POLICE BHAVAN KALABURAGI

POLICE BHAVAN KALABURAGI

26 August 2012

GULBARGA DISTRICT REPORTED CRIMES


ಹುಡಗಿ ಕಾಣೆಯಾದ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ದೇವರಾಜ ತಂದೆ ತಿಮ್ಮೇಗೌಡ ಸಾ|| ಹಾಸನ ಜಿಲ್ಲಾ ಹಾವ|| ವೆಂಟಕೆಶ್ವರ ಕಾಲನಿ ಚಿತ್ತಾಪುರ ರವರು ನನ್ನ ಮಗಳಾದ ರಕ್ಷಿತಾ ವಯ-18 ಇವಳು ಚಿತ್ತಾಪುರದ  ಶಿವಲಿಂಗಪ್ಪಗೌಡ ಪಾಟೀಲ ನರಿಬೋಳಿ ಇವರ ಪ್ಯಾರಾ ಮೆಡಿಕಲ್ ಕಾಲೇಜದಲ್ಲಿ ಓದುತ್ತಿದ್ದಳು. ದಿನಾಲು ಮುಂಜಾನೆ 8-30 ಗಂಟೆಗೆ ಕಾಲೇಜಿಗೆ ಹೋಗಿ ಮಧ್ಯಾಹ್ನ 12-30 ಗಂಟೆಗೆ ಮನೆಗೆ ಬರುತ್ತಿದ್ದಳು. ನಿನ್ನೆ ದಿನಾಂಕ 24/8/2012 ರಂದು ಪ್ರತಿ ದಿವಸದಂತೆ ಮುಂಜಾನೆ 8-30 ಗಂಟೆಗೆ ಕಾಲೇಜಿಗೆ ಹೋಗಿದ್ದು, ಅವಳು ಪುನಃ ಮನೆಗೆ ಬರಲಿಲ್ಲಾ. ಅವಳ ಗೆಳತಿಯರ ಮನೆಗೆ ಹೋಗಿರಬಹುದು ಅಂತ ಸುಮ್ಮನಾದೆವು. ಮತ್ತು ನಮ್ಮ ಸಂಬಂದಿಕರ ಊರುಗಳಿಗೆ ಫೋನ ಮಾಡಿ ಅವಳ ಬಗ್ಗೆ ವಿಚಾರಿಸಲು ಅವರ ಹತ್ತಿರ ಬಂದಿರುವದಿಲ್ಲಾ ಅಂತ ಗೊತ್ತಾಗಿರುತ್ತದೆ. ಕಾಣೆಯಾದ ಹುಡಗಿಯ ಹೆಸರು: ರಕ್ಷಿತಾ, ವಯಸ್ಸು 18, ಎತ್ತರ: 5 ಪೀಟ , ದುಂಡು ಮುಖ, ಕೆಂಪು ಬಣ್ಣ , ಕಪ್ಪು ಕೂದಲು, ಕನ್ನಡ, ಹಿಂದಿ, ಇಂಗ್ಲೀಷ ಭಾಷೆ ಬಲ್ಲವಳಾಗಿರುತ್ತಾಳೆ. ಅವಳು ಧರಿಸಿರುವ ಬಟ್ಟೆ: ಕರಿ ಬಣ್ಣದ ಚೂಡಿದಾರ ಇರುತ್ತದೆ. ಅಂತ ಅವರ ತಂದೆಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 79/12 ಕಲಂ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅನಿಲಕುಮಾರ ತಂದೆ ಬಾಬು ನಾಗನಳ್ಳಿ ಸಾ:ಹೆಚ್‌.ಎಮ್‌.ಪಿ ಕಾಲೋನಿ ಶಹಾಬಾದ ರವರು ನಾನು ದಿನಾಂಕ:24/08/2012 ರಂದು ರಾತ್ರಿ 10.00 ಗಂಟೆ ಸುಮಾರಿಗೆ ದಿವ್ಯಾ ಚೌಕ ರಸ್ತೆಯಿಂದ  ಮನೆಗೆ ಹೋಗುತ್ತಿರುವಾಗ ದಿದಾರಸಿಂಗ ಇತನು ನಿಲ್ಲಿಸಿ “ತುಮ ಕಂಹಾ ಜಾರಹೀಹೆ” ಅಂತಾ ಕೇಳಿದ್ದಕ್ಕೆ ನಾನು ಮನೆಗೆ ಹೋಗುತ್ತಿದ್ದೆನೆ ಅಂತಾ ಅಂದಿದ್ದಕ್ಕೆ ಸದರಿಯವನು ವಿನಾಕಾರಣ ಜಗಳ ತಗೆದು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಬಿಡಿಸಲು ಬಂದ ನನ್ನ ತಾಯಿ ಪಾರ್ವತಿ ಇವಳಿಗೂ ಕೂಡಾ ಕೈಯಿಂದ ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ: 341,323, 324,354 504 ಸಂ:34 ಐಪಿಸಿ ಮತ್ತು 3[1] [10]  ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಎಸ್‌‌.ಎನ್‌.ಷಹಾ ನಿವೃತ್ತ ಮೇಜರ ಜನರಲ್‌ ಸೀನಿಯರ ವೈಸ ಪ್ರೇಸಿಡೆಂಟ (ಪಿ&ಎ) ಜೆ.ಪಿ ಶಹಾಬಾದ ಸಿಮೆಂಟ ಪ್ರಾಜೇಕ್ಟ್‌ ಪತ್ರ ನಂ.ಜೆಸಿಸಿಎಲ್‌/ಜೆಎಸ್‌ಸಿಪಿ/ಪಿ&ಎ/ಪೊಲೀಸ/2012 ದಿನಾಂಕ:25/08/2012 ನೇದ್ದು ಇಂಗ್ಲೀಷನಲ್ಲಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:24/08/2012 ರಂದು ರಾತ್ರಿ 10.30 ಗಂಟೆಗೆ ನಮ್ಮ ಕಾಲೋನಿ ಮನೆ.ನಂ.ಇ-01/10 ರಲ್ಲಿ ವಾಸಿಸುವ ಶ್ರೀ ಅನೀಲ ತಂದೆ ಬಾಬು ಇತನು ಕುಡಿದ ಅಮಲಿನಲ್ಲಿ ಕೆಲವು ಜನರೊಂದಿಗೆ ನಮ್ಮ ಸಿಬ್ಬಂದಿ ರಾಜಬಹಾರ ಪಾಂಡೆ ವಾಸಿಸುವ ಮನೆ.ನಂ.ಸಿ-2/10 ಬಂದು ಬಾಗಿಲ ಒದ್ದು ಮುರಿದು ಒಳಗೆ ಬಂದು ಅವನಿಗೆ ಹೊಡೆದಿದ್ದು ಅಲ್ಲದೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಅಂಜಿಸುತ್ತಿರುವಾಗ ಈ ಸುದ್ದಿ ತಿಳಿದು ನಮ್ಮ ಕೆಲವು ಸೆಕ್ಯೂರಿಟಿ ಗಾರ್ಡದವರನ್ನು ಅಲ್ಲಿಗೆ ಕಳುಹಿಸಿ ಕೂಗಡುತ್ತಿರುವ ಆತನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/2012 ಕಲಂ: 147,323,448,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

25 August 2012

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ಶ್ರೀ ಅಮಜದ ತಂದೆ ಮಹ್ಮದ ಖಾಸಿಂಸಾಬ ಸಾ||ಖುರೇಷಿ ಮಜೀದ ಹತ್ತಿರ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿಯಾದ ಮಹೀರುನ್ನಿಸಾ ಇವಳು ದಿನಾಂಕ:22/08/2012 ರಂದು ರಾತ್ರಿ 1-00 ಗಂಟೆಯ ಸುಮಾರಿಗೆ ನಾವೇಲ್ಲರೂ ಮಲಗಿಕೊಂಡಾಗ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿರುತ್ತಾಳೆ ನಮ್ಮ ಸಂಬಂದಿಕರಲ್ಲಿ ಹಾಗೂ ನಮ್ಮ ಅತ್ತೆ ಮಾವನವರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆನೆ. ಕಾರಣ ಕಾಣೆಯಾದ ನನ್ನ ಹೆಂಡತಿ ಮಹರುನ್ನಿಸಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:61/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಪ್ಪ ತಂದೆ ಖತಲಪ್ಪ ಕೊಚಿ ಸಾ:ಝಳಕಿ (ಕೆ) ತಾ:ಆಳಂದ  ರವರು ನಾನು ದಿನಾಂಕ:23/08/2012 ರಂದು ಬೆಳ್ಳಿಗ್ಗೆ 9-00  ಗಂಟೆ ಸುಮಾರಿಗೆ ಕುರಿಗಳು ಮೇಯಿಸಲು ನನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು, ನನ್ನ ಹೆಂಡತಿಯು ಸಹ  ಹೊಲದ ಕೆಲಸಕ್ಕೆ ಹೋಗಿರುತ್ತಾಳೆ. ನಾನು ಕುರಿಗಳು ಮೇಯಿಸಿಕೊಂಡು ಹೊಲದಿಂದ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಗೆ ಬಂದು, ಮನೆಯೂಳಗೆ ಹೋಗಬೇಕು ಅಂತಾ ಮನೆ ಬಾಗಿಲು ಹತ್ತಿರ ಹೋದಾಗ ಬಾಗಿಲು ಒಂದು ಫಲಕ ತೆರೆದು ಮುರಿದಿತ್ತು. ನಾನು ಮನೆಯೂಳಗೆ ಹೋಗಿ ನೋಡಲು ಬಟ್ಟೆಗಳು ,ಎಲ್.ಐ.ಸಿ ಪಾಲಸಿಗಳು ಹೊಲದ ಕಾಗದ ಪತ್ರಗಳು ಇತರೇ ಕಾಗದ ಪತ್ರಗಳು ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದವು ನನ್ನ ಮನೆಯಲ್ಲಿನ ಪೆಟ್ಟಿಗೆ ಮುರಿದಿದ್ದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಮತ್ತು ನಗದು 10,000/-ಸಾವಿರ ರೂಪಾಯಿಗಳು. ಹೀಗೆ ಒಟ್ಟು 1,00,150/- (ಒಂದು ಲಕ್ಷದ ಒಂದು ನೂರಾ ಐವತ್ತು ) ರೂಪಾಯಿ ಕಿಮ್ಮತ್ತಿನವುಗಳು ಕಳ್ಳತನವಾಗಿರುತ್ತದೆ. ನನ್ನ ಮನೆಯಲ್ಲಿ ಕಳ್ಳತನ ಆದ ಬಗ್ಗೆ ನಮ್ಮೂರ ಶಿವಪ್ಪ ತಾಯಿ ಗೌರಾಬಾಯಿ ಕೊಚಿ, ಗೌರಾಬಾಯಿ ತಂದೆ ಶಿವಪ್ಪ ಕೊಚಿ ಸಾ:ಝಳಕಿ(ಕೆ) ಇವರೆ ಕಳ್ಳತನ ಮಾಡಿರಬಹುದು ಅಂತಾ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ: 454,380  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಮಲ್ಲಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23-08-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬಂದಾರಿಯಲ್ಲಿರುವ ಕಾಲುವೆಯಲ್ಲಿನ ಕಸ ತೆಗೆಯುತ್ತಿರುವಾಗ ಅಣ್ಣಪ್ಪಾ ಮತ್ತು ಆತನ ಮಗ ದಿಲೀಪ ಇಬ್ಬರು ಕೂಡಿಕೊಂಡು ಬಂದು ನಮ್ಮ ಮಧ್ಯ ಇರುವ ಬಂದಾರಿಯಲ್ಲಿ ನೀರು ಹೋಗುವದನ್ನು ಬಂದ ಮಾಡು ಅಂದರೆ ಕೇಳುತ್ತಿಲ್ಲಾ ಅಂತಾ ಮುಂದೆ ಹೋಗದಂತೆ ತೆಡೆದು ಗಟ್ಟಿಯಾಗಿ ಹಿಡಿದು ಅಲ್ಲೇ ಬಿದ್ದಿರುವ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಮತ್ತು ಕೈ ಮುಷ್ಠಿ ಮಾಡಿ, ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2012 ಕಲಂ. 341, 323, 324, 447, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ, ಅಣ್ಣಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಶಾರದಾಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23/08/2012 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಕಸ ತೆಗೆದು ನಮ್ಮ ಬಂದಾರಿಯಲ್ಲಿ ಹಾಕುತ್ತಿರುವಾಗ ಸಾಯಂಕಾಲ 5-45 ಗಂಟೆಗೆ ನನ್ನ ತಮ್ಮ ಮಲ್ಲಪ್ಪಾ ಈತನು ಬಂದು ನನಗೆ ಅವಾಚ್ಯವಾಗಿ ಬೈದು ನಮ್ಮ ನೀರಿನ ಕಾಲುವೆಯಲ್ಲಿ ಕಸ ಹಾಕಿ ನೀರು ಹೋಗುವದನ್ನು ಬಂದ ಮಾಡುತ್ತಿದ್ದಿರಿ ಅಂತಾ ಅನ್ನುತ್ತಿದ್ದಾಗ ಆಗ ನಾನು ಈ ಬಂದಾರಿ ನಮಗೆ ಸೇರಿದ್ದು. ಪ್ರತಿ ವರ್ಷ ಬಂದಾರಿ ಕೇದರಿ ಹಾಳು ಮಾಡುತ್ತಿದ್ದಿರಿ ಅಂತಾ ಅಂದಿದಕ್ಕೆ ನನಗೆ ಎದುರು ಮಾತನಾಡುತ್ತಿ ಅಂತಾ ಅವಾಚ್ಯಾವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡುವಿ ಅಲ್ಲೇ ಬಿದ್ದಿರುವ ಬಡಿಗೆ ತೆಗೆದುಕೊಂಡು ನನ್ನ ಬಲಗಡೆ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2012 ಕಲಂ. 341, 323, 324, 447, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.