ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.11.2017 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿಯಲ್ಲಿರುವ ಮಜ್ಜೀದ ಪಕ್ಕದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕುಡುತ್ತಿದ್ದಾನೆ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಮಜ್ಜಿದ ಮುಂದೆ ಇರುವ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80
ರೂಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೇಸರು ಅಸರಫ್ ತಂದೆ ಮಹ್ಮದ ಖಾಜಾ ಜುಲೇವಾಲೆ ಸಾ: ಖದೀರ ಚೌಕ ಅಲ್ ಅಮೀನ ಶಾಲೆ ಹತ್ತಿರ ಎಮ್.ಎಸ್.ಕೆ.ಮೀಲ್ ಜೀಲಾನಾಬಾದ ಕಲಬುರಗಿ ಅಂತ ತಿಳಿಸಿದ್ದು, ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು 2,950/-ರೂ, 3 ಮಟಕಾ ಚೀಟಿಗಳು ಮತ್ತು 1 ಬಾಲ ಪೇನ್ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಕಾಳಗಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಧರ್ಮಣ್ಣ ಪೊಲೀಸ ಪಾಟೀಲ ಸಾ:ಅರೆಜಂಬಗಾ ಇವರು ತಮ್ಮ ಗ್ರಾಮದ ಹದ್ದಿಯಲ್ಲಿ ಅಂದರೆ ಟೆಂಗಳಿ ಕಡೆಗೆ ಹೋಗುವ ರಸ್ತೆ ಸಮೀಪ ನಮ್ಮದೊಂದು ಹೋಲ ಇದ್ದು ಅದರಲ್ಲಿ ಈಗ ಕಡಲೆ ಮತ್ತು ಜೋಳ ಬಿತ್ತನೆ ಮಾಡಿದ್ದು ನನ್ನ ತಂದೆಯಾದ ಧರ್ಮಣ್ಣ ಇವರು ದಿನಾಲು ಹೋಲಕ್ಕೆ ಹೋಗಿ ಬಂದು ಮಾಡುತ್ತಿದ್ದು ಇಂದು ದಿನಾಂಕ 15-11-2017 ರಂದು ಬೆಳ್ಳಿಗೆ ನಾನು ನನ್ನ ತಾಯಿಯಾದ ಶಕುಂತಲಾ ತಮ್ಮ ಮಲ್ಲಿಕಾರ್ಜುನ ಮನೆಯಲ್ಲಿ ಇದ್ದಾಗ ನಮ್ಮ ತಂದೆಯವರು ಹೋಲಕ್ಕೆ ಹೋಗಿ ಬರುತ್ತೆನೆ ಅಂತಾ ಹೋದರು ಹೋದ ಒಂದು ಗಂಟೆಯ ನಂತರ ನಮ್ಮ ಗ್ರಾಮದ ಅಹ್ಮದ ತಂದೆ ಶೇಖಲಿ ನಾಯಿಕೊಡಿ ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ನಿಮ್ಮ ತಂದೆಯವರು ಹೋಲದಿಂದ ಮಹೇಶ ಬೀಮನಳ್ಳಿ ರವರ ಹೋಲದ ಹತ್ತಿರ ರೋಡಿನ ಪಕ್ಕದಿಂದ ಮನೆಗೆ ನಡೆದುಕೊಂಡು ಜಂಬಗಿ ಕಡೆಗೆ ಬರುತ್ತಿರುವಾಗ ಅವನ ಹಿಂದಿನಿಂದ ಅಂದರೆ ಟೆಂಗಳಿ ಕಡೆಯಿಂದ ನಮ್ಮ ಗ್ರಾಮದ ವೀರಾರೆಡ್ಡಿ ಇವರ ಟ್ರ್ಯ್ರಾಕ್ಟರ ಇಂಜನ ನನ್ನು ಸಿದ್ರಾಮಯ್ಯ ತಂದೆ ಗುರುಲಿಂಗಯ್ಯ ಹಿರೇಮಠ ಸಾ:ಅರೆಜಂಬಗಾ ಇತನು ಸದರಿ ಟ್ರ್ಯ್ರಾಕ್ಟರ ಇಂಜನ ಅನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಿಂದ ಹೋಗುತ್ತಿದ್ದ ನಿಮ್ಮ ತಂದೆಗೆ ಡಿಕ್ಕಿ ಪಡಸಿದ ಪರಿಣಾಮ ನಿಮ್ಮ ತಂದೆಗೆ ಎಡಗಾಲಿನ ಕಪ್ಪಗೊಂಡಕ್ಕೆ ಭಾರಿ ರಕ್ತ ಗಾಯ, ತಲೆಯ ಹಿಂದುಗಡೆ ಭಾರಿ ರಕ್ತ ಗಾಯವಾಗಿ, ಬಲಗಾಲು ಮುರಿದು ಸ್ಥಳದಲ್ಲಿಯೇ ಮೃತ ಪಟ್ಟು ಬಿದ್ದಿದ್ದು ಸದರಿ ಟ್ರ್ಯ್ರಾಕ್ಟರ ಚಾಲಕನು ತನ್ನ ಟ್ರ್ಯ್ರಾಕ್ಟರ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದನು. ಆಗ ಗಾಬರಿಗೊಂಡು ನಾನು ನನ್ನ ತಾಯಿ ಶಕುಂತಲಾ, ತಮ್ಮ ಮಲ್ಲಿಕಾರ್ಜುನ ಮೂರು ಜನ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಗೆ ಮೇಲೆ ನಮೂದಿಸಿದ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೇಲೆ ನಮೂದಿಸಿದ ಟ್ರ್ಯ್ರಾಕ್ಟರ ಇಂಜನ ಚಾಲಕನಾದ ಸಿದ್ರಾಮಯ್ಯ ಹಿರೇಮಠ ಇತನು ತನ್ನ ಟ್ರ್ಯ್ರಾಕ್ಟರ ಇಂಜನ ನನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಿಂದ ಹೋಗುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಪಡಸಿದ ಪರಿಣಾಮ ನಮ್ಮ ತಂದೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಕಾರಣ ಸದರಿ ಟ್ಯ್ರಾಕ್ಟರ ಚಾಲಕನ ವಿರುದ್ದ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಗುರುಪುತ್ರ ತಂದೆ ಕಲ್ಯಾಣಪ್ಪ ಶಿವಲಿಂಗಪ್ಪಗೋಳ ಸಾ||ಬಸವನಸಂಗೋಳಿ ಇವರು ದಿನಾಂಕ : 15-11-2017 ರಂದು ಮುಂಜಾನೆ ನಾನು ಹಾಗೂ ನನ್ನ ಮಗನಾದ ಮಂಜುನಾಥ ಇಬ್ಬರು ಸೇರಿ ನನ್ನ ಪಾಲಿಗೆ ಬಂದಿರುವ ನನ್ನ ತಂದೆಯ ಹೆಸರಿನಲ್ಲಿರುವ ಹೊಲ ಸರ್ವೇ ನಂ-1 ರಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ತಮ್ಮನಾದ ಸೂರ್ಯಕಾಂತ ಹಾಗೂ ಅವರ ಹೆಂಡತಿ ನೀಲಮ್ಮ ಎಂಬುವರು ಬಂದು ಹೊಲದಲ್ಲಿನ ನೀರಿನ ಪೈಪಲೈನ್ ಸಲುವಾಗಿ ನಮ್ಮ ಜೊತೆಯಲ್ಲಿ ಜಗಳವನ್ನು ತಗೆದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮತ್ತು ಕಲ್ಲಿನಿಂದ ಹೊಡೆದರು. ಆ ಸಂದರ್ಭದಲ್ಲಿ ಕಲ್ಲು ಬಡೆದು ಜ್ಞಾನ ಪತ್ತಿ ಬಿದ್ದು ಮೇಲು ಏಳಲು ಪ್ರಯತ್ನಿಸುವಾಗ ನಿಮ್ಮನ್ನು ಕೊಲೆ ಮಾಡುತ್ತೇನೆ ಬಿಡುವುದಿಲ್ಲವೆಂದು ಹೇಳುತ್ತಾ ಕೊಯಿತಾವನ್ನು ತಗೆದುಕೊಂಡು ನನ್ನ ಕುತ್ತಿಗೆಯನ್ನು ಕತ್ತರಿಸಲು ಬಂದಾಗ ನಾನು ಅದನ್ನು ತಪ್ಪಿಸಿಕೊಳ್ಳಲು ಬಲಗೈಯನ್ನು ಮುಂದೆ ತಂದಾಗ ಆ ಸಂದರ್ಭದಲ್ಲಿ ನನ್ನ ಬಲಗೈ ರಟ್ಟಿಯನ್ನು ಅರ್ಧ ಕತ್ತರಿಸುತ್ತದೆ ಮತ್ತು ಅಸ್ಟಾಗಿ ನನ್ನ ಮೇಲೆ ಮನಸೊ ಇಚ್ಚೆ ಬಂದಂತೆ ಎಡಗಾಲಿನ ತೊಡೆಗೆ ಹಾಗೂ ಇನ್ನಿತರ ಜಾಗಗಳಲ್ಲಿ ಹೊಡೆದಿರುತ್ತಾರೆ. ಅದೆ ಸಂದರ್ಭದಲ್ಲಿ ನನ್ನ ಮಕ್ಕಳಾದ ಮಂಜುನಾಥ ಹಾಗೂ ಸಂಜಯಕುಮಾರ ಬಿಡಸಲು ಬಂದಾಗ ನನ್ನ ಮಗನಿಗೆ ಮಂಜುನಾಥನಿಗೆ ಕುತ್ತಿಗೆಗೆ ಕೊಯಿತಾ ದಿಂದ ಹೊಡೆಯುವ ವೇಳೆಗೆ ನನ್ನ ಮಗನು ಬಲಗೈಯನ್ನು ಮೇಲಕ್ಕೆ ಎತ್ತಿದಾಗ ಅದೇ ಏಟು ಬಲಗೈಗೆ ಬಿದ್ದು ಅರ್ಧ ಬಲಗೈ ಕಡಿದು ಹೋಗಿದೆ. ಅದೇ ಸಂದರ್ಭದಲ್ಲಿ ಬಿಡಸಲು ಬಂದ ಗಜಾನಂದ ತಂದೆ ಪೀರಪ್ಪ ಶಿವಲಿಂಗಪ್ಪಗೋಳ ಹಾಗೂ ಗುಂಡೆರಾವ ತಂದೆ ಶಿವರಾಯ ರಾಮಶೆಟ್ಟಿ ಹಾಗೂ ಶರಣಬಸಪ್ಪ ತಂದೆ ಶಿವಪುತ್ರಪ್ಪ ಶಿವಲಿಂಗಪ್ಪಗೋಳ ಇವರು ನಮ್ಮನ್ನು ಕ್ರೂಜರ ತಗೆದುಕೊಂಡು ಕಲಬುರಗಿಯ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೆಯ ಮದುವೆ ಮಾಡಿಕೊಂಡು ಕಿರುಕಳ ನಿಡಿದ ಪ್ರಕರಣ
:
ಅಫಜಲಪೂರ ಠಾಣೆ : ಶ್ರೀಮತಿ ಸುಜಾತಾ @ ಕಮಲಾಬಾಯಿ ಗಂಡ ಸಂತೋXಷ ಜಮಾದಾರ ಸಾ : ಚಿಂಚೋಳಿ ತಾ : ಅಫಜಲಪೂರ ರವರ ಗಂಡ, ಅತ್ತೆ, ಮಾವ, ಮತ್ತು ನಾದಿನಿಯ ಇವರೆಲ್ಲರೂ ಸೇರಿಕೊಂಡು ನನ್ನ ಗಂಡನಾದ ಸಂತೋಷನಿಗೆ ದಿನಾಂಕ 25-05-2017 ರಂದು ಮಲ್ಲಾಬಾದ ಗ್ರಾಮದಲ್ಲಿ ಎರಡನೆ ಮದುವೆ ಮಾಡಿದ್ದು ಇರುತ್ತದೆ. ಅಂತಾ ದಿನಾಂಕ 15-11-2017 ರಂದು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರು ಸಲ್ಲಿಸಿದ್ದು ಪಿಸಿ ನಂ -23/17 ನೇದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment