POLICE BHAVAN KALABURAGI

POLICE BHAVAN KALABURAGI

28 August 2016

Kalaburagi District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶ್ರೀಕಾಂತ ತಂದೆ ಶಂಕರ ಕಟ್ಟಿಮನಿ ಸಾ:ದೇವಿನಗರ ಕಲಬುರಗಿ ಇವರು ದಿನಾಂಕ: 23-08-2016  ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಇಂದು ದಿನಾಂಕ: 27-06-2016 ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಮ್ಮ ಮನೆಯ ಮೊದಲನೆ ಮಹಡಿ ಮೇಲೆ ಹೋಗಿ ನೋಡಲು ನನ್ನ ಬೇಡರೂಮೀನ ಬೀಗ ಮುರಿದು ಬಾಗಿಲು ತೆರೆದಿದ್ದು ಇದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಅಲಮಾರ ತೆಗೆದಿದ್ದು ನಾನು ನೋಡಲು ಅಲಮಾರದಲ್ಲಿ ಇದ್ದ ತಲಾ ಒಂದು ತೊಲಿಯ ಎರಡು ಲಾಕೇಟಗಳು ಮತ್ತು ನಗದು ಹಣ 1.50,000/-ರೂ ಇರಲಿಲ್ಲ ಯಾರೋ ಕಳ್ಳರು ನಮ್ಮ ಮನೆಯ ಬೇಡ ರೂಮೀನ ಒಳಗೆ ಪ್ರವೇಶ ಮಾಡಿ 10 ಗ್ರಾಂ ಬಂಗಾರದ 2 ಲಾಕೇಟಗಳು ಅಂದಾಜು 60000/-ರೂ ನಗದು ಹಣ ಒಟ್ಟು ಸೇರಿ 2,10,000/-ರೂ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೆಂಕಟೇಶ ತಂದೆ ಬಾಲಾಜಿ ಠಾಕೂರ ಸಾ: ಅಶೋಕ  ನಗರ ಕಾಲೋನಿ ಶಾಹಾಬಾದ ತಾ: ಚಿತ್ತಾಪುರ ಜಿ: ಕಲಬುರಗಿ ಇವರು ದಿನಾಂಕ: 14/02/2014 ರಂದು ಸಾಯಾಂಕಾಲ 4-00 ಗಂಟೆ ಸೂಮಾರಿಗೆ ಸೇವು ತಂದೆ ಶಂಕರು ಪವಾರ ಮತ್ತು ರಾಜು ತಂದೆ ಮಾರುತಿ ಪೊಲೀಸ್ ಇವರು ನನಗೆ ತಿಳಿಸಿದ್ದೆನೆಂದರೆ, ನಿನಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀನು ಕಲಬುರಗಿ ನಗರದ  ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬರಬೇಕು ಅಂತ ಹೇಳಿದಾಗ  ನಾನು ಮತ್ತು ನನ್ನ ಗೇಳೆಯರಾದ ಸಂತೋಷ PÀÄ®PÀtÂÃð, ಜೆತೇಂದ್ರ ರಾಠೋಡ, ಎಲ್ಲರು ಅಲ್ಲಿಗೆ ಹೊಗಿದೇವು ಅಲ್ಲಿ ಅವರು ಹಾಜರಿದ್ದು  ನಮಗೆ ಹೇಳಿದನೆಂದರೆ. ನಿಮಗೆ ಕೆಂದ್ರ ಸಕಾರದ ರೈಲ್ವೆ ಇಲಾಖೆಯಲ್ಲಿ ಖಾಯಂ ನೌಕರಿ ಹಚ್ಚಿ ಕೋಡುತ್ತೆವೆ ನೀವು ನಮಗೆ ಹಣ ಕೊಡಬೆಕು ಅಂತಾ ಹೇಳಿದಾಗ ನಾನು  1 ಲಕ್ಷ 10 ಸಾವಿರ ರೂ ಮತ್ತು 2) ಸಂತೋಷ ಬಿ ಹೂಗಹಾರ ಯಡ್ರಾಮಿ ಇವರು 90 ಸಾವಿರ ರೂ. 3) ಜಿತೆಂದ್ರ ತಂದೆ ನೂರಸಿಂಗ ರಾಠೋಡ ಸಾ.ಕಾಳಗಿ ಕಿಂಡಿ ತಾಂಡಾ ಇವರು  80 ಸಾವಿರ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ 80 ಸಾವಿರ ರೂಪಾಯಿ ಕೊಟ್ಟಿರುತ್ತವೆ. ಮತ್ತೆ 12-13 ತಿಂಗಳ ನಂತರ ಅಂದರೆ 2015 ಸಾಲಿನಲ್ಲಿ ನಮಗೆ ದಿನಾಂಕ ಮತ್ತು ತಿಂಗಳು ನೆನೆಪು ಇರುವದಿಲ್ಲಾ  ಆಗ ಇವರಿಬ್ಬರೂ ನೀವು ಇನ್ನೂ ಹಣ ತೆಗೆದುಕೊಂಡು ನಮ್ಮ ಜೊತೆಯಲ್ಲಿ ಬೆಂಗಳೂರಿಗೆ ಬರಬೇಕು ಅಲ್ಲಿ ನಮ್ಮ ಗೆಳೆಯ ಅಮುಲ ಮದನಕರ ಇವರು ಇರುತ್ತಾರೆ ಅವರಿಗೆ ಕೂಡಾ ಹಣ ಕೊಡಬೇಕು ಆಗ ನಿಮಗೆ ನೌಕರಿ ಆಗುತ್ತದೆ ಅಂತಾ ಹೇಳಿದಾಗ ನಾವು 3 ಜನರು ಅವರ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದು ಅಲ್ಲಿ ಒಬ್ಬ ವ್ಯಕ್ತಿ ಇದ್ದು ಇವರೆ ಅಮುಲ ಮದನಕರ ಇರುತ್ತಾನೆ ಅಂತಾ ನಮಗೆ ಹೇಳಿ ಆತನ ಪರಿಚಯ ಮಾಡಿಸಿದರು ಆಗ ನಾವು ಅಲ್ಲಿ ಎಲ್ಲರೂ ಕೂಡಿ ನಾನು 1 ಲಕ್ಷ 20 ಸಾವಿರ ರೂಪಾಯಿ ಸಂತೋಷ ಕುಲಕರ್ಣಿೇ ಇವರು 1 ಲಕ್ಷ 15 ಸಾವರಿ ರೂಪಾಯಿ ಮತ್ತು ಜಿತೇಂದ್ರ ರಾಠೋಡ 1 ಲಕ್ಷ 20 ಸಾವಿರ ರೂಪಾಯಿ ಅಂತಾ ಅಲ್ಲಿ ಒಟ್ಟು 3 ಲಕ್ಷ 55 ಸಾವಿರ ರೂಪಾಯಿ ಕೊಟ್ಟಿರುತ್ತೇವೆ. ಅವರು ನಮಗೆ ನೌಕರಿ ಕೊಡಿಸುತ್ತೆವೆ ಅಂತ ಅಂದಿನಿಂದ ಇಲ್ಲಿಯವರಗೆ ಕಲ್ಕತ್ತಾ ದೇಹಲಿ  ಮತ್ತು ಇನ್ನಿತರ ಕಡೆಗಳಲ್ಲಿ ತಿರುಗಾಡಿಸಿ  ನೌಕರಿ ಕೊಡಿಸದೆ  ನಮಗೆ ಮೊಸ ಮಾಡಿರುತ್ತಾರೆ ಅಲ್ಲದೆ ನಮ್ಮಂತೆ 1 ) ಭೀಮಣ್ಣ ಜಿಗರಿ ಸಾ. ಯಡ್ರಾಮಿ 2) ಸೇವು ರಾಠೋಡ ಸಾ. ಯಡ್ರಾಮಿ 3) ಪರಶುರಾಮ ಖಾಚಾಪುರ 4) ದೆವಿದ್ರಪ್ಪ ಸೂರಪುರ 5) ಮಾಂತೇಶ ರಾಠೋಡ ಸಾ.ಅಲ್ಲಾಪೂರ ತಾಂಡಾ 6) ಗೋವಿಂದ ಚೌಹಾಣ ಅಲ್ಲಾಪೂರ ತಾಂಡಾ 7) ಪಿಂಟು ರಾಠೋಡ ಸಾ. ಅಲ್ಲಾಪೂರ ತಾಂಡಾ 8) ಭೀಮು ತಂದೆ ನಾಗಪ್ಪ ಚೌದರಿ 9) ಆನಂದ ತಂದೆ ಮಲ್ಲಿಕಾಜರ್ಿನ ಸಾ.ಶಾಹಾಬಾದ 10)   ಮಲ್ಲಿನಾಥ ತಂದೆ ಗುಂಡೆರಾವ ಬೀರಾದರ ಸಾ.ಬನ್ನುರ ತಾ.ಜಿ. ಕಲಬುರಗಿ 11) ನಿಂಗಣ್ಣ ತಂದೆ ಶರಣ ಬಸ್ಸಪ್ಪ ಶಂಕರವಾಡಿ ಸಾ. ಕಡಣಿ 12) ಅರುಣ ಕೊಗಟನೂರ ತಾ: ಸಿಂದಗಿ ಜಿಲ್ಲಾ ವಿಜಯಪೂರ 13) ವಿಲಾಶ ವಚ್ಹಾಣ ಮಹಾರಾಷ್ಟ್ರ 14) ಬಸವರಾಜ ಜೇವಗಿ 15) ಗುರುನಾಥ ಯಡ್ರಾಮಿ ಇವರೆಲ್ಲರ  ಹತ್ತಿರ ಕೂಡ ನಿಮಗೆ ನೌಕರಿ ಕೊಡಿಸುತ್ತೆವೆ ಅಂತ ಸುಳ್ಳು ಹೇಳಿ ಹಣ ಪಡೆದು ಮೊಸ ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಅಲ್ಲದೆ ಅವರ ಹತ್ತಿರ ಕೂಡಾ  ಹಂತ ಹಂತವಾಗಿ ಹಣ ಪಡೆದುಕೊಂಡು ನಿಮಗೆ ನೌಕರಿ ಕೊಡಿಸುತ್ತೆವೆ ಅಂತಾ ಅವರಿಗೆ ಮತ್ತು ನಮಗೆ ಕಲ್ಕತ್ತಾ. ಮತ್ತು  ದೇಹಲಿಯ ವರೆಗೆ ಕರೆದುಕೊಂಡು ಹೋಗಿ ತಿರುಗಾಡಿಸಿ ನಮಗೆ ನೌಕರಿ ಕೊಡಿಸದೆ ಮೋಸ ಮಾಡಿದಾಗ ನಾವು ನೌಕರಿ ಸಲುವಾಗಿ ನಿಮಗೆ ಕೊಟ್ಟಿರುವ ಹಣವನ್ನು ಮರಳಿ ನಮಗೆ ಕೊಡಿರಿ ಅಂತಾ ಕೇಳಿದಾಗ ಅವರು ಇಂದು ಕೊಡುತ್ತೇವೆ. ನಾಳೆ ಕೊಡುತ್ತೇವೆ ಅಂತಾ ಸತಾಯಿಸುತ್ತಾ ಇಲ್ಲಿಯವರೆಗೆ  ಹಣ ಕೊಡದೆ ಸುಳ್ಳು ಹೇಳುತ್ತಾ ದಿನ ದೂಡುತ್ತಿದ್ದಾರೆ. ಅವರು ನನಗೆ ಮೋಸ ಮಾಡಿದ್ದರಿಂದ ಇಂದು ದಿನಾಂಕ:25/08/2016 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :  ದಿನಾಂಕ 26.08.2016 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ನನ್ನ ಗ್ಯಾರೆಜಕ್ಕೆ ಬಂದಿದ್ದು ತಮ್ಮ ಖಾಸಗಿ ಕೇಲಸ ಸಂಬಂದ ಕಾರ ತೆಗೆದುಕೊಂಡು ಹೈದ್ರಾಬಾದಕ್ಕೆ ಹೊಗಬೇಕಾಗಿದೆ ಕಾರಿನ ಆಯಿಲ್ ಚೆಕ್ಕ ಮಾಡಲು ಹೇಳಿದ್ದು ಅದರಂತೆ ನಾನು ಅವರ ಕಾರನ್ನು ಆಯಿಲ್ ಚೆಕ್ಕ ಮಾಡಿ ಸರಿ ಮಾಡಿದ್ದು ನಂತರ ಸದರಿಯವರು ನನಗೆ ತಿಳಿಸಿದ್ದೆನೆಂದರೆ ಹೈದ್ರಾಬಾದಕ್ಕೆ ನಾನು ಒಬ್ಬನೆ ಹೊಗುತ್ತಿದ್ದೆನೆ ಗ್ಯಾರೇಜ ಸಾಮಾನು ಖರಿದಿ ಮಾಡುವದಿದ್ದರೆ ತನ್ನ ಸಂಗಡ ಬರಲು ನನಗೆ ಹೇಳಿದ್ದು. ನನಗು ಗ್ಯಾರೆಜ ಸಮಾನುಗಳು ತರುವದು ಇದ್ದು ಅವರ ಸಂಗಡ ಹೈದ್ರಾಬಾದಕ್ಕೆ ಹೋಗಲು ನಾನು ಒಪ್ಪಿಕೊಂಡಿದ್ದು ಅದರಂತೆ ನಿನ್ನೆ ದಿನಾಂಕ 26.08.2016 ರಂದು ರಾತ್ರಿ 11 ಗಂಟೆಗೆ ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಅವರ ಟಾಟಾ ಇಂಡಿಕಾ ಕಾರ ನಂ ಕೆಎ 48 ಎಮ್ 0518 ನೇದ್ದು ತೆಗೆದುಕೊಂಡು ನನ್ನಲ್ಲಿಗೆ ಬಂದಿದ್ದು ನಾನು ಸದರಿಯವರ ಸಂಗಡ ಕಾರಿನಲ್ಲಿ ಕುಳಿತು ಕಲಬುರಗಿ ಹುಮನಾಬಾದ ರಿಂಗ್ ರೋಡಿಗೆ ಬಂದು ನಂತರ ಹೈದ್ರಾಬಾದಕ್ಕೆ ಹೋಗುವ ಕುರಿತು ಕಲಬುರಗಿ- ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ನೇದ್ದರ ಮುಲಕ ಕಲಬುರಗಿಯಿಂದ ಹೈದ್ರಾಬಾದಕ್ಕೆ ಹೊಗುತ್ತಿದ್ದು. ಸದರಿ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೋಗುತ್ತಿದ್ದು ಆಗ ನಾನು ಸದರಿಯವರಿಗೆ ಕಾರನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವರು ನನ್ನ ಮಾತನ್ನು ಕೇಳದೆ ಅದೆ ವೇಗದಲ್ಲಿ ಕಾರನ್ನು ನಡೆಯಿಸಿಕೊಂಡು ಹೋಗುತ್ತಿದ್ದು. ಕಮಲಾಪೂರ ದಾಟಿದ ನಂತರ ಕುದುರೆ ಮುಖ ಏರಿನಲ್ಲಿ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸುತ್ತಾ ಒಮ್ಮಲೆ ರಸ್ತೆಯ ಎಡಬಾಗಕ್ಕೆ ಕಾರ ತೆಗೆದುಕೊಂಡಿದ್ದು ಆಗ ಕಾರ ರಸ್ತೆಯಿಂದ ಕೇಳಗೆ ಇಳಿದು ಸ್ವಲ್ಪ ಮುಂದೆ ಹೊಗಿ ತೆಗ್ಗಿನಲ್ಲಿ ಬಿದ್ದಿದ್ದು ಕಾರಿನಲ್ಲಿ ಕುಳಿತ ನನಗೆ ಮತ್ತು ಕಾರ ಚಾಲಕ ಹಾಫೀಜ ಶೇಖ ಸಜ್ಜಾದ ಅಹ್ಮದ ಇವರಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಕಾರ ಸಂಪೂರ್ಣ ಡ್ಯಾಮೇಜ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
ಫರತಾಬಾದ ಠಾಣೆ : ಶ್ರೀ ದತ್ತಪ್ಪ ತಂದೆ ಪದಮಣ್ಣ  ಇವರು ದಿನಾಂಕ 26-08-2016 ರಂದು 7 ಪಿಎಮ್  ಸುಮಾರಿಗೆ ನಾನು ನಮ್ಮೂರ ಸಿದ್ದು ತಳವಾರ ಇವರ ಹೋಟೆಲದಲ್ಲಿ ಚಹಾ ಕುಡಿದು ಹೊರಗೆ ಬಂದು ನಿಂತಾಗ ಈ ಮೊದಲೆ ನಮ್ಮ ಮೇಲೆ ವೈಮನಸ್ಸು ಹೊಂದಿದ 1) ವಿದ್ಯಾಸಾಗ ತಂದೆ ಈರಣ್ಣ ಕಲಬುರಗಿ 2) ನಾಗಣ್ಣ ತಂದೆ ಸಿನಗಪ್ಪ ಮಳ್ಳಿ 3) ಶಿವಾ ತಂದೆ ಬಸಣ್ನ ಮಡ್ಡಿ 4) ಮಂಜು ತಂದೆ ಬಸಣ್ಣ ಕೊಳ್ಳೂರ 5) ಸಂಗು ತಂದೆ ಬಸಣ್ಣ ಮಡ್ಡಿ  ಸಾ: ಎಲ್ಲರೂ ಮೇಳಕುಂದಾ (ಬಿ) ರವರು ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ನೋಡಿ ಟಾವಲ ಹಾರಿಸುತ್ತಿ ರಂಡಿ ಮಗನೆ  ಅಂತಾ ಅವಾಚ್ಯವಾಗಿ ಬೈಯುವಾಗ ನನಗೆ ಯಾಕೆ ಬೈಯುತ್ತಿರಿ  ಅಂತಾ ಕೇಳಿದಕ್ಕೆ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ಎಂದು ನಾಗಣ್ಣ ಮಳ್ಳಿ, ಶಿವಾ ಮಡ್ಡಿ ನನಗೆ ಒತ್ತಿ ಹಿಡಿದಾಗ ವಿದ್ಯಾಸಾಗರ ಕಲಬುರಗಿ ಈತನು ಒಂದು ಚಾಕುವಿನಿಂದ ಬಲಗೈ , ಎಡಗೈಗೆ ಹೊಡೆದು ತರಚಿದಗಾಯಗೊಳಿಸಿದ್ದು  ಅಲ್ಲದೆ ಮಂಜು ಕೊಳ್ಳೂರ, ಸಂಗು ಮಡ್ಡಿ ಕೂಡಿ ನನಗೆ ಮುಷ್ಥಿ ಮಾಡಿ ಮುಖಕ್ಕೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಗೊಳಿಸಿರುತ್ತಾರೆ. ಅವರು ನನಗೆ ಹೊಡೆಯುದನ್ನು ನೋಡಿ ಬಸಣ್ಣ ತಂದೆ ಶರಣಪ್ಪ ಪೂಜಾರಿ, ಮಲ್ಲು ಕೋಟೆನವರ, ಮೈನು ನದಾಫ ಕೂಡಿ ಬಿಡಿಸುವಾಗ ಇನ್ನು ಮುಂದೆ ನಮಗೆ ನೋಡಿ ಅಂಕಡೊಂಕ ಮಾತಾಡಿ ಟಾವೆಲ್ ಹಾರಿಸುವದು ಮಾಡಿದರೆ ನಿನ್ನ ಜೀವ ಸಹೀತ ಇಡುವದಿಲ್ಲ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: