POLICE BHAVAN KALABURAGI

POLICE BHAVAN KALABURAGI

09 February 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಸರಕಾರಿ ವಾಹನಗಳನ್ನು ಜಕಂ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ  ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಿಕಾರ್ಜುನ ಹೆಚ್.ಸಿ 383 ರವರು ದಿನಾಂಕ 08-02-2019 ರಂದು ಹಳ್ಳಿ ಬೀಟ ಕುರಿತು ಅರಳಗುಂಡಗಿ ಮತ್ತು ಮುರಗಾನೂರ ಗ್ರಾಮಗಳಿಗೆ ಶ್ರೀ ಪ್ರಭು ಸಿಪಿಸಿ 554 ರವರ ಸಂಗಡ ಹೋಗಿದ್ದು ಬೆಳಿಗ್ಗೆ ಅರಳಗುಂಡಗಿ ಗ್ರಾಮದಲ್ಲಿ ಬೀಟ ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನದ ವೇಳೆಗೆ ಮುರಗಾನೂರ ಗ್ರಾಮದ ಕಡೆಗೆ ಹೋಗಿದ್ದೇವು, ಮುರಗಾನೂರ ಗ್ರಾಮದಲ್ಲಿ ಬೀಟ ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 7;00 ಗಂಟೆ ಸುಮಾರಿಗೆ ವಾಪಸ್ಸು ಅರಳಗುಂಡಗಿ ಗ್ರಾಮಕ್ಕೆ ಬಂದೇವು, ಆಗ ಜಾಮೀಯಾ ಮಸೀದಿ ಹತ್ತಿರ ಮುಸ್ಲಿಂ ಸಮಾಜದವರು ಮತ್ತು ಮರಾಠ ಸಮಾಜದವರು ಪರಸ್ಪರ ಜಗಳಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾವಿಬ್ಬರೂ ಕೂಡಿಕೊಂಡು ಜಾಮೀಯಾ ಮಸೀದಿ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಎರಡು ಗುಂಪುಗಳ ಮದ್ಯ ಪರಸ್ಪರ ಕಲ್ಲು ತೂರಾಟ ಮಾಡಿಕೊಂಡು ಜಗಳವಾಡುತ್ತಿದ್ದರು, ಆಗ ನಾವಿಬ್ಬರೂ ಕೂಡಿಕೊಂಡು ಜಗಳಾ ಬಿಡಿಸಲು ಮದ್ಯ ಹೋದಾಗ ಎರಡು ಗುಂಪಿನವರು ನಮಗೆ ಸೂಳಿ ಮಕ್ಕಳ್ಯಾ ಪೋಲೀಸರ್ಯಾ ನಮ್ಮ ಜಗಳದಾಗ ನಿವ್ಯಾಕ ಅಡ್ಡ ಬರತೀರಿ ಇಲ್ಲಿಂದ ಹೋಗತೀರಾ ಇಲ್ಲಾ, ಅಂತಾ ಅಂದು ನಮ್ಮಿಬ್ಬರಿಗೆ ಶರ್ಟ ಹಿಡಿದು ಎಳೆದಾಡಿ ದೂಕಿ ಕೊಟ್ಟರು, ನಂತರ ಅಲ್ಲೆ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೋಂಡು ನಮ್ಮ ಮೇಲೆ ತೂರಾಟ ಮಾಡಲಾರಂಭಿಸಿದರು, ಆಗ ಕಲ್ಲುಗಳು ನಮ್ಮ ಮೈ ಕೈಗೆ ಬಡಿದು ಒಳಪೆಟ್ಟಾಗಿರುತ್ತವೆ, ನಂತರ ನಾವು ಅಲ್ಲಿಂದ ರೋಡಿನ ಕಡೆ ಬಂದು ಪಿ.ಎಸ್. ಸಾಹೇಬರಿಗೆ ಫೋನ ಮುಖಾಂತರ ಮಾಹಿತಿ ತಿಳಿಸಿದೆನು, ಸ್ವಲ್ಪ ಹೊತ್ತಿನಲ್ಲಿ ಪಿ.ಎಸ್. ಸಾಹೇಬರು ತಮ್ಮ ಜೀಪಿನಲ್ಲಿ ಸಿಬ್ಬಂದಿಯವರಾದ ಸಂತೋಷ ಪಿಸಿ 1165, ಚಂದ್ರಶೇಖರ ಪಿಸಿ 231 ರವರೊಂದಿಗೆ ಹಾಗು ಶಾಂತೇಶ್ವರ ಹೆಚ್.ಸಿ 539 ರವರು ಇಲಾಖಾ ಮೋಟರ ಸೈಕಲ್ ನಂ ಕೆ.-32/ಜಿ-580 ನೇದ್ದರಲ್ಲಿ  ಸ್ಥಳಕ್ಕೆ ಬಂದರು, ಆಗ ನಾವೆಲ್ಲರೂ ಮತ್ತೇ ಜಗಳ ಬಿಡಿಸಲು ಹೋದಾಗ ಎರಡು ಗುಂಪಿನವರು ಪೊಲೀಸ ಸುಳಿ ಮಕ್ಕಳದೇ ಬಹಳಾಗಿದೆ ಇವರಿಗೆ ಹೊಡೆದು ಖಲಾಸೆ ಮಾಡರಲೇ ಅಂತಾ ಏಕಾ ಏಕಿಯಾಗಿ ನಮ್ಮ ಮೇಲೆ ಕಲ್ಲು ತೂರಾಟ ಮಾಡಿ ನಮಗೆ ಹೊಡೆದು ಸಾಯಿಸಲು ಎಲ್ಲರು ಬೆನ್ನು ಹತ್ತಿದರು, ಆಗ ನಾವು ಅಲ್ಲಿಂದ ತಪ್ಪಿಸಿಕೊಂಡು ರೋಡಿನ ಕಡೆ ಬಂದು ನಿಂತು ನೋಡಲಾಗಿ ಶಾಂತೇಶ್ವರ ಹೆಚ್.ಸಿ 539, ಸಂತೋಷ ಪಿಸಿ 1165 ರವರಿಗೆ ಬೆನ್ನು ಮತ್ತು ಕಾಲುಗಳಿಗೆ ಕಲ್ಲುಗಳು ಬಡೆದು ಭಾರಿ  ಗಾಯಗಳಾಗಿದ್ದವು, ಅಲ್ಲದೇ ಘಟನಾ ಸ್ಥಳದಲ್ಲಿ ನಿಲ್ಲಿಸಿದ್ದ ನಮ್ಮ ಸರಕಾರಿ ಜೀಪ ನಂ ಕೆ.-32/ಜಿ-530 ನೇದ್ದಕ್ಕೆ ಕಲ್ಲು ತೂರಿದ್ದರಿಂದ ಜೀಪಿನ ಬಲಗಡೆಯ ಇಂಡಿಕೇಟರ, ಮತ್ತು ಬಲಗಡೆಯ ಮಿರರ್ ಒಡೆದು, ಅಲ್ಲಲ್ಲಿ ಸಣ್ಣ ಪುಟ್ಟ ಹಾನಿಯಾಗಿ ವಾಹನ ಜಕಂಗೊಂಡಿರುತ್ತದೆ, ಮತ್ತು ಅಲ್ಲೆ ನಿಲ್ಲಿಸಲಾಗಿದ್ದ ಸರಕಾರಿ ದ್ವಿಚಕ್ರ ವಾಹನದ ಮೇಲೆ ಉದ್ರಿಕ್ತ ಗುಂಪಿನ ಜನರು ಕಲ್ಲು ಎತ್ತಿ ಹಾಕಿದ್ದರಿಂದ ಮೋಟರ ಸೈಕಲ್ ಸಂಪೂರ್ಣ ಜಕಂಗೊಂಡಿರುತ್ತದೆ, ನಂತರ ನಮ್ಮ ಸರಕಾರಿ ಕರ್ತವ್ಯಕ್ಕೆ ಸುಮಾರು 100 ಕ್ಕಿಂತ ಹೆಚ್ಚುಜನರು ಅಡ್ಡಿ ಪಡಿಸಿದ್ದು, ಅವರುಗಳಲ್ಲಿ ನಮ್ಮ ಮೇಲೆ ಕಲ್ಲು ತೂರಾಟ ಮಾಡಿ ನಮಗೆ ಸಾಯಿಸಲು ಪ್ರಯತ್ನಿಸಿದವರ ಬಗ್ಗೆ ಪೊಲೀಸ ಬಾತ್ಮಿದಾರರಿಗೆ ಕೇಳಲಾಗಿ 1] ನಬೀಸಾಬ ತಂದೆ ಖಾಜಾಪಟೇಲ ಖಾಜಿ, 2] ಅಲ್ಲಾಪಟೇಲ ತಂದೆ ಹುಸೇನಬಾಶಾ ಖಾಜಿ, 3] ಸದ್ದಾಂ ತಂದೆ ಮಹಿಬೂಬಸಾಬ ಖಾಜಿ, 4] ರಿಯಾಜ ತಂದೆ ಸೈಯದಸಾಬ ಹವಾಲ್ದಾರ, 5] ಖಾಸಿಮ ತಂದೆ ಇಮಾಮಸಾಬ ಖಾಜಿ, 6] ಶಬ್ಬೀರ ತಂದೆ ಬಂದೆನವಾಜ ಖಾಜಿ, 7] ಫಕ್ರೋದ್ದಿನ ತಂದೆ ಖಾಜಾಪಟೇಲ ಖಾಜಿ, 8] ರಮಜಾನ ತಂದೆ ಶೇಖಸಾಬ ಮುಲ್ಲಾ, 9] ಬಂದೇನವಾಜ ತಂದೆ ಹಸನಸಾಬ ಖಾಜಿ, 10] ಹಸನಸಾಬ ತಂದೆ ಮಹಿಬೂಬಪಟೆಲ ಖಾಜಿ, 11] ಯಲ್ಲಪ್ಪ ತಂದೆ ಸೋಮರಾಯ ಮರಾಠಿ, 12] ದುರ್ಯೋಧನ ತಂದೆ ಸೋಮರಾಯ ಮರಾಠಿ, 13] ತಿಪ್ಪಣ್ಣ ತಂದೆ ಹಣಮಂತ ಮರಾಠಿ, 14] ಮರೆಪ್ಪ ತಂದೆ ಲಚಮಪ್ಪ ಮರಾಠಿ, 15] ದಶರಥ ತಂದೆ ತಿಪ್ಪಣ್ಣ ಮರಾಠಿ, 16] ದತ್ತು ತಂದೆ ಮರೆಪ್ಪ ಮರಾಠಿ, 17] ಶರಣು ತಂದೆ ಶಂಕ್ರೆಪ್ಪ ಮರಾಠಿ, 18] ಶರಣು ತಂದೆ ದುರ್ಯೋಧನ ಮರಾಠಿ, 19] ಪ್ರಕಾಶ ತಂದೆ ತಿಪ್ಪಣ್ಣ ಮರಾಠಿ, 20] ಮಾರೂತಿ ತಂದೆ ಸಿದ್ರಾಮ ಮರಾಠಿ ಸಾ: ಎಲ್ಲರೂ ಅರಳಗುಂಡಗಿ ಎಂಬುವರಿರುತ್ತಾರೆ ಅಂತಾ ತಿಳಿಸಿದರು, ನಂತರ ಸದರಿ ಘಟನೆಯ ಕುರಿತು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದೆವು, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಮಗೆ ಅವಾಚ್ಯವಾಗಿ ಬೈದು, ಎಳೆದಾಡಿ, ನಮ್ಮ ಮೇಲೆ ಕಲ್ಲು ತೂರಾಟ ಮಾಡಿ ಸಾಯಿಸಲು ಪ್ರಯತ್ನಿಸಿ ಸರಕಾರಿ ಸ್ವತ್ತನ್ನು ಹಾನಿಮಾಡಿದ ಮೇಲ್ಕಂಡ 20 ಜನರು ಹಾಗು ಇತರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ದತ್ತಪ್ಪ ತಂದೆ ಮರೆಪ್ಪ ಮರಾಠಿ ಸಾ: ಅರಳಗುಂಡಗಿ ರವರು ಸುಮಾರು 15 ದಿನಗಳ ಹಿಂದೆ ನಾನು ನಮ್ಮೂರ ಆದಿ ಬಸವಣ್ಣದೇವರ ಗುಡಿ ಹತ್ತಿರ ನನ್ನ ಮೋಟರ ಸೈಕಲ್ ಮೇಲೆ ಬರುವಾಗ ನಮ್ಮೂರ ನಬೀಸಾಬ ತಂದೆ ಖಾಜಾಪಟೇಲ ಖಾಜಿ ರವರು ತಮ್ಮ ಟಂಟಂ ಆಟೋವನ್ನು ತೆಗೆದುಕೊಂಡು ಹೋಗುತ್ತಿದ್ದರು, ಆಗ ಅವರು ನನಗೆ ಏ ಭೋಸಡಿ ಮಗನೆ ಮೋಟರ ಸೈಕಲ್ ನಿಧಾನವಾಗಿ ಚಲಾಯಿಸೋ ಅಂತಾ ಅವಾಚ್ಯವಾಗಿ ಬೈದರು, ಆಗ ನಾನು ಸುಮ್ಮನಾಗಿ ಮನೆಗೆ ಹೋಗಿ ಈ ವಿಷಯವನ್ನು ನಮ್ಮ ತಂದೆಯ ಮುಂದೆ ಹೇಳಿರುತ್ತೇನೆ, ಹೀಗಿರುವಾಗ ದಿನಾಂಕ 08-02-2019 ರಂದು ಸಾಯಂಕಾಲ 6;30 ಗಂಟೆ ಸುಮಾರಿಗೆ ನಮ್ಮೂರಿನ ಮಂಜು ಹಡಪದ ರವರ ಅಂಗಡಿ ಹತ್ತಿರ ಬಂದು ನನ್ನ ಮೋಟರ ಸೈಕಲ್ ನಿಲ್ಲಿಸಿದ್ದೇನು, ಅಲ್ಲಿ ನಬೀಸಾಬ ರವರ ಟಂಟಂ ಕೂಡ ನಿಂತಿತ್ತು, ಆಗ ನಬೀಸಾಬ ಈತನು ನನಗೆ ಏ ಬೋಸಡಿ ಮಗನೆ ಕಟಬಾ ನನ್ನ ಟಂಟಂ ನಿಂತಿದ್ದು ಕಾಣಲ್ಲೇನೋ ಮಗನಾ ಅಂತಾ ಅಂದನು, ಆಗ ನಾನು ಅವನ ಬಾಯಿಗೆ ಯಾಕ ಹತ್ತಬೇಕು ಅಂತಾ ಅಂದು ಅಲ್ಲಿಂದ ಸುಮ್ಮನಾಗಿ ಮನೆಗೆ ಹೋದೆನು, ನಂತರ ಈ ವಿಷಯವನ್ನು ನಮ್ಮ ತಂದೆಗೆ ಹೇಳಿದ್ದರಿಂದ ನಮ್ಮ  ತಂದೆಯವರು ಕೇಳೋಣಾ ನಡಿ ಅಂತಾ ಅಂದು ನಾನು ನಮ್ಮ ತಂದೆ ಹಾಗು ನಮ್ಮ ಸಂಬಂಧಿಕರಾದ ಯಲ್ಲಪ್ಪ ತಂದೆ ಸೋಮರಾಯ ಮರಾಠಿ,  ತಿಪ್ಪಣ್ಣ ತಂದೆ ಹಣಮಂತ ಮರಾಠಿ, ದೂರ್ಯೋಧನ ಮರಾಠಿ, ದಶರಥ ಬತಂದೆ ತಿಪ್ಪಣ್ಣ ಮರಾಠಿ, ಶರಣು ತಂದೆ ಶಂಕ್ರೆಪ್ಪ ಮರಾಠಿ ಹಾಗು ಇತರರು ಕೂಡಿಕೊಂಡು ಸುಮಾರು 7;00 ಪಿ.ಎಂ ಕ್ಕೆ ಜಾಮೀಯಾ ಮಸೀದ ಹಿಂದೆ ರಸ್ತೆಯ ಮೇಲೆ ಹೋಗುತ್ತಿದ್ದಾಗ 1] ನಬೀಸಾಬ ತಂದೆ ಖಾಜಾಪಟೇಲ ಖಾಜಿ, 2] ಅಲ್ಲಾಪಟೇಲ ತಂದೆ ಹುಸೇನಬಾಶಾ ಖಾಜಿ, 3] ಸದ್ದಾಂ ತಂದೆ ಮಹಿಬೂಬಸಾಬ ಖಾಜಿ, 4] ರಿಯಾಜ ತಂದೆ ಸೈಯದಸಾಬ ಹವಾಲ್ದಾರ, 5] ಖಾಸಿಮ ತಂದೆ ಇಮಾಮಸಾಬ ಖಾಜಿ, 6] ಶಬ್ಬೀರ ತಂದೆ ಬಂದೆನವಾಜ ಖಾಜಿ, 7] ಫಕ್ರೋದ್ದಿನ ತಂದೆ ಖಾಜಾಪಟೇಲ ಖಾಜಿ, 8] ರಮಜಾನ ತಂದೆ ಶೇಖಸಾಬ ಮುಲ್ಲಾ, 9] ಬಂದೇನವಾಜ ತಂದೆ ಹಸನಸಾಬ ಖಾಜಿ, 10] ಹಸನಸಾಬ ತಂದೆ ಮಹಿಬೂಬಪಟೆಲ ಖಾಜಿ, 11] ಜಾವೀದ ತಂದೆ ಸೈಪನಸಾಬ ಖಾಜಿ, 12] ಮಲೀಕ ತಂದೆ ಖಾದರಬಾಶಾ ಮುಲ್ಲಾ, 13] ಮಹಿಬೂಬ ತಂದೆ ಸೈಪನಸಾಬ ಖಾಜಿ ಹಾಗು ಇತರರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡದುಕೊಂಡು ನಮಗೆ ತಡೆದು ನಿಲ್ಲಿಸಿದರು, ಅವರಲ್ಲಿ ನಬೀಸಾಬ ಈತನು ಏ ಭೋಸಡಿ ಮಕ್ಕಳ್ಯಾ ಕಟಬರ್ಯಾ ನಮ್ಮೊಂದಿಗೆ ವಿನಾಕಾರಣ ಜಗಳಾ ಮಾಡಿಕೊಳ್ಳತಿರಾ ಮಕ್ಕಳ್ಯಾ ಅಂತಾ ಅಂದು ಯಲ್ಲಪ್ಪನಿಗೆ ಬಡಿಗೆಯಿಂದ ಎಡಗಡೆ ಭುಜದ ಮೇಲೆ ಹೊಡೆದು ಗಾಯಪಡಿಸಿದನು, ಅಲ್ಲಾಪಟೇಲ ಮತ್ತು ಸದ್ದಾಂ ರವರು ನನಗೆ ಕೈ ಹಿಡಿದು ಎಳೆದಾಡಿ ಕೈಯಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿದರು, ರಿಯಾಜ ಈತನು ಕಲ್ಲಿನಿಂದ ತಿಪ್ಪಣ್ಣನ ಬಲತೊಡೆಗೆ ಹೊಡೆದು ಗಾಯಗೊಳಿಸಿದನು, ಖಾಸಿಮ ಈತನು ಕೈಯಿಂದ ಬಲಗಣ್ಣಿನ ಹತ್ತಿರ ಕೈಯಿಂದ ಹೊಡೆನು ಗುಪ್ತ ಪೆಟ್ಟು ಪಡಿಸಿದನು, ನಂತರ ನನಗೆ ಶಬ್ಬೀರ ಈತನು ನನಗೆ ಸಾಯಿಸುವ ಉದ್ದೇಶದಿಂದ ಕುತ್ತಿಗೆ ಹಿಡಿದು ತೊರಡನ್ನು ಹಿಚುಕುತ್ತಿದ್ದಾಗ ನಮ್ಮ ತಂದೆ ಮತ್ತು ದೂರ್ಯೋಧನ ರವರು ಬಿಡಿಸಿಕೋಂಡಿರುತ್ತಾರೆ, ಇಲ್ಲದಿದ್ದರೇ ನನಗೆ ಸಾಯಿಸೇ ಬಿಡುತ್ತಿದ್ದನು, ನಂತರ ಇನ್ನುಳಿದವರೆಲ್ಲರೂ ಈ ಕಟಬ ಸುಳಿ ಮಕ್ಕಳಿಗೆ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅನ್ನುತ್ತಾ ನಮ್ಮ ಮೇಲೆ ಕಲ್ಲು ತೂರಾಟ ಮಾಡಿದರು, ಆಗ ಕಲ್ಲುಗಳು ನಮಗೆ ಬಡೆದು ಪೆಟ್ಟಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ನಬಿಸಾಬ ತಂದೆ ಖಾಜಾಸಾಬ ಖಾಜಿ ಸಾ: ಅರಳಗುಂಡಗಿ  ತವತು ಸುಮಾರು 15 ದಿನಗಳ ಹಿಂದೆ ನಾನು ನನ್ನ ಟಂಟಂ ಆಟೋದಲ್ಲಿ ಪ್ಯಾಸೆಂಜರಗಳನ್ನು ಕೂಡಿಸಿಕೋಂಡು ನೇದಲಗಿಯಿಂದ ಅರಳಗುಂಡಗಿ ಕಡೆಗೆ ಬರುವ ಮಾರ್ಗ ಮದ್ಯದಲ್ಲಿ ಆದಿ ಬಸವಣ್ಣದೇವರ ಗುಡಿ ಹತ್ತಿರ ನಮ್ಮೂರಿನ ದತ್ತಪ್ಪ ತಂದೆ ಮರೆಪ್ಪ ಮರಾಠಿ ಈತನು ತನ್ನ ದ್ವಿಚಕ್ರವಾಹನವನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ನಮ್ಮ ಟಂಟಂಗೆ ಕಟ್ ಹೊಡೆದಿದ್ದನು, ವಿಷಯವಾಗಿ ಅವರ ಸಮಾಜದ ಮುಖಂಡರಾದ ದುರ್ಯೋಧನ ಮರಾಠಿ ಈತನಿಗೆ ದತ್ತಪ್ಪ ಈತನಿಗೆ ಸರಿಯಾಗಿ ಬುದ್ದಿ ಹೇಳುವಂತೆ ತಿಳಿಸಿದ್ದೆನು, ಆಗ ದುರ್ಯೋಧನ ಮರಾಠಿ ಈತನು ದತ್ತಪ್ಪನಿಗೆ ಬುದ್ದಿ ಹೇಳುತ್ತೇನೆ ಅಂತಾ ಹೇಳಿ ಕಳುಹಿಸಿದ್ದನು, ನಂತರ ನನ್ನ ಪಾಡಿಗೆ ನಾನು ಸುಮ್ಮನಾಗಿ ಇದ್ದೇನು, ಹೀಗಿರುವಾಗ ದಿನಾಂಕ 08-02-2019 ರಂದು ಸಾಯಂಕಾಲ 6;30 ಗಂಟೆ ಸುಮಾರಿಗೆ ನೇದಲಗಿ ಕಡೆಯಿಂದ ನನ್ನ ಟಂಟಂ ಆಟೋ ಚಲಾಯಿಸಿಕೊಂಡು ಬಂದು ನಮ್ಮೂರಿನ ಮಂಜು ಹಡಪದ ರವರ ಅಂಗಡಿ ಹತ್ತಿರ ನಿಂತಾಗ ದತ್ತಪ್ಪ ತಂದೆ ಮರೆಪ್ಪ ಮರಾಠಿ ಈತನು ತನ್ನ ಮೋಟರ ಸೈಕಲನ್ನು ನನ್ನ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದನು, ಆಗ ನಾನು ಯಾಕೇ ನನ್ನ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದಿಯಾ, ನಾನು ಮನೆಗೆ ಹೋಗಬೇಕು ದಾರಿ ಬಿಡು ಅಂತಾ ಹೇಳಿದೇನು, ಆಗ ದತ್ತಪ್ಪ ಈತನು ನನ್ನ ಮೇಲೆ ಒಮ್ಮೇಲೆ ಸಿಟ್ಟಿಗೆ ಬಂದು ಎಲೇ ಲಂಡ ಸೂಳಿ ಮಗನೇ ನಿನ್ನ ವಾಹನವನ್ನು ಸೈಡಿಗೆ ತೆಗೆದುಕೊಂಡು ಹೋಗುವದನ್ನು ಬಿಟ್ಟು ನನಗೆ ಹೇಳಲಾಕ ಬಂದಿಯಾ ಅಂತಾ ಬೈದನು, ಆಗ ನಾನು ಅಲ್ಲಿಂದ ಸುಮ್ಮನಾಗಿ ಮನೆಗೆ ಹೋಗಿ ಸದರಿ ವಿಷಯವನ್ನು ನಮ್ಮ ತಂದೆಗೆ ತಿಳಿಸಿದೆನು, ಆಗ ನಮ್ಮ ತಂದೆಯೂ ಸುಮ್ಮನೇ ಯಾಕ ಅವನು ನಮ್ಮೊಂದಿಗೆ ಕಾಲು ಕೆದರಿ ಜಗಳಕ್ಕ ಬರುತ್ತಿದ್ದಾನೆ, ನಡೇ ಕೇಳೋಣಾ ಅಂತಾ ನಾನು ಮತ್ತು ನಮ್ಮ ತಂದೆ ಹಾಗು ನಮ್ಮ ಸಂಬಂಧಿಕರಾದ ರಮಜಾನ ಮುಲ್ಲಾ, ಶಬ್ಬೀರ ಖಾಜಿ, ಅಲ್ಲಾಪಟೇಲ ಖಾಜಿ, ಖಾಸಿಮ ಖಾಜಿ, ಸದ್ದಾಂ ಖಾಜಿ ಹಾಗು ಹಸನಸಾಬ ಖಾಜಿ ಹಾಗು ಇತರರು ಸೇರಿಕೊಂಡು ಜಾಮೀಯಾ ಮಜೀದ ಹಿಂದೆ 7;00 ಪಿ.ಎಂ ಸುಮಾರಿಗೆ ಹಾದು ಹೋಗುತ್ತಿದ್ದಾಗ 1] ಯಲ್ಲಪ್ಪ ತಂದೆ ಸೋಮರಾಯ ಮರಾಠಿ, 2] ದುರ್ಯೋಧನ ತಂದೆ ಸೋಮರಾಯ ಮರಾಠಿ, 3] ತಿಪ್ಪಣ್ಣ ತಂದೆ ಹಣಮಂತ ಮರಾಠಿ, 4] ಮರೆಪ್ಪ ತಂದೆ ಲಚಮಪ್ಪ ಮರಾಠಿ, 5] ದಶರಥ ತಂದೆ ತಿಪ್ಪಣ್ಣ ಮರಾಠಿ, 6] ದತ್ತಪ್ಪ ತಂದೆ ಮರೆಪ್ಪ ಮರಾಠಿ, 7] ಶರಣು ತಂದೆ ಶಂಕ್ರೆಪ್ಪ ಮರಾಠಿ, 8] ಶರಣು ತಂದೆ ದುರ್ಯೋಧನ ಮರಾಠಿ, 9] ಪ್ರಕಾಶ ತಂದೆ ತಿಪ್ಪಣ್ಣ ಮರಾಠಿ, 10] ಮಾರೂತಿ ತಂದೆ ಸಿದ್ರಾಮ ಮರಾಠಿ, 11] ಪ್ರಕಾಶ ತಂದೆ ಮರೆಪ್ಪ ಮಾರಾಠಿ, 12] ಅರ್ಜುನ ತಂದೆ ಕೂಸೆಪ್ಪ ಮರಾಠಿ, 13] ಮಲ್ಲೇಶ ತಂದೆ ಸಿದ್ರಾಮ ಮರಾಠಿ ಹಾಗು ಇತರರು ಹೀಗೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡದುಕೊಂಡು ನಮಗೆ ತಡೆದು ನಿಲ್ಲಿಸಿದರು, ಅವರಲ್ಲಿ ಯಲ್ಲಪ್ಪ ಈತನು ಸೂಳಿ ಮಕ್ಕಳ್ಯಾ ಲಂಡರ್ಯಾ ನಮ್ಮ ಮನೆ ತನಕ ಕೇಳಲಾಕ ಬರತೀರಾ, ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅಲ್ಲಾಪಟೇಲನ ಬಲಗೈ ತೋರಬೆರಳಿನ ಹತ್ತಿರ ಹೊಡೆದನು, ದೂರ್ಯೋಧನ ಮತ್ತು ತಿಪ್ಪಣ್ಣ ರವರು ಬಡಿಗೆಗಳಿಂದ ಶಬ್ಬಿರ ಪಟೇಲನ ಬಲಗೈ ಮೊಳಕೈ ಕೆಳಗೆ, ಎಡಹಣೆಗೆ ಮತ್ತು ಬಲತೊಡೆಗೆ ಹೊಡೆದು ಒಳಪೆಟ್ಟು ಪಡಿಸಿದರು, ಮರೆಪ್ಪ ಈತನು ಕಲ್ಲಿನಿಂದ ಖಾಸಿಮನ ಎಡತೊಡೆಗೆ ಹೊಡೆದು ರಕ್ತಗಾಯ ಪಡಿಸಿದನು, ದಶರಥ ಈತನು ಸದ್ದಾಂನ ಬಲ ಹಣೆಗೆ ಕಲ್ಲಿನಿಂದ ಹೊಡೆದು ಒಳಪೆಟ್ಟು ಪಡಿಸಿದನು, ದತ್ತಪ್ಪ ಈತನು ಹಸನಸಾಬನಿಗೆ ಬಡಿಗೆಯಿಂದ ಎಡಗಾಲಿನ ಮೊಳಕಾಲ ಕೆಳಗೆ ಹೊಡೆದು ಗಾಯಗೊಳಿಸಿದನು, ಶರಣು ತಂದೆ ಶಂಕ್ರೆಪ್ಪ ಈತನು ನನಗೆ ಸಾಯಿಸುವ ಉದ್ದೇಶದಿಂದ ನನಗೆ ನೆಲಕ್ಕೆ ಹಾಕಿ ನನ್ನ ಎದೆಯ ಮೇಲೆ ಕುಳಿತು ಕುತ್ತಿಗೆ ಹಿಸುಕಿ ಸಾಯಿಸಲು ಪ್ರಯತ್ನ ಪಡುತ್ತಿದ್ದಾಗ ನಮ್ಮ ತಂದೆ ಮತ್ತು ರಮಜಾನ ಮುಲ್ಲಾ ರವರು ಬಿಡಿಸಿಕೊಂಡರು, ಇಲ್ಲದಿದ್ದರೇ ನನಗೆ ಸಾಯಿಸೇ ಬಿಡುತ್ತಿದ್ದನು, ನಂತರ ಇನ್ನುಳಿದವರೆಲ್ಲರೂ ಲಂಡ ಸುಳಿ ಮಕ್ಕಳಿಗೆ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅನ್ನುತ್ತಾ ನಮ್ಮ ಮೇಲೆ ಕಲ್ಲು ತೂರಾಟ ಮಾಡಿದರು, ಆಗ ಕಲ್ಲುಗಳು ನಮ್ಮೆಲ್ಲರಿಗೂ ಬಡೆದು ಪೆಟ್ಟಾಗಿದ್ದು, ಅಲ್ಲದೇ ನಾವು ಪ್ರಾರ್ಥನೆ ಮಾಡುವ ಜಾಮೀಯಾ ಮಸೀದಿಯಲ್ಲಿಯು ಸಹ ಕಲ್ಲುಗಳು ಬಂದು ಬಿದ್ದಿರುತ್ತವೆ, ಅಷ್ಟರಲ್ಲಿ ಪೋಲಿಸರು ಸ್ಥಳಕ್ಕೆ ಬಂದಾಗ ಪೊಲೀಸರ ಮೇಲು ಸಹ ಅವರೆಲ್ಲರು ಸೇರಿಕೊಂಡು ಕಲ್ಲು ತೂರಾಟ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 08-02-2019 ರಂದು ಫಿರೋಜಾಬಾದ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಅವರ ಹಹೆಸರು ವಿಚಾರಿಸಲು 1) ಸಾಹೇಬಗೌಡ ತಂದೆ ಶಿವಲಿಂಗಪ್ಪ ಮಾಮ್ಮಣಿ  2) ಅಬ್ದುಲ ರಶೀದ ತಂದೆ ಸಾಹೇಬ ಪಟೇಲ ಸಾ : ಇಬ್ಬರು ಫಿರೋಜಾಬಾದ ಕಲಬುರಗಿ ಅಂತಾ ಅಂತಾತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 750/- ರೂ, ಬಾಲಪೆನ್ನ ಮತ್ತು ಮಟಕಾ ಚೀಟಿಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ನಿರಂಜನ ಕುಮಾರ ಚೀಪ್ ಆಪರೇಶನ ಆಫಿಸರ್ ಕ್ವಿದೀತಾಸ ಪಾರಮ್ಸ್ ಪ್ರೈವೆಟ್ ಲಿಮಿಟೆಡ್ ಓಕಳಿ ರವರು  3 ವರ್ಷದಿಂದ ಸಿ.ಒಒ ಅಂತಾ ಕ್ವಿದೀತಾಸ ಪಾರಮ್ಸ್ ಪ್ರೈವೆಟ್ ಲಿಮಿಟೇಡ್ ಓಕಳಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ ನಮ್ಮ ಕಂಪನಿಯ ಮಾಲೀಕರು ನಿಖಿಲ್ ರತ್ಮಂ ಅಂತಾ ಇರುತ್ತಾರೆ. ನಮ್ಮ ಓಕಳಿಯ ಕುರಿ  ಪಾರಮ್ಸ್ ನಲ್ಲಿ ಬೀತಲ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡಿರುತ್ತೆವೆ,  ಈ ಕ್ವಿದೀತಾಸ ಪಾರಮ್ಸ್ ಪ್ರೈವೆಟ್ ಲಿಮಿಟೇಡ್ ಓಕಳಿಯಲ್ಲಿ ಜೊಲರ್ನ ಜಾರ್ಜ ತಂದೆ ವಿ.ವಿ ಪೀಟರ್ ಸಾ: ಎಮ್.ಜಿ ರೋಡ ಎದುರಗಡೆ ಜಿ.ಟಿ.ಟಿ.ಸಿ ಕಾಲೇಜ ಕಲಬುರಗಿ ಇವರು ಮಾನ್ಯಜರ ಅಂತಾ ಕೆಲಸ ನಿರ್ವಹಿಸುತ್ತಿರುತ್ತಾರೆ, ದಿನಾಂಕ 04/02/2019 ರಂದು ಬೆಳಗ್ಗೆ 6-00 ಗಂಟೆಗೆ ಜೊಲರ್ನ ಜಾರ್ಜ ಮ್ಯಾನೇಜರವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ದಿನಾಂಕ: 03/02/2019 ರಂದು ರಾತ್ರಿ 11 ಗಂಟೆ ಸುಮಾರಿಗೆ ನಾನು ನಮ್ಮ ಸಿಬ್ಬಂದಿಯವರು ರಾತ್ರಿ ಫಾರಂನಲ್ಲಿ ರೌಂಡ್ಸ ಮಾಡಿದಾಗ ಶೇಡನಲ್ಲಿ ಎಲ್ಲಾ ಕುರಿಗಳು ಇದ್ದವು. ರಾತ್ರಿ 8:00  ಗಂಟೆ ಸುಮಾರಿರಿಗೆ ಊಟ ಮಾಡಿಕೊಂಡು ಮಲಗಿದೇವು ದಿನಾಂಕ: 04/02/2019 ರಂದು ಬೆಳಗ್ಗೆ 5-00 ಗಂಟೆಯ ಸೂಮಾರಿಗೆ ನಮ್ಮ ಸ್ಕಾಪರ್ಯೋ ಕಾರ ಹೈದ್ರಾಬಾದಗೆ ಹೋಗುತ್ತಿದ್ದ ಪ್ರಯುಕ್ತ ನಾನು ಎದ್ದು ಬಂದು ನೊಡಲಾಗಿ ನಮ್ಮ ಕುರಿ ಫಾರಂ ಎದುರಿನ ರೋಡಿನ ಮೇಲೆ ಒಂದು ಕುರಿ ಇದ್ದು, ಅದನ್ನು ನೋಡಲಾಗಿ ಅದು ನಮ್ಮ ಫಾರಂ ಕುರಿ ಇದ್ದ ಪ್ರಯುಕ್ತ ಅದನ್ನು ಶೇಡಿನಲ್ಲಿ ತಂದು ಬಿಟ್ಟು ನಮ್ಮ ಫಾರಂ ಶೇಡನಲ್ಲಿದ್ದ ಕುರಿಗಳನ್ನು ಎಣಿಸಿ ನೋಡಲಾಗಿ  ಅದರಲ್ಲಿ 22 ಕುರಿಗಳು ಇಲ್ಲದೆ ಇರುವುದು ಕಂಡುಬಂತು. ನಾನು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ಅಂತಾ ಫೋನ್ ಮುಖಾಂತರ ನನಗೆ ತಿಳಿಸಿದ್ದು ನಾನು ದಿನಾಂಕ 04/02/2019 ರಂದು ಸಾಯಂಕಾಲ 8-30 ಗಂಟೆಗೆ ನಾನು ಬಂದು ಓಕಳಿಯಲ್ಲಿಯ ಕ್ವಿದೀತಾಸ ಫಾರಂ ಪ್ರೈವೆಟ್ ಲಿಮಿಟೇಡ್ ಪಾರಮ್ಸ್ಕ್ಕೆ ಬಂದು ನೋಡಲಾಗಿ ನಮ್ಮ ಫಾರಂನಲ್ಲಿದ್ದ ಕುರಿಗಳಲ್ಲಿ 22 ಕುರಿಗಳನ್ನು ನಮ್ಮ ಫಾರಂ ಸುತ್ತ ಅಳವಡಿಸಿದ ತಂತಿ ಬೇಲಿಯನ್ನು ಕಟ್ ಮಾಡಿ ಒಳಗೆ ಬಂದು ಯಾರೋ ಕಳ್ಳರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅದರ ಒಟ್ಟು ಕಿಮ್ಮತ್ತು 4,95,575.50 ಇರುತ್ತದೆ. ನಾನು ಮತ್ತು ನಮ್ಮ ಮ್ಯಾಜೇಜರ ಮತ್ತು ಫಾರಂನ ಸಿಬ್ಬಂದಿಯವರು ಅಂದಿನಿಂದ ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ಕಾರಣ ನಮ್ಮ ಫಾರಂ ಹೌಸಿನ ತಂತಿ ಬೇಲಿಯನ್ನು ಕಟ್ ಮಾಡಿ ಶೇಡ್ ನಲ್ಲಿದ್ದ ಅಂದಾಜು ಕಿಮ್ಮತ್ತಿನ  4,95,575.50  ಬೆಲೆಯ 22 ಕುರಿಗಳನ್ನು ದಿನಾಂಕ: 03/02/2019 ರ ಮಧ್ಯ ರಾತ್ರಯಿಂದ 04/02/2019 ರ ಬೆಳಗಿನ 5 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: