ಆಕ್ರಮವಾಗಿ ಶಶ್ತ್ರಾಸ್ತ್ರ ಹೊಂದಿದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ : 04-10-2019 ರಂದು ಸೋನ್ನ ಕ್ರಾಸ್ ಹತ್ತೀರ ಒಬ್ಬ ವ್ಯಕ್ತಿ ಪಿಸ್ತೂಲು ಇಟ್ಟುಕೊಂಡು ನಿಂತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ಮಂಜುನಾಥ ಹೂಗಾರ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕಾಸ್ರ ಹತ್ತೀರ ಹೋಗುತ್ತಿದಂತೆ ನಮ್ಮ ಪೊಲೀಸ್ ವಾಹನವನ್ನು ನೋಡಿ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಓಡ ಹತ್ತೀದನು ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಶರಣಗೌಡ ತಂದೆ ಗಂಗಪ್ಪ ಪಾಟೀಲ ಸಾ||ಗುಂದಗಿ ತಾ||ಸಿಂದಗಿ ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಸೋಂಟದಲ್ಲಿ ಒಂದು ಪಿಸ್ತೂಲು ದೊರೆಯಿತು. ಪಿಸ್ತೂಲನ್ನು ಚೆಕ್ ಮಾಡಲಾಗಿ ಅದರ ಮ್ಯಾಗ್ಜಿನ್ ದಲ್ಲಿ 02 ಜಿವಂತ ಗುಂಡುಗಳು ಇದ್ದವು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲನ್ನು ಮತ್ತು 02 ಜೀವಂತ ಗುಂಡುಗಳನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾದರ ನಾಯಕೊಡಿ ಈತನ ಹತ್ತಿರ ಪಿಸ್ತೂಲಅನ್ನು 30,000/- ರೂ ಮತ್ತು 02
ಜೀವಂತ ಗುಂಡುಗಳನ್ನು ನೂರು ಪಾಯಿಗೆ ಒಂದರಂತೆ 200/-ರೂ ಗೆ ಖರಿದಿ ಮಾಡಿರುತ್ತೇನೆ. ನಾನು ಪಿಸ್ತೂಲನ್ನು ಕಡಿಮೆ ರೇಟಿಗೆ ಖರೀದಿ ಮಾಡಿ, ಹೆಚ್ಚಿನ ರೇಟಿಗೆ ಮಾರಾಟ ಮಾಡಲು ತಗೆದುಕೊಂಡಿರುತ್ತೇನೆ. ಇಂದು ಅಫಜಲಪೂರಕ್ಕೆ ಹೋಗಿ ಯಾರಿಗಾದರೂ ಮಾರಾಟ ಮಾಡಬೇಕು ಎಂದು ಇಲ್ಲಿನಿಂತಿರುವದಾಗಿ ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ಅ||ಕಿ||
30,000/- ರೂ ಮತ್ತು 02 ಜೀವಂತ ಗುಂಡುಗಳನ್ನು ಅ||ಕಿ|| 200/- ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:04-10-2019 ರಂದು ಅಫಜಲಪೂರ ವೃತ್ತ ಕಾರ್ಯಾಲಯದಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನಂದರೆ ಮಲ್ಲಬಾದ ಗ್ರಾಮದ ವಿಜಯಲಕ್ಷೀ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಪಿಸ್ತೂಲು ಇಟ್ಟುಕೊಂಡು ನಿಂತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ತುಳಜಪ್ಪ ತಂದೆ ಶಂಕ್ರೆಪ್ಪ ಸುಲ್ಫಿ ಡಿ,ಎಸ್,ಪಿ. ಆಳಂದ ಉಪ ವಿಭಾಗ ಆಳಂದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ ಗ್ರಾಮದ ವಿಜಯಲಕ್ಷೀ ದೇವಸ್ಥಾನದ ಹತ್ತೀರ ಹೋಗುತ್ತಿದ್ದಂತೆ ನಮ್ಮ ಪೊಲೀಸ್ ಜೀಪನ್ನು ನೋಡಿ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಓಡ ಹತ್ತೀದನು ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಬಾಬುರಾವ ಹಡಪದ ಸಾ||ತಡಕಲ ತಾ||ಆಳಂದ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು ದೊರೆಯಿತು. ಪಿಸ್ತೂಲನ್ನು ಚೆಕ್ ಮಾಡಲಾಗಿ ಅದರ ಮ್ಯಾಗ್ಜಿನ್ ದಲ್ಲಿ 01 ಜಿವಂತ ಗುಂಡು ಇದ್ದು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ವಿಚಾರಿಸಲು, ನಾನು ಈ ಹಿಂದೆ ಭಾಗಪ್ಪ ಹರಿಜನ ಈತನಿಗೆ ವಿಜಯಪೂರದ ಕೋರ್ಟಿನಲ್ಲಿ ಗುಂಡು ಹಾರಿಸಿ ಕೊಲೆ ಮಾಡಲು ಗುಂಡು ಹಾರಿಸಿರುತ್ತೇನೆ. ಭಾಗಪ್ಪ ನನಗೆ ಏನಾದರೂ ಮಾಡಿಯಾನು ಎಂದು ಭಯಕ್ಕಾಗಿ ಸದರಿ ಪಿಸ್ತೂಲನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ಈತನ ಹತ್ತಿರ ನಮ್ಮೂರಿನಲ್ಲಿ 30,000/- ರೂಪಾಯಿ ಕೊಟ್ಟು ಖರಿದಿ ಮಾಡಿರುತ್ತೇನೆ ಎಂದು ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ಅ||ಕಿ|| 30,000/- ರೂ ಹಾಗೂ 01 ಜಿವಂತ ಗುಂಡು ಅ||ಕಿ|| 100/- ರೂ ಕಿಮ್ಮತ್ತಿನದು ಇದ್ದು, ಸದರಿ ಪಿಸ್ತೂಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment