POLICE BHAVAN KALABURAGI

POLICE BHAVAN KALABURAGI

02 October 2012

GULBARGA DISTRICT REPORTED CRIMES


ಗಾಂಜಾ ಜಪ್ತಿ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:01-10-2012 ರಂದು 16-10 ಗಂಟೆಗೆ ಬಿ.ಬಿ. ಭಜಂತ್ರಿ ಪೊಲೀ್ಸ ಇನ್ಸಪೇಕ್ಟರ ರವರು ಮತ್ತು ಅವರ ಸಿಬ್ಬಂದಿಯವರಾದ ಎಂ.ಬಿ ಗೋರಾವನಕೊಳ್ಳ ಪಿ.ಎಸ್.ಐ (ಕಾಸು), ಶ್ರೀಮತಿ ನಾಗುಬಾಯಿ ಎ.ಎಸ್.ಐ, ಸಿಬ್ಬಂದಿಯವರಾದ ಮರೆಪ್ಪಾ,ವಿಶ್ವನಾಥ,ಶಿವಾನಂದ,ಗೋಪಾಲ,ಮಹಾಂತೇಶ,ಸವಿತಾ ಪಿಸಿ ರವರು ಮತ್ತು ಮಾನ್ಯ ತಹಶಿಲ್ದಾರರು ಸೇರಿಕೊಂಡು ಅಯ್ಯರವಾಡಿಯಲ್ಲಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ,  ಶಿವಮ್ಮ ಗಂಡ ಅಣ್ಣಾರಾವ ಕರಿಗೌಡರ ಸಾಃ ಅಯ್ಯರವಾಡಿ ಗುಲಬರ್ಗಾ, ವಿಜಯಕುಮಾರ ತಂದೆ ವಿಠಲ್ ರಾವ ಪವಾರ ಸಾ|| ನೇತಾಜಿ ಚೌಕ ಗುಲಬರ್ಗಾ, ಚಂದ್ರಕಾಂತ ತಂದೆ ಶರಣಪ್ಪ ಪರೀಟ ಸಾಃ ಆಲೂರ ತಾ|| ಆಳಂದ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  1.20 ಕೆ.ಜಿ ಗಾಂಜಾ ಅಃಕಿಃ 4900/-ರೂ. ನಗದು ಹಣ 160/- ರೂ. ಹಾಗು ಒಂದು ನೊಕಿಯಾ ಮೊಬೈಲ ಅಃಕಿಃ 300/- ರೂ. ಜಪ್ತಿ ಮಾಡಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:161/2012 ಕಲಂ 20 (ಬಿ) ಎನ್.ಡಿ.ಪಿ.ಎಸ್. ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
ಕೊಲೆ ಪ್ರಕರಣ:
ಮಿರಿಯಾಣ ಪೊಲೀಸ್ ಠಾಣೆ :ಶ್ರೀಮತಿ ವಿದ್ಯಾವತಿ ಗಂಡ ರಾಮಚಂದ್ರ ಸಾ|| ಭಕ್ತಂಪಳ್ಳಿ ರವರು ನಾನು ನನ್ನ ತಮ್ಮ ರೇವಣಸಿದ್ದಪ್ಪಾ ಮತ್ತು  ಸಮ್ಮವ್ವ ನಾವುಗಳು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನನಗೆ ಪರಮೇಶ್ವರ ಮತ್ತು ರೇವಣಸಿದ್ದ ತಮ್ಮಂದಿರರು ಇರುತ್ತಾರೆ. ನಮ್ಮದೊಂದು ಗಡ್ಡಿಯ ಮೇಲೆ ಅರ್ಧಕ್ಕೆ ನಿಂತ ಮನೆಯ ಇದ್ದು ಅದಕ್ಕೆ ಹಚ್ಚಿದ ಬಾಗಿಲುಗಳು ಈಗ ಆರು ತಿಂಗಳ ಹಿಂದೆ ನಂದಪ್ಪ ಮತ್ತು ಇತರರು ಕೂಡಿಕೊಂಡು ಬಾಗಿಲುಗಳು ತೆಗೆದುಕೊಂಡು ಹೋಗಿದ್ದರು. ಆ ಕುರಿತು ಊರಿನಲ್ಲಿ ಪಂಚಾಯಿತಿ ಮಾಡಿಕೊಂಡಿರುತ್ತೇವೆ. ದಿನಾಂಕ:01-10-2012 ರಂದು ಸಾಯಂಕಾಲ ನೀರು ತರಲು ಹೋಗಿದ್ದಾಗ ನಂದಪ್ಪ ಅನ್ನುವವನು ಬಂದು ನ್ನನ ಕಾಲು ತುಳಿದನು. ನಾನು ಅವನಿಗೆ ನನ್ನ ಕಾಲು ಯ್ಯಾಕೆ ತುಳಿದಿದ್ದು ಅಂತಾ ತಕರಾರು ಮಾಡುತ್ತಿದ್ದನ್ನು ಕೇಳಿಸಿಕೊಂಡು ನನ್ನ ತಾಯಿ ಕೂಡ ಅಲ್ಲಿಗೆ ಬಂದಿದ್ದು ಜಗಳ ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಳು. ನಂತರ ತಿಪ್ಪಮ್ಮ ಗಂಡ ಶಿವಪ್ಪ, ಹಾಶಮ್ಮ ಗಂಡ ಸಾಬಣ್ಣ, ದೌಲಮ್ಮ ಗಂಡ ಗುಂಡಪ್ಪ, ಕಲ್ಲಮ್ಮ ಗಂಡ ಮಲ್ಲಪ್ಪ, ಅಂಬಮ್ಮ ತಂದೆ ಚಂದ್ರಪ್ಪ, ಹಾಶಮ್ಮ ಗಂಡ ಕಲ್ಲಪ್ಪ, ನಾಗಮ್ಮ ಗಂಡ ಮಾರುತಿ, ಲಕ್ಷ್ಮಿ ಗಂಡ ರವಿ, ಮಂಜುಳಾ ಗಂಡ ಜಗಪ್ಪ, ಲಕ್ಷ್ಮಿ ಗಂಡ ಜಗಪ್ಪ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯಲ್ಲಿ ಬಂದು  ನಂದಪ್ಪನೊಂದಿಗೆ ಜಗಳ ತೆಗೆಯುತ್ತಿರಿ ಅಂತಾ ಅವಾಚ್ಯವಾಗಿ ಬೈದು ನನಗೆ ಮತ್ತು ನನ್ನ ತಾಯಿ ಸಮ್ಮವ್ವ ಇಬ್ಬರಿಗೆ ಎಲ್ಲರೂ ಕೂಡಿ ಕೈಯಿಂದ ಹೊಡೆ ಬಡಿ ಮಾಡಿದರು. ನನ್ನ ತಮ್ಮ ರೇವಣಸಿದ್ದನಿಗೆ ಇತನಿಗೆ ಮಾರುತಿ ಮನೆಯ ಮುಂದೆ ಎಲ್ಲರೂ ಕೂಡಿಕೊಂಡು ಜಗಳ ತೆಗೆದಿದ್ದನ್ನು ನೋಡಿ ನಾನು ನನ್ನ ತಾಯಿ ಸಮ್ಮವ್ವ, ಮಗಳು ಭಾಗ್ಯಲಕ್ಷ್ಮಿ ಮೂವರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ರೇವಣಸಿದ್ದನಿಗೆ ನಂದಪ್ಪ ತಂದೆ ಮಲ್ಲಪ್ಪ, ಪ್ರಕಾಶ ತಂದೆ ಕಲ್ಲಪ್ಪ, ರಾಜಪ್ಪ ತಂದೆ ಕಲ್ಲಪ್ಪ, ಚಂದ್ರಪ್ಪ ಹಯ್ಯಾಳ, ಮಾರುತಿ ತಂದೆ ರಾಮಣ್ಣ, ಜಗಪ್ಪ ತಂದೆ ಬಕ್ಕಪ್ಪ, ರವಿ ತಂದೆ ಬಕ್ಕಪ್ಪ, ಜಗಪ್ಪ ತಂದೆ ಸಂಬಯ್ಯ, ರಾಜಪ್ಪ ತಂದೆ ಶಿವಪ್ಪ, ಭೀಮಶ್ಯಾ ತಂದೆ ರಾಮಣ್ಣ, ರಾಜಪ್ಪ ತಂದೆ ಸಂಬಣ್ಣ, ಜಗಪ್ಪ ತಂದೆ ಭೀಮಶ್ಯಾ, ಭೀಮಶ್ಯಾ ತಂದೆ ಶರಣಪ್ಪ, ನಾಗಪ್ಪ ತಂದೆ ಬಕ್ಕಪ್ಪ ಇವರೆಲ್ಲರೂ ಕೂಡಿ ಸುತ್ತುಗಟ್ಟಿ ನನ್ನ ತಮ್ಮ ರೇವಣಸಿದ್ದನಿಗೆ ಕೈಯಿಂದ ಹೊಡೆದು ಕಾಲಿನಿಂದ ಒದೆಯುತ್ತಿದ್ದರು. ಪ್ರಕಾಶ ಇತನು ಕೊಡಲಿಯಿಂದ ರೇವಣಸಿದ್ದನ ಹಣೆಯ ಮೇಲೆ ಹೊಡೆದು ರಕ್ತ ಗಾಯ ಮಾಡಿದನು. ಆಗ ಜಗಪ್ಪನು ಕಟ್ಟಿಗೆಯಿಂದ ರೇವಣಸಿದ್ದನ ಗದ್ದಕ್ಕೆ ಬಲಕಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತ ಗಾಯ ಮಾಡಿದನು. ಆಗ ರಾಜಪ್ಪನು ಬಡಿಗೆಯಿಂದ ಎಡಗೈ ಮೊಳಕೈ ಹತ್ತಿರ ಜೋರಾಗಿ ಹೊಡೆದಾಗ ರೇವಣಸಿದ್ದನು ಕುಸಿದು ಕೆಳಗೆ ಬಿದ್ದನು. ಆಗ ನಂದಪ್ಪ ತಂದೆ ಮಲ್ಲಪ್ಪ ಇತನು ಅಲ್ಲೆ ಇದ್ದ ದೊಡ್ಡ ಕಲ್ಲು ಎತ್ತಿ ರೇವಣಸಿದ್ದನ ತಲೆಯ ಮೇಲೆ ಹಾಕಿದನು. ಆಗ ನನ್ನ ತಮ್ಮ ರೇವಣಸಿದ್ದನ ತಲೆ ಒಡೆದು ಭಾರಿ ರಕ್ತ ಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ನನ್ನ ತಾಯಿ ಸಮ್ಮವ್ವ ಮತ್ತು ತಮ್ಮ ರೇವಣಸಿದ್ದನಿಗೆ ಹೊಡೆಬಡಿ ಮಾಡಿ ನನ್ನ ತಮ್ಮನಿಗೆ ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ:34/2012 ಕಲಂ, 143, 147, 148, 448, 323, 324, 504, 302 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

01 October 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಲಕ್ಷ್ಮಣ ತಂದೆ ನಾಗಪ್ಪ ವಠಾರ ವ|| 44, ಉ|| ಸರ್ಕಾರಿ ನೌಕರ, ಸಾ|| ಕೆರಿ ಭೋಸಗಾ ತಾ|| ಜಿ|| ಗುಲಬರ್ಗಾ ಹಾ||ವ|| ಜೆ.ಆರ್ ನಗರ ಅಳಂದ ರೋಡ ಗುಲಬರ್ಗಾ ರವರು ದಿನಾಂಕ 28-09-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನನ್ನ ಹೀರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-32/ಎಸ್-3502 ನೇದ್ದನ್ನು ನಿಲ್ಲಿಸಿರುತ್ತೆನೆ. ಬೆಳಿಗ್ಗೆ ಎದ್ದು ನೋಡಲು ನನ್ನ ಮೊಟಾರ್ ಸೈಕಲ್ ಇರಲ್ಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಮೊಟಾರ್ ಸೈಕಲ್ ಸಿಕ್ಕಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ರೇವೂರ ಪೊಲೀಸ್ ಠಾಣೆ:ಶ್ರೀ ಅಶೋಕ ತಂದೆ ಮಾಣಿಕ ದಾಡಿ ಸಾ:ಚಿಂಚನಸೂರ ಹಾವ:ಮುಂಬೈ ರವರು ನಾನು ದಿ:30/09/2012 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಬೈರಾಮಡಗಿ ಗ್ರಾಮದ  ದಾವಲಮಲಿಕ ದೇವರ ಜಾತ್ರೆ ಕಾರ್ಯಾಕ್ರಮದಲ್ಲಿ ಹರಿಜನ ಹೆಣ್ಣು ಮಕ್ಕಳು ದೇವರಿಗೆ ಅಡ್ಡ ಬಿಳುತ್ತಿರುವಾಗ ಗುರು ತಂದೆ ಬಸವರಾಜ ಪೊಲೀಸ್ ಪಾಟೀಲ್ ಇತನು ಜಾತಿ ಎತ್ತಿ ಬೈದು ಹೇಗೆ ಅಡ್ಡ ಬಿಳತಾರ ನೋಡು ಅಂತ ಅಂದಾಗ ನಾನು ಯಾಕೆ ಬೈಯುತ್ತಿದ್ದಿರಿ ಅಂತ ಕೇಳಿದ್ದಕ್ಕೆ, ಗುರು ತಂದೆ ಬಸವರಾಜ ಪೊಲೀಸ್ ಪಾಟೀಲ್, ಶರಣಬಸಪ್ಪ ತಂದೆ ಗುರಲಿಂಗಪ್ಪ ಕಲಬುರ್ಗಿ,ಮೋದಿನ ತಂದೆ ಬಾವಾಸಾಬ ಕಾನಳ್ಳಿ, ಮಡಿವಾಳಪ್ಪ ತಂದೆ ಗಂಗಪ್ಪ ಖಂಡೆಕರ, ಸೋಮುಗೌಡ ತಂದೆ ಬಸವರಾಜ ಪೊಲೀಸ್ ಪಾಟೀಲ, ಸಿದ್ದಲಿಂಗ ತಂದೆ ಪಂಡಿತ ಪೊಲೀಸ್ ಪಾಟೀಲ, ಬಸವರಾಜ ತಂದೆ ಗುರುಲಿಂಗಪ್ಪ ಪೊಲೀಸ್ ಪಾಟೀಲ, ಶರಣಪ್ಪ ಜಮದಿ ಇಬ್ಬರು ಇಕ್ಕಳಿಗೆ ಸೊಕ್ಕು ಬಹಳ ಬಂದಿದೆ, ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ಲಕ್ಷ್ಮಣ ತಂದೆ ಗುರಪ್ಪ ಅಳ್ಳಗಿ, ಮಹಾಂತಪ್ಪ ತಂದೆ ಶರಣಪ್ಪ ಸುತಾರ, ದತ್ತಪ್ಪ ತಂದೆ ಲಕ್ಷ್ಮಣ ಸಾಗರ, ಸಿದ್ದಾರಾಮ ತಂದೆ ಮಾಪಣ್ಣ ಸಾಗರ, ರವರು ಜಗಳ ಬಿಡಿಸಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 90/12 ಕಲಂ 143,147,341,323,324,504 ಸಂ 149 ಐ.ಪಿ.ಸಿ ಮತ್ತು 3 (1)  (10) ಎಸ್.ಸಿ ಎಸ್,.ಟಿ ಪಿ,ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

30 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಮಾಹಾದೇವಪ್ಪಾ ತಂದೆ ಶಿವರಾಯ ಸಂಕಾಲಿ ಸಾ: ಕುಮ್ಮನಶಿರಸಗಿ  ರವರು ನಮ್ಮ ತಾಯಿ ಮತ್ತು ನನ್ನ ತಂದೆಯವರು ದಿನಾಂಕ 09-09-2012 ರಂದು ಖೈನೂರ ಗ್ರಾಮದ ಸಂಬಂಧಿಕರ ಶವ ಸಂಸ್ಕಾರಕ್ಕೆ ಹೋಗಿ ಮರಳಿ ಊರಿಗೆ ಬರುವ ಕುರಿತು ಯತ್ನಾಳ ಕ್ರಾಸ್ ದಲ್ಲಿ ವಾಹನ ಕಾಯುತ್ತಾ ನಿಂತಾಗ ಜೀಪ ನಂ ಕೆಎ-32-ಎ-9596 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಾಯಿಯಾದ ಶಿವಮ್ಮ ಇವಳಿಗೆ ಡಿಕ್ಕಿ ಪಡಿಸಿದ್ದು, ತಲೆಗೆ ಭಾರಿ ಪೆಟ್ಟಾಗಿದ್ದು ಉಪಚಾರ ಕುರಿತು ಸೋಲಾಪೂರ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಲಾಗಿತ್ತು, ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ:29-09-2012 ರಂದು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಬಗ್ಗೆ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಸೋಮು ತಂದೆ ಧಾನು ಪವಾರ ಸಾ: ಜಮಖಂಡಿ ತಾಂಡಾ  ತಾ: ಜೇವರ್ಗಿ ವರು ನಾನು ಈಗ 2 ವರ್ಷಗಳ ಹಿಂದೆ ಜೈಶ್ರೀ ಇವಳೊಂದಿಗೆ ಮದುವೆಯಾಗಿದ್ದು ನನಗೆ ಒಂದು ವರ್ಷದ ಹೆಣ್ಣು ಮಗುವಿದೆ. ದಿನಾಂಕ:27-09-2012 ರಂದು ಗುರುವಾರ ಮುಂಜಾನೆ 11-00 ಗಂಟೆ ಸುಮಾರಿಗೆ ರೇಷನ್ ಕಾರ್ಡ ಫೋಟೊ ತಗೆಸುವ ಸಲುವಾಗಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಬಿಳವಾರ ಗ್ರಾಮಕ್ಕೆ ಹೋಗುವ ಕುರಿತು ಮನೆಯಿಂದ ಹೋರಗೆ ಬರುವಾಗ ನನ್ನ ಹೆಂಡತಿಯು ನೀನು ಮಗುವನ್ನು ತಗೆದುಕೊಂಡು ಬಸ್ ಸ್ಟ್ಯಾಂಡ್ ಕಡೆಗೆ ನಡೆ,ನಾನು ಹಿಂದಿನಿಂದ ಬರುತ್ತೆನೆ ಅಂತಾ ಹೇಳಿದಳು,ಅದರಂತೆ ನಾನು ನನ್ನ ಮಗಳನ್ನು ಎತ್ತಿಕೊಂಡು ನಮ್ಮೂರಿನ ಬಸ್ ನಿಲ್ದಾಣಕ್ಕೆ ಬಂದು ಕುಳಿತೆನು ಸುಮಾರು 2 ಗಂಟೆ ಕಳೆದರು, ನನ್ನ ಹೆಂಡತಿ ಬರದೆ ಇರುವದನ್ನು ಕಂಡು ನೋಡಿ ನಾನು ಮರಳಿ ಮನೆಗೆ ಬಂದು ನನ್ನ ಮಾವನಾದ ಶಾಂತಕುಮಾರ ಇತನಿಗೆ ವಿಚಾರಿಸಲು ಒಂದು ಗಂಟೆ ಹಿಂದೆ ನಿನ್ನ ಹೆಂಡತಿ ಬಿಳವಾರ ಸ್ವಾಮಿ ಜೀಪಿನಲ್ಲಿ ಶಾಹಾಪೂರ ಕಡೆಗೆ ಹೋಗಿರುತ್ತಾಳೆ ಅಂತಾ ಹೇಳಿದನು ನಾನು ನನ್ನ ಹೆಂಡತಿಯನ್ನು ಹುಡುಕಲು ನಾನು ನಮ್ಮೂರಿನಿಂದ ಬಿ. ಗುಡಿ ಹಾಗೂ ಶಾಹಾಪೂರಕ್ಕೆ ಹೋಗಿ ಹುಡುಕಿದರು ಸಿಕ್ಕಿರುವುದಿಲ್ಲಾ ನನ್ನ ಹೆಂಡತಿಯು ಎಲ್ಲಿ ಹೋಗಿರುತ್ತಾಳೆ ಅಂತಾ ಗೋತ್ತಾಗಿರುವದಿಲ್ಲ. ಕಾಣೆಯಾದ ನನ್ನ ಹೆಂಡತಿಯ ವಿವರ: ಎತ್ತರ: 4 ಪೀಟ 6 ಇಂಚು,  ಸಾದರಣ ಮೈಕಟ್ಟು,ಕೆಂಪು ಬಣ್ಣ, ಹಸಿರು ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ಕುಪ್ಪಸ ತೋಟ್ಟಿರುತ್ತಾಳೆ ಸದರಿಯವಳು ಕನ್ನಡ, ಹಿಂದಿ, ಲಂಬಾಣಿ, ಮರಾಠಿ ಭಾಷೆ ಬಲ್ಲವಳಾಗಿರುತ್ತಾಲೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ ಮಹಿಳೆ ಕಾಣೆಯಾದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಯಡ್ರಾಮಿ ಪೊಲೀಸ ಠಾಣೆ ದೂರವಾಣಿ ಸಂ:08442-226233 ನೇದ್ದಕ್ಕೆ ಅಥವಾ ಕಂಟ್ರೋಲ್ ರೂಮ್ ದೂರವಾಣೆ ಸಂ: 08372-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.