POLICE BHAVAN KALABURAGI

POLICE BHAVAN KALABURAGI

30 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಮಾಹಾದೇವಪ್ಪಾ ತಂದೆ ಶಿವರಾಯ ಸಂಕಾಲಿ ಸಾ: ಕುಮ್ಮನಶಿರಸಗಿ  ರವರು ನಮ್ಮ ತಾಯಿ ಮತ್ತು ನನ್ನ ತಂದೆಯವರು ದಿನಾಂಕ 09-09-2012 ರಂದು ಖೈನೂರ ಗ್ರಾಮದ ಸಂಬಂಧಿಕರ ಶವ ಸಂಸ್ಕಾರಕ್ಕೆ ಹೋಗಿ ಮರಳಿ ಊರಿಗೆ ಬರುವ ಕುರಿತು ಯತ್ನಾಳ ಕ್ರಾಸ್ ದಲ್ಲಿ ವಾಹನ ಕಾಯುತ್ತಾ ನಿಂತಾಗ ಜೀಪ ನಂ ಕೆಎ-32-ಎ-9596 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಾಯಿಯಾದ ಶಿವಮ್ಮ ಇವಳಿಗೆ ಡಿಕ್ಕಿ ಪಡಿಸಿದ್ದು, ತಲೆಗೆ ಭಾರಿ ಪೆಟ್ಟಾಗಿದ್ದು ಉಪಚಾರ ಕುರಿತು ಸೋಲಾಪೂರ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಲಾಗಿತ್ತು, ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ:29-09-2012 ರಂದು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:104/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಬಗ್ಗೆ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಸೋಮು ತಂದೆ ಧಾನು ಪವಾರ ಸಾ: ಜಮಖಂಡಿ ತಾಂಡಾ  ತಾ: ಜೇವರ್ಗಿ ವರು ನಾನು ಈಗ 2 ವರ್ಷಗಳ ಹಿಂದೆ ಜೈಶ್ರೀ ಇವಳೊಂದಿಗೆ ಮದುವೆಯಾಗಿದ್ದು ನನಗೆ ಒಂದು ವರ್ಷದ ಹೆಣ್ಣು ಮಗುವಿದೆ. ದಿನಾಂಕ:27-09-2012 ರಂದು ಗುರುವಾರ ಮುಂಜಾನೆ 11-00 ಗಂಟೆ ಸುಮಾರಿಗೆ ರೇಷನ್ ಕಾರ್ಡ ಫೋಟೊ ತಗೆಸುವ ಸಲುವಾಗಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಬಿಳವಾರ ಗ್ರಾಮಕ್ಕೆ ಹೋಗುವ ಕುರಿತು ಮನೆಯಿಂದ ಹೋರಗೆ ಬರುವಾಗ ನನ್ನ ಹೆಂಡತಿಯು ನೀನು ಮಗುವನ್ನು ತಗೆದುಕೊಂಡು ಬಸ್ ಸ್ಟ್ಯಾಂಡ್ ಕಡೆಗೆ ನಡೆ,ನಾನು ಹಿಂದಿನಿಂದ ಬರುತ್ತೆನೆ ಅಂತಾ ಹೇಳಿದಳು,ಅದರಂತೆ ನಾನು ನನ್ನ ಮಗಳನ್ನು ಎತ್ತಿಕೊಂಡು ನಮ್ಮೂರಿನ ಬಸ್ ನಿಲ್ದಾಣಕ್ಕೆ ಬಂದು ಕುಳಿತೆನು ಸುಮಾರು 2 ಗಂಟೆ ಕಳೆದರು, ನನ್ನ ಹೆಂಡತಿ ಬರದೆ ಇರುವದನ್ನು ಕಂಡು ನೋಡಿ ನಾನು ಮರಳಿ ಮನೆಗೆ ಬಂದು ನನ್ನ ಮಾವನಾದ ಶಾಂತಕುಮಾರ ಇತನಿಗೆ ವಿಚಾರಿಸಲು ಒಂದು ಗಂಟೆ ಹಿಂದೆ ನಿನ್ನ ಹೆಂಡತಿ ಬಿಳವಾರ ಸ್ವಾಮಿ ಜೀಪಿನಲ್ಲಿ ಶಾಹಾಪೂರ ಕಡೆಗೆ ಹೋಗಿರುತ್ತಾಳೆ ಅಂತಾ ಹೇಳಿದನು ನಾನು ನನ್ನ ಹೆಂಡತಿಯನ್ನು ಹುಡುಕಲು ನಾನು ನಮ್ಮೂರಿನಿಂದ ಬಿ. ಗುಡಿ ಹಾಗೂ ಶಾಹಾಪೂರಕ್ಕೆ ಹೋಗಿ ಹುಡುಕಿದರು ಸಿಕ್ಕಿರುವುದಿಲ್ಲಾ ನನ್ನ ಹೆಂಡತಿಯು ಎಲ್ಲಿ ಹೋಗಿರುತ್ತಾಳೆ ಅಂತಾ ಗೋತ್ತಾಗಿರುವದಿಲ್ಲ. ಕಾಣೆಯಾದ ನನ್ನ ಹೆಂಡತಿಯ ವಿವರ: ಎತ್ತರ: 4 ಪೀಟ 6 ಇಂಚು,  ಸಾದರಣ ಮೈಕಟ್ಟು,ಕೆಂಪು ಬಣ್ಣ, ಹಸಿರು ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ಕುಪ್ಪಸ ತೋಟ್ಟಿರುತ್ತಾಳೆ ಸದರಿಯವಳು ಕನ್ನಡ, ಹಿಂದಿ, ಲಂಬಾಣಿ, ಮರಾಠಿ ಭಾಷೆ ಬಲ್ಲವಳಾಗಿರುತ್ತಾಲೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ ಮಹಿಳೆ ಕಾಣೆಯಾದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಯಡ್ರಾಮಿ ಪೊಲೀಸ ಠಾಣೆ ದೂರವಾಣಿ ಸಂ:08442-226233 ನೇದ್ದಕ್ಕೆ ಅಥವಾ ಕಂಟ್ರೋಲ್ ರೂಮ್ ದೂರವಾಣೆ ಸಂ: 08372-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

No comments: