POLICE BHAVAN KALABURAGI

POLICE BHAVAN KALABURAGI

18 October 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಮಳಖೇಡ ಠಾಣೆ :
ಶ್ರೀಮತಿ ಮೆಹಬೂಬಿ ಗಂಡ ಮೆಹಬುಬ ಶಾಹಾ ಧರವೇರ ಸಾ|| ಹುಡಾ ಬಿ ರವರು, ನಾನು ಮತ್ತು ನನ್ನ ಗಂಡ ಸೇಡಂ ಗುಲಬರ್ಗಾ ರೋಡಿ ನ ಮೇಲೆ ನಡೆದುಕೊಂಡು ಸರ್ಕಾರಿ ಆಸ್ಪತ್ರೆ ಮಳಖೇಡಕ್ಕೆ ಬರುತ್ತಿರುವಾಗ ಮೋಟಾರು ಸೈಕಲ್ ನಂ ಎಪಿ 28 ಎ.ಎಸ್ 6226 ನೇದ್ದರ ಸವಾರ ಶೇಖ ಹಬೀಬ ಸಾ|| ತಾಂಡೂರ ಇವನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನನಗೆ ಅಪಘಾತ ಪಡಿಸಿ ಭಾರಿ ಗಾಯಗೊಳಿಸಿದ್ದು ಕಾರಣ ಶೇಖ ಹಬೀಬ ಇವನ ವಿರುಧ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಗುನ್ನೆ ನಂ 95/2011 ಕಲಂ 279. 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ವಿಶ್ವವಿದ್ಯಾಲಯ ಠಾಣೆ :
ಶ್ರೀ ರಾಚಣ್ಣ ತಂದೆ ರಾಮಚಂದ್ರಪ್ಪಾ ಮಾಲಿ ಪಾಟೀಲ ಸಾ|| ಸಣ್ಣೂರು ಗ್ರಾಮ ತಾ:ಜಿ: ಗುಲಬರ್ಗಾ ರವರು, ದಿನಾಂಕ 16-10-2011 ರಂದು ಸಾಯಂಕಾಲ ನಮ್ಮೂರ ಅಂದರೆ ಸಣ್ಣೂರು ಗ್ರಾಮ ಪಂಚಾಯತ ಪಿ.ಡಿ.ಓ ಅಧಿಕಾರಿಗಳಾದ ಮಂದಾಕಿನಿ ಇವರು ಗುಲಬರ್ಗಾದ ಬಿ.ಶ್ಯಾಮಸುಂದರ ಬಡಾವಣೆಯ ತಮ್ಮ ಮನೆಯಲ್ಲಿ ನೆಣು ಹಾಕಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಗುಲಬರ್ಗಾದ ರಾಘವೇಂದ್ರ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 11-30 ಪಿಎಮ ಕ್ಕೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಜಗದೀಶ ತಂಧೆ ಶರಣಪ್ಪಾ ನಂದೂರ ಇವರಿಗೆ ಹಿಡಿದುಕೊಂಡು ಹೋದ ಮೇಲೆ ಅವರ ಮನೆಗೆ ಬಂದಾಗ ಅವನಿಗೆ ಹಿಡಿದುಕೊಂಡು ಹೋಗುವ ಕಾಲಕ್ಕೆ ನಾನು ಮತ್ತು ನಮ್ಮೂರ ಇತರೆ ಜನರು ನೋಡುತ್ತಾ ನಿಂತಾಗ ಜಗದೀಶ ನಂದೂರ ಇತನ ಅಣ್ಣ ಶಿವಪುತ್ರಪ್ಪಾ ತಂದೆ ಶರಣಪ್ಪಾ ನಂದೂರ ಮತ್ತು ತಮ್ಮ ಮಲ್ಲಿಕಾರ್ಜುನ ತಂದೆ ಶರಣಪ್ಪಾ ನಂದೂರ ಇವರು ನನ್ನ ಹತ್ತಿರ ಬಂದವರೆ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಮನೆ ಪೊಲೀಸರಿಗೆ ನೀನೆ ತೋರಿಸಿ ನನ್ನ ತಮ್ಮ ಜಗದೀಶ ನಿಗೆ ಹಿಡಿದುಕೊಟ್ಟಿರುವಿ ಶಿವಪುತ್ರಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಹೊಡೆಬಡೆ ಮಾಡಿರುತ್ತಾರೆ.ಮತ್ತು ನನ್ನ ತಮ್ಮ ಜಗದೀಶನಿಗೆ ಏನಾದರೂ ಶಿಕ್ಷೆ ಆದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಗುನ್ನೆ ನಂ. 235/11 ಕಲಂ 341.323.504.506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :
ಶ್ರೀ ಸುಲ್ತಾನ ತಂದೆ ಜಾಫರ ಸಾ|| ಹೀರೆಬೂದುರ ರವರು ದಿನಾಂಕ 16-10-2011 ರಂದು ನಾನು ಮತ್ತು ನಮ್ಮ ಮನೆಯವರೆಲ್ಲರೂ ಗುಲಬರ್ಗಾದ ಬಂದೆ ನವಾಜ ದರ್ಗಾ ಜಾತ್ರೆ ಮುಗಿಸಿಕೊಂಡು ನಮ್ಮೂರಿಗೆ ಹೋಗುವಾಗ ಕೆಲ್ಲೂರ ಗ್ರಾಮದ ಹತ್ತಿರ ನಾವೆಲ್ಲೂರ ಮೂತ್ರ ವಿಸರ್ಜನೆಗೆ ಇಳಿದಿದ್ದೆವು ಹಾಗೂ ನನ್ನ ಮಗ ಬಾಬು ಮೂತ್ರ ವಿಸರ್ಜನೆ ಮಾಡಲು ರೋಡ ಕ್ರಾಸ ಮಾಡುತ್ತಿದ್ದಾಗ ಜೇವರ್ಗಿ ಕಡೆಯಿಂದ ಯಾರೋ ಕಾರ್ ಚಾಲಕ ನನ್ನ ಮಗನಾದ ಬಾಬುಗೆ ಅಪಘಾತ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಗುನ್ನೆ ನಂ 183/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

17 October 2011

Gulbarga Dist Reported Crime

ಜಾತಿ ನಿಂದನೆ ಪ್ರಕರಣ :
ಕುಂಚಾವರಂ ಪೊಲೀಸ್ ಠಾಣೆ
: ರಘುವೀರ ತಂದೆ ರಾಮಪ್ಪಾ ಸಾ|| ಮೊಗ್ದಂಪೂರ ತಾ|| ಚಿಂಚೋಳಿ ರವರು ನಾನು ದಿನಾಂಕ 17-10-2011 ರಂದು ಬೆಳಿಗ್ಗೆ 8-30 ಗಂಟೆಗೆ ನನ್ನ ಸಮಾಜದ ಜನರು ಹನುಮಾನ ಮಂದಿರಕ್ಕೆ ಹೋಗಿದ್ದಾಗ ವೆಂಕಟ ರೆಡ್ಡಿ ತಂದೆ ಗೋಪಾಲ ರೆಡ್ಡಿ ಸಂಗಡ 13 ಜನರು ಸಾ||| ಎಲ್ಲರೂ ಸಾ|| ಮೊಗ್ದಂಪೂರ ರವರು ಮಂದಿರದ ಒಳಗಡೆ ಬರಬಾರದಂತೆ ಜಾತಿ ನಿಂದೆನೆ ಮಾಡಿ ಹನುಮಾಣ ಮಂದಿರಕ್ಕೆ ಬೀಗ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 40/2011 ಕಲಂ, 143, 147, 504, 506 ಸಂ 149 ಐಪಿಸಿ ಮತ್ತು 3 (1) (10) (14) ಎಸ.ಸಿ / ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಪಿ.ಡಿ.ಓ ನೌಕರದಾರಳ ಆತ್ಮಹತ್ಯೆ:

ರಾಘವೇಂದ್ರ ನಗರ ಪೊಲೀಸ್ ಠಾಣೆ ಸಂಗಮೇಶ್ವರ ಕಾಲೋನಿಯ "ಬಿ" ಶಾಂಸುಂದರ ಬಡಾವಣೆಯ ಕುಮಾರಿ ಮಂದಾಕಿನಿ ತಂದೆ ಶಂಕರ ಯಕಲೂರೆ ಇವಳು ಸಣ್ಣೂರ ಗ್ರಾಮ ಪಂಚಾಯತನಲ್ಲಿ ಪಿ.ಡಿ.ಓ ಅಂತ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವಳಿಗೆ ಜಗದೀಶ ಪಾಟೀಲ್, ಬಸವರಾಜ್ ಹಕ್ಕಿ, ವಾಸುದೇವ ಜಾಧವ ಹಾಗು ಇತರರು ಸಾ|| ಎಲ್ಲರೂ ಸಣ್ಣೂರ ಗ್ರಾಮ ತಾ|| ಜಿ|| ಗುಲಬರ್ಗಾ ದವರು ಅವಳಿಗೆ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವಂತೆ ಮಾನಸಿಕ ಕಿರುಕುಳ ನೀಡಿದ ಮೇರೆಗೆ, ಅವರು ಕೊಡುತ್ತಿದ್ದ ಕಿರುಕುಳ ತಾಳದೇ ದಿನಾಂಕ 16-10-2011 ರಂದು ಸಾಯಂಕಾಲ 6 ಗಂಟೆಗೆ ತನ್ನ ವಾಸದ ಮನೆಯಲ್ಲಿ ಫ್ಯಾನಿಗೆ ಸೀರೆಕಟ್ಟಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಅವರ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಎಂ.ಬಿ.ನಗರ ಪೊಲೀಸ್ ಠಾಣೆ
: ಶ್ರೀ ಸಿದ್ದು ತಂದೆ ಧರ್ಮರಾಜ ಪಾಟೀಲ್ ಸಾಃ ಜಾಗೃತಿ ಕಾಲೋನಿ ಗುಲಬರ್ಗಾ ರವರು ದಿನಾಂಕ. 16-10-2011 ರಂದು 08-30 ಎ.ಎಂ ಕ್ಕೆ ನಾನು ನನ್ನ ತಂಗಿಯನ್ನು ಕರೆದುಕೊಂಡು ಬರಲು ರೆವೂರ ಗ್ರಾಮಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ತಾಯಿ ಉಮಾದೇವಿ ಇದ್ದರು ಅವರು 10-00 ಎ.ಎಂಕ್ಕೆ ಮನೆಗೆ ಕೀಲಿ ಹಾಕಿ ಆದರ್ಶ ನಗರಕ್ಕೆ ಹೋಗಿ ಮರಳಿ ಮಧ್ಯಾಹ್ನ ಮನೆಗೆ ಬಂದು ನೊಡಲು ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯ ಬೆಡ್ಡ್ ರೂಮಿನ ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಭರಣಗಳು ಹೀಗೆ ಒಟ್ಟು ಅ.ಕಿ.2,00,000/- ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2011 ಕಲಂ.454,380 ಐಪಿಸಿ. ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ ;
ಗುಲಬರ್ಗಾ ಗ್ರಾಮೀಣ ಠಾಣೆ:
ಅಶೋಕ ತಂದೆ ಮಲ್ಲಣ್ಣ ಮೇಳಕುಂದಿ ಇನ್ನೂ 5 ಜನರು ಸಾ: ಎಲ್ಲರೂ ಹೀರಾಪೂರ ರವರು ದಿನಾಂಕ 16/10/11 ರಂದು ಮಧ್ಯಾಹ್ನ ಸುಮಾರಿಗೆ ಹೀರಾಪೂರ ಗ್ರಾಮದ ಮಲ್ಲಣ್ಣ ಹಡಗಿಲ ಇವರ ಬಾಳೆ ಬನದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ವನ್ನು ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂಧಿ ಜನರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6600/-, 52 ಇಸ್ಪೇಟ ಎಲೆಗಳು, ಮೂರು ಮೋಬೈಲ 1 ಹಿರೋ ಹೊಂಡಾ ಮೋಟಾರ ಸೈಕಲ ಜಪ್ತಿ ಮಾಡಿಕೊಂಡಿದ್ದರಿಂದ ಗುನ್ನೆ ನಂ: 302/2011 ಕಲಂ. 87 ಕೆಪಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ ;
ಗುಲಬರ್ಗಾ ಗ್ರಾಮೀಣ ಠಾಣೆ:
. ರವಿ ತಂದೆ ಹಾಶಪ್ಪಗುತ್ತೇದಾರ ಇನ್ನೂ 10 ಜನರು ಸಾ: ಎಲ್ಲರೂ ಖಾದ್ರಿ ಚೌಕ ಶಾಹ ಬಜಾರ ಗುಲಬರ್ಗಾ ರವರು ದಿನಾಂಕ 16/10/11 ರಂದು ಸಾಯಂಕಾಲ್ ಸುಮಾರಿಗೆ ಹೀರಾಪೂರ ಗ್ರಾಮದ ಸೀಮಾಂತರದಲ್ಲಿ ಬರುವ ದೇಶಪಾಂಡೆ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ವನ್ನು ಆಡುತ್ತಿದ್ದಾಗ ದಾಳಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ಹಣ 16,400/-, 52 ಇಸ್ಪೇಟ ಎಲೆಗಳು, ಒಂಬತ್ತು ಮೋಬೈಲ ಅ, ಕಿ 7800/- ರೂ, ನಾಲ್ಕು ಮೋಟಾರ ಸೈಕಲ ಗಳು ಜಪ್ತಿ ಮಾಡಿಕೊಂಡಿದ್ದರಿಂದ ಗುನ್ನೆ ನಂ: 303 /2011 ಕಲಂ. 87 ಕೆಪಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.