POLICE BHAVAN KALABURAGI

POLICE BHAVAN KALABURAGI

30 August 2016

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ದಿನಾಂಕ 13/10/2014 ರಂದು ಬೆಳಿಗ್ಗೆ ನನ್ನ ಗಂಡ ಮಕ್ಕಳು ಬದನೆಕಾಯಿ ಕಡೆಯಲು ಹೊಲಕ್ಕೆ ಹೋದರು ನಾನು 11:00 ಗಂಟೆಯ ಸುಮಾರಿಗೆ ಹೊಲಕ್ಕೆ ಹೊದೇನು, ಎಲ್ಲರೂ ಕೂಡಿ ಬದನೆಕಾಯಿ ಕಡೆದು ನನ್ನ ಮಕ್ಕಳು ಮೊದಲು ಮನೆಗೆ ಹೋಗಿರುತ್ತಾರೆ, ನಾನು ಹೊಲದಿಂದ ಮನೆಗೆ ಬರುವಾಗ ಸಾಯಂಕಾಲ 06:00 ಗಂಟೆಯ ಸುಮಾರಿಗೆ ನನ್ನ ಗಂಡನ ಮೋಬಾಯಿಲಗೆ ಫೋನ್ ಬಂದಿದ್ದು ಯಾರದು ಎಂದು ಕೇಳಿದಾಗ ನಮ್ಮೂರ ಬಸವರಾಜ ಕುಪ್ಪಣ್ಣಾ ಹತ್ತೆ ಇತನ ಫೋನ್ ಇದೆ ಎಂದು ಹೇಳಿದಾಗ ಅವರೊಂದಿಗೆ ಹೋಗಬೇಡ ಎಂದು ಹೇಳಿ ಮನೆಗೆ ಬಂದೇನು, ರಾತ್ರಿ 7:00 ಗಂಟೆಯ ಸುಮಾರಿಗೆ ನನ್ನ ಗಂಡ ಶರೆ ಕುಡಿದು ಮನೆಗೆ ಬಂದರು ನಮ್ಮ ಮನೆಯ ಮುಂದೆ 1) ಬಸವರಾಜ ಕುಪ್ಪಣ್ಣ ಹತ್ತೆ 2) ಬಸವರಾಜ ಝಳಕೆ ಇವರಿಬ್ಬರು ನನ್ನ ಗಂಡನನ್ನು ಸರಾಯಿ ಕುಡಿಸಲು ಕರೆದುಕೊಂಡು ಹೋದರು ಇಡಿ ರಾತ್ರಿ ಮನೆಗೆ ಬರಲಿಲ್ಲ, ದಿನಾಂಕ 14/10/2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಊರಿನ ಜನರು ಅಂದಾಡುವುದರಿಂದ ಗೊತ್ತಾಗಿದ್ದೇನೆಂದರೆ ಡಾ|| ವಿಜಯಕುಮಾರ ಭಗತ ಇವರ ಮನೆಯ ಮುಂದಿನ ಕಟ್ಟೆಯ ಮೇಲೆ ಸರಾಯಿ ಪಾಕೀಟ್ ಓರಿಜಿನಲ್ ಚ್ವಾಯಿಸ್ ಇದ್ದು ಅದು ವಿಷದ ಪುಡಿಯಿಂದ ಮಿಶ್ರಣವಾದ ವಾಸನೆ ಬರುತ್ತಿತ್ತು, ನನ್ನ ಗಂಡನು ಹೊರಳಾಡಿಸಲು ಅವನು ಮರಣ ಹೊಂದಿದ್ದು ಗೊತ್ತಾಯಿತು, ಅವನು ಅಲ್ಲಿ ಮಲಗಿದ್ದ ಸ್ಥಳದಲ್ಲಿ ಸರಾಯಿ ಹೊಂದಿದ ಹಸಿರು ಮಿಶ್ರಿತವಾದ ದ್ರವ ಚಲ್ಲಿದ್ದು ಕಂಡು ಬಂದಿರುತ್ತದೆ, ನನ್ನ ಗಂಡ ಸಾಯಂಕಾಲ 7:00 ಗಂಟೆಯಿಂದ ಇಂದು ಬೆಳಿಗ್ಗೆ 6:00 ಗಂಟೆಯ ಮಧ್ಯದಲ್ಲಿ ಮರಣ ಹೊಂದಿರುತ್ತಾನೆ, ನನ್ನ ಗಂಡ ಸತ್ತ ಬಗ್ಗೆ ಅವನ ಮರಣದಲ್ಲಿ ಸಂಶಯ ಇರುತ್ತದೆ, ಇದರ ಬಗ್ಗೆ ನನ್ನ ಗಂಡನ ಸಾವಿನ ಬಗ್ಗೆ ಪ್ರಾಣ ಭಯ ಇರುತ್ತದೆ ಎಂದು 2014 ನೇಯ ಸಾಲಿನ ಶಿವರಾತ್ರಿಯ ಮುಂದೆ ಆಳಂದ ಠಾಣೆಯಲ್ಲಿ ಧರ್ಮಣ್ಣಾ ಶಿವಶರಣಪ್ಪಾ ಪಾಟೀಲ್ ಇವರಿಂದ ನನ್ನ ಮಗನ ಪ್ರಾಣ ಭಯ ಇರುತ್ತದೆ ಎಂದು ನನ್ನ ಮಾವನಾದ ಖಂಡೋಬಾ ದವಲತ ಬಂಡಗರ ಇವರು ದೂರು ಸಲ್ಲಿಸಿರುತ್ತಾರೆ, ನನ್ನ ಗಂಡನು ಸತ್ತ ಬಗ್ಗೆ ಸಾವಿಗೆ ಸಂಶಯ ಇರುತ್ತದೆ, ಕಾರಣ ದಯಾಳುಗಳಾದ ತಾವು ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಶ್ರೀಮತಿ ಇಂದುಬಾಯಿ ಗಂಡ ಹಣಮಂತರಾಯ ಬಂಡಗರ ಮು|| ಕಿಣ್ಣಿ ಸುಲ್ತಾನ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಜೇವರಗಿ ಠಾಣೆ : ದಿನಾಂಕ 29.08.2016 ರಂದು ಮದ್ಯಾಹ್ನ ಚಿಗರಳ್ಳಿ ಕ್ರಾಸ್ ಹತ್ತಿರ ಹಣಮಂತ ಇಜೇರಿ ಇವರ ಹೊಟೇಲ ಹತ್ತಿರ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಇಟ್ಟು ಅಂದರ ಬಾಹರ ಏಂಬ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳದ ಕಡೆಗೆ ಎಲ್ಲರೂ ನಡೆದುಕೊಂಡು ಹೋಗಿ ಒಂದು ಹೊಟೇಲ ಗೋಡೆಯ ಮರೆಯಲ್ಲಿ ನಿಂತು ನೋಡಲು ಹೊಟೇಲ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಮದ್ಯಾಹ್ನ 2.00 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿ ಜನರ ಸಹಾಯದಿಂದ ಏಕ ಕಾಲಕ್ಕೆ ದಾಳಿ ಮಾಡಿ ಅವರಿಗೆ ಹಿಡಿದು ಅವರಲ್ಲಿ ಒಬ್ಬನು ಓಡಿ ಹೋಗಿದ್ದು  ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಲು ಅಂಗದ ಶೋದನೆ ಮಾಡಲು 1) ಪ್ರಕಾಶ ತಂದೆ ಶರಣಪ್ಪಗೌಡ ಪೊಲೀಸ್ @ ಚನ್ನಶೆಟ್ಟಿ ಸಾ: ಅಣಬಿ  ತಾಃ ಶಹಾಪೂರ 2) ಭಾಷಾಸಾಬ ತಂದೆ ಅಬ್ಬಾಸ ಅಲಿ  ಚೌದರಿ  ಸಾಃ ಚಿಗರಳ್ಳಿ  ಒಟ್ಟು ನಗದು ಹಣ 4650/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಔಶಕ್ಕೆ ತೆಗೆದುಕೊಂಡು  ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು 3. ಶರಣಪ್ಪ ತಂದೆ ಬೀರಪ್ಪ ಪೂಜಾರಿ  ಸಾಃ ಚಿಗರಳ್ಳಿ, ಅಂತಾ ತಿಳಿಸಿದ್ದು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ನಿಂಗನಗೌಡ ತಂದೆ ಶರಣಗೌಡ ಪಾಟೀಲ ಸಾ: ಮೌನೇಶ್ವರ ನಗರ ಜೇವರಗಿ ರವರು ತಮ್ಮ ಓಣಿಯಲ್ಲಿ ಕಿರಾಣಿ ಅಂಗಡಿ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರು ಕಿರಾಣಿ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇವೆ. ದಿನಾಂಕ: 28.08.2016 ರಂದು ಎಂದಿನಂತೆ ಮುಂಜಾನೆ 06.00 ಗಂಟೆಗೆ ನಮ್ಮ ಕಿರಾಣಿ ಅಂಗಡಿ ತೆರೆದು ರಾತ್ರಿ 9.00 ಗಂಟೆ ವರೆಗೆ ವ್ಯಾಪಾರ ಮಾಡಿಕೊಂಡು ಕಿರಾಣಿ ಅಂಗಡಿ ಬಾಗಿಲು ಕೀಲಿ ಹಾಕಿ ಮನೆಗೆ ಹೋಗಿದ್ದೇವು. ಇಂದು ದಿನಾಂಕ: 29.08.2016 ರಂದು ಮುಂಜಾನೆ 05.30 ಗಂಟೆ ಸುಮಾರಿಗೆ ನಾನು ಹಾಲು ತರಲು ನನ್ನ ಮೊಟಾರ ಸೈಕಲದ ಮೇಲೆ ನನ್ನ ಅಂಗಡಿ ಹತ್ತಿರದಿಂದ ಹೋಗುತ್ತಿದ್ದಾಗ ನಮ್ಮ ಅಂಗಡಿ ಬಾಗಿಲು ಕೀಲಿ ಮುರಿದು ಬಾಗಿಲು ತೆರೆದಿತ್ತು. ನಾನು ಗಾಬರಿಯಾಗಿ ನೋಡಲು ಅಂಗಡಿಯಲ್ಲಿ ಕಿರಾಣಿ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದ್ದಿದ್ದವು. ನೋಡಲು 1) 10 ಕೆಜಿ ಕೊಬ್ಬರಿ ಅ.ಕಿ 700/-ರೂ 2) 25 ಕೆಜಿ ಸಕ್ಕರಿ ಅ.ಕಿ 1000/-ರೂ 3) 10 ಕೆಜಿ ರವಾ 320/-ರೂ 4) ಆರ್,ಎಮ್,ಡಿ ಬಾಕ್ಟ 700/-ರೂ 5) 12 ಕಿನ್ಲೇ ನೀರಿನ ಬಾಟಲಿ ಅ.ಕಿ 240/-ರೂ 6) 10 ಸ್ಪ್ರೈಟ್ ಕೋಲ್ಡ ಡ್ರಿಂಕ್ಸ  ಬಾಟಲಿ 180/-ರೂ 7) ಆರ್.ಆರ್, ಬಾಬಾ, ವಿಮಲ್ ಗುಟಕಾ ಅ.ಕಿ 600/-ರೂ 8) 200 ಗ್ರಾಂ 6 ಪ್ಯಾರಾಶ್ಯೂಟ್ ಕೊಬ್ಬರಿ ಎಣ್ಣೆ ಅ.ಕಿ 600/-ರೂ 9) 10 ನೀರ್ಮಾ ಸಾಬೂನ ಪುಡಿ ಪಾಕೇಟ ಅ.ಕಿ 230/-ರೂ 10) ಸ್ಯಾಂಪೋ ಅ,ಕಿ 200/-ರೂ 11) ನಗದು ಹಣ 1500/-ರೂ 12) 24 ರೀನ್ ಅಡ್ವಾನ್ಸ್ ಅ.ಕಿ 240/-ರೂ 13) 24 ಫೇವಿಕಾಲ್ ಡಬ್ಬಿ ಅ.ಕಿ 240/-ರೂ 14) 4 ಡೆಬ್ಬಿ ಕಿಂಗಸೈಜ ಸಿಗರೇಟ ಅ.ಕಿ 400/-ರೂ 15) 3 ಡೆಬ್ಬಿ ಸ್ಮಾಲ್ ಸೈಜ್ ಸಿಗರೇಟ ಅ.ಕಿ 400/-ರೂ 16) ಒಂದು ಬಾಕ್ಸ್ ಗಣೇಶ ಬೀಡಿ ಅ.ಕಿ 320/-ರೂ ಇರಲಿಲ್ಲಾ. ಅಷ್ಟರಲ್ಲಿ ನಮ್ಮ ಓಣಿ ಮೌನೇಶ ತಂ ಶಿವಾನಂದ ವಿಶ್ವಕರ್ಮ ಇತನು ಬಂದನು ಕಳ್ಳತನವಾದ ಮಾಹಿತಿ ತಿಳಿಸಿ ನಂತರ ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿದಾಗ ನನ್ನ ಹೆಂಡತಿ ಸಾವಿತ್ರಿ ಇವಳು ಕೂಡಾ ಬಂದರು. ಅವರು ಕೂಡಾ ಅಂಗಡಿಯಲ್ಲಿ ಹೋಗಿ ಹಕ್ಕಿಕತ ನೋಡಿರುತ್ತಾರೆ. ನಂತರ ನಾವು ನಮ್ಮ ಓಣಿಯಲ್ಲಿ ಹುಡುಕಾಡಿದೆವು. ಆದರು ಕೂಡಾ ಕಳುವಾದ ಸಾಮಾನುಗಳು ಸಿಕ್ಕಿರುವದಿಲ್ಲಾ. ಯಾರೋ ಕಳ್ಳರು ದಿ: 28,29/08.2016 ರಂದು ರಾತ್ರಿ 11.30 ಗಂಟೆಯಿಂದ ಬೆಳಗಿನ ಜಾವ 05.30 ಗಂಟೆ ಅವಧಿಯಲ್ಲಿ ನಮ್ಮ ಕಿರಾಣಿ ಅಂಗಡಿ ಬಾಗಿಲು ಕೀಲಿ ಮುರಿದು ಒಳಗೆ ಹೋಗಿ ಅಂಗಡಿಯಲ್ಲಿದ್ದ ಕಿರಾಣಾ ಸಾಮಾನುಗಳು ಮತ್ತು ನಗದು ಹಣ ಹೀಗೆ ಒಟ್ಟು ಅ.ಕಿ 7.870/-ರೂ ಕಿಮ್ಮತಿವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಅಂಜನಾ ತಂದೆ ನೀಲಕಂಟ ರಾಠೋಡ ಸಾ ಮಲಸಾಪೂರ ತಾಂಡಾ ರವರ  ಮಗನಾದ ಅಭೀಶೇಖ ವಯ: 6 ವರ್ಷ ಇತನು ನಮ್ಮ ಮನೆಯ ಮುಂದೆ ಆಟ ಆಡುತ್ತಿದ್ದು ಅದೆ ವೇಳೆಗೆ ತುಕಾರಾಮ ತಂದೆ ದೇವಲಾ ಚೌವ್ಹಾಣ ಇತನು ನಮ್ಮ ಮನೆಯ ಹತ್ತಿರ ಬಂದು ನನ್ನ ಮಗ ಅಭೀಶೇಖ ಇತನಿಗೆ ಏ ರಂಡಿ ಮಗನೆ ನಿಮ್ಮ ಅವ್ವ ಎಲ್ಲಿ ಇದ್ದಾಳೆ ಅಂತ ಬೈಯುತ್ತಿದ್ದು ಆಗ ನಾನು ಮನೆಯಿಂದ ಹೊರಗೆ ಬಂದು ಸದರಿ ತುಕಾರಾಮ ಇತನಿಗೆ ನನ್ನ ಮಗನಿಗೆ ಯಾಕೆ ಬೈಯುತ್ತಿ ಅವನು ಏನು ಮಾಡಿದ್ದಾನೆ ಅಂತ ಕೇಳಿದ್ದು ಆಗ ಸದರಿಯವನು ರಂಡಿ ನಾನು ನಿನ್ನ ಸಂಗಡ ಮಲಗಲು ಬಂದಿದ್ದೆನೆ ಸೂಳಿ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ನೀನು ನನ್ನ ಸಂಗಡ ಏನು ಮಲಗುತ್ತಿ ನಿನ್ನ ಹೆಂಡತಿ ಸಂಗಡ ಮಲಗು ಅಂತ ಹೇಳಿದ್ದು ಆಗ ಸದರಿಯವನು ರಂಡಿ ನೀನು ನನಗೆ ಎದರು ಮಾತನಾಡುತ್ತಿ ಸುಳಿ ಅಂತ ಬೈಯುತ್ತಾ ನನಗೆ ಹಿಡಿದುಕೊಂಡು ನೇಲಕ್ಕೆ ಹಾಕಿ ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅದೆ ವೇಳೆಗೆ ತುಕಾರಾಮನ ತಮ್ಮನಾದ ಮಾಣಿಕ ಮತ್ತು ತಂದೆ ಯಾದ ದೇವಲಾ ಇಬ್ಬರು ಕೂಡಿಕೊಂಡು ಬಂದು ಈ ರಂಡಿ ಸೊಕ್ಕು ಬಹಳ ಆಗಿದೆ ಇವಳ ಗಂಡ ಜೇಲಿಗೆ ಹೋದರು ಇವಳ ಸೊಕ್ಕು ಕಮ್ಮಿಯಾಗಿಲ್ಲ ಇವಳ ಸೊಕ್ಕು ಇಳಿಸಬೇಕು ಅಂತ ಬೈಯುತ್ತಿದ್ದು, ದೇವಲಾ ಇತನು ಈ ರಂಡಿಗೆ ಬಿಡಬೇಡಿರಿ ಇವಳಿ ಹೊಡೆಯಿರಿ ಅಂತ ಹೇಳಿದ್ದು ಆಗ ಮಾಣಿಕ ಇತನು ಅಲ್ಲೆ ಬಿದ್ದ ಬಡಿಗೆ ತೆಗೆದುಕೊಂಡು ನನ್ನ ಬಲಗೈ ಹಸ್ತದ ಹತ್ತಿರ ಹೊಡೆದು ತೆರಚಿದ ರಕ್ತಗಾಯ ಪಡಿಸಿದ್ದು ಸದರಿ ಮೂರು ಜನರು ಕೂಡಿಕೊಂಡು ನನಗೆ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಹಾಕಿ ನನಗೆ ಹೊಡೆಬಡೆ ಮಾಡುತ್ತಿದ್ದು ಸದರಿಯವರು ನನಗೆ ಹೊಡೆಯುವದನ್ನು ನೋಡಿ ಮನೆಯಲ್ಲಿದ್ದು ನಮ್ಮ ಮಾವ ಮಾನಸಿಂಗ್ ನಮ್ಮ ಗ್ರಾಮದ ಶರಣಪ್ಪ ಉಪ್ಪಾರ ಇವರು ಬಂದು ನನಗೆ ಹೊಡೆಯುವವರಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: