POLICE BHAVAN KALABURAGI

POLICE BHAVAN KALABURAGI

09 March 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶರಣು ಗೌಡಗಾಂವ ಸಾ ಅವರಳ್ಳಿ ಹಾ.ವ. ಮಲ್ಲಾಬಾದ ರವರ ಗಂಡ ಮಲ್ಲಾಬಾದಕ್ಕೆ ಹೋಗಿ ಸಕ್ಕರೆ ತೆಗೆದುಕೊಂಡು ಬರುತ್ತೇನೆ ಅಂತ ಮಲ್ಲಾಬಾದ ಗ್ರಾಮದ ಮೈಹಿಬೂಬ ಲದಾಫ ಇವರ ಸೈಕಲ್ ಮೋಟಾರ ನಂ. ಕೆಎ-32 ಇಎಫ್-3411 ನೇದ್ದರ ಮೇಲೆ ಮಲ್ಲಾಬಾದಕ್ಕೆ ಹೋಗಿರುತ್ತಾನೆ ನಂತರ ಬೆಳಿಗ್ಗೆ 07:15 ಗಂಟೆ ಸುಮಾರಿಗೆ ಫಿರ್ಯಾದುದಾರರು ಕೆಲಸ ಮಾಡುವ ಹೊಲದ ಮಾಲೀಕರಾದ ತುಕಾರಾಮ ತಂದೆ ಯಲ್ಲಪ್ಪ ಬಾರೆಕರ ರವರು ಫೋನ್ ಮಾಡಿ ನಿನ್ನ ಗಂಡನಿಗೆ ಮಲ್ಲಾಬಾದ ಗ್ರಾಮದ ನೂತನ ಪ್ರೌಡ ಶಾಲೆಯ ಮುಂದೆ ಮಲ್ಲಾಬಾದ ರೇವೂರ ಮುಖ್ಯ ರಸ್ತೆಯ ಮೇಲೆ ಅಫಘಾತ ಆಗಿರುತ್ತದೆ ಅಂತ ತಿಳಿಸಿದ ಮೇಲೆ ಫಿರ್ಯಾದುದಾರರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ಎಕ್ಸಿಡೆಂಟ್ ದಿಂದ ಮೃತ ಪಟ್ಟಿದ್ದು  ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ ಟಂ ಟಂ ಅಲ್ಲೆ ಇದ್ದು ಅದರ ನಂ. ಕೆಎ-32 ಎ-7768 ಅಂತ ಇರುತ್ತದೆ ಸದರಿ ಟಂ ಟಂ ಚಾಲಕ ತನ್ನ ವಶದಲ್ಲಿದ್ದ ಟಂ ಟಂ ನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಸದರಿ ಟಂ ಟಂ  ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-03-2016ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಶ್ರೀ ಹಾಣಮಂತರಾಯ ತಂದೆ ಭೀಮರಾಯ ಬಿರಾದರ ಸಾ|| ವಡಗೇರಾ ತಾ|| ಜೇವರ್ಗಿ  ಇವರ ಮಗನಾದ ದೇವಿಂದ್ರಪ್ಪ ಇತನು ತನ್ನ ಮೋ.ಸೈ. ನಂ ಕೆ.ಎ 33 ಎಲ್ 9664 ನೇದ್ದರ ಮೇಲೆ ಅಫಜಲಪೂರ ತಾಲ್ಲೂಕಿನ ಕರಜಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹೋಗಿ ತನ್ನ ಹಾಲ್ ಟಿಕೇಟ ತೆಗೆದುಕೊಂಡು ಬರುತ್ತನೆ ಅಂತ ಹೇಳಿ ನಮ್ಮ ಮನೆಯಿಂದ ಹೋಗಿರುತ್ತಾನೆ ಮಧ್ಯಾಹ್ನ ನಾನು ಮನೆಯಲ್ಲಿ ಇದ್ದಗ ನನ್ನ ಮಗನ ಮೋಬೈಲನಿಂದ ಯಾರೋ ಅಪರಿಚಿತ ವ್ಯಕ್ತಿ ಪೋನ ಮಾಡಿ ನಿಮ್ಮ ಮಗನಿಗೆ ಮತ್ತು ಅವನ ಹಿಂದೆ ಕುಳತಿದ್ದ ಭಾಗಣ್ಣ ತಂದೆ ಕೋಟೇಪ್ಪ ಚವರಗಸ್ತಿ ಸಾ|| ಸಿಂಧಗಿ ಇಬ್ಬರಿಗೂ ಅಫಜಲಪೂರ ತಾಲ್ಲೂಕಿನ ಕರಜಗಿ ಮಣ್ಣೂರ ರಸ್ತೆಗೆ ಇರುವ ಶಿವಬಾಳ ನಗರದ ಹತ್ತಿರ ರೋಡಿನಮೇಲೆ ಅಫಘಾತವಾಗಿರುತ್ತದೆ ನಿಮ್ಮ ಮಗ ನಡೆಸುತ್ತಿದ್ದ ಮೋಟಾರು ಸೈಕಲಗೆ ಕಮಾಂಡರ ಜೀಪ ನಂ. ಎಮ್.ಎಚ್ 13 ಎನ್ 650 ನೇದ್ದರ ಚಾಲಕ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಈಗ ನಿಮ್ಮ ಮಗನನ್ನು ಮತ್ತು ಅವನ ಜೋತೆಗೆ ಇದ್ದ ಗಾಯಾಳು ಭಾಗಣ್ಣ ಇಬ್ಬರನ್ನು 108 ಅಂಬ್ಯುಲೇನ್ಸನಲ್ಲಿ ಇಂಡಿ ಕಡೆಗೆ ಕಳಿಸಿ ಕೊಡುತ್ತಿದ್ದೆವೆ ನೀವು ಇಂಡಿ ಪಟ್ಟಣಕ್ಕೆ ಹೋಗಿ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮೂರಿನ ಶಂಕರ ಗೌಡ ಪೊಲೀಸ ಪಾಟೀಲ,ಅಣ್ಣಾರಾಯಗೌಡ ಸನ್ನತಿ,ಬಸವರಾಜ ಸಮಜೋಡಿ ಸಿದ್ರಾಮಪ್ಪ ಕಾಮಾ ಹಾಗೂ ಇನ್ನು ಇತರರು ಕೂಡಿಕೊಂಡು ಇಂಡಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲು ನನ್ನ ಮಗನು ಮೃತ ಪಟ್ಟದ್ದನು ನಂತರ ಅವನಿಗೆ ಆದ ಗಾಯಗಳನ್ನು ನೋಡಲು ಅವನ ಏದೆಯ ಬಲಭಾಗಕ್ಕೆ ಭಾರಿ ಓಳ ಪೆಟ್ಟು,ಬಲಭಾಗದ ಮೇಲಕಿಗೆ ಭಾರಿ ರಕ್ತಗಾಯ,ಎಡ ತಲೆಗೆ ರಕ್ತಗಾಯ ಹಾಗೂ ಬಲಗೈ ಮುಂಗೈ ಹತ್ತಿರ ,ಬಲ ಮೊಳಕಾಲು ಹತ್ತಿರ,ಏಡ ಮೊಳಕಾಲು ಹತ್ತಿರ ತರಚಿದ ರಕ್ತಗಾಯಗಳಾಗಿದ್ದವು ನಂತರ ನನ್ನ ಮಮಗನ ಜೋತೆಗೆ ಇದ್ದದ್ದ ಭಾಗಣ್ಣ ಚವರಗಸ್ತಿ ಇತನಿಗೆ ವಿಚಾರಿಸಲಾಗಿ ಅವನು ತಿಳಿಸಿದೆನೆಂದರೆ ನಾನೂ ಮತ್ತು ದೇವಿಂದ್ರಪ್ಪ ಇಬ್ಬರು ಕೋಡಿ ಮೋಟಾರು ಸೈಕಲ ಮೇಲೆ ಸಿಂಧಗಿ ಇಂದ ಇಂಡಿ ಮಣ್ಣೂರ ಮಾರ್ಗವಾಗಿ ಕರಜಗಿಗೆ ಬಂದು ಕಾಲೇಜಿನಲ್ಲಿ ಹಾಲಟಿಕೆಟ ಪಡೆದುಕೊಂಡು ಅದೇಮಾರ್ಗವಾಗಿ ಬರುತ್ತಿದ್ದಾಗ ಮಧ್ಯಾಹ್ನ 13:45ಗಂಟೆ ಸುಮಾರಿಗೆ ಶಿಬಾಳ ನಗರದ ಹತ್ತಿರ ಹೋಗುತ್ತಿದ್ದಗ ಎದುರು ಗಡೆಯಿಂದ ಕಮಾಂಡರ ಜೀಪ್ ನಂ. ಎಮ್.ಎಚ್ 13,ಎನ್ 650ನೇದ್ದರ ಚಾಲಕ ತನ್ನ ವಶದಲ್ಲಿದ್ದ ಜೀಪನ್ನು ಅತಿವೇಗವಾಗಿ ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾವು ಬರುತ್ತಿದ್ದ ಮೋಟಾರು ಸೈಕಲಗೆ ಡಿಕ್ಕಿ ಪಡಿಸಿದನು ಡಿಕ್ಕಿ ಆದ ತಕ್ಷಣ ಅದರ ಚಾಲಕ ಸ್ಥಳದಲ್ಲೆ ಜೀಪನ್ನು ಬಿಟ್ಟು ಓಡಿ ಹೋದನು ನಂತರ ಅಲ್ಲಿ ನೇರೆದ ಜನರು ನಮ್ಮನ್ನು 108 ಅಂಬ್ಯುಲೇನ್ಸನಲ್ಲಿ ಹಾಕಿ ಕಳಿಸಿಕೊಟ್ಟರು ಮಾರ್ಗ ಮಧ್ಯ ಬರುತಿದ್ದಾಗ ದೇವಿಂದ್ರಪ್ಪನು ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: