ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಮಧ್ಯಾಹ್ನ 3-00  ಗಂಟೆ ಸುಮಾರಿಗೆ  ನಾನು, ಅಹ್ಮದ, ಮತ್ತು ವಸೀಮ ತಂದೆ ಭುರಾಕ್ ಮುಜಾವರ ಸಾ: ಅಕ್ಕಲಕೋಟರವರು ಕೂಡಿಕೊಂಡು  ಅಕ್ಕಲಕೋಟಕ್ಕೆ ಹೋಗುವಾಗ ಅಹ್ಮದ ಮುಜಾವರ ಇತನು ಮೋಟಾರ ಸೈಕಲ್ ನಡೆಸುತ್ತಿದ್ದ ನಾನು ಮತ್ತು ವಸೀಮ ಮುಜಾವರ ಇಬ್ಬರೂ ಹಿಂದೆ ಕುಳಿತ್ತಿದ್ದೆವು. ಸರಸಂಬಾ ಹೀರೊಳ್ಳಿ ಮೇನ್ ರೊಡ್ ಕ್ರಾಸ್ ಸಮೀಪದ  ರಸ್ತೆಯಲ್ಲಿ ಅಹ್ಮದ್ ಇತನು ಮೊಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಮೋಟಾರ ಸೈಕಲ್  ಸ್ಕೀಡ್  ಮಾಡಿದನು. ಇದರಿಂದ ನಾವು ಮೂರು ಜನರು ಕೇಳಗೆ ಬಿದ್ದಿರುತ್ತವೆ ಅಹ್ಮದ ತಂದೆ ಲಿಯಾಖತ ಮುಜಾವರ ಇತನಿಗೆ ತಲೆಗೆ ಬೆನ್ನಿಗೆ,  ಕಾಲಿಗೆ ಕೈಗೆ ಬಾರಿ ಪೇಟ್ಟಾಗಿ ಕಿವಿಯಿಂದ ಮತ್ತು ಬಾಯಿಯಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ವಸೀಮ ಮುಜಾವರ ಇವನಿಗೆ ಸಾದಾ ಮತ್ತು ಭಾರಿ ಗುಪ್ತಗಾಯ ಮತ್ತು ರಕ್ತ ಗಾಯವಾಗಿರುತ್ತವೆ. ಅಪಘಾತವಾದಾಗ ಯಾರೋ ಒಬ್ಬರೂ ಬಂದು ನಮಗೆ ನೀರು ಹಾಕಿರುತ್ತಾರೆ ಮತ್ತು ಜನರೆ ಸೇರಿಕೊಂಡು  ಅಂಬುಲೇನ್ಸದಲ್ಲಿ ಹಾಕಿ ಉಪಚಾರಕ್ಕೆ ಆಸ್ಪತ್ರೆಗೆ ಕಳಿಸಿರುತ್ತಾರೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012  ಕಲಂ 279, 337, 338 304 [ಎ]  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸಿಮೇ ಎಣ್ಣೆ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಆರೋಪಿ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ  ಟಂ.ಟಂ.ವಾಹನ ಸಂಖ್ಯೆ:ಕೆಎ-32 ಎ-3057 ನೇದ್ದರ ಚಾಲಕ ರಾಜಶೇಖರ ಗೋಣಗಿ ಮು:ಬೆಡಸೂರ ತಾ:ಚಿತ್ತಾಪೂರ ಇತನು ತನ್ನ ಟಂ.ಟಂ ದಲ್ಲಿ ಅಂದಾಜು 50 ಕಿಲೋ ತೂಕದ ಎರಡು ಸಕ್ಕರೆ ಚೀಲಗಳು ಅಃಕಿಃ 4000/- ರೂ. ಮತ್ತು ಸುಮಾರು 50 ಲೀಟರದ ಒಂದು ಪ್ಲಾಸ್ಟೀಕ್ ಕ್ಯಾನ, ಮತ್ತು 30 ಲೀಟರದ ಒಂದು ಪ್ಲಾಸ್ಟಿಕ್ ಕ್ಯಾನ್ ಮತ್ತು 20 ಲೀಟರ್ ದ ಮೂರು ಟಿನ್ ಡಬ್ಬಿಗಳು ಹೀಗೆ ಒಟ್ಟು 140 ಲೀಟರ್ ಅಃಕಿಃ 2660/- ರೂ ಮೌಲ್ಯದ ಸಿಮೇ ಎಣ್ಣೆಯನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ  ಶ್ರೀ ಶರಣಬಸಪ್ಪ ತಂದೆ ರಾಮಚಂದ್ರಪ್ಪ ನಾಮದಿ ಸಾ||ಗೋಗಿ {ಕೆ} ತಾಜಿ:ಗುಲಬರ್ಗಾರವರು ಮತ್ತು ಇತರರು ಕೂಡಿಕೊಂಡು ಹಿಡಿದು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಠಾಣೆ ಗುನ್ನೆ  ನಂ: 108/2012 ಕಲಂ 3 &4 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ನೀಲಕಂಠಪ್ಪಾ ತಂದೆ ಮುರಗೆಪ್ಪಾ ಬೆಡಸೂರ ಸಾಃ ಗೋಗಿ {ಕೆ} ತಾ;ಜಿ:ಗುಲಬರ್ಗಾರವರು ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ ಬಸವರಾಜ ತಂದೆ ಸಿದ್ದಣ್ಣಾ ರಾಣಾಪೂರ ಇತನು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/12 ಕಲಂ. 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಆಬೀದ ಹುಸೇನ ತಂದೆ  ಖಾಜಾ ಹುಸೇನ ಮಿಣಜಗಿ ಸಾ|| ಎಮ.ಎಸ.ಕೆ.ಮಿಲ್ಲ ಹತ್ತಿರ ಮದಿನಾ ಕಾಲೋನಿ ಗುಲಬರ್ಗಾ ರವರು ದಿನಾಂಕ:13-10-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಡಾನ ನಂ: ಕೆಎ 36 ಕೆ 3656 ನೇದ್ದರ ಮೇಲೆ ಹೀರಾಪೂರದಿಂದ ಮದಿನಾ ಕಾಲೋನಿ ಎಮ.ಎಸ.ಕೆ.ಮಿಲ್ಲ  ಕಡೆಗೆ ಬರುತ್ತಿರುವಾಗ ಜಾಮಿಯಾ ಮಜೀದ ಹತ್ತಿರ  ಹೀರಾಪೂರ ರಿಂಗ ರೋಡ ಕಡೆಯಿಂದ ಹೀರೊ ಹೊಂಡಾ ಸ್ಪ್ಲೆಂಡರ  ನಂ ಕೆಎ 32 ಕೆ-7833 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಮುಖಕ್ಕೆ ಭಾರಿಗಾಯಗೊಳಿಸಿ ,ಬಾಯಿಂದ ರಕ್ತಬಂದಿದ್ದು ಮತ್ತು ತುಟಿಯ ಮೇಲೆ ರಕ್ತಗಾಯವಾಗಿದ್ದು  ಸದರಿ ಮೋಟಾರ ಸೈಕಲ್ ಸವಾರನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279,  338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ,  ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅಮೃತರಾವ ತಂದೆ ಈಶ್ವರಪ್ಪ ಶೇಷಗಿರಿ ಸಾ|| ಮನೆ ನಂ. 9-567 ಶೇಖ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿ ಶಾಂತಾಬಾಯಿ ಹೆಸರಿನಲ್ಲಿ 1974 ರಲ್ಲಿ ರಾಣೋಜಿ ಗೌಳಿ ಇವರ ಕಡೆಯಿಂದ ಜಾಫರಾಬಾದ ಸೀಮೆಯಲ್ಲಿ ಬರುವ ಸರ್ವೇ ನಂ.12/2 7 ಎಕರೆ ಜಮೀನು ಖರೀದಿಸಿದ್ದು, ಸದರಿ ಜಾಗೆಯಲ್ಲಿ 1991-92 ನೇ ಸಾಲಿನಲ್ಲಿ ನಾವೇ ನಕಾಶೆ ತಯಾರಿಸಿ 176 ಪ್ಲಾಟಗಳು ಹಾಕಿರುತ್ತೇವೆ. ಅವುಗಳಲ್ಲಿ 38 ಪ್ಲಾಟುಗಳು ಮಾರಾಟ ಮಾಡಿ ನೋಟರಿ ಸೇಲ ಡೀಡ್ ಮಾಡಿ ಕೊಟ್ಟಿರುತ್ತೇವೆ. ದಿನಾಂಕ 20-10-1992 ರಿಂದ ದಿನಾಂಕ 12-03-2012 ರ ಅವಧಿಯಲ್ಲಿ ಪರಶುರಾಮ ಸಾ: ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ರಾಮಬಾಯಿ ಗಂಡ ಪರಶುರಾಮ ಸಾ||ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ಶಿವಶರಣಪ್ಪ ತಂದೆ ಸೋಮಪ್ಪ ಸಾ:ಬಡದಾಳ, ರಾಜಶೇಖರ ತಂದೆ ಧರ್ಮರಾಯ ಡಿಗ್ಗಶೆಟ್ಟಿ,ನಿಸ್ಸಾರ ಅಹ್ಮದ ತಂದೆ ಹುಸೇನಖಾನ ಸಾ: ಶೇಖ ರೋಜಾ ಗುಲಬರ್ಗಾ,ಶಿವಾಜಿರಾವ ತಂದೆ ಚಂದಪ್ಪ ಸಿಂಧೇ ಸಾ: ಗುಲಬರ್ಗಾ,ರಾಮಚಂದ್ರ ತಂದೆ  ಕಲ್ಯಾಣಿ ದಂಡಿನಕರ, ಜಗದೇವಪ್ಪ ತಂದೆ ರಾಚೋಟಪ್ಪ ಬಿರಾದಾರ ಸಾ:ಗುಲಬರ್ಗಾ ರವರು ಕೂಡಿಕೊಂಡು ಪ್ಲಾಟ ನಂ.11 ಮತ್ತು 12 ಮತ್ತು ಪ್ಲಾಟ ನಂ. 53 ಮತ್ತು 54 ನೇದ್ದವುಗಳು ನನ್ನ ಹೆಂಡತಿ ಶಾಂತಾಬಾಯಿ ಇವರ ಕಡೆಯಿಂದ ಖರೀದಿಸಿದಂತೆ ನಕಲಿ  ಸಹಿ ಮಾಡಿ ಸುಳ್ಳು (ಖೊಟಿ) ದಾಖಲಾತಿ ತಯಾರಿಸಿ ಮೋಸ ಮತ್ತು ವಂಚನೆ ಮಾಡಿರುತ್ತಾರೆ.  ಅಲ್ಲದೇ ಪ್ಲಾಟ ನಂ. 1/ಬಿ ಮತ್ತು 2/ಬಿ  ರಲ್ಲಿ ಪರಶುರಾಮ ಮತ್ತು ಪ್ಲಾಟ ನಂ:25 ಮತ್ತು 5 ರಲ್ಲಿ ನಿಸ್ಸಾರ ಅಹ್ಮದ ಅತೀಕ್ರಮ ಪ್ರವೇಶ ಮಾಡಿ ಟೆಂಟ ಮತ್ತು ಗೋಡೆ ಕಟ್ಟಿದ್ದರಿಂದ ನಾವು  ಕೇಳಿದಕ್ಕೆ ದಿನಾಂಕ 14-10-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮಗೆ ಪರಶುರಾಮ ಮತ್ತು ನಿಸ್ಸಾರ ಅಹ್ಮದ ಅವಾಚ್ಯ ಶಬ್ದಗಳಿಂದ ಬೈದು ಮುಂದೆ ಪ್ಲಾಟಿನಲ್ಲಿ ಬಂದರೆ ಜೀವ ಹೊಡೆಯುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:330/2012  ಕಲಂ 143,465,467,468,471,420,447,504,506,ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.