ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 18-07-2018 ರಂದು ಅಣ್ಣನ ಮಗನಾದ ಸಂತೋಷ ತಂದೆ ಮಲ್ಲಣ್ಣ ಬಿರಾದಾರ ಇಬ್ಬರು ನಮ್ಮ ಹೊಲದಿಂದ ಮನೆಗೆ ಬರುವಾಗ ರಮೇಶ ತಂದೆ ಈರಣ್ಣ ಹುಣಸಗಿ ರವರ ಹೊಲದಲ್ಲಿನ ದಾರಿಯಿಂದ ಮನೆಗೆ ಬರುವಾಗ 1) ರಮೇಶ ರಂದೆ ಈರಣ್ಣ ಹುಣಸಗಿ 2) ಭಗವಂತರಾಯ ತಂದೆ ಈರಣ್ಣ ಹುಣಸಲಗಿ 3) ಶರಣಬಸು ತಂದೆ ನಾಗಪ್ಪ ಹುಣಸಗಿ 4) ಈರಣ್ಣ ತಂದೆ ನಾಗಪ್ಪ ಹುಣಸಗಿ ನಾಲ್ಕು ಜನರು ನಮಗೆ ತಡೆದು ನಿಲ್ಲಿಸಿ ರಂಡಿ ಮಕ್ಕಳ್ಯಾ ನಮ್ಮ ಮನೆಯ ಮುಂದೆ ನೀವು ಉದ್ದೇಶ ಪೂರ್ವಕವಾಗಿಯೇ ಸಿಸಿ ರಸ್ತೆ ಮಾಡಿಲ್ಲಾ ನಿಮ್ಮ ಸೊಕ್ಕ ಬಾಳ ಅದಾ ಅಂತ ಬೈಯುತಿದ್ದಾಗ ಅಲ್ಲಿಂದ ಹೋಗುತಿದ್ದ ನಮ್ಮ ಗ್ರಾಮದ ದೀಲಿಪ ತಂದೆ ಜಟ್ಟೆಪ್ಪ ಸಿಂಗೆ, ಶಾವರಸಿದ್ದ ತಂದೆ ಕುನಪ್ಪ ಜಮಾದಾರ ಇಬ್ಬರು ನಮ್ಮ ಹತ್ತಿರ ಬಂದು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ಕೇಳದೆ ರಮೇಶ ಈತನು ತನ್ನ ಕೈಯಲಿದ್ದ ಕುಡಿಗೊಲದಿಂದ ಈ ರಂಡಿಮಗಂದು ಸೊಕ್ಕ ಬಾಳ ಅದಾ ಅಂತ ಅಂದು ಜೋರಾಗಿ ನನ್ನ ತಲೆಯ ಮದ್ಯ ಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ನಾನು ಕೆಳಗೆ ಬಿದ್ದಾಗ ಸಂತೋಷನಿಗೆ ಭಗವಂತರಾಯ ಈತನು ಕೈಯಿಂದ ಹೊಟ್ಟೆಗೆ ಎದೆಗೆ ಮುಷ್ಠಿ ಮಾಡಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ನಂತರ ನಾಲ್ಕು ಜನರು ಕೂಡಿ ತಮ್ಮ ಕಾಲಿನಿಂದ ನನಗೆ ಹಾಗು ಸಂತೋಷನಿಗೆ ಮನಬಂದಂತೆ ಒದೆಯುತಿದ್ದಾಗ ದೀಲಿಪ ಹಾಗು ಶವರಸಿದ್ದ ಇಬ್ಬರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ಅಲ್ಲಿಂದ ಹೋಗುವಾಗ ರಂಡಿ ಮಕ್ಕಳೆ ನಿಮಗೆ ಖಲಾಸ ಮಾಡ್ತಿವಿ ಅಂತ ಅಂದು ತಮ್ಮ ಕೈಯಲಿದ್ದ ಕೂಡಿಗೋಲ ಅಲ್ಲೆ ತಮ್ಮ ಹೊಲದಲ್ಲಿ ಬಿಸಾಡಿ ಹೋಗಿರುತ್ತಾರೆ ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸೊಲಾಪೂರದ ಮೊನಾರ್ಕ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ ಅಂತಾ ಶ್ರೀ ಮಹಾದೇವ ತಂದೆ ಸಿದ್ದಣ್ಣ ಬಿರದಾರ ಸಾ||ಕೂಡಿಗಾನೂರ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 03-05-2018 ರಂದು 01;00 ಎ.ಎಂ ದಿಂದ 01;30 ಎ.ಎಂ ಮದ್ಯದಲ್ಲಿ ಶ್ರೀಮತಿ ರೇಣುಕಾ ಗಂಡ
ಚಂದ್ರಾಮ ಕುಂಚಾಳ ಸಾ|| ಅಖಂಡಳ್ಳಿ ರವರ ಮಗಳು ನಾಗಮ್ಮ ಇವಳಿಗೆ ಸೈದಾಪೂರ ಗ್ರಾಮದ ಅಮೀನಪಟೇಲ ಎಂಬುವನು ಯಾವದೋ
ದುರುದ್ದೇಶದಿಂದ ಫಿರ್ಯಾದಿ ಮನೆಯಿಂದ ಅಪಹರಿಸಿಕೊಂಡು ಹೋಗಿರಬಹುದು ಅವಳನ್ನು ಪತ್ತೆ ಹಚ್ಚಿ ಆರೋಪಿತನ
ವಿರುದ್ದ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ 16/07/2018 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ
ನಾನು ಮನೆಯಲ್ಲಿದ್ದಾಗ ನನ್ನ ತಮ್ಮನಾದ ಬೀರಪ್ಪಾ ಈತನು ಲಾಡ ಚಿಂಚೋಳಿ ತಾಂಡಾದ ಉಮೇಶ ಎಂಬ
ವ್ಯಕ್ತಿಯೊಂದಿಗೆ ಸುಭಾಸ ಗುತ್ತೆದಾರ ಸಾಹೇಬರ ಹೊಲಕ್ಕೆ ಮೊಟರ ಸೈಕಲ ಮೇಲೆ ಹೊಗುವಾಗ ಲಾಡ
ಚಿಂಚೋಳಿ ತಾಂಡಾದ ಕ್ರಾಸ್ ಹತ್ತಿರ ಇರುವ ರಸ್ತೆ ದಿಬ್ಬಿನ ಹತ್ತಿರ ಉಮೇಶ ಈತನು ಮೊಟರ ಸೈಕಲನ್ನು
ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೆಕ್ ಹೊಡೆದಿದ್ದರಿಂದ ಮೊಟರ ಸೈಕಲ
ಸಮೇತವಾಗಿ ಮೊಟರ ಸೈಕಲ ಚಲಾಯಿಸುತ್ತಿದ್ದ ಉಮೇಶ ಹಾಗು ನನ್ನ ತಮ್ಮ ಬೀರಪ್ಪಾ ಇಬ್ಬರು ಕೇಳಗೆ
ಬಿದ್ದಿದ್ದರಿಂದ ನನ್ನ ತಮ್ಮನಿಗೆ ಭಾರಿಗಾಯವಾಗಿರುತ್ತವೆ ಅಂತಾ ನಮ್ಮ ಪರಿಚಯದವರಾದ ಮಾಳಪ್ಪಾ
ರವರು ತಿಳಿಸಿದ ಮೇರೆಗೆ ನಾನು ಮತ್ತು ಮಾಳಪ್ಪ ಇಬ್ಬರು ಕೂಡಿ ಅಲ್ಲಿಗೆ ಹೋಗಿ ನೋಡಲಾಗಿ ಮೊಟರ
ಸೈಕಲ ನಂ ಕೆಎ-05, ಇಪಿ-777 ನೆದ್ದು ರಸ್ತೆಯಲ್ಲಿ ಬಿದ್ದಿದ್ದು ನನ್ನ ತಮ್ಮನಿಗೆ ತಲೆಗೆ ಭಾರಿಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಉಮೇಶನಿಗೂ ಕೂಡಾ
ಮೂಗಿಗೆ ಭಾರಿಗಾಯವಾಗಿ ಅಸ್ವಸ್ಥನಾಗಿದ್ದನು. ಅಷ್ಟರಲ್ಲಿಯೇ ಉಮೇಶನ ತಮ್ಮನಾದ ವಿಲಾಸ ಜೂಲು
ಚವ್ಹಾಣ ಇವರು ಅಂಬುಲೆನ್ಸ ಕರೆಸಿದ್ದು ಅದರಲ್ಲಿ ನಾನು ಮತ್ತು ವಿಲಾಸ ಇಬ್ಬರು ಕೂಡಿ ನನ್ನ ತಮ್ಮ
ಬೀರಪ್ಪಾ ಮತ್ತು ಉಮೇಶ ಇಬ್ಬರಿಗು ಹಾಕಿಕೊಂಡು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ತಂದು
ಸೇರಿಕೆ ಮಾಡಿದ್ದು ನನ್ನ ತಮ್ಮನು ಪ್ರಜ್ಞೆ ಸ್ಥಿತಿಗೆ ಬಂದಿಲ್ಲಾ ಈ ಘಟನೆ ಇಂದು ಮುಂಜಾನೆ 9-30
ಗಂಟೆಯ ಸುಮಾರಿಗೆ ಜರುಗಿಸಿದ್ದು ಸದರಿ ಉಮೇಶ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೆಕು ಅಂತಾ
ಶ್ರೀ ಹಣಮಂತ ತಂದೆ ಸಿದ್ದಪ್ಪಾ ಮುನ್ನೊಳ್ಳಿ ಸಾ: ಲಾಡಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment