POLICE BHAVAN KALABURAGI

POLICE BHAVAN KALABURAGI

08 February 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ  ಕುಪೆಂದ್ರ ತಂದೆ ಗುರಣ್ಣ ಸಾಃ ಜೋಗೂರು ರವರದು ಜೋಗೂರ ಸೀಮಾಂತರದ  ಹೊಲದ ಪಕ್ಕದಲ್ಲಿ ನಮ್ಮೂರಿನ ಬಸಣ್ಣ ತಂದೆ ಬಂಡೆಪ್ಪಾ ಕೆಂಚಾ ಇವರ ಹೊಲ ಇದ್ದುಸದರಿ ಬಸಣ್ಣ ಮತ್ತು ಆತನ ಮಕ್ಕಳು ನಮ್ಮ ಹೊಲದಲ್ಲಿ ಧನ-ಕರುಗಳನ್ನು ಬೀಡುವುದು, ಬಂದಾರಿಯ ಮೇಲಿದ್ದ ಗಿಡಗಳನ್ನು ಕಡಿಯುವುದು ಮಾಡುತ್ತಿದ್ದು, ನಾನು ಅವರಿಗೆ ಸುಮಾರಿ ಸಲ ನೀವು ಈ ರೀತಿ ಮಾಡುವುದು ಸರಿಯಲ್ಲ ಅಂತಾ ಹೇಳಿದಾಗ ಸದರಿಯವರು ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ದಿನಾಂಕ 06/02/2019ರಂದು ಮದ್ಯಾಹ್ನ ನಾನು ಹೊಲದಲ್ಲಿದ್ದಾಗ ಸದರಿ ಬಸಣ್ಣ ಇವರ ಧನಗಳು ನಮ್ಮ ಹೊಲದಲ್ಲ ಬಿಟ್ಟಿದ್ದು, ನಾನು ಅವರಿಗೆ ಹೊಲದಲ್ಲಿ ಇನ್ನೂ ತೋಗರಿ ಬೇಳೆ ಇದೆ  ಹೀಗೆ ಧನ-ಕರುಗಳು ಬಿಟ್ಟರೇ ಹೇಗೆ ಅಂತಾ ಅಂದಾಗ ಸದರಿ ಬಸಣ್ಣ ಮತ್ತು ನನಗೂ ಬಾಯಿ ಮಾತಿನ ತಕರಾರು ಆಗಿದ್ದು, ನಾನು ಮನೆಗೆ ಬಂದಾಗ ಸಾಯಂಕಾಲ 7.30 ಗಂಟೆಯ ಸುಮಾರಿಗೆ ನಾನು ಮನೆಯ ಹತ್ತಿರ ಇದ್ದಾಗ, ಸದರಿ ಬಸಣ್ಣ ಮತ್ತು ಆತನ ಮಕ್ಕಳಾದ ಶಾಂತಪ್ಪ, ರಾಜು, ಶರಣು, ಶೇಖಪ್ಪ, ವಿಶ್ವರಾಜ @ ವಿಶು ಎಲ್ಲರೂ ಕೂಡಿ ಕೊಂಡು ಬಂದು  ಅವರಲ್ಲಿ ಶಾಂತಪ್ಪ & ಶರಣು ಇವರು ಏ ಬೋಸಡಿ ಮಗನೇ ಮದ್ಯಾಹ್ನ ಹೊಲದಲ್ಲಿ ನನ್ನ ತಂದೆಗೆ ಬೈಯುತ್ತಿ ಅಂತಾ ಅನ್ನುತ್ತಾ ಶಾಂತಪ್ಪ ಇತನು  ಕಲ್ಲಿನಿಂದ ನನ್ನ ತಲೆಗೆ ಹೊಡೆದು ತೀವ್ರ ರಕ್ತಗಾಯಪಡಿಸಿದನು. ಶರಣು ಇತನು ತನ್ನ ಹತ್ತಿರ ಇದ್ದ ಬಡಿಗೆಯಿಂದ ನನ್ನ ಕಾಲಿಗೆ ಹೊಡೆದನು. ರಾಜು ಇತನು ಕೈ ಮುಷ್ಠಿ ಮಾಡಿ ಎದೆಗೆ ಹೊಡೆದನು, ಶೇಖಪ್ಪ, ವಿಶು & ಬಸಣ್ಣ ಇವರು ನೇಲಕ್ಕೆ ಹಾಕಿ ಕಾಲಿನಿಂದ ಒದ್ದರು. ಆಗನಮ್ಮೂರಿನ ಭೀಮರಾಯ ಗೊಬ್ಬೂರ, ಚಂದ್ರಕಾಂತ ದನ್ರಾ, ನನ್ನ ಮಗ ಬಸವರಾಜ, ಅಣ್ಣನ ಮಗ ಶಿವಾನಂದ ಇವರುಗಳು ಬಂದು ಜಗಳ ಬೀಡಿಸಿಕೊಂಡಿರುತ್ತಾರೆ. ನಂತರ ಸದರಿಯವರೆಲ್ಲರೂ ಕೂಡಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವದ ಭೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಚನ್ನವೀರಯ್ಯಾ ತಂದೆ ರಾಚಯ್ಯಾ ಸಾಲಿಮಠ ಸಾ : ಅವರಾದ (ಬಿ) ಹಾ:ವ: ರಾಮತೀರ್ಥ ಗುಡಿ ಹಿಂದುಗಡೆ ಅಯೋಶ್ಯ ನಗರ ಕಲಬುರಗಿ  ರವರು   ದಿನಾಂಕ 06/02/2019 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮತ್ತು ಅವರ ಮಗ ಅಣವೀರಯ್ಯ ಇಬ್ಬರು ಮನೆಯಲ್ಲಿದ್ದಾಗ ಬಾಯಿ ಬಡಿಯುವ ಸಪ್ಪಳ ಕೇಳಿ ಮನೆಯಿಂದ ಇಬ್ಬರು ಹೊರಗಡೆ ಬಂದು ನೋಡಲಾಗಿ ಸಚಿನ ಇತನು ತನ್ನ ಮಗ ಶಿವುಕುಮಾರ ಭೋಸಡಿ ಮಗನೇ ನಿನಗೆ ಕೊಡಬೇಕಾದ ಹಣ ಸ್ವಲ್ಪ ದಿವಸಗಳಲ್ಲಿ ಮರಳಿ ಕೊಡುತ್ತೇನೆ ಎಂದು ಹೇಳಿದರೂ ಸಿಕ್ಕ ಸಿಕ್ಕಲ್ಲಿ ನಮ್ಮ ಗೆಳೆಯರ ಮುಂದೆ ಹಣ ಕೊಡು ಅಂತಾ ಹೇಳಿ ನನ್ನ ಮಾನ ಮರ್ಯಾದೆ ತೆಗೆಯುತ್ತೀ ಭೋಸಡಿ ಮಗನೇ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅನ್ನುತ್ತಾ ತನ್ನ ಹತ್ತಿರವಿದ್ದ ಚಾಕು ತೆಗೆದು  ಫಿರ್ಯಾದಿ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಬಲ ಹೊಟ್ಟೆಗೆ ಜೋರಾಗಿ ತಿವಿದು ಹೊರೆಗೆ ತೆಗೆದನು. ಅವನ ಹೊಟ್ಟೆಯಿಂದ ಕರಳುಗಳು ಹೊರಗೆ ಬಂದು ರಕ್ತ ಸೋರ ಹತ್ತಿತ್ತು. ಅವನ ಮಗ  ಹೊಟ್ಟೆ ಹಿಡಿದುಕೊಂಡು ಮನೆಯಲ್ಲಿ ಹೋಗುತ್ತಿರುವಾಗ ಸಚಿನ ಇತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಮತ್ತೆ ನನ್ನ ಮಗನ ಬಲ ತಲೆ ಹಿಂದೆ ಹೊಡೆದು ರಕ್ತಗಾಯಗೊಳಿಸಿದನು. ಇದನ್ನು ನಾನು ಮತ್ತು ಆತನ ಮಗ ಅಣವೀರಯ್ಯ ಇಬ್ಬರು ಮನೆಯ ಮುಂದಿನ ಲೈಟಿನ ಬೆಳಕಿನಲ್ಲಿ ನೋಡಿ ಹಿಡಿಯಿರಿ ಅಂತಾ ಕೂಗುತ್ತಿದ್ದಾಗ ಸಚಿನ ಇತನು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಸಾತಪ್ಪ ಸಿಂಘೆ ಸಾ: ಉಡಚಾಣ  ರವರು ದಿನಾಂಕ 06-02-19 ರಂದು ನಾನು ಮತ್ತು ನಮ್ಮ ಗ್ರಾಮದ ಯೋಗಿರಾಜ ತಂದೆ ಸಿದ್ದಪ್ಪ ಗಿರಣಿ ರವರು ಕೂಡಿಕೊಂಡು ಯೋಗಿರಾಜ ರವರ ಮೋಟಾರ ಸೈಕಲ ನಂ ಎಮೆ.ಹೆಚ್.14-ಎವೈ-9747 ನೇದ್ದರ ಮೇಲೆ ಅಫಜಲಪೂರ ದಿಂದ ಉಡಚಾಣಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶೀರವಾಳ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಶೋಕ ಲೈಲಾಂಡ ಕಂಪನಿಯ ವಾಹನ ಚಾಲಕ ಕೆ.-28-ಸಿ-3033 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡೆಸಿದ್ದು ಇದರಿಂದ ಯೋಗಿರಾಜಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮುರಿದಂತತಾಗಿದೆ ಮತ್ತು ಬಲಗಾಲ ಮತ್ತು ಎಡಗಾಲು ಮುರಿದ್ದು ಇರುತ್ತದೆ. ನನಗೆ ಎಡಗಾಲಿಗೆ ಪೆಟ್ಟು ಮತ್ತು ಬಲಗೈ ಮುರಿದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: