POLICE BHAVAN KALABURAGI

POLICE BHAVAN KALABURAGI

20 July 2018

KALABURAGI DISTRICT REPORTED CRIMES

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಹಸನಪ್ಪ ಡಾಂಗೆ ಸಿ.ಹೆಚ್.ಸಿ  ಜೇವರಗಿ ಪೊಲೀಸ್ ಠಾಣೆ ರವರು ದಿನಾಂಕ; 19/07/2018 ರಂದು ಬೆಳಗ್ಗೆ 8-00 ಗಂಟೆಯಿಂದ ಮದ್ಯಾಹ್ನ 2-00 ಗಂಟೆಯವರೆಗೆ ನಾನು ಜೇವರಗಿ ಠಾಣೆಯಲ್ಲಿ ಎಸ್.ಹೆಚ್.ಡಿ ಕರ್ತವ್ಯದಲ್ಲಿ ಇದ್ದೆನು. ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಒಬ್ಬ ವ್ಯಕ್ತಿಯು ಜೋರಾಗಿ ಚೀರ್ಯಾಡುತ್ತಾ ಠಾಣೆಯೊಳಗೆ ಎಸ್.ಹೆಚ್.. ಕುಳಿತುಕೊಳ್ಳುವ ಟೇಬಲಕ್ಕೆ ಬಂದನು. ನಾನು ಅವನಿಗೆ ವಿಚಾರಿಸಲು ಅವನು ನನಗೆ ಏರು ದ್ವನಿಯಲ್ಲಿ ನೀನೇನು ಪೊಲೀಸ್ ನಾನು ಹೇಳುವುದು ಕೇಳು ಮಗನೆ ಎಂದು ಜೋರಾಗಿ ಚಿರ್ಯಾಡಹತ್ತಿದ್ದನು. ನಾನು ಅವನಿಗೆ ಸಮಾದನದಿಂದ ಮಾತನಾಡಿಸಿ ಹೆಸರು ವಿಳಾಸ ಕೆಳಲಾಗಿ ತನ್ನ ಹೆಸರು ಶರಣಪ್ಪ ತಂದೆ ನಾರಾಯಣಪ್ಪ ದೊಡ್ಡಮನಿ  ಸಾಃ ಅಖಂಡೇಶ್ವರ ನಗರ ಜೇವರಗಿ ಅಂತಾ ತಿಳಿಸಿದನು. ನಂತರ ಅವನಿಗೆ ನೀನ್ನ ಕೈ ಗಳ ಮೇಲೆ ಮತ್ತು ಕಾಲಿಗೆ ಗಾಯವಾಗಿದೆಯಲ್ಲಾ  ಎನಾಗಿದೆ ಎಂದು ಕೇಳಿ  ನೀನ್ನದು ಏನಾದರು ದೂರು ಇದೆ ಅರ್ಜಿ ಕೊಡು ಅಂತಾ ವಿಚಾರಣೆ ಮಾಡುತ್ತಿದ್ದಾಗ ಅವನು ಪೊಲೀಸ್ ಸೂಳಿ ಮಗನೆ ನನಗೆ ಆದ ಗಾಯದ ಬಗ್ಗೆ ನನಗೇನು ಕೇಳುತಿ ನೀನು ಮೊದಲು ನನ್ನ ಸಂಗಡ ಜಗಳ ಮಾಡಿದ ನನ್ನ ಮನೆಯವರಿಗೆ ಕರೆದುಕೊಂಡು ಬಾ ಬೊಸಡಿ ಮಗನೆ  ನನ್ನ ಗಾಯ ನೋಡಿ  ನೀನು ಏನು ಮಾಡುತಿ ಬೊಸಡಿ ಮಗನೆ ನೀಮ್ಮ ಠಾಣೆಗೆ ಸುಟ್ಟು ಹಾಕುತಿನಿ ಎಂದು ಟೇಬಲ್ ಬಡಿದು ಚಿರ್ಯಾಡಿ,  ಯಾವ ಪೊಲೀಸರು ನನ್ನ ಸೆಂಟ್ಯಾ ಕಿತ್ತುವುದಿಲ್ಲಾ ಎಂದು ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವನಿಗೆ ಸಮಾದಾನದಿಂದ ಮಾತನಾಡಲು ತಿಳಿಸಿದರೆ ಅವನು ನನ್ನ ಮೈ ಮೇಲೆ ಬಂದು ನನ್ನ ಮೈ ಮೇಲಿನ ಸಮವಸ್ತ್ರ ಹಿಡಿದು ಜಗ್ಗಿ ಭುಜದ ಮೇಲಿನ ಪಟ್ಟಿ ಹಿಡಿದು ಎಳೆದು ಕಿತ್ತಿ ಜಗ್ಗಾಡಿ ನನಗೆ ನೂಕಿಸಿಕೊಟ್ಟಿರುತ್ತಾನೆ. ಅಲ್ಲದೆ ನನ್ನ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾನೆ ಮತ್ತು ನೀನು ಜೇವರಗಿಯಲ್ಲಿ ಹೇಗೆ ಕೆಲಸ ಮಾಡುತಿ ಬೊಸಡಿ ಮಗನೆ ನೀನಗೆ ನೋಡಿಕೊಳುತ್ತೆನೆ ಟೈಮ ಬಂದರೆ ನೀನಗೆ ಮತ್ತು ನೀಮ್ಮ ಪೊಲೀಸರಿಗೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾನೆ, ಆಗ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಪರಮೇಶ್ವರ ಸಿಹೆಚ್.ಸಿ. 36, ಶ್ರೀ ಗುರುಬಸಪ್ಪ ಹೆಚ್.ಸಿ. 65, ಶ್ರೀ ಶಿವರಾಜುಕುಮಾರ ಸಿಪಿಸಿ 498, ಶ್ರೀ ಕೆಂಚಬಸವ ಸಿಪಿಸಿ 941 ಮತ್ತು ಠಾಣಾ ಪಹರೆ ಸಿಬ್ಬಂದಿಯಾದ ಶ್ರೀಮತಿ ಮುಬೀನಾ .ಪಿಸಿ 757 ರವರು ಮತ್ತು ಠಾಣೆಗೆ ಅರ್ಜಿ ಕೊಡಲು ಬಂದ ಸಾರ್ವಜನಿಕರಾದ ಶರಣಬಸಪ್ಪ ತಂದೆ ಸಿದ್ದಪ್ಪ ಹರವಾಳ, ಮಲ್ಲಿಕಾರ್ಜುನ ತಂದೆ ಬಸವರಾಜ ಗೌನಳ್ಳಿ ಇತರರು ಕೂಡಿ ಬಿಡಿಸಿಕೊಂಡಿರುತ್ತಾರೆ. ಮೇಲೆ ನಮೂದಿಸಿದ ಶರಣಪ್ಪ ತಂದೆ ನಾರಾಯಣಪ್ಪ ದೊಡಮನಿ ಇತನು ಠಾಣೆಗೆ ಬಂದು ಕರ್ತವ್ಯದ ಮೇಲೆ ಇದ್ದ ನನಗೆ ಅವಾಚ್ಯವಾಗಿ ಬೈದು ಕೈಯಿಂದ ನೂಕಿಸಿಕೊಟ್ಟು ಸಮವಸ್ತ್ರ ಹರಿದು ಕರ್ತವ್ಯಕ್ಕೆ ಅಡೆ ತಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಕಾರಣ ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/04/2018 ರಂದು ತನ್ನ  ಊರಿಗೆ  ಹೋಗಲು ಕಲಬುರಗಿ ನಗರದ ಹುಮನಾಬಾದ ರಿಂಗ ರಸ್ತೆ ದಾಟಿ ಇರುವ ಬಸ ಸ್ಟಾಪ್ ಹತ್ತಿರ  ಸುಮಾರು ಮಧ್ಯಾಹ್ನ 02-00 ಗಂಟೆಗೆ ಬಸ್ಸಿಗಾಗಿ ಕಾಯುತ್ತಾ ನಿಂತಾಗ ಫಿರ್ಯಾದಿದಾರಳ ತಾಂಡವನಾದ ಸಂದೀಪ ತಂದೆ ನಾಥುರಾಮ ರಾಠೋಡ ಸಾ: ಕಿಣ್ಣಿ ಸರಪೋಶ ತಾಂಡಾ ಕಮಲಾಪೂರ ತಾ:ಜಿ: ಕಲಬುರಗಿ  ಇತನು ಅಲ್ಲಿಗೆ ತನ್ನ ಮೌಸಿ ಮಗನಾದ ಗೋಲು @ ಸೋನು ಸಾ: ಶ್ರೀನಿವಾಸ ಸರಡಗಿ  ತಾ:ಜಿ: ಕಲಬುರಗಿ  ಇತನ ಸಂಗಡ ಬಂದು ಫಿರ್ಯಾದಿದಾರಳಿಗೆ ರಂಡಿ, ಭೋಸಡಿ ನಾನು ನಿನ್ನ ಮೇಲೆ ಬಹಳ ಮನಷ್ಸು ಇಟ್ಟಿದ್ದೇನೆ ನೀನು ನಾನು ಹೇಳಿದ ಹಾಗೆ ಕೇಳುತ್ತಿಲ್ಲ ನಿನಗೆ ಇವತ್ತು ಎನು ಮಾಡುತ್ತೇನೆ ನೋಡು ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಬ್ಬರು ಫಿರ್ಯಾದಿದಾರಳಿಗೆ ಹಾಗೂ ಫಿರ್ಯಾದಿದಾರಳ ಮಗಳನ್ನು  ಕೈ ಹಿಡಿದು ಎಳೆದಾಡಿ ಅವರನ್ನು ಜಬರದಸ್ತಿಯಿಂದ ತನ್ನ ಮೋಟಾರ ಸೈಕಲ ಮೇಲೆ ನಡುವೆ ಕೂಡಿಸಿ ಹಿಂದೆ ಗೋಲು @ ಸೋನು  ಇತನಿಗೆ ಕೂಡಿಸಿ ಸಂದೀಪ ಇತನು ಮೋಟಾರ ಸೈಕಲ ಓಡಿಸುತ್ತಿದ್ದನು. ಅವರಿಬ್ಬರು ಫಿರ್ಯಾದಿದಾರಳಿಗೆ ಜಮನಖೋಳಾ ತಾಂಡಾ ಹಿಂದಿರುವ ನಿರ್ಜನ ಪ್ರದೇಶ ( ಗುಡ್ಡಗಾಡು ಪ್ರದೇಶ)ಕ್ಕೆ  ಒಯ್ದು ಫಿರ್ಯಾದಿದಾರಳಿಗೆ ಹಾಗೂ ಫಿರ್ಯಾದಿದಾರಳ ಮಗಳಿಗೆ ಖಲ್ಲಾಸ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಫಿರ್ಯಾದಿದಾರಳ ಜೊತೆ ಸಂದೀಪ ಇತನು ಜಬರಿ ಸಂಭೋಗ ಮಾಡಿರುತ್ತಾನೆ. ಗೋಲು @ ಸೋನು ಇತನು ಫಿರ್ಯಾದಿದಾರಳ ಮಗಳನ್ನು ಕುತ್ತಿಗೆ ಹಿಚುಕಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದನು. ಫಿರ್ಯಾದಿದಾರಳ ಮೇಲೆ ಅತ್ಯಾಚಾರವಾದ ನಂತರ ಸಂದೀಪ  ಹಾಗೂ ಗೋಲು @ ಸೋನು ಇತನು ಫಿರ್ಯಾದಿದಾರಳಿಗೆ ಕೇಸು-ಗೀಸು ಅಂತಾ ಹೋದರೆ ಖಲಾಸ ಮಾಡುವುದಾಗಿ ಹಾಗೂ ಫಿರ್ಯಾದಿದಾರಳ ಮಾನ ಹರಾಜ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಫಿರ್ಯಾದಿದಾರಳಿಗೆ ಜಬರದಸ್ತಿಯಿಂದ ಕಲಬುರಗಿ ಹುಮನಾಬಾದ ರಿಂಗ ರಸ್ತೆ ದಾಟಿ ಇರುವ ಬಸ ಸ್ಟಾಪ ಹತ್ತಿರದಿಂದ ಅಪಹರಿಸಿ ಜೀವ ಬೆದರಿಕೆ ಹಾಕಿ ಜಬರಿ ಸಂಭೋಗ ಮಾಡಿರುವ ಹಾಗೂ ಅದಕ್ಕೆ ಪ್ರಚೋದನೆ ಮತ್ತು ಕುಮ್ಮಕ್ಕು ಕೊಟ್ಟಿರುವ ಹಾಗೂ ಫಿರ್ಯಾದಿಯ ಬಾಳನ್ನು ಹಾಳು ಮಾಡಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: