ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ರಾಘವೇಂದ್ರ
ನಗರ ಠಾಣೆ : ದಿನಾಂಕ: 04/03/2017 ರಂದು ಮಧ್ಯಾನ ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಜೆ.ಆರ್ ನಗರ ಬಡಾವಣೆಯಲ್ಲಿ ಬರುವ ನಂದಿ ಫೈನಾನ್ಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಜಯಪ್ರಕಾಶ ಅಪರ ಪೊಲೀಸ ಅಧೀಕ್ಷಕರು ಕಲಬುರಗಿರವರ ಮಾರ್ಗದರ್ಶನದಲ್ಲಿ ಶ್ರೀ ಕಪೀಲದೇವ ಪಿ.ಐ ಡಿಸಿಬಿ ಘಟಕ ಕಲಬುರಗಿ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖಾದ್ರಿ ಚೌಕ ಹತ್ತಿರ ಮಧ್ಯಾನ 2.10 ಗಂಟೆಗೆ ಬಂದು ಜೆ.ಆರ್ ನಗರ ಕಡೆ ನಡೆದುಕೊಂಡು ಹೋಗಿ ಬಸವ ಗಂಗಾ ಮೇಡಿಕಲ್ ಮರೆಯಲ್ಲಿ ನಿಂತು ನೋಡಲು ಮೇಡಿಕಲ್ ಹಿಂದೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ-ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ರಾಜಕುಮಾರ ತಂದೆ ಗುಂಡಪ್ಪಾ ಇಂಡಿ ಸಾ:ಜೆ.ಆರ್ ನಗರ ಕಲಬುರಗಿ 2) ಚಂದ್ರಕಾಂತ ತಂದೆ ಗೌಡಪ್ಪಾ ಪವಾರ ಸಾ:ಜೆ.ಆರ್ ನಗರ ಕಲಬುರಗಿ 3) ರಮೇಶ ತಂದೆ ಗುರುಶಾಂತಪ್ಪಾ ಮುಗಳಿ ಸಾ:ಶಿವಾಜಿ ನಗರ ಕಲಬುರಗಿ 4) ಬಸವರಾಜ ತಂದೆ ಈರಣ್ಣಾ ಆಲೂರ ಸಾ:ದೇವಿನಗರ ಕಲಬುರಗಿ 5) ಶಿವಯ್ಯ ತಂದೆ ಶರಣಯ್ಯ ಸ್ವಾಮಿ ಸಾ:ದೇವಿ ನಗರ ಕಲಬುರಗಿ 6) ಜಗನ್ನಾಥ ತಂದೆ ಭೀಮಶಾ ವಾಡಿ ಸಾ:ಶಹಾಬಜಾರ ಕಲಬುರಗಿ 7) ಶಾಮರಾವ ತಂದೆ ಹಣಮಂತರಾಯ ಪಾಟೀಲ ಸಾ:ಜೆ.ಆರ್ ನಗರ ಕಲಬುರಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ
ಬಳಸಿದ ನಗದು ಹಣ 73950/-ರೂ ಮತ್ತು 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ
ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಫರತಾಬಾದ
ಠಾಣೆ : ದಿನಾಂಕ 04/03/2017 ರಂದು ಬೆಳಿಗ್ಗೆ ಟ್ರ್ಯಾಕ್ಟರ ನಂ ಕೆಎ- 32 ಟಿಎ- 6334 ನೇದ್ದರ ಚಾಲಕ ಸಂಗಡ ಇನ್ನು
7 ಜನರು ಹೆಸರು ವಿಳಾಸ
ಗೊತ್ತಲ್ಲಾ ರವರು ಹೆರೂರ (ಬಿ) ಗ್ರಾಮದ
ಸೀಮೆಯಲ್ಲಿ ಹರಿಯುವ ಭೀಮಾ ನದಿಯ ದಡದಿಂದ ಮರಳನ್ನು ಸರ್ಕಾರಕ್ಕೆ ಯಾವುದೆ ರೀತಿಯ ಶುಲ್ಕ ಕಟ್ಟದೆ
ಕಳ್ಳತನದಿಂದ ಟ್ರ್ಯಾಕ್ಟರಗಳಲ್ಲಿ ಸಾಗಣೆ ಮಾಡುವ ಕುರಿತು ಮರಳನ್ನು ಸಂಗ್ರಹಣೆ
ಮಾಡುತ್ತಿದ್ದಾಗ ಇದೇ ವೇಳೆಗೆ ಶ್ರೀ ಪಿ.ಎಸ್
ವನಂಜಕರ ಪಿಎಸ್.ಐ ಫರಹತಾಬಾದ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ಆರೋಪಿತರು ತಂದಿರುವ ನಾಲ್ಕು
ಟ್ರ್ಯಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ನಾಲ್ಕು ಟ್ರ್ಯಾಕ್ಟರಗಳನ್ನು ಜಪ್ತಿ
ಮಡಿಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀಮತಿ ಯವರು ಅಫಜಲಪೂರ
ಪಟ್ಟಣದಲ್ಲಿ ಕೆಲಸ ಮಾಡುತ್ತಿರುವಾಗ ದಿಕ್ಸಂಗಾ (ಕೆ)
ಗ್ರಾಮದ ಪ್ರಕಾಶ ತಂದೆ ಮಹಾದೇವಪ್ಪ ಟೊಣ್ಣೆ ಎಂಬಾತನ ಪರಿಚಯವಾಗಿದ್ದು ಸದರಿ ಪ್ರಕಾಶನು
ಮುಂದೆ ನನ್ನೊಂದಿಗೆ ಸಲುಗೆಯಿಂದ ಮಾತಾಡುತ್ತಾ ನಮ್ಮ ಮನೆಗೆ ಬಂದು ಹೋಗುತ್ತಿದ್ದನು. ಮುಂದೆ ಒಂದು ದಿವಸ ಅವನು ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನಮ್ಮ ಮನೆಗೆ ಬಂದು ನನ್ನೊಂದಿಗೆ
ಮಾತಾಡುತ್ತಾ ಕುಳಿತು ತನ್ನೊಟ್ಟಿಗೆ ಮಲಗಲು ಕರೆದನು. ಆಗ ನಾನು ನಿರಾಕರಿಸಿದಾಗ
ನನಗೆ ಬಲವಂತವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಮತ್ತು
ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಪ್ರಾಣ ಭಯ ಹಾಕಿ ತನಗೆ
ಸಮಯ ಸಿಕ್ಕಾಗಲೆಲ್ಲ ನಮ್ಮ ಮನೆಗೆ ಬಂದು ನನಗೆ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದಿರುತ್ತಾನೆ.
ನಾನು ಕೆಲಸ ಮಾಡುವ ಸ್ಥಳದಿಂದ ಕೆಲಸ ಬಿಟ್ಟು ದುಧನಿ ರೋಡ ರೇವಣಸಿದ್ದೇಶ್ವರ ಕಾಲೋನಿಯಲ್ಲಿ
ಒಂದು ಬಾಡಿಗೆ ಮನೆ ಪಡೆದುಕೊಂಡು ವಾಸವಾಗಿರುತ್ತೇನೆ. ದಿನಾಂಕ 02-03-2017 ರಂದು ಬೆಳಿಗ್ಗೆ ನಾನು
ಒಬ್ಬಳೆ ನಮ್ಮ ಮನೆಯಲ್ಲಿದ್ದಾಗ ಸದರಿ ಪ್ರಕಾಶನು ನಮ್ಮ ಮನೆಗೆ ಬಂದು ನಾನು ಒಪ್ಪದಿದ್ದರೂ ಮತ್ತೆ ನನಗೆ
ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಹಾಗೂ
ಈ ವಿಷಯವನ್ನು ನೀನು ಯಾರಿಗಾದರೂ ಹೇಳಿದರೆ ನಿನಗೆ ಅಫಜಲಪೂರ ಪಟ್ಟಣದಲ್ಲಿ ಜೀವಂತ ಬದುಕಲು ಬಿಡುವುದಿಲ್ಲ
ಅಂತಾ ಹೆದರಿಕೆ ಹಾಕಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ
ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಭೀಮರಾವ ಹಂಚನಾಳ ಸಾ:
ಹಂಚನಾಳ ಇವರು ದಿನಾಂಕ: 03.03.2017 ರಂದು ಮದ್ಯಾಹ್ನ ಜೇವರಗಿ ಪಟ್ಟಣದ ಹೊರವಲಯದಲ್ಲಿರುವ
ಷಣ್ಮುಖ ಶಿವಯೋಗಿ ಪಾಲಿಟೇಕ್ನಿಕ ಕಾಲೇಜ ಹತ್ತಿರ ಜೇವರಗಿ ವಿಜಯಪೂರ ಮುಖ್ಯ ರಸ್ತೆಯಲ್ಲಿ ನನ್ನ
ತಮ್ಮ ಮಂಜುನಾಥ ತಂದೆ ಭೀಮರಾವ ಹಂಚನಾಳ ಇವರು ತನ್ನ ಮೊಟಾರ ಸೈಕಲ ನಂ ಕೆಎ-32-ಎಕ್ಸ್ -8252
ನೇದ್ದರ ಮೇಲೆ ರೋಡಿನ ಸೈಡಿನಿಂದ ವಿಜಯಪೂರಕ್ಕೆ ಹೋಗುತ್ತಿದ್ದಾಗ ಅದೆ ಸಮಯಕ್ಕೆ ಎದುರಿನಿಂದ
ಅಂದರೆ ವಿಜಯಪೂರ ಕಡೆಯಿಂದ ಲಾರಿ ನಂ ಎಪಿ-12ವ್ಹಿ-1591 ನೇದ್ದರ ಚಾಲಕನು ತನ್ನ ಲಾರಿಯನ್ನು
ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮ ಮಂಜುನಾಥನ ಮೊಟಾರ ಸೈಕಲಕ್ಕೆ
ಎದುರಾಗಿ ಡಿಕ್ಕಿ ಪಡಿಸಿ ತನ್ನ ಲಾರಿ ಸ್ವಲ್ಪ ಮುಂದೆ ಹೋಗಿ ಲಾರಿ ಪಲ್ಟಿ ಮಾಡಿದ್ದು. ಈ
ಅಪಘಾತದಲ್ಲಿ ನನ್ನ ತಮ್ಮನಿಗೆ ಭಾರಿಗಾಯಳಾಗಿದ್ದು ಅಪಘಾತ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು
ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ
ಠಾಣೆ : ಶ್ರೀಮತಿ ನಿಂಗಮ್ಮ ಗಂಡ ಶರಣಪ್ಪ ಕಟ್ಟಿಮನಿ ಸಾ:
ಈಜೇರಿ ಹಾ.ವ ಬಸವೇಶ್ವರ ಕಾಲೂನಿ ಜೇವರಗಿ ರವರ ತಮ್ಮನಾದ ಈರಪ್ಪ ಕಟ್ಟಿಮನಿ ಮತ್ತು ಅವನ ಹೆಂಡತಿ ಸುನೀತಾ
ಇವರನ್ನು ನನ್ನ ಮನೆಯಲ್ಲಿ ಇಟ್ಟು ಕೊಂಡಿರುತ್ತೇನೆ. ಮತ್ತು ನನಗೆ ಮಕ್ಕಳು ಆಗದ ಕಾರಣ ನನ್ನ ತಂಗಿ
ಸೈದಮ್ಮ ಇವಳ 7 ವರ್ಷದ ಮಗಳಾದ ಪೂಜಾ ಇವಳಿಗೆ
ನನ್ನಲ್ಲಿಯೇ ಇಟ್ಟು ಕೊಂಡಿರುತ್ತೇನೆ. ನಿನ್ನೆ ದಿ: 03.03.2017 ರಂದು
ಮುಂಜಾನೆ 9.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಮ್ಮ
ಹೆಂಡತಿಯಾದ ಸುನೀತಾ ಇವಳು ನನ್ನ ಮಗಳು ಪೂಜಾ ಇವಳಿಗೆ ಬೈಯುತ್ತಿದ್ದಳು ನಾನು ಮಗುವಿಗೆ ಏಕೆ
ಬೈಯುತಿ ಅಂತ ಅಂದಾಗ ಅವಳು ನನಗೆ ರಂಡಿ ನಿನಗೆ ಗಂಡ ಇಲ್ಲಾ, ಮಕ್ಕಳು
ಇಲ್ಲಾ, ನಮಗೆ ಜೀವ ತಿನ್ನತಿ ಯಾವುದೆ ಕೆಲಸ ಮಾಡುವದಿಲ್ಲಾ, ಅಂತ ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಒದರಾಡ ತೋಡಗಿದಳು. ಆಗ ನಾನು ನಾವು ಒಳ್ಳೆಯ
ಓಣಿಯಲ್ಲಿ ಮನೆ ಬಾಡಿಗೆ ಹಿಡಿದೇವೆ ಹಿಗೆ ಒದರಾಡಿದರೆ ಹ್ಯಾಂಗ ಅಂತ ಬುದ್ದಿ ಹೇಳುವಾಗ ಅವಳು
ಒಮ್ಮಲೇ ನನ್ನ ಸೀರೆ ಸೇರಗಾ ಹಿಡಿದು ನೆಲಕ್ಕೆ ಹಾಕಿ ಕೈಯಿಂದ ಮುಖದ ಮೇಲೆ ಚೂರಿ ರಕ್ತಗಾಯ
ಮಾಡಿದಳು ನಾನು ಕೆಳಗೆ ಬಿದ್ದಾಗ ಒಂದು ಬಡಿಗೆಯಿಂದ ಬಲಗಡೆ ತಲೆ ಮೇಲೆ ಹೊಡೆದಳು ನಾನು ಬೇಹುಷ್
ಬಿದ್ದಾಗ ನಮ್ಮ ಪಕ್ಕದ ಮನೆಯವರಾದ ಶರಣಮ್ಮ ಗೌಡತಿ, ಸವೀತಾ ಟಿಚರ,
ಮಹಾನಂದ ಗೌಡತಿ ಮತ್ತು ನನ್ನ ತಮ್ಮ ಈರಪ್ಪ ಹೊರಗಿನಿಂದ ಓಡುತ್ತಾ ಬಂದು ನನಗೆ
ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಉಪಚಾರ ಪಡಿಸಿರುತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರಗಿ
ಠಾಣೆ : ಶ್ರೀ ಸತೀಶ ತಂದೆ ಸಿದ್ರಾಮ ಅವಂಟಗಿ ಸಾ
: ಶಖಾಪುರ ಎಸ್.ಎ ತಮ್ಮೂರ ಪ್ರಭಲಿಂಗ ತಂದೆ ಭಿಮರಾಯ ದೇವಣಗಾಂವ ಇತನಿಗೆ ಈ
ಸುಮಾರು ಒಂದು ವರ್ಷದ ಹಿಂದೆ ನಾನು ನೀರಿನ ಇಂಜನಕ್ಕೆ ಹಾಕಲು ತಂದ 10 ಲೀಟರ ಡಿಸೇಲನ್ನು ಪ್ರಭುಲಿಂಗನಿಗೆ
ಅವನ ಆಟೋಕ್ಕೆ ಹಾಕಲು ನೀಡಿರುತ್ತೇನೆ. ಸದರಿ ಹಣ ನೀಡುವಂತ್ತೆ ಸುಮಾರು ಸಲ ಪ್ರಭುಲಿಂಗನಿಗೆ
ಕೇಳಿದರು ಅವನು ಹಣ ಕೊಟ್ಟಿರುವದಿಲ್ಲಾ, ಆ ವಿಷಯದಲ್ಲಿ ತಕರಾರು
ಮಾಡಿರುತ್ತಾನೆ. ಇಂದು ದಿನಾಂಕ: 04.03.2017 ರಂದು ಮುಂಜಾನೆ 08.00 ಗಂಟೆ ಸುಮಾರಿಗೆ ನಾನು ನಮ್ಮೂರ ಸರಕಾರಿ ಶಾಲೆ ಹತ್ತಿರ ಸಂಡಾಸಕ್ಕೆ ಹೋಗಿ ಮರಳಿ ಶಾಲೆ
ಹತ್ತಿರ ಬರುತ್ತಿರುವಾಗ ಪ್ರಭುಲಿಂಗ ಇತನು ನನ್ನ ಎದುರಿಗೆ ಬಂದನು ಆಗ ನಾನು ಅವನಿಗೆ ಹಣ ನೀಡಲು
ಹೇಳಿದಾಗ ಅವನು ಜಗಳ ಬಿದ್ದು ರಂಡಿ ಮಗನೆ ನಿನಗೆ ಯಾವುದೆ ಹಣ ಕೊಡುವದಿಲ್ಲಾ ಏನು ಮಾಡುತಿ ಮಾಡಿಕೋ
ಅಂತ ಬೈದು ಕುತ್ತಿಗೆ ಹಿಡಿದು ನೆಲಕ್ಕೆ ಹಾಕಿ ಅಲ್ಲಿ ಇದ್ದ ಒಂದು ಕಲ್ಲು ತಗೆದುಕೊಂಡು ನನ್ನ
ಎಡಗಾಲ ಪಾದದ ಮೇಲೆ ಹೊಡೆದು ಒಳಗಾಯ ಮಾಡಿರುತ್ತಾನೆ. ಇದರಿಂದ ನನ್ನ ಕಾಲು ಉಬ್ಬಿರುತ್ತದೆ. ಅವನು
ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬೆನ್ನ ಮೇಲೆ ಹೊಡೆದು ಕಾಲಿನಿಂದ ಟೊಂಕದ ಮೇಲೆ
ಒದಿಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ಕೃಷ್ಣಪ್ಪ ಮತ್ತು ಶರಣಗೌಡ ಇವರು ಬಿಡಿಸಿಕೊಂಡರು.
ನಂತರ ಅವನು ಮಗರನೆ ಇನ್ನೋಮ್ಮೆ ಡಿಸೇಲ ಹಣ ಕೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ
ಭಯ ಹಾಕಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment