POLICE BHAVAN KALABURAGI

POLICE BHAVAN KALABURAGI

06 October 2019

KALABURAGI DISTRICT REPORTED CRIMES

ಆಕ್ರಮವಾಗಿ ಶಶ್ತ್ರಾಸ್ತ್ರ ಹೊಂದಿದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 05-10-2019 ರಂದು ಪ್ರಭು ತಂದೆ ತುಕಾರಾಮ ಜಮಾದಾರ ಸಾ|| ದುದ್ದಣಗಿ ಈತನು, ದುದ್ದಣಗಿ ಸೀಮಾಂತರದಲ್ಲಿನ ತನ್ನ ಹೊಲದಲ್ಲಿನ ಮನೆಯಲ್ಲಿ ಅಕ್ರಮವಾಗಿ ನಾಡ ಪಿಸ್ತೂಲನ್ನು ಇಟ್ಟುಕೊಂಡಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ,  ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದುದ್ದಣಗಿ ಸೀಮಾಂತರದಲ್ಲಿರುವ ಆರೋಪಿತನ ಹೊಲದಲ್ಲಿನ ಮನೆಯ ಬಗ್ಗೆ ಬಾತ್ಮಿದಾರರಿಗೆ ವಿಚಾರಿಸಿ, ಬಾತ್ಮಿದಾರರು ಮನೆಯನ್ನು ತೋರಿಸಿದ ಮೇರೆಗೆ, ಮನಗೆ ಹೋಗಿ, ಮನೆಯಲ್ಲಿದ್ದವರನ್ನು ಹೊರಗೆ ಕರೆಯಲು ಒಬ್ಬ ವ್ಯೆಕ್ತಿ ಹೊರಗೆ ಬಂದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಪ್ರಭು ತಂದೆ ತುಕಾರಾಮ ಜಮಾದಾರ ಸಾ|| ದುದ್ದಣಗಿ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಅಕ್ರಮವಾಗಿ ನಾಡ ಪಿಸ್ತೂಲನ್ನು ಇಟ್ಟುಕೊಂಡ ಬಗ್ಗೆ ವಿಚಾರಿಸಲು, ಸದರಿಯವನು ತಡವರಿಸುತ್ತಾ ನನ್ನ ಹತ್ತಿರ ಇರುವುದಿಲ್ಲ ಎಂದು ಅದಲು ಬದಲು ಹೇಳುತ್ತಾ, ನಮ್ಮ ದೃಷ್ಟಿ ಬೇರೆ ಕಡೆಗೆ ಸೇಳೆಯುವಂತೆ ಮಾಡಿ ನಮ್ಮಿಂದ ತಪ್ಪಿಸಿಕೊಂಡು ಓಡ ತೊಡಗಿದನು, ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು, ಪಂಚರ ಸಮಕ್ಷಮ ಪುನ ಪುನ ವಿಚಾರಿಸಿದಾಗ, ಸದರಿ ಪ್ರಭು ಜಮಾದಾರ ಈತನು ನನ್ನ ಹತ್ತಿರ ಪಿಸ್ತೂಲು ಇರುತ್ತದೆ ಎಂದು ಹೇಳಿ ಕೊಟ್ಟಿಗೆಯಲ್ಲಿ ಮುಚ್ಚಿ ಇಟ್ಟಿದ್ದ ಪಿಸ್ತೂಲನ್ನು ತಗೆದು ಹಾಜರು ಪಡಿಸಿದನು, ಸದರಿ ಪಿಸ್ತೂಲನ್ನು ಚೆಕ್ ಮಾಡಲಾಗಿ, ಪಿಸ್ತೂಲು ಮ್ಯಾಗ್ಜಿನ್ ದಲ್ಲಿ 01 ಜಿವಂತ ಗುಂಡು ಇತ್ತು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡು ಬಗ್ಗೆ ವಿಚಾರಿಸಲು, ನಾನು ಹಿಂದೆ ಭಾಗಪ್ಪ ಹರಿಜನ ಈತನಿಗೆ ವಿಜಯಪೂರದ ಕೋರ್ಟಿನಲ್ಲಿ ಗುಂಡು ಹಾರಿಸಿದ ಕೇಸಿನಲ್ಲಿದ್ದರಿಂದ. ಭಾಗಪ್ಪನು ನನಗೆ ಏನಾದರೂ ಮಾಡಿಯಾನು ಎಂಬ ಭಯಕ್ಕಾಗಿ  ಸದರಿ ಪಿಸ್ತೂಲನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ಈತನ ಹತ್ತಿರ ಕರಜಗಿ ಗ್ರಾಮದಲ್ಲಿ 40,000/- ರೂಪಾಯಿ ಕೊಟ್ಟು ಖರಿದಿ ಮಾಡಿರುತ್ತೇನೆ ಎಂದು ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ||ಕಿ|| 30,000/- ರೂ ಹಾಗೂ 01 ಜಿವಂತ ಗುಂಡು ||ಕಿ|| 100/- ರೂ ಕಿಮ್ಮತ್ತಿನದು ಇದ್ದು, ಸದರಿ ಪಿಸ್ತೂಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಸದರಿ ನಾಡ ಪಿಸ್ತೂಲನ್ನು ಮತ್ತು ಜಿವಂತ ಗುಂಡನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 05-10-2019 ರಂದು ಹವಳಗಾ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಲಾರಿಯಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹವಳಗಾ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಹೋಗುತ್ತಿದ್ದಂತೆ, ಗುಡಿಯ ಮುಂದಿನ ಲೈಟಿನ ಬೆಳಕಿನಲ್ಲಿ ನಮ್ಮ ಪೊಲೀಸ ವಾಹನವನ್ನು ನೋಡಿ, ಲಾರಿಯನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು.  ನಂತರ ಸದರಿ ಲಾರಿಯನ್ನು ಪಂಚರ ಸಮಕ್ಷಮ ಚೆಕ್ಕ ಮಾಡಲು ಐಶರ ಕಂಪನಿಯ ಲಾರಿ ಇದ್ದು ಅದರಲ್ಲಿ ಅರ್ದ ಮರಳು ತುಂಬಿದ್ದು ಇತ್ತು. ಅದರ ನಂ ಕೆಎ-28 ಸಿ-1190, ಸದರಿ ಲಾರಿ .ಕಿ 10,00,000/-ರೂ ಇರಬಹುದು. ಸದರಿ ಲಾರಿಯಲ್ಲಿದ್ದ ಮರಳಿನ .ಕಿ 5.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಕುಮಾರ ತಂದೆ ದೇವಿಂದ್ರಪ್ಪ ಪಾಟೀಲ ಸಾ: ಸೊನ್ನ ರವರು ದಿನಾಂಕ 05-10-2019 ರಂದು ನನ್ನ ಹೆಂಡತಿಯಾದ ಪದ್ಮಾವತಿ ಹಾಗೂ ಅವಳ ತಂದೆಯಾದ ಸಿದ್ರಾಮಪ್ಪ ಯಾದಗಿರಿ ಅಣ್ಣನಾದ ವೆಂಕಟೇಶ, ತಾಯಿಯಾದ ಗಂಗಮ್ಮ ಮತ್ತು ಇನ್ನು ಕೆಲವು ಜನರು ಕೂಡಿ ನನಗೂ ಮತ್ತು ನನ್ನ ಹೆಂಡತಿಗೂ ಇದ್ದ ಜಗಳದ ವಿಷಯವಾಗಿ ನ್ಯಾಯ ಪಂಚಾಯತಿ ಮಾಡಿ ರಾಜಿ ಮಾಡಲು ಸೋನ್ನ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದಿರುತ್ತಾರೆ. ನಮ್ಮ ಮನೆಯಲ್ಲಿ ನನಗೂ ಮತ್ತು ಸದರಿಯವರಿಗೂ ನ್ಯಾಯ ಪಂಚಾಯತಿ ಮಾಡುತ್ತಿದ್ದ ಸಮಯದಲ್ಲಿ ಬಾಯಿ ಜಗಳ ಆದಾಗ ನನಗೆ ನಮ್ಮ ಮಾವನಾದ 1) ಸಿದ್ರಾಮಪ್ಪ ಬಾಲಚೇಡ, ನನ್ನ ಹೆಂಡತಿಯ ಅಣ್ಣನಾದ 2) ವೆಂಕಟೇಶ ಬಾಲಚೇಡ, ನನ್ನ ಹೆಂಡತಿಯಾದ 3) ಪದ್ಮಾವತಿ ಪಾಟೀಲ ಹಾಗೂ ನನ್ನ ಅತ್ತೆಯಾದ 4) ಗಂಗಮ್ಮ ಬಾಲಚೇಡ ನಾಲ್ಕು ಜನರು ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಯುವುದು, ಕಾಲಿನಿಂದ ಒದೆಯುವುದು ಮಾಡಿರುತ್ತಾರೆ. ಮತ್ತು ನಮ್ಮ ಮಾವ ಸಿದ್ರಾಮಪ್ಪ ಈತನು ನಮ್ಮ ಮನೆಯ ಮೂಲೆಯಲ್ಲಿ ಇಟ್ಟಿದ್ದ ಬಡಿಗೆಯನ್ನು ತಗೆದುಕೊಂಡು, ಬಡಿಗೆಯಿಂದ ಹೊಡೆದಿರುತ್ತಾನೆ. ನನಗೆ ಹೊಡೆಯುತ್ತಿದ್ದಾಗ ನ್ಯಾಯ ಪಂಚಾಯತಿ ಮಾಡಲು ಬಂದ ಬಸವಂತ್ರಾಯ ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ಜಮಾದಾರ, ಶಿವಾನಂದ ತಳವಾರ ರವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ನನಗೆ ಹೊಡೆಯುತ್ತಿದ್ದವರು ನೀನು ನಮ್ಮ ಮಾತನ್ನು ಕೇಳದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದರಿಂದ ನಾನು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತಗೆದುಕೊಂಡು ದೂರು ನಿಡಲು ಠಾಣೆಗೆ ಬಂದಿರುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: