ಅಪಘಾತ ಪ್ರಕರಣಗಳು :
ಜೇವರಗಿ
ಠಾಣೆ :
ದಿನಾಂಕ; 18/06/2018 ರಂದು ಬೆಳಿಗ್ಗೆ 9-00 ಘಂಟೆಯ ಸುಮಾರಿಗೆ ನನ್ನ ತಮ್ಮ
ಶರಣಪ್ಪ ರದ್ದೆವಾಡಗಿ ಈತನ ಮಗ ರಾಜಶೇಖರ ಈತನು ಕಲಬುರಗಿಯಲ್ಲಿ ನಮ್ಮೂರ ಬಾಸ್ಕರ ಕುಲಕರ್ಣಿ ಇವರ
ಮಗನ ಮದುವೆ ಇರುವದರಿಂದ ಮದುವೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಪಲ್ಸರ ಮೋಟಾರ ಸೈಕಲ್
ನಂ:ಕೆ.ಎ-32-ಇ.ಎಲ್-6096 ನೇದ್ದರ ಮೇಲೆ ಜೇವರಗಿ ಕಡೆಗೆ ಹೋದನು. ಸ್ವಲ್ಪ ಸಮಯದ ನಂತರ ಈರಣ್ಣ
ತಂದೆ ನಿಂಗಣ್ಣ ಮಾಲಿ ಬಿರಾದಾರ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ಜೇವರಗಿ-ಕಲಬುರಗಿ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಡೀಪು
ಹತ್ತಿರ ರಾಜಶೇಖರ ರದ್ದೆವಾಡಗಿ ಈತನಿಗೆ ಬಸ್ ಅಪಘಾತವಾಗಿರುತ್ತದೆ. ಸ್ಥಳದಲ್ಲಿ ಸತ್ತಿರುತ್ತಾನೆ.
ಎಂದು ತಿಳಿಸಿದ ಮೇರೆಗೆ ನಾನು ಮತ್ತು ಕರಣಪ್ಪ ರದ್ದೆವಾಡಗಿ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು
ರಾಜಶೇಖರ ಈತನ ತಲೆ ಒಡೆದು ಮಿದುಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನನೆ ನಂತರ ನಾನು ಈರಣ್ಣ ತಂದೆ ನಿಂಗಣ್ಣ ಮಾಲಿ ಬಿರಾದಾರ
ಈತನಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ; ನಾನು ನನ್ನ ಮೋಟಾರ ಸೈಕಲ್ ಮೇಲೆ ಜೇವರಗಿಯಿಂದ ಕಲಬುರಗಿ ಕಡೆಗೆ ಹೋಗುವಾಗ ನನ್ನ ಮುಂದೆ
ಮೋಟಾರ ಸೈಕಲ್ ಮೇಲೆ ರಾಜಶೇಖರ ಈತನು ತನ್ನ ಮೋಟಾರ ಸೈಕಲ್ ನಂ:ಕೆ.ಎ-32-ಇ.ಎಲ್-6096
ನೇದ್ದರ ಮೇಲೆ ಕಲಬುರಗಿ ಕಡೆಗೆ ಹೋಗುತ್ತಿದ್ದನು. ಜೇವರಗಿ ಕಲಬುರಗಿ ರೋಡಿನ ಕೆ.ಎಸ್.ಆರ್.ಟಿ.ಸಿ
ಬಸ್ ಡೀಪು ಹತ್ತಿರ ಹೋಗುತ್ತಿದ್ದಾಗ ಬೆಳಿಗ್ಗೆ 10-30 ಘಂಟೆಯ ಸುಮಾರಿಗೆ ಎದುರಿನಿಂದ ಅಂದರೆ
ಕಲಬುರಗಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನೇದ್ದರ ಚಾಲಕನು ತನ್ನ ವಶದಲ್ಲಿ ಇದ್ದ ಬಸ್ಸನ್ನು
ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಜಶೇಖರ ಈತನ ಮೋಟಾರ ಸೈಕಲಿಗೆ ಡಿಕ್ಕಿ
ಹೊಡೆದುದ್ದರಿಂದ ರಾಜಶೇಖರ ಈತನು ಕೆಳಗಡೆ ಬಿದ್ದಾಗ ಬಸ್ ತಲೆಯ ಮೇಲೆ ಹಾಯಿದು ಹೋಗಿದ್ದರಿಂದ ತಲೆ
ಒಡೆದು ಮಿದುಳು ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಪಘಾತ ಮಾಡಿದ ಬಸ್ ಇದೇ ಇರುತ್ತದೆ
ಎಂದು ತೋರಿಸಿ ತಿಳಿಸಿದನು. ನಾನು ಬಸ್ ನಂಬರ ನೋಡಲು ಕೆ.ಎ-25-ಎಫ್-3177 ಇದ್ದು, ಹುಮನಾಬಾದ-ಹುಬ್ಬಳಿ ಬಸ್ ಇದ್ದು, ಅದರ ಚಾಲಕನು ಇರಲಿಲ್ಲ ಬಸ್ ಬಿಟ್ಟು ಓಡಿ ಹೋಗಿದ್ದನು. ಅವನ ಹೆಸರು
ಶಿವರಾಜ ತಂದೆ ಕಾಶಪ್ಪ ಯಣೆಕುರೆ ಸಾ; ಮಲ್ಕಾಪೂರ
ವಾಡಿ ತಾ; ಹುಮನಾಬಾದ್ ಎಂದು ಗೊತ್ತಾಗಿರುತ್ತದೆ. ಅಂತಾ ಶ್ರೀ
ಸಾಹೇಬಗೌಡ ತಂದೆ ಕರಣಪ್ಪ ರದ್ದೆವಾಡಗಿ ಸಾ; ಆಂದೋಲಾ ಗ್ರಾಮ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ
ಠಾಣೆ : ದಿನಾಂಕ 17/06/2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮೃತ ಮಹ್ಮದ ಅಲಿ ಇತನು ಹಿರೋ ಹೊಂಡಾ ಸ್ಪೆಂಡರ ಮೋಟಾರ ಸೈಕಲ ಕೆಎ 32 ಇಇ 0151 ನೇದ್ದರ ಹಿಂದೆ ಭೀಮಶ್ಯಾ
ಇತನಿಗೆ ಕೂಡಿಸಿಕೊಂಡು ಟ್ಯಾಕ್ಟ್ರರ ಸಾಮಾನುಗಳು ತರಲು ಕಲಬುರಗಿಗೆ ಹೋಗಿ ಟ್ಯಾಕ್ಟ್ರರ ಸಾಮಾನುಗಳನ್ನು
ತೆಗೆದುಕೊಂಡು ಮರಳಿ ಅವರಾದ (ಬಿ) ಗ್ರಾಮಕ್ಕೆ ಬರುತ್ತಿದ್ದಾಗ
ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಅವರಾದ (ಬಿ) ಕ್ರಾಸಿನ ಪೂಲಿನ ಹತ್ತಿರ ಆಲದ ಗಿಡದ ಹತ್ತಿರ ರೋಡಿನ ಬದಿಯಿಂದ
ನಿಧಾನವಾಗಿ ಬರುತ್ತಿದ್ದಾಗ ಅದೇ ವೇಳೆಗೆ
ಹಿಂದಿನಿಂದ ಅಂದರೆ ಕಲಬುರಗಿ ಕಡೆಯಿಂದ ಸಿಫ್ಟ್ ಕಾರ ನಂಬರ ಕೆಎ 02 ಎಜಿ 0840 ಚಾಲಕನು ತನ್ನ ಕಾರನ್ನು
ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಅಡ್ಡಾ ದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ಮುಂದೆ ಹೋಗುತ್ತಿದ್ದ
ಈ ಮೇಲಿನ ಮೋಟಾರ ಸೈಕಲ ಮೇಲೆ ಕುಳಿತು ಹೊರಟ ಮಹ್ಮದ
ಅಲಿ & ಭೀಮಶ್ಯಾ ಇವರ ಮೋಟಾರ ಸೈಕಲದ ಹಿಂದುಗಡೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತಡಿಸಿ ತನ್ನ ಕಾರನ್ನು
ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು.ಇದರಿಂದಾಗಿ
ಮಹ್ಮದ ಅಲಿ ಮತ್ತು ಭೀಮಶ್ಯಾ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಭೀಮಶ್ಯಾ ಇತನು ಸ್ಥಳದಲ್ಲಿ
ಮೃತಪಟ್ಟಿದ್ದು. ಮಹ್ಮದ ಅಲಿ ಇತನಿಗೆ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಮಧ್ಯಾಹ್ನ
12-30 ಗಂಟೆಗೆ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ.
ಆದ್ದುದ್ದರಿಂದ ಈ ಮೇಲ್ಕಂಡ ಕಾರ ನಂ. ಕೆಎ 02 ಎಜಿ 0840 ನೇದ್ದರ ಚಾಲಕನಿಗೆ ಪತ್ತೆ ಮಾಡಿ ಅತನ ಮೇಲೆ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತಾ ಶ್ರೀ ರಹೇಮತ
ಅಲಿ ತಂದೆ ಶಾವರಮಿಯ್ಯಾ ಗುರುಮಿಟಕಲ ಸಾ: ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಭೂತಾಳಿ ಕಂಠಿಕರ್ ಸಾ|| ಚಿಣಮಗೇರಾ ಇವರ ಗಂಡನಾದ ಭೂತಾಳಿ
ತಂದೆ ಯಲ್ಲಪ್ಪ ಕಂಠಿಕರ್ ಇವರು ಅಫಜಲಪೂರದ ಜೆಸ್ಕಾಂ (ಕೆಇಬಿ) ಯಲ್ಲಿ ಲೈನಮೇನ್ ಅಂತಾ ಕೆಲಸ ಮಾಡುತ್ತಾರೆ. ಪ್ರತಿ ದಿನ ನನ್ನ ಗಂಡನು ಚಿಣಮಗೇರಾದಿಂದ
ಅಫಜಲಪೂರಕ್ಕೆ ಅವರ ತಂಗಿಯ ಗಂಡನಾದ ಶರಣಪ್ಪ ಪೂಜಾರಿ ರವರ ಹೆಸರಿನಲ್ಲಿರುವ ಸಿಡಿ 100 ಮೋಟರ ಸೈಕಲ ನಂ ಕೆಎ-32 ಆರ್-0601 ನೇದ್ದರ ಮೇಲೆ ಹೋಗಿ ಬರುವುದು ಮಾಡುತ್ತಿರುತ್ತಾನೆ
ದಿನಾಂಕ 12-06-2018 ರಂದು ಮದ್ಯಾಹ್ನ 1:00 ಗಂಟೆಗೆ ಎಂದಿನಂತೆ ನನ್ನ ಗಂಡನು ಮೋಟರ ಸೈಕಲ ನಂ ಕೆಎ-32 ಆರ್-0601 ನೇದ್ದರ ಮೇಲೆ ಕೆಲಸಕ್ಕೆಂದು ಅಫಜಲಪೂರಕ್ಕೆ
ಹೋಗಿರುತ್ತಾರೆ. ಮದ್ಯಾಹ್ನ 1:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ, ನನ್ನ ಗಂಡನ ಮೋಬೈಲ ಪೋನಿನಿಂದ ಅಫಜಲಪೂರದ
ಕೆಇಬಿ ಯವರು ನನಗೆ ಪೋನ ಮಾಡಿ ನಿಮ್ಮ ಗಂಡನು ಮೋಟರ ಸೈಕಲ ಮೇಲೆ ಚೌಡಾಪೂರದಿಂದ ಅಫಜಲಪೂರ ಕಡೆಗೆ ಬರುತ್ತಿದ್ದಾಗ
ನಿರಾವರಿ ಆಫೀಸ್ ಹತ್ತಿರ ಅಶೋಕ ಲೈಲೆಂಡ್ ಮಿನಿ ಗೂಡ್ಸ ವಾಹನ ನಂ ಕೆಎ-32 ಡಿ-1284 ನೇದ್ದರ ಚಾಲಕ ವಾಹನವನ್ನು ತಂದು
ನಿಮ್ಮ ಗಂಡನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದಾನೆ ಇದರಿಂದ ನಿಮ್ಮ ಗಂಡನಿಗೆ ಎಕ್ಸಿಡೆಂಟ್ ಆಗಿದೆ
ನೀವು ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮೈದುನನಾದ
ಶಿವಾನಂದ ಇಬ್ಬರು ಕೂಡಿ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನನ್ನು ನೋಡಿ ಅಲ್ಲಿದ್ದವರನ್ನು
ವಿಚಾರಿಸಲಾಗಿ ನನ್ನ ಗಂಡನ ಜೋತೆಗೆ ಕೆಲಸ ಮಾಡುವ ಶಿವುಕುಮಾರ ಗೋಡೊನಿ, ಚಂದ್ರಕಾಂತ ಕೋಳಗೇರಿ, ಶಿವಾನಂದ ದುಧನಿ ರವರು ತಿಳಿಸಿದ್ದೆನೆಂದರೆ, ನಾವು ಸಹ ನಿಮ್ಮ ಗಂಡನ ಹಿಂದೆ ಹಿಂದೆಯೆ
ಮೋಟರ ಸೈಕಲ ಮೇಲೆ ಚೌಡಾಪೂರದಿಂದ ಅಫಜಲಪೂರ ಕಡೆಗೆ ಹೊರಟಿದ್ದೆವು. ನಿಮ್ಮ ಗಂಡನು ಸಹ ಮೋಟರ ಸೈಕಲ ಮೇಲೆ
ನಮ್ಮಲ್ಲೆ ಕೆಲಸ ಮಾಡುವ ಮೋಹನ ರಾಠೋಡ ಈತನನ್ನು ಹಿಂದೆ ಕೂಡಿಸಿಕೊಂಡು ನಮ್ಮ ಮುಂದೆ ಮುಂದೆಯೆ ನಿರಾವರಿ
ಆಫೀಸ್ ಹತ್ತಿರ ಹೋಗುತ್ತಿದ್ದಾಗ ಮದ್ಯಾಹ್ನ ಅಂದಾಜು 1:30 ಗಂಟೆ ಸುಮಾರಿಗೆ ಅಶೋಕ ಲೈಲೆಂಡ್
ಮಿನಿ ಗೂಡ್ಸ ವಾಹನ ನಂ ಕೆಎ-32 ಡಿ-1284 ನೇದ್ದರ ಚಾಲಕ ಸದರಿ ವಾಹನವನ್ನು ಅತಿವೇಗವಾಗಿ ಹಾಗೂ ನಿಸ್ಕಾಳಜಿತನದಿಂದ
ಚಲಾಯಿಸುತ್ತಾ ನಮ್ಮನ್ನು ಸೈಡ ಹೊಡೆದುಕೊಂಡು ಹೋಗಿ ಮುಂದೆ ನಿಮ್ಮ ಗಂಡನು ನಡೆಸಿಕೊಂಡು ಹೋಗುತ್ತಿದ್ದ
ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದನು. ಡಿಕ್ಕಿಯಾದ ತಕ್ಷಣ ಮೋಟರ ಸೈಕಲ ಸಮೇತ ಕೆಳಗೆ ಬಿದ್ದರು. ಘಟನೆ ಆದ ತಕ್ಷಣ ಸದರಿ ವಾಹನದ ಚಾಲಕ
ವಾಹನ ನಿಲ್ಲಿಸದೆ ಹೋಗಿರುತ್ತಾನೆ. ಹೋಗುತ್ತಿದ್ದಾಗ ನಾವು ವಾಹನದ ನಂಬರ ನೋಡಿರುತ್ತೇವೆ. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ
ಮೋಹನ ರಾಠೋಡನಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ ಎಂದು ತಿಳಿಸಿದರು. ನನ್ನ ಗಂಡನಿಗೆ, ಗದ್ದಕ್ಕೆ ಭಾರಿ ರಕ್ತಗಾಯ ಹಾಗೂ
ಮೈ ಕೈಗೆ ಒಳಪೆಟ್ಟುಗಳಾಗಿರುತ್ತವೆ. ಹಾಗೂ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತಸ್ರಾವ ಆಗುತ್ತಿತ್ತು. ನನ್ನ ಗಂಡನು ಮಾತನಾಡುವ ಸ್ಥೀತಿಯಲ್ಲಿ
ಇರಲಿಲ್ಲ. ನಂತರ ನಾನು ಮತ್ತು ನನ್ನ ಮೈದುನ ಇಬ್ಬರು ಕೂಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸೋಲ್ಲಾಪೂರಕ್ಕೆ
ಕರೆದುಕೊಂಡು ಹೋಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ
ವಿಜಯಕುಮಾರ ತಂದೆ ತುಕರಾಮ ಹಂಚಾಟೇ ಸಾ|| ಪ್ಲಾಟ ನಂ 27 ಸಂಗಮೇಶ್ವರ ನಗರ ಪಂಚಮುಖಿ ಹನುಮಾನ ಮಂದಿರ ಹಿಂದುಗಡೆ ಕಲಬುರಗಿ
ರವರು ದಿನಾಂಖ 11/06/18 ರಂದು ರಾತ್ರಿ ತಮ್ಮ ಮನೆಗೆ ಕೀಲಿ ಹಾಕಿಕೊಂಡು
ಚೆನ್ನೈಗೆ ತಮ್ಮ ಮಗಳ ಹತ್ತಿರ ಹೋಗಿದ್ದು ಹೋಗುವಾಗ ನಮ್ಮ ಮನೆಯ ಕೆಲಸ ಮಾಡುವ ಶ್ರೀಮತಿ ಜಗದೇವಿ
ಗಂಡ ಸೋಮನಾಥ ಹಿರೋಳ್ಳಿ ಮತ್ತು ಅವರ ಮಗನಾದ ಸಂತೋಷ ಇವರಿಗೆ ಹೋಗಿ ಬರುವವರೆಗೆ ಮನೆಯ
ಪಡಸಾಲಿಯಲ್ಲಿ ಇರುವಂತೆ ಹೇಳಿ ಹೋಗಿದ್ದು ಇರುತ್ತದೆ ಹೀಗಿದ್ದು ಇಂದು ದಿ|| 17/06/18 ರಂದು ಬೆಳಗ್ಗೆ 6.00 ಗಂಟೆಗೆ ಸಂತೋಷ ಇತನು ಪೋನ ಮಾಡಿ ನಿನ್ನೆ ದಿ|| 16/06/18 ರಂದು ರಾತ್ರಿ 11.30 ಗಂಟೆಗೆ ಮಲಗಿಕೊಂಡಿದ್ದು ಬೆಳಗ್ಗೆ ಎದ್ದು
ನೋಡುವಷ್ಟರಲ್ಲಿ ಮನೆಯ ಹಿಂದಿನ ಬಾಗೀಲ ಒಳಕೊಂಡಿ ಮುರಿದು ಯಾರೊ ಕಳ್ಳರು ಮನೆಯಲ್ಲಿಯ
ವಸ್ತುಗಳು ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿಸಿದನು ಆಗ ನಾನು ರೈಲ್ವೆಯಲ್ಲಿ ಬರುತ್ತಿದ್ದೆನೆ
ಅಂತಾ ತಿಳಿಸಿ ನಾನು ಸಾಯಂಕಾಲ 4.00 ಗಂಟೆಗೆ ನಮ್ಮ
ಮನೆಗೆ ಬಂದು ನೋಡಲಾಗಿ ಮನೆಯ ಹಿಂದಿನ ಬಾಗೀಲಿನ ಒಳಕೊಂಡಿ ಮುರದಿದ್ದು ಮನೆಯಲ್ಲಿ ಹೋಗಿ ನೋಡಲಾಗಿ
ಬೆಡ್ಡರೂಮಿಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು
ನಗದು ಹಣ ಒಟ್ಟು 1,27,000/- ರೂ ಬೆಲೆ ಬಾಳುವ ಬಂಗಾರ ಬೆಳ್ಳಿ ಹಾಗೂ ನಗದು ಹಣ
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ಸದಾಶಿವ
ಪಿಸಿ-488 ರವರು ದಿನಾಂಕ :15/06/2018 ರಂದು ರಾತ್ರಿ ಗಸ್ತು ಕರ್ತವ್ಯ ಕುರಿತು ಬೀಟ ನಂ.03
ರಲ್ಲಿ ಠಾಣೆಯಿಂದ ಹೆಚ್‌ಜಿ-223 ಅಣ್ಣಪ್ಪಾರವರ ಜೊತೆಗೆ ಹೊರಟೆನು. ಏರಿಯಾದಲ್ಲಿ ತಿರುಗಾಡುತ್ತಾ ಪಾಯಿಂಟ
ಪುಸ್ತಕಗಳನ್ನು ಚಕಮಾಡುತ್ತಾ ನಡೆದೆವು ದಿನಾಂಕ:16/06/2018 ರಂದು 00.15 ಗಂಟೆ ಸುಮಾರಿಗೆ ಕೃಷಿ
ಬಡಾವಣೆಯ ಜೆ.ಆರ್ ನಗರಕ್ಕೆ ಹೋಗುವ ದಾರಿಯಲ್ಲಿ 3 ಜನ ಬೈಕ ನಂ.ಕೆಎ.32 ಇಎಲ್.2503 ಅಡ್ಡ
ನಿಲ್ಲಿಸಿ ಹೋಗಿ ಬರುವರನ್ನು ನಿಲ್ಲಿಸಿ ತಡೆದು ಹೋಗಿಬರುವರನ್ನು ತೊಂದರೆ ಕೊಡುತ್ತಿದ್ದರು ಸದರಿ
ಮೂವರನ್ನು ನಿಲ್ಲಿಸಿ ಕೇಳಲಾಗಿ ತು ಕೌನ ಹಯಬೇ ಚುಪ ಜಾ ಅಂತಾ ಒಬ್ಬ ವ್ಯಕ್ತಿಯು ತನ್ನ ಗಾಡಿಯನ್ನು
ತೆಗೆಯಹತ್ತಿದನು. ನಾನು ಮತ್ತು ಹೆಚ್‌ಜಿ ರವರು ಅವನನ್ನು ತಡೆದು ನಿಲ್ಲಿಸಿ ಇಲ್ಲಿ ಯಾಕೆ
ನಿಂತಿರಿ ರೋಡಿನ ಮಧ್ಯದಲ್ಲಿ ನಿಂತು ಹೋಗಿ ಬರುವವರನ್ನು ಯಾಕೆ ಕೇಣಕುತ್ತಾ ಇದ್ದಿರಿ ಅಂತಾ
ಕೇಳಲಾಗಿ ಅಬೇ ಸಾಲೆ ತು ಕೌನ ಹೋತಾ ಪೂಚನೆವಾಲಾ ಕಲ್ ಹಮಾ ಈದ ಹೈ ಹಮೇ ಪೈಸೆ ಚಾಯಿಯೇ ಕಲೆಕ್ಷನ
ಕರೆ ತೇರಾ ಬಾಪ ಕಾ ಜ್ಯಾತಾ ಚುಪಜಾ ನಯಿತೋ ಮಾರಕೇ ಪೇಕತಾಹೂ ದೇಖ ತೇರೆಕೊ ಅಂತಾ ಅವಾಚ್ಯ
ಬೈಯಹತ್ತಿದ್ದನು ಅದಕ್ಕೆ ನಾನು ಸದರಿ ಗಾಡಿ ಯಾರದು ಇದರ ಡಾಕುಮೆಂಟ್ ತೋರಿಸು ಅಂತಾ ಕೇಳಲಾಗಿ
ಅಬೇ ಬೋಲೆತೋ ಸುನತಾ ನಹೀಕ್ಯಾ ಡಾಕುಮೆಂಟ್ ನಹಿ ದಿಕಾತಾ ಜಾ ಕ್ಯಾ ಕರಲೇತಾ ತೂ ಅಂತಾ ಅನ್ನುತ್ತಾ
ನನ್ನ ಮೇಲೆ ಬಂದು ನನ್ನ ಎದೆಯ ಮೇಲೆನ ಅಂಗಿ ಹಿಡಿದು ತನ್ನ ಕೈಯಿಂದ ಮುಷ್ಠಿಮಾಡಿ ನನ್ನ ಮುಖಕ್ಕೆ
ಎರಡು ಏಟು ಹೊಡೆದನು. ನಾನು ಅಷ್ಟರಲ್ಲಿ ಅವನ ಅಂಗಿ ಹಿಡಿದು ಬಿಡಿಸಿಕೊಳ್ಳಹತ್ತಿದೆ ಆದರೆ ಅವನು
ಬಿಡದೆ ನನ್ನ ತಲೆಗೆ ಹೊಟ್ಟೆಗೆ ತನ್ನ ಮುಷ್ಠಿಯಿಂದ ಹೊಡೆಯ ಹತ್ತಿದ್ದನು ಇದನ್ನು ನೋಡಿದ ಹೆಚ್‌ಜಿ-223
ಅಣ್ಣಪ್ಪಾರವರು ಬಿಡಿಸಲು ಬಂದಾಗ ಅವರಿಗೆ ಮತ್ತೋಬ್ಬ ವ್ಯಕ್ತಿಯು ತಡೆದು ನಿಲ್ಲಿಸಿದನು. ನಾನು
ಹಾಗೊಹೀಗೊ ಅವನಿಂದ ಬಿಡಿಸಿಕೊಂಡು ನರಳುತ್ತಾ ಆರ್.ಜಿ ನಗರ ಪೊಲೀಸ ಠಾಣೆಗೆ ಪೋನ ಮಾಡಿ ವಿಷಯ
ತಿಳಿಸಿದೆನು. ಆ ವ್ಯಕ್ತಿಯು ನನ್ನ ಹತ್ತಿರ ಬಂದು ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದನು ಅವನಿಂದ
ತಪ್ಪಿಸಿಕೊಳ್ಳುತ್ತಾ ಇರುವಾಗ ಎಎಸ್‌ಐ ಶಿವಪುತ್ರ ಸರ್ ಮತ್ತು ಹೆಚ್‌ಜಿ-321 ರವಿ ಹಾಗೂ
ಪಿಸಿ.867 ಗೌರಿ ಶಂಕರ ರವರು ಬಂದರು ಅವರು ಬಂದು ಅವನಿಗೆ ಹಿಡಿದು ಹಾಗೂ ಸಂಗಡ ಇದ್ದ
ಇನ್ನಿಬ್ಬರನ್ನೂ ಠಾಣೆಗೆ ಕರೆತಂದರು ಆವ್ಯಕ್ತಿಯನ್ನು ತರುವಾಗ ಅವನು ನನ್ನನ್ನು ನೋಡಿ ಅಬೇ ಸಾಲೆ
ತುತೊ ಗಯಾ ಮೇರೆ ಹಾತಸೇ ಮೇರೆಕೊ ಪೊಲೀಸ ಸ್ಟೇಷನ ಲೇಕೆ ಜಾತಾ ಆದೇ ಗಂಟೆಮೇ ತೇರೆಕೊ ಸಸ್ಪೇಂಡ
ಕರಾತು ಸಾಲೆ ತೇರಿ ಮಾಕಿ ಚೂತ ಕಲ್ ಈದ್ ಹೋನೆಕೆ ಬಾದ ಮೇ ತೇರೆಕೊ ಖಲಾಸ ನಹಿ ಕರಾಯೇತೊ ದೇಕ
ಕಲ್ ತೊ ತೇರೆ ಮರ್ಡರ ಗ್ಯಾರಂಟಿ ಸಮಜ ಅಂತಾ ನನಗೆ ಜೀವದ ಬೆದರಿಕೆ ಹಾಗೂ ಸಸ್ಪೆಂಡ್
ಮಾಡುವ ಬೆದರಿಕೆ ಹಾಕಿದನು ಸದರಿಯವನನ್ನು ಠಾಣೆಗೆ ಕರೆತಂದಾಗ ಸಮಯ 1.00 ಗಂಟೆಯಾಗಿತ್ತು
ಸದರಿಯವನನ್ನು ಠಾಣೆಗೆ ಕರೆತಂದು ಸದರಿಯವನ ಹೆಸರು ಕೇಳಲಾಗಿ ಅಸ್ಪಕ ಜಿಲಾನಾಬಾದ, ಅಂತಾ ಅಷ್ಟೆ
ಹೇಳಿದನು ಹಾಗೂ ಇನ್ನಿಬ್ಬರೂ ಮಹ್ಮದ ಫಾರೂಕ, ಆಸೀಫ ಪಟೇಲ ಜೊತೆಯಲ್ಲಿ ಇದ್ದರೂ ಈ ಸಂದರ್ಭದಲ್ಲಿ
ನನ್ನ ಸಮವಸ್ತ್ರ ಕೂಡಾ ಹರಿದು ಹಾಕಿರುತ್ತಾರೆ ಮಾನ್ಯರವರು ನಾನು ಕರ್ತವ್ಯ ಮಾಡುತ್ತಿರುವಾಗ
ದಾರಿಗೆ ಅಡ್ಡ ನಿಂತು ಹೋಗಿ ಬರುವವರನ್ನು ತೊಂದರೆಕೊಡುತ್ತಿದ್ದ ಹಾಗೂ ನನ್ನ ಮೇಲೆ
ಮಾರಣಾಂತಿಕವಾಗಿ ಹಲ್ಲೆ ಮಾಡಿದ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ ಅಸ್ಪಕ ಜಿಲಾನಾಬಾದ ಹಾಗೂ
ಇನ್ನಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment