ಅಪಘಾತ
ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮುಕಿಂದ
ತಂದೆ ಗೋಲ್ಲಪ್ಪ ಕುಶಾಳಕರ ಸಾ : ಬೆಲೂರ ಜೆ ರವರ
ಮಗ ಯಲ್ಲಾಲಿಂಗ ಇತನು ಹೊಂಡಾ ಎಕ್ಟೀವ ಕೆಎ 32 ಇಕೆ
5432 ನೇದ್ದರ ಮೇಲೆ ಬಂದು ತನ್ನ ತಂದೆಗೆ ಮಾತಾಡಿಸಿ ಸಂಘದ ಎನೊ ಕೆಲಸವಿದೆ ಅಂತಾ ಹೇಳಿ ಹೋದನು. ಮಧ್ಯಾಹ್ನ
12-15 ಗಂಟೆ ಸುಮಾರಿಗೆ ಬೇಲೂರ ಗ್ರಾಮದ ಯಲ್ಲಪ್ಪ
ಕುಶಾಳಕರ ಇತನು ಪೋನ ಮಾಡಿ ನಿಮ್ಮ ಮಗ ಯಲ್ಲಾಲಿಂಗ
ಇತನು ಒಬ್ಬನೆ ಮೋಟರ್ ಸೈಕಲ್ ಮೇಲೆ ಬೇಲೂರ (ಜೆ) ಗ್ರಾಮದ ಕಡೆಗೆ ಬರುವ ಕುರಿತು ಬೇಲೂರ (ಜೆ) ತಾಂಡಾದ ಕಡೆಯಿಂದ ಬೇಲೂರ (ಜೆ) ಗ್ರಾಮದ ಕಡೆಗೆ ಬರುವ ಕುರಿತು ಬೇಲೂರ (ಜೆ) ಗ್ರಾಮದ
ಸಿಮಾಂತರದ ಮನಸೂರ ಕಂಕಾರ ಮಶೀನ್ ಎದುರುಗಡೆ ಬರುತ್ತಿದ್ದಾಗ,
ಆಗ ಹಿಂದಿನಿಂದ ಯಾವುದೋ ಭಾರಿ ವಾಹನ ಯಲ್ಲಾಲಿಂಗ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಕೊಟ್ಟು ಅಪಘಾತಪಡಿಸಿದಾಗ ಆಗ ಯಲ್ಲಾಲಿಂಗ ಇತನು ರೋಡಿನ ಮೇಲೆ ಬಿದ್ದಾಗ ಸದರಿ ವಾಹನ ಚಾಲಕನು ಆತನ ತಲೆಯ
ಮೆಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಆತನ ತಲೆಯು ಪೂರ್ತಿ ಚಚ್ಚಿದಂತೆ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.ಸದರಿ
ಅಪಘಾತಪಡಿಸಿದ ವಾಹನ ಚಾಲಕನು ವಾಹನ ನಿಲ್ಲಿಸದೇ ಹಾಗೇಯೇ ಓಢಿಸಿಕೊಂಡು ಹೋಗಿರುತ್ತಾನೆ. ಈ ಘಟನೇಯು ಅಂದಾಜು 11-30 ಎಮ ದಿಂದ 11-45 ಎಮದ ಅವದಿಯಲ್ಲಿ
ಜರುಗಿರುತ್ತದೆ ಅಂತಾ ತಿಳಿಸಿದಾಗ, ಆಗ ನಾನು ಗಾಭರಿಗೊಂಡು ಸ್ಥಳಕ್ಕೆ ಬಂದು ನನ್ನ ಮಗನಿಗೆ ನೋಡಲಾಗಿ
ನನ್ನ ಮಗನ ತಲೆಯಿಂದ ಒಡೆದು ಮಾಂಸ ಖಂಡಗಳು ಹೊರಬಂದು ಮೃತಪಟ್ಟಿದ್ದು ನೋಡಿರುತ್ತೇನೆ. ಕಾರಣ ನನ್ನ
ಮಗನಿಗೆ ಯಾವುದೋ ಭಾರಿ ಗಾತ್ರದ ವಾಹನ ಚಾಲಕನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು
ನನ್ನ ಮಗ ಕುಳಿತುಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಹಿಂದುಗಡೆಯಿಂದ ಅಪಘಾತಪಡಿಸಿ, ನನ್ನ ಮಗನ ತಲೆಯ
ಮೇಲಿಂದ ವಾಹನವನ್ನು ಹಾಯಿಸಿಕೊಂಡು ಹೋಗಿದ್ದರಿಂದ ನನ್ನ ಮಗನ ತಲೆ ಒಡೆದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ
ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅನಿತಾ ಗಂಡ
ಹಣಮಂತ ಹುಲಿಮನಿ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರ ಮಗ ಶರಣಪ್ರಕಾಶ ಮತ್ತು ಮಗಳು ರೂಪಾ
ಇವರ ಜೊತೆಗೆ ವಾಸವಾಗಿದ್ದು. ನನ್ನ ಗಂಡನು ವಿವೇಕಾನಂದ ನಗರದ ನ್ಯೂ ಪ್ರದೀಪ
ಮೇಡಿಕಲ್ ಶಾಪನಲ್ಲಿ ದಿನಾಂಕ:07/06/2018 ಗುರುವಾರದಂದು ಬೆಳಗ್ಗೆ 11.00 ಗಂಟೆಗೆ ಕೆಲಸಕ್ಕೆ ಎಂದು
ಹೋದವರು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ ನಮ್ಮ
ಸಂಬಂಧಿಕರನ್ನು ಪೋನ ಮಾಡಿ ಕೇಳಿದರು ಯಾರ ಹತ್ತಿರವು ಬಂದಿರುವದಿಲ್ಲಾ ಎಂದು ತಿಳಿಸಿರುತ್ತಾರೆ. ನನ್ನ
ಗಂಡನು ಬೀಳಿ ಬಣ್ಣ ದುಂಡು ಮುಖ 5’5’’ ಅಡಿ ಎತ್ತರ
ದುಂಡನೆಯ ಮೈಕಟ್ಟುವುಳ್ಳವರಾಗಿದ್ದು ಗದ್ದದ ಕೆಳಗೆ 8 ಟಾಕಿಗಳ ಗಾಯದ ಗುರುತನ್ನು ಹೊಂದಿದ್ದು ಎಡ ಕೈ
ಅಂಗೈ ಮೇಲಗಡೆ ಕ್ರೀಮ ಬಣ್ಣದ ಅಂಗಿ ಮತ್ತು ಬ್ಲಾಕ್ ಬಣ್ಣದ ಪ್ಯಾಂಟ ಹಾಕಿ ಕೊಂಡಿರುತ್ತಾರೆ. ದಿನಾಂಕ:07/06/2018
ರಿಂದ ಕಾಣಿಯಾದ ನನ್ನ ಗಂಡನನ್ನು ಹುಡುಕಿ ಕೊಡಬೇಕೆಂದು ಸಲ್ಲಿಸಿದ ದೂರು
ಸಾಶರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment