POLICE BHAVAN KALABURAGI

POLICE BHAVAN KALABURAGI

19 February 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ವಾಡಿ ಠಾಣೆ : ಶ್ರೀ ಮಹ್ಮದ ಜಾಕೀರ ತಂದೆ ಮಹ್ಮದ ಖಾಸಿಂ  ತೆಗನೂರ ವಾಲೆ ಸಾ : HMP ಕಾಲೋನಿ ಶಹಾಬಾದ ರವರ ತಂದೆ ಮಹ್ಮದ ಖಾಸಿಂ ತಂದೆ ಮಶಾಕಸಾಬ ತೆಗನೂರವಾಲೆ ರವರು ದಿನಾಂಕ 17/02/2020 ರಂದು ಮದ್ಯಾಹ್ನ 01-00 ಗಂಟೆ ಸುಮಾರು ನಮ್ಮಕಾಲೋನಿಯ ನಾಗರಾಜ ಇವರ ಮಗ ರಾಜು ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಯಾದಗೀರಯ ಗುರಸಣಗಿ ಗ್ರಾಮಕ್ಕೆ ಕೆಲವು ಜನರು ಕೂಡಿಕೊಂಡು ಜೀಪದಲ್ಲಿ ಹೋಗಿದ್ದು ನಮ್ಮ ತಂದೆಯವರು ನಾಗರಾಜ ಇವರ ಮೊಟರ ಸೈಕಲ ನಂಬರ ಕೆಎ-32 ಇಜೆ-0771 ನೇದ್ದರ ಮೇಲೆ ಕುಳಿತುಕೊಂಡು ಗುರಸಣಗಿ ಗ್ರಾಮಕ್ಕೆ ಹೊರಟು ಹೋದರು. ನಂತರ ರಾತ್ರಿ 08-30 ಗಂಟೆ ಸುಮಾರು ನಾಗರಾಜ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ನಿಮ್ಮ ತಂದೆ ಕೂಡಿಕೊಂಡು ಮೊಟರ ಸೈಕಲ ನಂಬರ ಕೆಎ-32 ಇಜೆ-0771 ನೇದ್ದರ ಮೇಲೆ ನಮ್ಮ ಊರಿಗೆ ಬರುವಾಗ ರಾವೂರ ಬೈಪಾಸ ರೊಡ ದಾಟಿ ರಾವೂರ ಕಡೆಗೆ  ಬರುವಾಗ ನಾನು ಮೊಟರ ಸೈಕಲ ಅತಿವೇಗ ಚಲಾಯಿಸುತ್ತಿದ್ದಾಗ ಎದರುಗಡೆ ರೊಡಿನ ಮೇಲೆ ಒಂದು ಕಲ್ಲು ಬಿದ್ದಿದ್ದು ಅದಕ್ಕೆ ಮೊಟರ ಸೈಕಲ ಡಿಕ್ಕಿ ಪಡಿಸಿದಾಗ ನಾವು ಕೆಳಗಡೆ ಬಿದ್ದಿದ್ದರಿಂದ ನಿಮ್ಮ ತಂದೆಯ ಭಾರಿ ಒಳಪೆಟ್ಟಾಗಿದ್ದು ನನಗೂ ಸಹ ಗಾಯಗಳು ಆಗಿದ್ದು ನಿಮ್ಮ ತಂದೆ ಸದ್ಯ ಮಾತನಾಡು ಸ್ಥಿತಿಯಲ್ಲಿ ಇರುವದಿಲ್ಲ ಅಂತಾ ತಿಳಿಸಿದಾಗ ನಾನು ಮತ್ತು ಧರ್ಮರಾಜ ಪಾಮನೂರ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಅಲ್ಲಿ ನಮ್ಮ ತಂದೆ ಅಥವಾ ನಾಗರಾಜ ಇರಲಿಲ್ಲ, ಮೊಟರ ಸೈಕಲ ಅಲ್ಲೇ ಬಿದ್ದಿದ್ದು ಸ್ವಲ್ಪ ಸಮಯದ ನಂತರ ಚಿತ್ತಾಪೂರ ಕಡೆಯಿಂದ ಅಂಬುಲೇನ್ಸ ಬಂದಿದ್ದು ಅದಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲಾಗಿ ಅದರಲ್ಲಿ ನಮ್ಮ ತಂದೆ ಮತ್ತು ನಾಗರಾಜ ರವರು ಇದ್ದು ಅವರಿಗೆ ಚಿತ್ತಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚರಿಸಿಕೊಂಡು ಬರುತ್ತಿರುವದಾಗಿ ನಾಗರಾಜ ಇವರಿಂದ ಗೊತ್ತಾಗಿರುತ್ತದೆ.ನಂತರ ಅವರಿಗೆ ಇದೇ ಅಂಬುಲೇನ್ಸದಲ್ಲಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ವೈದ್ಯರು ನಮ್ಮ ತಂದೆಗೆ ಪರೀಕ್ಷೆ ಮಾಡಿ ನೋಡಿ ಸದರಿಯವರು ಈಗಾಗಲೇ ಮರಣ ಹೊಂದಿರುತ್ತಾರೆ ಅಂತಾ ತಿಳಿಸಿದರು. ನಮ್ಮ ತಂದೆಯವರು ಅಂದಾಜು ರಾತ್ರಿ 10-30 ಗಂಟೆ ಸುಮಾರು ಮರಣ ಹೊಂದಿದ್ದು ಘಟನೆ ರಾತ್ರಿ 08-00 ಗಂಟೆ ಸುಮಾರು ಆಗಿದ್ದು ಇರುತ್ತದೆ. ನಾಗರಾಜ  ಇತನು ಮೊಟರ ಸೈಕಲ ನಂಬರ ಕೆಎ-32 ಇಜೆ-0771 ನೇದ್ದರ ಮೇಲೆ ನಮ್ಮ ತಂದೆಗೆ ಕೂಡಿಸಿಕೊಂಡು ಅತಿವೇಗ ಹಾಗೂ ಅಲಕ್ಷತನದಿಂದ ಮೊಟರ ಸೈಕಲ ಚಲಾಯಿಸಿಕೊಂಡು ಹೊರಟು ರೊಡಿಗೆ ಬಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಘಟನೆ ಸಂಭವಿಸಿದ್ದು ಚಾಲಕ ನಾಗರಾಜ ತಂದೆ ಶರಣಪ್ಪ ಭೀಮನಳ್ಳಿ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ಚನ್ನಬಸಪ್ಪ ತಂದೆ ಬಸಪ್ಪ ವರ್ಚನಳ್ಳಿ ಸಾಃ ಮದ್ದರಕಿ ತಾ: ಶಹಾಪೂರ  ಜಿಲ್ಲೆ: ಯಾದಗಿರಿ ರವರು ದಿನಾಂಕ 16/02/2020 ರಂದು ಮದ್ಯಾಹ್ನ ಮದ್ದರಕಿಯಿಂದ ನಮ್ಮ ಸಂಭಂದಿಕರ  ಊರಾದ ಜೇವರಗಿ  ತಾಲೂಕಿನ  ಚನ್ನೂರ ಗ್ರಾಮಕ್ಕೆ  ನಮ್ಮ ಮೊಟಾರ ಸೈಕಲ ನಂ  ಕೆಎ-33-ಎಲ್-6936 ನೇದ್ದರ  ಮೇಲೆ ಕುಳಿತುಕೊಂಡು ಬಂದಿದ್ದೆನು. ನಾನು  ಚನ್ನೂರ ಗ್ರಾಮದಲ್ಲಿ ನಮ್ಮ ಸಂಭಂಧಿಕರಿಗೆ ಮಾತನಾಡಿ ಕೆಲಸ ಮುಗಿಸಿಕೊಂಡು ಚನ್ನೂರದಿಂದ ಮರಳಿ ಮದ್ದರಕಿಗೆ ಹೋಗಲು ಮೇಲೆ ನಮೂದಿಸಿದ ನನ್ನ ಮೊಟಾರ್ ಸೈಕಲ ಮೇಲೆ ಕುಳಿತುಕೊಂಡು ಬರುತ್ತಿದ್ದೆನು. ರಾತ್ರಿ 8.೦೦ ಗಂಟೆಯ ಸುಮಾರಿಗೆ ಜೇವರಗಿ- ಚನ್ನೂರ ರೋಡ ಜೇವರಗಿ ಪಟ್ಟಣದ ಅಲ್ಲಾವುದ್ದೀನ ಕಟ್ಟಿಗೆ ಮಸ್ಸಿನ ಹತ್ತಿರ  ರೋಡಿನಲ್ಲಿ ಬಂದು ಏಕಿ ಮಾಡಲು  ನನ್ನ ಮೊಟಾರ್ ಸೈಕಲನ್ನು ರೋಡಿನ ಸೈಡಿನಲ್ಲಿ ನಿಲ್ಲಿಸಿ,  ಮೊಟಾರ್ ಸೈಕಲದೊಂದಿಗೆ ನಿಂತಾಗ  ಎದುರಿನಿಂದ ಅಂದರೆ ಜೇವರಗಿ ಸಿಂದಗಿ ಕ್ರಾಸ್ ಕಡೆಯಿಂದ  ಒಂದು ಮೊಟಾರ್ ಸೈಕಲ ಸವಾರನು ತನ್ನ ಮೊಟಾರ ಸೈಕಲನ್ನು ಅತೀವೆಗದಿಂದ ಮತ್ತು  ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ನನ್ನ ಮೊಟಾರ್ ಸೈಕಲಕ್ಕೆ ಎದುರಿನಿಂದ ಡಿಕ್ಕಿಪಡಿಸಿದನು ಆಗ ನಾನು ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಕೇಳಗೆ ಬಿದ್ದಾಗ ನನಗೆ ಎದೆಗೆ ಸೊಂಟಕ್ಕೆ ಓಳಪೆಟ್ಟಾಗಿರುತ್ತದೆ. ಮತ್ತು ಎಕಾಲಿನ ಮೊಳಕಾಲಿಗೆ, ಎಡಕೈ ಹಸ್ತಕ್ಕೆ ರಕ್ತಗಾಯವಾಗಿರುತ್ತದೆ.  ನನಗೆ ಡಿಕ್ಕಿಪಡಿಸಿದ ಮೊಟಾರ್ ಸೈಕಲಕ್ಕೆ ನೋಡಲು  ಅದು ಬಜಾಜ ಕಂಪನಿ  ಕಪ್ಪು ಬಣ್ಣದ ಹೊಸ  ಮೊಟಾರ್ ಸೈಕಲ  ಇದ್ದು ಅದರ ಮೇಲೆ ನಂಬರ ಪ್ಲೇಟ್  ಇರುವುದಿಲ್ಲಾ ಅದರ  ಇಂಜೀನ  ನಂ DHYCKA95571 , ಚೆಸ್ಸಿ ನಂ , MD2A11CY2KCA14859,  ನೇದ್ದು ಇತ್ತು . ಅದರ ಸವಾರನಿಗೂ  ಗಾಯಗಳಾಗಿದ್ದವು.  ಅವನ ಹೆಸರು  ಖಾಜಾಪಟೇಲ ತಂದೆ ಹಸನ ಪಟೇಲ ಹಚ್ಚಡ  ಸಾಃ ಕುಮ್ಮಶಿರಸಗಿ  ಎಂದು ಗೊತ್ತಾಗಿರುತ್ತದೆ.  ಅಫಘಾತದ ನಂತರ ವನು ತನ್ನ ಮೊಟಾರ್ ಸೈಕಲ ತೆಗೆದುಕೊಂಡು ಓಡಿ ಹೋಗಿರುತ್ತಾನೆ.  ನಮ್ಮ ಸಂಭಂದಿಕರಾದ ಬಸಪ್ಪ ತಂದೆ ದೌಲಪ್ಪ ಮಾಂಗ  ಸಾಃ ಚನ್ನೂರ ಈತನಿಗೆ ಪೊನ ಮಾಡಿ ವಿಷಯ ತಿಳಿಸಿದಾಗ ಅವನು ಸ್ಥಳಕ್ಕೆ ಬಂದು ನೋಡಿ ನನಗೆ ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು  ಸೇರಿಕೆ ಮಾಡಿ ಉಪಚಾರ ಕೊಡಿಸಿ ನಂತರ ನನಗೆ  ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ  ಮೇಲೆ ನಮೂದಿಸಿದ ನಂಬರ ಪ್ಲೇಟ್ ಇರಲಾರದ ಬಜಾಜ ಕಂಪನಿಯ ಪಲ್ಸರ್  ಮೊಟಾರ್ ಸೈಕಲ  ಇಂಜೀನ  ನಂ DHYCKA95571 , ಚೆಸ್ಸಿ ನಂ , MD2A11CY2KCA14859,   ನೇದ್ದರ ಸವಾರ ಖಾಜಾಪಟೇಲ  ಈತನು ತನ್ನ ಮೊಟಾರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಸೈಡಿನಲ್ಲಿ ಮೊಟಾರ್ ಸೈಕಲದೊಂದಿಗೆ ನೀತ ನನಗೆ ಮತ್ತು ನನ್ನ ಮೊಟಾರ್ ಸೈಕಲಕ್ಕೆ ಕ್ಕೆ ಡಿಕ್ಕಿಪಡಿಸಿ ನನಗೆ ಗಾಯಗೊಳಿಸಿ ತನ್ನ ಮೊಟಾರ್ ಸೈಕಲ ತೆಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: