ಅಪಘಾತ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ: ಶ್ರೀ ಆಬೀದ ಹುಸೇನ ತಂದೆ ಖಾಜಾ ಹುಸೇನ ಮಿಣಜಗಿ ಸಾ|| ಎಮ.ಎಸ.ಕೆ.ಮಿಲ್ಲ ಹತ್ತಿರ
ಮದಿನಾ ಕಾಲೋನಿ ಗುಲಬರ್ಗಾ ರವರು ದಿನಾಂಕ:13-10-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು
ನನ್ನ ಹಿರೋ ಹೊಂಡಾ ಡಾನ ನಂ: ಕೆಎ 36 ಕೆ 3656 ನೇದ್ದರ ಮೇಲೆ ಹೀರಾಪೂರದಿಂದ ಮದಿನಾ ಕಾಲೋನಿ
ಎಮ.ಎಸ.ಕೆ.ಮಿಲ್ಲ ಕಡೆಗೆ ಬರುತ್ತಿರುವಾಗ ಜಾಮಿಯಾ
ಮಜೀದ ಹತ್ತಿರ ಹೀರಾಪೂರ ರಿಂಗ ರೋಡ ಕಡೆಯಿಂದ ಹೀರೊ ಹೊಂಡಾ ಸ್ಪ್ಲೆಂಡರ ನಂ ಕೆಎ 32 ಕೆ-7833 ನೇದ್ದರ
ಸವಾರ ತನ್ನ ಮೋಟಾರ ಸೈಕಲನ್ನು
ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಮುಖಕ್ಕೆ ಭಾರಿಗಾಯಗೊಳಿಸಿ ,ಬಾಯಿಂದ ರಕ್ತಬಂದಿದ್ದು ಮತ್ತು ತುಟಿಯ ಮೇಲೆ ರಕ್ತಗಾಯವಾಗಿದ್ದು ಸದರಿ ಮೋಟಾರ ಸೈಕಲ್ ಸವಾರನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279,
338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಮೋಸ,
ಹಲ್ಲೆ ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ: ಶ್ರೀ ಅಮೃತರಾವ
ತಂದೆ ಈಶ್ವರಪ್ಪ ಶೇಷಗಿರಿ ಸಾ|| ಮನೆ ನಂ. 9-567 ಶೇಖ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿ ಶಾಂತಾಬಾಯಿ
ಹೆಸರಿನಲ್ಲಿ 1974 ರಲ್ಲಿ ರಾಣೋಜಿ ಗೌಳಿ ಇವರ ಕಡೆಯಿಂದ ಜಾಫರಾಬಾದ ಸೀಮೆಯಲ್ಲಿ ಬರುವ ಸರ್ವೇ ನಂ.12/2
7 ಎಕರೆ ಜಮೀನು ಖರೀದಿಸಿದ್ದು,
ಸದರಿ ಜಾಗೆಯಲ್ಲಿ
1991-92 ನೇ ಸಾಲಿನಲ್ಲಿ ನಾವೇ ನಕಾಶೆ ತಯಾರಿಸಿ 176 ಪ್ಲಾಟಗಳು ಹಾಕಿರುತ್ತೇವೆ. ಅವುಗಳಲ್ಲಿ 38
ಪ್ಲಾಟುಗಳು ಮಾರಾಟ ಮಾಡಿ ನೋಟರಿ ಸೇಲ ಡೀಡ್ ಮಾಡಿ ಕೊಟ್ಟಿರುತ್ತೇವೆ. ದಿನಾಂಕ 20-10-1992 ರಿಂದ
ದಿನಾಂಕ 12-03-2012 ರ ಅವಧಿಯಲ್ಲಿ ಪರಶುರಾಮ ಸಾ: ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ರಾಮಬಾಯಿ
ಗಂಡ ಪರಶುರಾಮ ಸಾ||ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ಶಿವಶರಣಪ್ಪ ತಂದೆ ಸೋಮಪ್ಪ ಸಾ:ಬಡದಾಳ,
ರಾಜಶೇಖರ ತಂದೆ ಧರ್ಮರಾಯ ಡಿಗ್ಗಶೆಟ್ಟಿ,ನಿಸ್ಸಾರ ಅಹ್ಮದ ತಂದೆ ಹುಸೇನಖಾನ ಸಾ: ಶೇಖ ರೋಜಾ ಗುಲಬರ್ಗಾ,ಶಿವಾಜಿರಾವ
ತಂದೆ ಚಂದಪ್ಪ ಸಿಂಧೇ ಸಾ: ಗುಲಬರ್ಗಾ,ರಾಮಚಂದ್ರ ತಂದೆ
ಕಲ್ಯಾಣಿ ದಂಡಿನಕರ, ಜಗದೇವಪ್ಪ ತಂದೆ ರಾಚೋಟಪ್ಪ ಬಿರಾದಾರ ಸಾ:ಗುಲಬರ್ಗಾ ರವರು ಕೂಡಿಕೊಂಡು
ಪ್ಲಾಟ ನಂ.11 ಮತ್ತು 12 ಮತ್ತು ಪ್ಲಾಟ ನಂ. 53 ಮತ್ತು 54 ನೇದ್ದವುಗಳು ನನ್ನ ಹೆಂಡತಿ ಶಾಂತಾಬಾಯಿ
ಇವರ ಕಡೆಯಿಂದ ಖರೀದಿಸಿದಂತೆ ನಕಲಿ ಸಹಿ ಮಾಡಿ ಸುಳ್ಳು
(ಖೊಟಿ) ದಾಖಲಾತಿ ತಯಾರಿಸಿ ಮೋಸ ಮತ್ತು ವಂಚನೆ ಮಾಡಿರುತ್ತಾರೆ. ಅಲ್ಲದೇ ಪ್ಲಾಟ ನಂ. 1/ಬಿ ಮತ್ತು 2/ಬಿ ರಲ್ಲಿ ಪರಶುರಾಮ ಮತ್ತು ಪ್ಲಾಟ ನಂ:25 ಮತ್ತು 5 ರಲ್ಲಿ
ನಿಸ್ಸಾರ ಅಹ್ಮದ ಅತೀಕ್ರಮ ಪ್ರವೇಶ ಮಾಡಿ ಟೆಂಟ ಮತ್ತು ಗೋಡೆ ಕಟ್ಟಿದ್ದರಿಂದ ನಾವು ಕೇಳಿದಕ್ಕೆ ದಿನಾಂಕ 14-10-2012 ರಂದು ಮಧ್ಯಾಹ್ನ 2-00
ಗಂಟೆ ಸುಮಾರಿಗೆ ನಮಗೆ ಪರಶುರಾಮ ಮತ್ತು ನಿಸ್ಸಾರ ಅಹ್ಮದ ಅವಾಚ್ಯ ಶಬ್ದಗಳಿಂದ ಬೈದು ಮುಂದೆ ಪ್ಲಾಟಿನಲ್ಲಿ
ಬಂದರೆ ಜೀವ ಹೊಡೆಯುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:330/2012 ಕಲಂ 143,465,467,468,471,420,447,504,506,ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment