POLICE BHAVAN KALABURAGI

POLICE BHAVAN KALABURAGI

02 October 2012

GULBARGA DISTRICT REPORTED CRIMES


ಗಾಂಜಾ ಜಪ್ತಿ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:01-10-2012 ರಂದು 16-10 ಗಂಟೆಗೆ ಬಿ.ಬಿ. ಭಜಂತ್ರಿ ಪೊಲೀ್ಸ ಇನ್ಸಪೇಕ್ಟರ ರವರು ಮತ್ತು ಅವರ ಸಿಬ್ಬಂದಿಯವರಾದ ಎಂ.ಬಿ ಗೋರಾವನಕೊಳ್ಳ ಪಿ.ಎಸ್.ಐ (ಕಾಸು), ಶ್ರೀಮತಿ ನಾಗುಬಾಯಿ ಎ.ಎಸ್.ಐ, ಸಿಬ್ಬಂದಿಯವರಾದ ಮರೆಪ್ಪಾ,ವಿಶ್ವನಾಥ,ಶಿವಾನಂದ,ಗೋಪಾಲ,ಮಹಾಂತೇಶ,ಸವಿತಾ ಪಿಸಿ ರವರು ಮತ್ತು ಮಾನ್ಯ ತಹಶಿಲ್ದಾರರು ಸೇರಿಕೊಂಡು ಅಯ್ಯರವಾಡಿಯಲ್ಲಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ,  ಶಿವಮ್ಮ ಗಂಡ ಅಣ್ಣಾರಾವ ಕರಿಗೌಡರ ಸಾಃ ಅಯ್ಯರವಾಡಿ ಗುಲಬರ್ಗಾ, ವಿಜಯಕುಮಾರ ತಂದೆ ವಿಠಲ್ ರಾವ ಪವಾರ ಸಾ|| ನೇತಾಜಿ ಚೌಕ ಗುಲಬರ್ಗಾ, ಚಂದ್ರಕಾಂತ ತಂದೆ ಶರಣಪ್ಪ ಪರೀಟ ಸಾಃ ಆಲೂರ ತಾ|| ಆಳಂದ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  1.20 ಕೆ.ಜಿ ಗಾಂಜಾ ಅಃಕಿಃ 4900/-ರೂ. ನಗದು ಹಣ 160/- ರೂ. ಹಾಗು ಒಂದು ನೊಕಿಯಾ ಮೊಬೈಲ ಅಃಕಿಃ 300/- ರೂ. ಜಪ್ತಿ ಮಾಡಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:161/2012 ಕಲಂ 20 (ಬಿ) ಎನ್.ಡಿ.ಪಿ.ಎಸ್. ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
ಕೊಲೆ ಪ್ರಕರಣ:
ಮಿರಿಯಾಣ ಪೊಲೀಸ್ ಠಾಣೆ :ಶ್ರೀಮತಿ ವಿದ್ಯಾವತಿ ಗಂಡ ರಾಮಚಂದ್ರ ಸಾ|| ಭಕ್ತಂಪಳ್ಳಿ ರವರು ನಾನು ನನ್ನ ತಮ್ಮ ರೇವಣಸಿದ್ದಪ್ಪಾ ಮತ್ತು  ಸಮ್ಮವ್ವ ನಾವುಗಳು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನನಗೆ ಪರಮೇಶ್ವರ ಮತ್ತು ರೇವಣಸಿದ್ದ ತಮ್ಮಂದಿರರು ಇರುತ್ತಾರೆ. ನಮ್ಮದೊಂದು ಗಡ್ಡಿಯ ಮೇಲೆ ಅರ್ಧಕ್ಕೆ ನಿಂತ ಮನೆಯ ಇದ್ದು ಅದಕ್ಕೆ ಹಚ್ಚಿದ ಬಾಗಿಲುಗಳು ಈಗ ಆರು ತಿಂಗಳ ಹಿಂದೆ ನಂದಪ್ಪ ಮತ್ತು ಇತರರು ಕೂಡಿಕೊಂಡು ಬಾಗಿಲುಗಳು ತೆಗೆದುಕೊಂಡು ಹೋಗಿದ್ದರು. ಆ ಕುರಿತು ಊರಿನಲ್ಲಿ ಪಂಚಾಯಿತಿ ಮಾಡಿಕೊಂಡಿರುತ್ತೇವೆ. ದಿನಾಂಕ:01-10-2012 ರಂದು ಸಾಯಂಕಾಲ ನೀರು ತರಲು ಹೋಗಿದ್ದಾಗ ನಂದಪ್ಪ ಅನ್ನುವವನು ಬಂದು ನ್ನನ ಕಾಲು ತುಳಿದನು. ನಾನು ಅವನಿಗೆ ನನ್ನ ಕಾಲು ಯ್ಯಾಕೆ ತುಳಿದಿದ್ದು ಅಂತಾ ತಕರಾರು ಮಾಡುತ್ತಿದ್ದನ್ನು ಕೇಳಿಸಿಕೊಂಡು ನನ್ನ ತಾಯಿ ಕೂಡ ಅಲ್ಲಿಗೆ ಬಂದಿದ್ದು ಜಗಳ ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಳು. ನಂತರ ತಿಪ್ಪಮ್ಮ ಗಂಡ ಶಿವಪ್ಪ, ಹಾಶಮ್ಮ ಗಂಡ ಸಾಬಣ್ಣ, ದೌಲಮ್ಮ ಗಂಡ ಗುಂಡಪ್ಪ, ಕಲ್ಲಮ್ಮ ಗಂಡ ಮಲ್ಲಪ್ಪ, ಅಂಬಮ್ಮ ತಂದೆ ಚಂದ್ರಪ್ಪ, ಹಾಶಮ್ಮ ಗಂಡ ಕಲ್ಲಪ್ಪ, ನಾಗಮ್ಮ ಗಂಡ ಮಾರುತಿ, ಲಕ್ಷ್ಮಿ ಗಂಡ ರವಿ, ಮಂಜುಳಾ ಗಂಡ ಜಗಪ್ಪ, ಲಕ್ಷ್ಮಿ ಗಂಡ ಜಗಪ್ಪ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯಲ್ಲಿ ಬಂದು  ನಂದಪ್ಪನೊಂದಿಗೆ ಜಗಳ ತೆಗೆಯುತ್ತಿರಿ ಅಂತಾ ಅವಾಚ್ಯವಾಗಿ ಬೈದು ನನಗೆ ಮತ್ತು ನನ್ನ ತಾಯಿ ಸಮ್ಮವ್ವ ಇಬ್ಬರಿಗೆ ಎಲ್ಲರೂ ಕೂಡಿ ಕೈಯಿಂದ ಹೊಡೆ ಬಡಿ ಮಾಡಿದರು. ನನ್ನ ತಮ್ಮ ರೇವಣಸಿದ್ದನಿಗೆ ಇತನಿಗೆ ಮಾರುತಿ ಮನೆಯ ಮುಂದೆ ಎಲ್ಲರೂ ಕೂಡಿಕೊಂಡು ಜಗಳ ತೆಗೆದಿದ್ದನ್ನು ನೋಡಿ ನಾನು ನನ್ನ ತಾಯಿ ಸಮ್ಮವ್ವ, ಮಗಳು ಭಾಗ್ಯಲಕ್ಷ್ಮಿ ಮೂವರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ರೇವಣಸಿದ್ದನಿಗೆ ನಂದಪ್ಪ ತಂದೆ ಮಲ್ಲಪ್ಪ, ಪ್ರಕಾಶ ತಂದೆ ಕಲ್ಲಪ್ಪ, ರಾಜಪ್ಪ ತಂದೆ ಕಲ್ಲಪ್ಪ, ಚಂದ್ರಪ್ಪ ಹಯ್ಯಾಳ, ಮಾರುತಿ ತಂದೆ ರಾಮಣ್ಣ, ಜಗಪ್ಪ ತಂದೆ ಬಕ್ಕಪ್ಪ, ರವಿ ತಂದೆ ಬಕ್ಕಪ್ಪ, ಜಗಪ್ಪ ತಂದೆ ಸಂಬಯ್ಯ, ರಾಜಪ್ಪ ತಂದೆ ಶಿವಪ್ಪ, ಭೀಮಶ್ಯಾ ತಂದೆ ರಾಮಣ್ಣ, ರಾಜಪ್ಪ ತಂದೆ ಸಂಬಣ್ಣ, ಜಗಪ್ಪ ತಂದೆ ಭೀಮಶ್ಯಾ, ಭೀಮಶ್ಯಾ ತಂದೆ ಶರಣಪ್ಪ, ನಾಗಪ್ಪ ತಂದೆ ಬಕ್ಕಪ್ಪ ಇವರೆಲ್ಲರೂ ಕೂಡಿ ಸುತ್ತುಗಟ್ಟಿ ನನ್ನ ತಮ್ಮ ರೇವಣಸಿದ್ದನಿಗೆ ಕೈಯಿಂದ ಹೊಡೆದು ಕಾಲಿನಿಂದ ಒದೆಯುತ್ತಿದ್ದರು. ಪ್ರಕಾಶ ಇತನು ಕೊಡಲಿಯಿಂದ ರೇವಣಸಿದ್ದನ ಹಣೆಯ ಮೇಲೆ ಹೊಡೆದು ರಕ್ತ ಗಾಯ ಮಾಡಿದನು. ಆಗ ಜಗಪ್ಪನು ಕಟ್ಟಿಗೆಯಿಂದ ರೇವಣಸಿದ್ದನ ಗದ್ದಕ್ಕೆ ಬಲಕಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತ ಗಾಯ ಮಾಡಿದನು. ಆಗ ರಾಜಪ್ಪನು ಬಡಿಗೆಯಿಂದ ಎಡಗೈ ಮೊಳಕೈ ಹತ್ತಿರ ಜೋರಾಗಿ ಹೊಡೆದಾಗ ರೇವಣಸಿದ್ದನು ಕುಸಿದು ಕೆಳಗೆ ಬಿದ್ದನು. ಆಗ ನಂದಪ್ಪ ತಂದೆ ಮಲ್ಲಪ್ಪ ಇತನು ಅಲ್ಲೆ ಇದ್ದ ದೊಡ್ಡ ಕಲ್ಲು ಎತ್ತಿ ರೇವಣಸಿದ್ದನ ತಲೆಯ ಮೇಲೆ ಹಾಕಿದನು. ಆಗ ನನ್ನ ತಮ್ಮ ರೇವಣಸಿದ್ದನ ತಲೆ ಒಡೆದು ಭಾರಿ ರಕ್ತ ಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ನನ್ನ ತಾಯಿ ಸಮ್ಮವ್ವ ಮತ್ತು ತಮ್ಮ ರೇವಣಸಿದ್ದನಿಗೆ ಹೊಡೆಬಡಿ ಮಾಡಿ ನನ್ನ ತಮ್ಮನಿಗೆ ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ:34/2012 ಕಲಂ, 143, 147, 148, 448, 323, 324, 504, 302 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: