POLICE BHAVAN KALABURAGI

POLICE BHAVAN KALABURAGI

26 March 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಜೇವರ್ಗಿ ಠಾಣೆ : ದಿನಾಂಕ 25-03-2015 ರಂದು ಸಾಯಂಕಾಲ ಜೇವರಗಿ ಠಾಣಾ ವ್ಯಪ್ತಿ ಅಖಂಡೇಶ್ವರ ಚೌಕ ಎದುರುಗಡೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ ಹೊಗಿ  ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು ಅವನ ಹೆಸರು ಸಿದ್ರಾಮಪ್ಪ ತಂದೆ ಮಲ್ಲಣ್ಣಪ್ಪ ಪೊಲೀಸ್  ಪಾಟೀಲ ಸಾ|| ಜೇವರ್ಗಿ ಅಂತಾ ತಿಳಿಸಿದ್ದು ಸರಿಯವನು ಜೂಜಾಟಕ್ಕೆ ಬಳಸಿದ ನಗದು ಹಣ  ಹಣ 1400/- ರೂ. ಮಟಕಾ ಅಂಕಿ ಸಂಖ್ಯೆ ಚೀಟಿ ಮತ್ತು ಒಂದು ಬಾಲ ಪೆನ್ನು ಜಪ್ತಿ  ಮಾಡಿಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಹಣಮಂತ ತಂದೆ ಮಲ್ಲಪ್ಪ ದೊಡ್ಡಮನಿ ಸಾ|| ಕಾಸರ ಬೋಸಗಾ ಹಾ|||| ಜೇವರ್ಗಿ ರವರ  ಸೊನ್ನ ಸಿಮಾಂತರದ ಹೊಲ ಸರ್ವೇ ನಂ 116 ನೇದ್ದರ  ಜಮೀನಿನ ವಿಷಯದಲ್ಲಿ ಇಂದು ದಿನಾಂಕ 25.03.2015 15:00 ಗಂಟೆಗೆ ಜೇವರ್ಗಿ ಪಟ್ಟಣದ ಸರ್ವೇ ಆಫೀಸಿನ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಪ್ರಕಾಶ ತಂದೆ ನಿಂಗಪ್ಪ ದೊಡ್ಡಮನಿ ಸಾ||  ಖಾಜಾ ಕಾಲೋನಿ ಜೇವರ್ಗಿ ಮತ್ತು ಶಿವಪ್ಪ ತಂದೆ ಮಾನಪ್ಪ ಹವಲ್ದಾರ ಸಾ|| ಬಾನತ್‌ನಾಳ ತಾ|| ಶಹಾಪುರ ಕೂಡಿಕೊಂಡು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಅಣ್ಣ ನಿಂಗಪ್ಪನಿಗೆ ಕೈಯಿಂದ ಬಡಿಗೆಯಿಂದ ಹೊಡೆಬಡೆ ಮಡಿ ಅವಾಚ್ಯಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ಲಗಮವ್ವ ಗಂಡ ಶರಣಪ್ಪ ಗೌಡಪ್ಪಗೋಳ   ಸಾ|| ದೇವಂತಗಿ ಇವರು ಹೊಲದ ಸಂಭಂಧ, ಮನೆಯಲ್ಲಿನ ಫತ್ರಾ ಕಿತ್ತುವಾಗ ದಿನಾಂಕ 23/03/2015 ರಂದು ವಿಮಲಾಬಾಯಿ ಗಂಡ ಶರಣಪ್ಪ ಗೌಡಪ್ಪಗೋಳ ಸಂಗಡ 06 ಜನರು ಎಲ್ಲರೂ ದೇವಂತಗಿ. ಅಕ್ರಮ ಕೂಟ ಕಟ್ಟಿಕೊಂಡು ಬಂದು ಫಿರ್ಯಾದಿದಾರಳಿಗೆ ಮತ್ತು ಅವಳ ಮಗಳೀಗೆ ಕೈಯಿಂದ, ಕಲ್ಲಿನಿಂದ, ಬಡಿಗೆಗಳಿಂದ ಹೊಡೆ ಬಡೆ ಮಾಡಿದ್ದಲ್ಲದೆ ಮಾನ ಭಂಗಕ್ಕೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಾನಾಗೌಡ ತಂದೆ ಭೀಮರಾಯ ಜವಳಿ ಎಸ್.ಡಿ.ಇ (ಸಬ್ ಡಿವಿಜನ್ ಇಂಜನಿಯರ) ಬಿ.ಎಸ್.ಎನ್.ಎಲ್ ಕಛೇರಿ  ಅಫಜಲಪೂರ ರವರು ದಿನಾಂಕ 09-03-2015 ರಂದು ದೇಸಾಯಿ ಕಲ್ಲೂರ ಗ್ರಾಮದಲ್ಲಿ ಅರುಣಗೌಡ ಪಾಟೀಲ ಇವರ ಜಾಗದಲ್ಲಿದ್ದ  ನಮ್ಮ ಬಿ.ಎಸ್.ಎನ್.ಎಲ್ ಟವರಿನ ಸೆಕ್ಯೂರ್ಟಿ ಗಾರ್ಡ ಗುರಪ್ಪ ಕೊಗಟನೂರ ಈತನು ನಮ್ಮ ಕಚೇರಿಗೆ ಪೋನ ಮಾಡಿ, ಟವರಿಗೆ ಇದ್ದ ಪೀಡರ ಕೇಬಲ ಕಳ್ಳತನವಾಗಿದೆ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಕಿಶೋರ, ಸಿದ್ದಾರಾಮ ಮೂರು ಜನರು ದೇಸಾಯಿ ಕಲ್ಲೂರ ಬಿ.ಎಸ್.ಎನ್.ಎಲ್ ಟವರಗೆ ಹೋಗಿ ನೋಡಲು, ಸದರಿ ಟವರಿಗೆ ಅಳವಡಿಸಿ 35 ಮೀಟರ ಅಳತೆಯ 6 ಕೇಬಲ ವಾಯರ, (ಒಟ್ಟು 210 ಮೀಟರಗಳು) ಅಕಿ- 17,000/- ರೂ ಕಿಮ್ಮತ್ತಿನವುಗಳನ್ನು ಯಾರೊ ಕತ್ತರಿಸಿಕೊಂಡು ಹೋಗಿದ್ದರು, ಸದರಿ ಘಟನೆ ದಿನಾಂಕ 08-03-2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 09-03-2015 ರಂದು ಬೆಳಿಗ್ಗೆ 06:00 ಗಂಟೆಯ ಸಮಯದಲ್ಲಿ ಜರೂಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಸುಂಕಪ್ಪ ತಂದೆ ಶಿವಪ್ಪ ಕುಂಚಿಕೋರೆವೇರ್ ಸಾ: ಜೇವರ್ಗಿ ಇವರು ನನ್ನ ತಮ್ಮ ರಮೇಶ ಈತನು 4-5 ದಿವಸಗಳ ಹಿಂದೆ ಮನೆ ಬಿಟ್ಟು ಹೋಗಿದ್ದು ಅವನು ಮನೆಗೆ ವಾಪಸ್ ಬರದೆ ಇರುವದನ್ನು ಕಂಡು ಇಲ್ಲಿಯೇ ಜೇವರಗಿಯಲ್ಲಿ ಇದ್ದಿರಭಹುದು ಅಂತಾ ತಿಳಿದು ಸುಮ್ಮನೆ ಇದ್ದೇವು. ದಿನಾಂಕ 24-3-15 ರಂದು ನಮ್ಮ ಓಣಿಯ ಜನರು ಯಾಕುಬಅಲಿ ತಂದೆ ಇಸ್ಮಾಯಿಲ್ ಸಾಬ ಬಾಗವಾನ್ ಇವರ ಬಾವಿಯಲ್ಲಿ ಒಂದು ಹೆಣ ತೆಲಿರುತ್ತದೆ ಅಂತಾ ಹೇಳಿದ ಕೂಡಲೇ ನಾನು ಮತ್ತು ನನ್ನ ತಮ್ಮನ ಹೆಂಡತಿ ಹುಸನೇಮ್ಮ ಹಾಗು ನಮ್ಮ ತಾಯಿ ಸುಂಕಮ್ಮ ಮತ್ತು ನಮ್ಮ ಸಂಬಧೀಕರು ಕೂಡಿಕೊಂಡು ಸದರ್ ಘಟನೆ ಸ್ಥಳಕ್ಕೆ ಇಂದು ಮದ್ಯಾಹ್ನ 2-೦೦ ಗಂಟೆ ಸುಮಾರಿಗೆ ಹೋಗಿ ಸದರಿ ಬಾವಿಯಲ್ಲಿ ಬಿದ್ದ ಮನುಷ್ಯನ ಶವವನ್ನು ಹೊರಳಿಸಿ ನೋಡಲಾಗಿ ಅದು ನನ್ನ ತಮ್ಮ ರಮೇಶನ ಶವ ಇರುತ್ತದೆ. ಸದರಿ ನನ್ನ ತಮ್ಮ ರಮೇಶನು ಎರಡು ಮೂರು ದಿವಸಗಳ ಹಿಂದೆ ಈತನು ಈ ಬಾವಿಗೆ ನೀರು ಕುಡಿಯಲು ಅಥವಾ ಕೈಕಾಲು ತೋಳೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿನಲ್ಲಿ ಬಿದ್ದು ಮುಳಗಿ ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: