ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ:14.11.2017 ರಂದು ಭೀಮಶಪ್ಪಾ ನಗರದಲ್ಲಿ
ಒಬ್ಬ ಮನುಷ್ಯ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದು ಚೀಟಿ ಕೊಡುತಿದ್ದಾನೆ ಅಂತಾ
ಮಾಹಿತಿ ಬಂದಮೇರೆಗೆ ಪಿಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಬರೆದುಕೊಳ್ಳುತಿರುವುದನ್ನು ಖಚಿತ ಪಡೆಸಿಕೊಂಡು ದಾಳಿ ಮಾಡಿ ಹಣಮಂತ ತಂದೆ ರಂಗಪ್ಪಾ ಸಾ:ಭೀಮಶಪ್ಪಾ ನಗರ ಇತನಿಗೆ ಹಿಡಿದು ಆತನಲ್ಲಿದ್ದ ಮಟಕಾ
ಬರೆದುಕೊಂಡ ನಗದು ಹಣ 12170/- ರೂ ಹಾಗೂ ನಾಲ್ಕು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ ಪೆನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜಕುಮಾರ ತಂದೆ ದಯಾನಂದ ಬಿರಾದಾರ ಸಾ: ಮಲ್ಲಾಬಾದ ರವರು
ರವರು ಮತ್ತು ತಮ್ಮನಾದ ಬಸವರಾಜ ಇಬ್ಬರು ಕೂಡಿಕೊಂಡು ನಮ್ಮ ಟಿ.ವಿ.ಎಸ್ ಎಕ್ಸಲ್- ನಂ ಕೆಎ-32-ಇ.ಡಿ-0765 ನೇದ್ದರ ಮೇಲೆ
ಕುಳಿತುಕೊಂಡು ಮಲ್ಲಾಬಾದ ಸೀಮೇಯ ಹೊಲಕ್ಕೆ ಹೋಗಿದ್ದು ದಿನಾಂಕ 13-11-2017 ರಂದು ಸಾಯಂಕಾಲ 07:00 ಗಂಟೆಯ ಸುಮಾರಿಗೆ ಸಂತೋಷ
ದಾಮಾ ಇವರ ಹೊಲದ ಹತ್ತಿರ ಅಫಜಲಪೂರ ಕಲಬುರಗಿ ರೋಡ ಮಲ್ಲಾಬಾದ ದಿಂದ 02 ಕಿ.ಮೀ ಅಂತರದಲ್ಲಿ
ಅಫಜಲಪೂರ ಕಡೆಗೆ ಅಲ್ಲಿ ನಾನು ಹಾಗೂ ನನ್ನ ತಮ್ಮನಾದ ಬಸವರಾಜ ಇಬ್ಬರು ರೋಡಿನ ಎಡ ಬದಿಗೆ ಗಾಡಿಯ
ಹತ್ತಿರ ನಿಂತುಕೊಂಡಿದ್ದು ಅದೇ ಸಮಯದಲ್ಲಿ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್
ಅನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ಬಂದು ಒಮ್ಮೆಲೆ ನಮಗೆ
ಡಿಕ್ಕಿ ಪಡೆಸಿದ್ದು ನಾವಿಬ್ಬರು ಕೆಳಗೆ ಬಿದ್ದೇವು ಡಿಕ್ಕಿ ಪಡೆಸಿದ ಮೋಟಾರ ಸೈಕಲ ಸವಾರನು ಕೆಳಗೆ
ಬಿದ್ದನು ಎದ್ದು ನೋಡಲು ನನಗೆ ಎಡಗಾಲಿಗೆ ಮೋಳಕಾಲ ಕೆಳಗೆ ಎಲಬು ಮುರದಿದ್ದು ಮೋಳಕಾಲಿಗೆ, ಕೈಗೆ ಅಲ್ಲಲ್ಲಿ ತರಚಿದ
ಗಾಯಗಳಾಗಿರುತ್ತವೆ. ಬಸವರಾಜನಿಗೆ ಬಲಗಾಲಿನ ಚಪ್ಪಿಗೆ ಒಳ ಪೆಟ್ಟು ಗಾಯ ವಾಗಿರುತ್ತದೆ. ಸದರಿ
ಮೋಟಾರ ಸೈಕಲ್ ನಂ ನೋಡಲು ಎಮ್.ಹೆಚ್-30-ಬಿಎ-9806 ಹೀರೋ ಹೊಂಡಾ ಇದ್ದು ಸದರಿಯವನ ಹೆಸರು ಕೇಳಲಾಗಿ ದತ್ತು ತಂದೆ
ಮಾಹಾದೇವಪ್ಪ ಕನ್ನೋಳ್ಳಿ ಸಾ: ಉಡಚಾಣ ಅಂತಾ
ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ
ರುದ್ರಯ್ಯ ತಂದೆ ಹಂಪಯ್ಯ ಮಠಪತಿ ಸಾಃ ಧುತ್ತರಗಾಂವ, ತಾಃ
ಆಳಂದ ಇವರು ದಿನಾಂಕ 09/11/2017 ರಂದು ನಾನು ಹಾಗೂ ನನ್ನ ಹೆಂಡತಿ ನಮ್ಮ ಸ್ವಂತ ಕಾರಿನಲ್ಲಿ
ಹಲಕರ್ಟಿ ಶ್ರೀ ವೀರಭದ್ರೆಶ್ವರ ಜಾತ್ರೆಗೆ ಹೋಗಿರುತ್ತೇವೆ. ದಿನಾಂಕ 09/11/2017 ಮತ್ತು 10/11/2017 ರಂದು
ಜಾತ್ರೆಯಲ್ಲಿಯೆ ಇದ್ದು ದಿನಾಂಕ 11/11/2017
ರಂದು ಕಲಬುರಗಿಗೆ ಬಂದು ದಿನಾಂಕ 13/11/2017 ರವರಗೆ ನಮ್ಮ ಸಂಭಂಧಿಕರ ಮನೆಯಲ್ಲಿ ಇದ್ದೇವು. ಹೀಗಿರುವಾಗ
ದಿನಾಂಕ 14/11/2017 ರಂದು ಬೆಳಿಗ್ಗೆ 08.30 ಎ.ಎಮ
ಕ್ಕೆ ನಮ್ಮೂರಿನ ಹಾಗೂ ನಮ್ಮ ಮನೆಯ ಬಾಜು ಇರುವ ಶ್ರೀ ವೀರೆಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಪ್ಯೂನ ಕೆಲಸ ಮಾಡುವ ಚಂದ್ರಕಾಂತ ತಂದೆ ಶಾಂತಪ್ಪ ಬಂಗರಗಿ ಇವರು ನನ್ನ ಮೊಬೈಲಗೆ ಫೋನ ಮಾಡಿ ನಿಮ್ಮ ಮನೆಯ
ಮುಖ್ಯ ಬಾಗಿಲು ಅರ್ಧ ತೆರೆದಿದ್ದು ಇರುತ್ತದೆ. ನೀವು ಎಲ್ಲಿದ್ದಿರಿ ಅಂತ ಕೇಳಿದ ಮೇರೆಗೆ ನಾನು
ಮತ್ತು ನನ್ನ ಹೆಂಡತಿ ಕಲಬುರಗಿಯಲ್ಲಿ ಇರುವದಾಗಿ ತಿಳಿಸಿರುತ್ತೇವೆ. ಅವನಿಗೆ ಸಂಶಯ ಬಂದು ನಮಗೆ ಬೇಗ
ಬರಲು ತಿಳಿಸಿದ ಮೇರೆಗೆ ನಾನು
ಮತ್ತು ನನ್ನ ಹೆಂಡತಿ ಊರಿಗೆ ಬಂದು ನನ್ನ
ಮನೆಯನ್ನು ಪರಿಶೀಲಿಸಲಾಗಿ ನನ್ನ ಮನೆಯ ಮುಖ್ಯ ಗೇಟಿನ ಬೀಗದ ಕೈ ಮುರಿದಿದ್ದು ನಂತರ
ಮುಖ್ಯ ದ್ವಾರದ ಬಾಗಿಲಿನ ಬೀಗದ ಕೈ ಮುರಿದಿದ್ದು ಇರುತ್ತದೆ. ಒಳಗೆ ಹೋಗಿ
ಪರಿಶೀಲಿಸಲಾಗಿ ಡೈನಿಂಗ ಹಾಲದಲ್ಲಿ ಸಜ್ಜಾದ ಮೇಲೆ ಸ್ಟೀಲಿನ ಡಬ್ಬಿಯಲ್ಲಿ ಇಟ್ಟಂತಹ 1,64,000/- ರೂಪಾಯಿ ಮೌಲ್ಯದ ಬೆಳ್ಳಿಯ ಮೂರ್ತಿ ಮತ್ತು ಬಂಗಾರದ
ಆಭರಣಗಳು ಹಾಗೂ ನಗದು ಹಣ 25,000/- ಗಳನ್ನು
ಹೀಗೆ ಒಟ್ಟು 1,89,000/- ರೂಪಾಯಿ ಮೌಲ್ಯದ ಹಣ, ಬಂಗಾರ, ಬೆಳ್ಳಿ
ಸಾಮಾನುಗಳನ್ನು ದಿನಾಂಕ 13/11/2017
ರಂದು ರಾತ್ರಿ 0800 ಗಂಟೆಯಿಂದ ದಿನಾಂಕ 14/11/2017 ರ
ಬೆಳಿಗ್ಗೆ 0800 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ
ಬಾಗಿಲಿನ ಬೀಗದ ಕೈ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment