POLICE BHAVAN KALABURAGI

POLICE BHAVAN KALABURAGI

08 March 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಂಜಯ  ತಂದೆ ಮಧುಕರ ದುಮಾಲೆ ಸಾ:ಚನ್ನವೀರ ನಗರ ಸುಲ್ತಾನಪೂರ ರೋಡ ಕಲಬುರಗಿ  ರವರು ದಿನಾಂಕ 06-03-16 ರಂದು ತಮ್ಮ  ತಾಯಿ ಕಮಲಾಬಾಯಿ ದುಮಾಲೆ ಇಬ್ಬರು ಕೂಡಿಕೊಂಡು ತನ್ನ ಬಜಾಜ ಡಿಸ್ಕವರಿ ಮೋಟಾರ ಸೈಕಲ ಕೆಎ 32 ಇಸಿ 2955 ನೇದ್ದರ ಮೇಲೆ ಅಂತಿಮ ಸಂಸ್ಕಾರ ಕುರಿತು ಬಬಲಾದ ಗ್ರಾಮಕ್ಕೆ ಹೋಗಿದ್ದು ಅಂತಿಮ ಸಂಸ್ಕಾರ ಮುಗಿಸಿಕೊಮಡು ಮರಳಿ ಕಲಬುರಗಿಗೆ ಮನೆಗೆ ಬರುತ್ತಿರುವಾಗ ಸದರ ನನ್ನ ಮೋಟಾರ ಸೈಕಲನ್ನು ನಾನು ನಡೆಯಿಸುತ್ತಿದ್ದು ನನ್ನ ತಾಯಿ ಕಮಲಾಬಾಯಿ ನನ್ನ ಹಿಂದುಗಡೆ ಕುಳಿತಿದ್ದಳು ಮಧ್ಯಾಹ್ನ ಹುಮನಾಬಾದ ರಿಂಗ ರೋಡ ಕಡೆಯಿಂದ ಸುಲ್ತಾನಪೂರ  ರಿಂಗ ರೋಡ ಕಡೆಗೆ ಬರುತ್ತಿರುವ ಲಂಗರ ಹನುಮನ ತಾಜ ನಗರ ಕ್ರಾಸ ಮುಂದೆ ಹೋಗುತ್ತಿರುವಾಗ ಅದೇ ವೇಳೆ ನಮ್ಮ ಎದುರುನಿಂದ ರಾಂಗ ಸೈಡದಿಂದ ಅಂದರೆ ಸುಲ್ತಾನಪೂರ ಕ್ರಾಸ ಕಡೆಯಿಂದ ಒಂದು ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು  ಬಹಳ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದನು. ಇದರಿಂದ ನಾವು ಜೋರಾಗಿ ಕೆಳೆಗೆ ಬಿದ್ದೇವು. ಇದರಿಂದ ನನಗೆ ಎದೆಗೆ ಭುಜಕ್ಕೆ ಗುಪ್ತ ಪೆಟ್ಟ, ತರಚಿದ ಗಾಯ, ತಲೆಗೆ ಗುಪ್ತಪೆಟ್ಟು ಎಡಗಾಲು ಹಿಂಬಡಿಗೆ ರಕ್ತಗಾಯ, ಎಡಗೈಗೆ ತರಚಿದ ಬೆರಳುಗಳ ಮೇಲೆ ರಕ್ತಗಾಯ ಆಗಿದ್ದವು. ಮತ್ತು ನನ್ನ ತಾಯಿ ಕಮಲಾಬಾಯಿ ದುಮಾಲೆ ಇವಳಿಗೆ ತಲೆಯ  ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗಿರುತ್ತದೆ. ಮೂಗಿನಿಂದ ಬಾಯಿಂದ ರಕ್ತಸ್ರಾವಾಗಿರುತ್ತದೆ. ಎಡಗೈಗೆ ತರಚಿದ ಗಾಯವಾಗಿದ್ದು, ಆಗ  ಘಟನೆಯನ್ನು ನೋಡಿ ರೋಡಿಗೆ ಹೋಗುತ್ತಿದ್ದ ಹೆಸರು ಕೇಳಿ ಗೊತ್ತಾದ ಅರುಣಕುಮಾರ ತಲಾಟೆ ಮತ್ತು ರವಿ ಶಂಕರರಾವ ದುರವೆ ಇವರು ಬಂದು ನಮಗೆ ಸೈಡಿಗೆ ಕೂಡಿಸಿದರು. ನಮಗೆ ಡಿಕ್ಕಿ ಹೊಡೆದ ಮೋಟಾರ ಸೈಕಲ ನೋಡಲು  ಹಿರೋ ಸ್ಪೆಂಡರ ಪ್ಲಸ್ ಕೆಎ 32 ಇಕೆ 0987 ನೇದ್ದು ಇದ್ದು, ಅದರ ಚಾಲಕ ಮೋಟಾರ ಸೈಕಲನ್ನು ಅಲ್ಲೇ ಬಿಟ್ಟು ಓಡಿ ಹೋದನು. ಸದರ ಯುವಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಅಷ್ಟರಲ್ಲಿ ಅಂಬುಲೈನ್ಸ ಬಂದಿದ್ದು ಆಗ ಅರುಣಕುಮಾರ ಮತ್ತು ರವಿ ದುರವೆ ನನಗೂ ಮತ್ತು ನನ್ನ ತಾಯಿಗೆ ಕೂಡಿಸಿಕೊಂಡು ಸರಕಾರಿ ಆಸ್ಪತ್ರೆಗೆ ತೋರಿಸಲು ವೈದ್ಯಾಧಿಕಾರಿಗಳು ನನ್ನ ತಾಯಿ ಕಮಲಾಬಾಯಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರು ಅಂತಾ  ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: