ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ.
ಸಿದ್ದಣ್ಣ ತಂದೆ ರೇವಣಸಿದ್ದಪ್ಪ ಎಣ್ಣಿ ಸಾ:ನಾಲವಾರ, ತಾ:ಚಿತ್ತಾಪೂರ, ಹಾ.ವ: ವಿಶ್ವನಗರ, ಸೇಡಂ ರವರು ದಿನಾಂಕ:03-03-2017 ರಂದು ಕೆಲಸವಿದ್ದ ಪ್ರಯುಕ್ತ ನಾನು ಮತ್ತು
ನಮ್ಮ ಮಾವನಾದ ಸುರೇಶ ಪಾಟೀಲ್ ತಂದೆ ರಾಮಚಂದ್ರಪ್ಪ ಪಾಟೀಲ್, ಇಬ್ಬರೂ ಕೂಡಿಕೊಂಡು ಸಾಯಂಕಾಲ ತೊಟ್ನಳ್ಳಯಿಂದ
ಕೆ.ಎಸ್.ಆರ್.ಟಿ.ಸಿ ಬಸ್ ನಂ-KA33 F-39 ನೇದ್ದರಲ್ಲಿ
ಕುಳಿತು ಸೇಡಂಕ್ಕೆ ಬರುತ್ತಿದ್ದೇವು. ನಮಗೆ ಸೇಡಂ ಎ.ಪಿ.ಎಮ್.ಸಿ. ಯಲ್ಲಿ ಕೆಲಸ ಇದ್ದ ಪ್ರಯುಕ್ತ
ಸೇಡಂ ಪಟ್ಟಣದ ಚಿಂಚೋಳಿ ಕ್ರಾಸ್ ಹತ್ತಿರ ಬಸ್ಸಿನ ಡ್ರೈವರಗೆ ನಿಲ್ಲಿಸಲು ಹೇಳಿ ಇಬ್ಬರೂ
ಇಳಿಯುತ್ತಿದ್ದೇವು, ನಮ್ಮ
ಮಾವನಾದ ಸುರೇಶ ಇತನು ಮುಂದುಗಡೆ ಇಳಿದು ಬಸ್ ಮುಂದಿನಿಂದ ರೋಡ ದಾಟುವಾಗ ಸದರಿ ಬಸ್ಸಿನ ಡ್ರೈವರ್
ತನ್ನ ವಶದಲ್ಲಿದ್ದ ಬಸ್ಸನ್ನು ಅಲಕ್ಷತನದಿಂದ ಚಲಾಯಿಸಿ ರೋಡ್ ದಾಟುತ್ತಿದ್ದ ನಮ್ಮ ಮಾವನಿಗೆ
ಡಿಕ್ಕಿ ಪಡೆಸಿದನು ಅದರಿಂದ ನಮ್ಮ ಮಾವ ರೋಡಿನ ಮೇಲೆ ಬಿದ್ದನು ಆಗ ಬಸ್ಸಿನ ಟಾಯರ್ ಕಾಲಿನ ಮೇಲೆ
ಹಾಯ್ದು ಬಲಗಾಲ ಮೊಳಕಾಲಿನ ಕೆಳಗೆ ಭಾರಿ ಗಾಯವಾಯಿತು. ಎಡಗಾಲ ಪಾದದ ಹತ್ತಿರ ತರಚಿದ ಗಾಯಗಳಾದವು.
ಇದನ್ನು ನೋಡಿದ ಬಸ್ ಚಾಲಕ ತನ್ನ ಬಸ್ಸನ್ನು ಅಲ್ಲೆ ಬಿಟ್ಟು ಓಡಿ ಹೋದನು. ನಾನು ಮತ್ತು
ಬಸನಲ್ಲಿದ್ದ ಪ್ರಯಾಣಿಕರು ಸದರಿ ಡ್ರೈವರನಿಗೆ ನೋಡಿರುತ್ತೇವೆ. ನಾನು ಖಾಸಗಿ ವಾಹನದಲ್ಲಿ ಉಪಚಾರ
ಕುರಿತು ಕಲಬುರಗಿಯ ಕುರಾಳ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಉಪಚಾರ
ಫಲಕಾರಿಯಾಗದೇ ಇಂದು ದಿ:04-03-2017 ರಂದು
01-25 ಎ.ಎಮ್.
ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪರಿಚಿತರಿಂದ ಬುಕ್ಕ ಸ್ಟಾಲಗೆ ಬೆಂಕಿ :
ಮಾಹಾಗಾಂವ ಠಾಣೆ : ದಿನಾಂಕ 02/03/2017 ರಂದು 10-00 ಪಿಎಂ ದಿಂದ ದಿ:
03/03/17 ರಂದು 00-30 ಎಎಂದ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಶ್ರೀ ಪ್ರವೀಣ
ತಂದೆ ಚಂದ್ರಕಾಂತ ಲೆಂಗಟಿ ಸಾ: ಮಹಾಗಾಂವ ಕ್ರಾಸ ತಾ:ಜಿ: ಕಲಬುರಗಿ ರವರ ಬುಕ್ಕ್ ಸ್ಟಾಲ ಮತ್ತು ಪಾನಶಾಪಿಗೆ ಬೆಂಕಿ ಹಚ್ಚಿ ಬುಕ್ಕ
ಸ್ಟಾಲ್ ಗೆ ಸಂಬಂಧಿಸಿದ ಅಂದಾಜು 1,27,580-00 ರೂ. ಗಳಷ್ಟು ಬುಕ್ ಸ್ಠೇಶನರಿಗಳನ್ನು ಸುಟ್ಟು ಹಾನಿ ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment