ಸರಕಾರಿ ನೌಕರರ
ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಮಳಖೇಡ ಠಾಣೆ :
ದಿನಾಂಕ 26-3-2015 ರಂದು ಸಾಯಂಕಾಲ 7-00 ಗಂಟೆಯ
ಸುಮಾರಿಗೆ ಮಳಖೇಡ ಗ್ರಾಮದಲ್ಲಿ ಖಾಸಗಿ ಆಸ್ಪತ್ರೆಯ ಮುಂದುಗಡೆ ಹಳೆಯ ವೈಷ್ಯಮ್ಯದಿಂದ ಹರಿಜನ
ಸಮಾಜದ ಮತ್ತು ಮುಸ್ಲಿಂ ಸಮಾಜದ ಜನರ ನಡುವೆ ಜಗಳಾವಾಗಿರುತ್ತದೆ ಮಳಖೇಡ ಪೊಲೀಸ ಠಾಣೆಯಲ್ಲಿ ಎರಡು
ಕೊಮೀನ ಜನರು ಪೊಲೀಸ ಠಾಣೆಗೆ ಬಂದಿದ್ದರಿಂದ
ಅವರೆಲ್ಲರನ್ನು ಸಮಾದಾನ ಮಾಡಿ ಅವರಲ್ಲಿ
ಪ್ರಮುಖರನ್ನು ಬರ ಮಾಡಿಕೊಂಡು ಹರಿಜನ ಸಮಾಜದವರಾದ (1)ರಾಜಶೇಖರ ತಂದೆ ಮಾಪಣ್ಣ ಹಂಗನಳ್ಳಿ
ಸಾ:ಮಳಖೇಡ ಇವರು ಅಲ್ಲದೆ ಮುಸ್ಲಿಂ ಸಮಾಜದವರಾದ ಶೇರ ಖಾನ ತಂದೆ ಕಾಜಮಖಾಬನ ಸಾ:ಮಳಖೇಡ ಇವರನ್ನು
ವಿಚಾರಿಸಿ ಅವರ ದೂರಗಳನ್ನು ಪ್ರತ್ಯಕವಾಗಿ ಠಾಣಾಧಿಕಾರಿ ಮಳಖೇಡ ಪೊಲೀಸ ಠಾಣೆ ರವರಿಗೆ
ಪಡೆದುಕೊಂಡು ಗುನ್ನೆ ದಾಖಲಿಸುವಂತೆ ಸೂಕ್ತ ನೂಚನೆಗಳನ್ನು ನೀಡಿದ್ದು ರಾತ್ರಿ 11 ಗಂಟೆಯ
ಸುಮಾರಿಗೆ ಹರಿಜನ ಸಮಾಜದವರು ಎಲ್ಲರೂ ಗುಂಪು ಕಟ್ಟಿಕೊಂಡು ಪೊಲೀಸ ಠಾಣೆ ಮಳಖೇಡ ಮುಂದೆ ಬಂದು
ಘೋಷಣೆಗಳನ್ನು ಕೂಗುತ್ತಾನ ಧರಣಿ ಕುಳಿತ್ತಿದ್ದರೂ ಮತ್ತು ತಾವು ನೀಡಿದ್ದ ದೂರಿನ ಅನ್ವಯ ಎದುರಾಳಿ
ಜನರಿಗೆ ದಸ್ತಗೀರಿ ಮಾಡುವಂತೆ ಒತ್ತಾಯಿಸುತ್ತಿದ್ದರೂ ಆಗ ನಾನು ಮತ್ತು ಪಿಎಸಐ ಮಳಖೇಡ ಮತ್ತು
ಸಿಬ್ಬಂದಿ ಜನರಾದ (1) ಮಂಜೂನಾಥ ಪಿಸಿ (2)ಸಂತೋಷ ಪಿಸಿ (3) ನಸೀರೋದ್ದಿನ ಪಿಸ (4) ತಿಪ್ಪಣ್ಣ
ಪಿಸಿ (5)ಶಿವಪ್ಪಾ ಎಚಸಿ (6) ಜಗ್ಗಯ್ಯಾ ಎಚಜಿ (7) ಹಣ್ಮಂತ ಎಚಜಿ ಇವರೆಲ್ಲರೂ ಕೂಡಿ ಅವರನ್ನು
ಹೋಗಿರಿ ಇದು ಅಕ್ರಮ ಕೂಟ ಅಂತಾ ತಿಳಿವಳಿಕೆ ನೀಡಿ ಚದುರಿಸುತ್ತಾ ಹೋಗುತ್ತಿದ್ದಾಗ (1) ದೇವಪ್ಪಾ
ತಂದೆ ಚಂದ್ರಪ್ಪಾ ಮರಗಮ್ಮ ಗುಡಿ ಸಾ:ಮಳಖೇಡ (2)
ಅಶೋಕ ರನ್ನಟ್ಲಾ ಸಾ:ಸೇಡಂ (3) ಪುಶಪಕ ತಂದೆ ಮರೆಪ್ಪಾ ಮರೆಗಮ್ಮಗುಡಿ ಸಾ: ಮಳಖೇಡ ಮತ್ತು ಸಂಗಡ
ಇನ್ನೂ ಇತರೆ 15-20 ಜನರೂ ಎಲ್ಲರೂ ನಮ್ಮ ಕಡೆಗೆ
ಅವಾಚ್ಯವಾಗಿ ಈ ಪೊಲೀಸ ಸೂಳೆ ಮಕ್ಕಳು ಕೇಸ ಮಾಡ್ಯಾರ ಅವರಿಗೆ ಹಿಡಿದಿಲ್ಲಾ ಅಂತಾ ಅವಾಚ್ಯ
ಶಬ್ದಗಳಿಂದ ಬೈಯುತ್ತಾ ಇದ್ದಾಗ ಸದರಿ ಜನರಿಗೆ ನಾನು ಈ ಗುನ್ನೆ ತನಿಖೆ ನಡೆದಿದೆ ಹಿರಿಯ
ಅಧಿಕಾರಿಗಳು ಬಂದಿರುತ್ತಾರೆ ನೀವು ಇಲ್ಲಿಂದ ಹೋಗಿರಿ ಅಂತಾ ಸಮಾದಾನ ಪಡಿಸಿ ಕಳಿಸುತ್ತಿರುವಾಗ ಈ
ಪೊಲೀಸ ಸೂಳೆ ಮಕ್ಕಳಿಗೆ ಬಿಡಬ್ಯಾಡಿರಿ ಅಂತಾ ದೇವಪ್ಪಾ ಮರಗಮ್ಮಗುಡಿ ಇತನು ಬಂದು ನನ್ನ
ಸಮವಸ್ತ್ರ ಹಿಡಿದು ಎಳೆದಾಡಿದನು ಮತ್ತೆ ಅಲ್ಲಿ
ಇರುವ (2)ಅಶೋಕ ರನ್ನಟ್ಲಾ ಸಾ:ಸೇಡಂ (3) ಪುಶಪಕ ತಂದೆ ಮರೆಪ್ಪಾ ಮರೆಗಮ್ಮಗುಡಿ ಸಾ: ಮಳಖೇಡ
ಮತ್ತು ಸಂಗಡ ಇನ್ನೂ 15-20 ಜನರಿಗೆ ಪ್ರಚೋದನೆ ನೀಡಿದ್ದು ಅಲ್ಲದೆ ತಾನು ಸಹ ರೋಡಿನ ಮೇಲೆ
ಬಿದ್ದಿರುವ ಕಲ್ಲುಗಳನ್ನು ತೆಗೆದುಕೊಂಡು ಕಲ್ಲು ತೂರಾಟ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯವರ
ಮೇಲೆ ಮಾಡಿ ಪೊಲೀಸ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಅಲ್ಲದೆ ಕಲ್ಲು ತೂರಾಟ ಮಾಡಿ ಸರಕಾರಿ
ನೌಕರರಿಗೆ ಭಾರಿ ರಕ್ತ ಗಾಯ ಪಡಿಸಿದ್ದು ಇರುತ್ತದೆ. ಸದರಿ ಕಲ್ಲು ನನ್ನ ಬಲಗಣ್ಣು ಕೆಳಗೆ ಮತ್ತು
ಕಣ್ಣಿಗೆ ಭಾರಿ ರಕ್ತ ಗಾಯ,ಮುಖಕ್ಕೆ
ಮತ್ತು ಹಲ್ಲುಗಳಿಗೆ ಭಾರಿ ರಕ್ತ ಗಾಯ,ಎಡಗಡೆ
ರಟ್ಟೆಗೆ ರಕ್ತ ಗಾಯ,ಎಡಗೈಮುಂಗೈ ಮಣಕಟ್ಟಿಗೆ
ರಕ್ತ ಗಾಯವಾಗಿದ್ದು ಇರುತ್ತದೆ. ಇದನ್ನು ನೋಡಿ ನನ್ನ ಜೋತೆಗೆ ಇರುವ ಸಿಬ್ಬಂದಿ ಜನರೆಲ್ಲರೂ ಕೂಡಿ
ನನ್ನಗೆ ಮಳಖೇಡ ಪೊಲೀಸ ಠಾಣೆಯಲ್ಲಿ ತಂದು ಸೇಡಂ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ
ತಂದಿರುತ್ತಾರೆ. ಸದರಿ ಕಲ್ಲು ತೂರಾಟ ಮಾಡಿದ್ದ ಪೊಲೀಸ ಕರ್ತವ್ಯಕ್ಕೆ ಅಡತಡೆ ಮಾಡಿ ನನ್ನಗ ಭಾರಿ
ರಕ್ತಗಾಯ ಒಳಪೆಟ್ಟು ಪಡಿಸಿದ್ದ ಎಲ್ಲ ಜನರನ್ನು ನಾನು ನೋಡಿದ್ದು ಅವರನ್ನು ನೋಡಿದರೆ ಗುರ್ತಿಸುತ್ತೇನೆ ಅಂತಾ ಶ್ರೀ ಸಂದೀಪಸಿಂಗ.ಪಿ.ಮುರಗೋಡ
ಆರಕ್ಷಕ ವೃತ್ತ ನಿರೀಕ್ಷಕರು ಸೇಡಂ ವೃತ್ತ
ತಾ:ಸೇಡಂ ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ
ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ :
ದಿನಾಂಕ 26-03-2015 ರಂದು ದಿಕ್ಸಂಗಾ ಗ್ರಾಮದ ಹಣಮಂತ ದೆವರ ಗುಡಿಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80
ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ
ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.
ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿಕ್ಸಂಗಾ ಗ್ರಾಮದ ಹಣಮಂತ ದೇವರ ಗುಡಿಯಿಂದ
ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಹಣಮಂತ ದೇವರ ಗುಡಿಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ
ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಹಿಡಿದು
ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬೀಮರಾಯ ತಂದೆ ಸಾಯಬಣ್ಣಾ ಟೊಣ್ಣೆ ಸಾ|| ದಿಕ್ಸಂಗಾ (ಕೆ) ಅಂತಾ ತಿಳಿಸಿದ್ದು, ಸದರಿಯವನ ವಶದಿಂದ
ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 430/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ
ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 26-03-2015 ರಂದು ಜೇವರಗಿ ಠಾಣಾ ವ್ಯಾಪ್ತಿಯ ಕೋಳಕುರ ಗ್ರಾಮ ಪಂಚಾಯತ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳಕೂರ ಗ್ರಾಮದ ಗ್ರಾಮ
ಪಂಚಾಯತಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಿ ಮಟಕಾ ಜೂಜಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಚಾರಿಸಲು ಸಿದ್ದಣ್ಣ ತಂದೆ ಶಿವಲಿಂಗಪ್ಪ ಕೂಡಿ ಸಾ|| ಕೋಳಕುರ ಅಂತಾ ತಿಳಿಸಿದ್ದು
ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗದು ಹಣ 18.940/- ರೂ. ಮಟಕಾ ಅಂಕಿ ಸಂಖ್ಯೆ ಚೀಟಿ ಮತ್ತು ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು
ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 26-03-2015 ರಂದು ಜೇವರಗಿ ಠಾಣಾ ವ್ಯಾಪ್ತಿಯ ಗೌನಳ್ಳಿ ಗ್ರಾಮಧ ಬಸವೇಶ್ವರ ದೇವಸ್ಥಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ತೆಗೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗೌನಳ್ಳಿ ಗ್ರಾಮಧ ಬಸವೇಶ್ವರ ದೇವಸ್ಥಾನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಿ ಮಟಕಾ ಜೂಜಟದ ಬಗ್ಗೆ ಖಚಿತಪಡಿಸಿಕೊಂಡು
ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಚಾರಿಸಲು ಸಿದ್ದಾರಾಮ ತಂದೆ ಬಸವರಾಜ ಪೊಲೀಸ್ ಪಾಟೀಲ್ ಸಾ|| ಗೌನಳ್ಳಿ ಅಂತಾ ತಿಳಿಸಿದ್ದು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 17.860/- ರೂ. ಮಟಕಾ ಅಂಕಿ ಸಂಖ್ಯೆ ಚೀಟಿ ಮತ್ತು ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು
ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ
ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಳಖೇಡ ಠಾಣೆ :
ದಿನಾಂಕ 26.03.2015 ರಂದು ರಾತ್ರಿ 07.00 ಗಂಟೆಯ ಸುಮಾರಿಗೆ ನಾನು & ನನ್ನ ತಾಯಿಗೆ ಆರಾಮ ಇಲ್ಲದ ಕಾರಣ ನನ್ನ
ತಂದೆಯೊಂದಿಗೆ ನನ್ನ ತಾಯಿಗೆ ದವಖಾನೆಗೆ ತೋರಿಸುವ ಕುರಿತು. ನಮ್ಮೂರ ಇವಣಿ ಡಾಕ್ಟರ್ ಹ್ತತೀರ
ಹೋಗಿದ್ದೆವು ನಾವು ದವಖಾನೆಗೆ ಹೋಗಿದ್ದನ್ನು ನೋಡಿ ಈ ಹಿಂದೆ ನಮ್ಮ ಮೇಲೆ ಈ ಹಿಂದೆ ನಮ್ಮ ಮೇಲೆ
ವೈಷಮ್ಯ ಬೆಳೆಸಿದ್ದ ಜನರಾದ 1] ಶೇರಖಾನ ತಂದೆ
ಕಾಜಂಖಾನ್ 2] ಆಸೀಪ್ ಖಾನ್ 3]
ಫೇರೋಜಖಾನ್ 4] ಯುಸೂಫ್ ಖಾನ್ 5] ಕಾಜಮಖಾನ್ 6] ಅಯುಬಖಾನ್ 7] ಸಿಕಂದರಖಾನ್ 8] ಅಯೂಬಖಾನ್ ಅವರ
ಮಕ್ಕಳ ಹೆಸರು ಗೊತ್ತಿಲ್ಲಾ ಸಂಗಡ ಇನ್ನೂ 4-5 ಜನರು ಎಲ್ಲರೂ ಅಕ್ರಮ ಕೂಟ ಕಟ್ಟಿಕೂಟ ರಚಿಸಿಕೊಂಡು
ಕೈಯಲ್ಲಿ ಬಡಿಗೆ .ರಾಡ.ಪೈಪು. & ಲಾಂಗುಗಳನ್ನು ತೆಗೆದುಕೊಂಡು ಬಂದು ಮತ್ತು ಸಂಗಡ ಒಂದು ರೈಫಲ್ ಇತ್ತು ಎಲ್ಲರೂ ಕೂಡಿ ಬಂದವರೇ ನಮಗೆ
ಇವಣಿ ಡಾಕ್ಟರ್ ದವಖಾನೆಯ ಹೋರಗೆ ಬಂದ ಕೂಡಲೆ ಈ ಹೊಲೆಯ ಮಾದಿಗ ಸೋಳೆ ಮಕ್ಕಳಾದ ಬಹಳ ಆಗ್ಯಾದ ನಮ್ಮ
ಹೋಲಗಳ ಬಗ್ಗೆ ಆರ.ಟಿ.ಐ ಕಾಯ್ದೆ ಅಡಿಯಲ್ಲಿ ಮಾಹತಿ ಕೆಳಿದ್ದು ಈ ಮಗನಿಗೆ ಬಿಡಬಾರದು ಅಂತಾ ಎಲ್ಲರೂ
ಕೊಡಿ ಕೊಂಡು ನನಗೆ ಬಡಿಗೆ. ರಾಡ ಕೈಯಿಂದ ಹೋಡೆಯ ಹತ್ತಿದರು ಆಗ ನನೆಗ ಬಲಗಾಲ ಮೋಣಕಾಲಿನ ಕೆಳಗೆ ಭಾರಿಗಾಯವಾಯಿತು
ಮೈಯಲ್ಲಿ ಗುಪ್ತ ಪೆಟ್ಟಾದವು & ಎಡಗಾಲು ಹೆಬ್ಬೆರಳಿಗೆ ಗಾಯವಾಯಿತು ನಾನು ಚಿರಾಡುತ್ತಿದ್ದಾಗ ನನ್ನ ತಂದೆ ಬಿಡಿಸಲು ಬಂದರು
ಆಗ ಅವರಿಗೂ ಸಹ ಎಲ್ಲರೂ
ಎಲ್ಲರೂ ಕುಡಿ ಕೊಂಡು ಬಡಿಗೆ . ರಾಡ & ಕೈಗಳಿಂದ ಹೊಡಿಯ ಹತ್ತಿದರು ನನ್ನ ತಂದೆ ಎಡಗೈ ಮೂಳಕೈಗೆ ಎಡಗಾಲು ಮೂಳಕಾಲಿಗೆ ತಲೆಗೆ
ರಕ್ತ ಗಾಯಗಳಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಕೇಡ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಳಖೇಡ ಠಾಣೆ : ದಿನಾಂಕ 26-3-2015 ರಂದು 7-00 ಪಿ.ಎಂ.ಕ್ಕೆ
ತಾನು ತನ್ನ 20 ದಿನಗಳ
ಮಗುವಿಗೆ ನಮ್ಮೂರ ಇವಣಿ ಡಾಕ್ಟರ ರವರ ದವಾಖಾನೆಗೆ ತೋರಿಸಲು ಬಂದಾಗ ನಮ್ಮೂರ ಮಾಪಣ್ಣ ಮತ್ತು ಅವನ
ಮಗನಾದ ರಾಜಶೇಖರ ಇವರು ಸಹ ದವಾಖಾನೆಗೆ ಬಂದಿದ್ದು ಅವರು ನನಗೆ ನೋಡಿ ಈ ರಂಡಿ ಮಕ್ಕಳು ನಮ್ಮ ಹೊಲ
ತೊಗಂಡರ ಅಂತಾ ಅವಾಚ್ಯವಾಗಿ ಬೈದನು. ಆಗ ನಾನು ಅವನಿಗೆ ಯಾಕೇ ಬೈಯುತ್ತಿ ಅದು ಕೋರ್ಟನಲ್ಲಿ
ನಡೆದಿದೆ. ಅಂದಾಗ ರಾಜಶೇಖರನು ಫೋನ ಮಾಡಿ ಜನರಿಗೆ ಕರೆಸಿದ್ದು 1) ಮಾಪಣ್ಣ 2) ರಾಜಶೇಖರ 3) ಕಲ್ಯಾಣಿ ಮಂಗಾ 4) ಅಶೋಕ ಶೀಲವಂತ 5) ಅರುಣ 6) ಭಗವಾನ ನಿಂಗಮಾರಿ 6)
ಭಗವಾನ
ನಿಂಗಮಾರಿ 7) ಗೌತಮ ನಿಂಗಮಾರಿ
8) ಪ್ರಶಾಂತ @ ಪುಟ್ಟು 9) ರಾಜು ಕಟ್ಟಿ 10) ರಾಜು ಚಪ್ಪಲ ಅಂಗಡಿ ಸಾ:ಎಲ್ಲರು ಮಳಖೇಡ ಮತ್ತು 11) ಅಶೋಕ
ರನ್ನೆಟ್ಲಾ ಸಾ:ಸೇಡಂ 12) ಅನಿಲಕುಮಾರ
ಅಡ್ವೊಕೆಟ ಸಾ:ಸೇಡಂ 13) ಮಾಫಣ್ಣನ ಅಳಿಯ
ಸಾ:ಸೇಡಂ ಇವರೆಲ್ಲರೂ ತಮ್ಮ ಕೈಯಲ್ಲಿ ಚಾಕು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ನನಗೆ
ಒದೆಯ ಹತ್ತಿದರು ನಾನು ಚೀರಾಡುವಾಗ ನನಗೆ ಬಿಡಿಸಲು ಬಂದ ವಜಾಹತಖಾನ , ಮತ್ತು ತೌಸೀಫಖಾನ ಇವರಿಗೆ ಸಹ ಹೊಡೆದರು., ಮತ್ತು ತಮಗೆ ವಿನಾಕಾರಣ ಹೊಲದ ಸಂಬಂದ
ಕೋರ್ಟನಲ್ಲಿ ಕೇಸ ನಡೆದ ಬಗ್ಗೆ ವಿನಾಕಾರಣ ವೈಷಮ್ಯ ಬೆಳೆಸಿ ದುಃಖಾಪತಗೊಳಿಸಿದ್ದು, ಮತ್ತು ಕೊಲೆ ಮಾಡಲು ಪ್ರಯತ್ಯ ಮಾಡಿದ್ದು ಇದೆ
ಅಂತಾ ಶ್ರೀ ಶೇರಖಾನ
ತಂದೆ ಕಾಜಂ ಖಾನ ಸಾ: ಮಳಖೇಡ ತಾ: ಸೇಡಂ. ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಶ್ರೀಶೈಲ ತಂದೆ ಸಿದ್ರಾಮಪ್ಪ ಜಿಡಗಿ ಸಾ|| ಭೂಸನೂರ ಇವರು ತಮ್ಮನಾದ
ಚಂದ್ರಶೇಖರನು ಎನ.ಎಸ್.ಎಲ ಸಕ್ಕರೆ ಕಾರ್ಖಾನೆ ಭೂಸನೂರದಲ್ಲಿ ಬೈಲರದಲ್ಲಿ ಕೆಲಸ ಮಾಡುತ್ತಿದ್ದು
ಅವನಿಗೆ ರಾತ್ರಿ ಊಟ ತೆಗೆದುಕೊಂಡು ನಮ್ಮೂರಿನಿಂದ ದಿನಾಂಕ 26/03/2015 ರಂದು ರಾತ್ರಿ 0900 ಗಂಟೆಗೆ ಭೂಸನೂರ ಫ್ಯಾಕ್ಟರಿ ಕ್ರಾಸ ಹತ್ತಿರ ಮೋಟಾರ ಸೈಕಲ
ಮೇಲೆ ನಾನು ಮತ್ತು ನನ್ನ ಅಳಿಯನಾದ ಸಂತೋಷ ತಂದೆ ಗುಂಡಪ್ಪ ಮಾಡಿಯಾಳ ಸಾ|| ಭೂಸನೂರ ಇಬ್ಬರೂ ಹೊರಟಾಗ
ನನ್ನ ಮೋಟಾರ ಸೈಕಲಗೆ 01] ಶ್ರೀಮಂತ
ಸಾರವಾಢ, 02] ಹಣಮಂತ ಸಾರವಾಡ, 03] ಕೇದಾರನಾಥ ಸಾ|| ಎಲ್ಲರೂ ಕೊರಳ್ಳಿ ಇವರು
ತಡೆದು ನಿಲ್ಲಿಸಿ ಏ ರಂಡಿ ಮಗನೆ ನೀನು ನನಗೆ ಹೊಡೆದು ಹೋಗು ಅಂತ ಜಿದ್ದ ಮಾಡಿದನು ಹೀಗೆ ಏಕೆ
ಮಾಡಿದ್ದಾನೆ ಎಂಬುದು ನನಗೆ ಗೊತ್ತಿಲ್ಲ ಅದಕ್ಕೆ ನಾನು ನಾನೇಕೆ ನಿಮಗೆ ಹೊಡೆಯಲಿ ಅಂತ ಅಂದಿದ್ದಕ್ಕೆ
ಅದರಲ್ಲಿ ಕೇದಾರನಾಧ ಮತ್ತು ಶ್ರೀಮಂತ ಇಬ್ಬರೂ ನನಗೆ ಎದೆಯ ಮೇಲಿನ ಅಂಗಿ ಹಿಡಿದು
ಜಗ್ಗಾಡುತ್ತಿದ್ದಾಗ ಅಲ್ಲಿಯೇ ಬಿದ್ದ ಒಂದು ಕಲ್ಲಿನಿಂದ ಹಣಮಂತ ಸಾರವಾಡನು ತಲೆಯ ಮೇಲೆ ಹೊಡೆದು
ಭಾರಿ ರಕ್ತಗಾಯಪಡಿಸಿದನು ನಾನು ಕೆಳಗೆ ಬಿದ್ದಾಗ ಕಾಲಿನಿಂದ ಹೊಟ್ಟೆಗೆ, ಮುಖಕ್ಕೆ ಒದ್ದನು ಆಗ
ನಮ್ಮೂರಿನವರಾದ ಮಲ್ಲಿನಾಥ ತಂದೆ ಶಿವಣ್ಣಾ ಚಿಂಚೋಳಿ, ನನ್ನ ಅಳಿಯನಾದ ಬಸವರಾಜ ತಂದೆ ಗುಂಡಪ್ಪ ಮಾಡಿಯಾಳ ಇವರು ನೋಡಿ
ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ
: ಶ್ರೀ ಸಾಹೇರಾ ತಂದೆ ಮಹೆಬೂಬಅಲಿ ದಾತ್ರೆ ಸಾ: ಮಲಂಗಶಾ ದರ್ಗಾ
ಹತ್ತಿರ ಆಳಂದ ಇವರು ತಮ್ಮ ಅಕ್ಕಂದಿರೊಂದಿಗೆ ಮುಂಬೈಯಲ್ಲಿ ವಾಸಿಸುತ್ತಿದ್ದು ನಮ್ಮ
ತಂದೆಯವರು ಮೃತಪಟ್ಟಿದ್ದು ನಮ್ಮ ತಾಯಿ ರಜೀಯಾ ನಮ್ಮ ತಮ್ಮಂದಿರಾದ ಇಮ್ರಾನ್, ಮೋಶಿನ್ ಅವರ
ಹೆಂಡತಿಯವರಾದ ಮದಿನಾ ಗಂಡ ಇಮ್ರಾನ್, ತಸ್ಲಿಮ
ಗಂಡ ಮೋಶಿನ್ ಆಳಂದದಲ್ಲಿರುತ್ತಾರೆ. ಈ 5-6 ವರ್ಷಗಳ ಹಿಂದೆ ಆಳಂದದಲ್ಲಿರುವ ಮನೆ ಕಟ್ಟುವ
ಸಲುವಾಗಿ 07 ಲಕ್ಷ ರೂ ಕೂಡಾ ನಮ್ಮ ತಮ್ಮಂದಿರರಿಗೆ ಕೊಟ್ಟಿದ್ದು ತಬಿಯೆತ್ ಸರಿಯಾಗಿ
ಇರದಿದ್ದರಿಂದ ಆಳಂದದಲ್ಲಿ ಗೌಟಿ ಔಷಧ ಕೊಡುತ್ತಾರೆಂದು ಮಾಹಿತಿ ತಿಳಿದು ದಿನಾಂಕ:25/03/2015
ರಂದು ಬೇಳಗ್ಗೆ ಮುಂಬೈದಿಂದ ಆಳಂದಕ್ಕೆ ಬಂದು ನಮ್ಮ ಸಂಬಂಧಿಕರ ಮನೆಗೆ ಹೋಗಿ ಸಾಯಂಕಾಲ 08:00
ಗಂಟೆಯ ಸುಮಾರಿಗೆ ನಮ್ಮ ತಮ್ಮಂದಿರ ಮನೆಗೆ ಹೋದಾಗ ಬಾತ ರೂಮಿಗೆ ಹೋಗಬೇಕಾಗಿದೆ ಕೊಂಡಿ ತಗೆಯಿರಿ ಎಂದಿದ್ದಕ್ಕೆ
ನನಗೆ ಪೋನ್ ಬಂದಾಗ ನಾನು ಮಾತಡುವಾಗ ನನ್ನೊಂದಿಗೆ ಈ ಮೊದಲು ಕೂಡಾ ಬೈದು ಹೊಡೆದು ಕಳುಹಿಸಿದ್ದು
ನೀನು ನಮ್ಮಮನೆಗೆ ಬರಬೇಡ ಹೋಗು ಎಂದು 08:00 ಪಿ.ಎಂ.ಕ್ಕೆ ನನಗೆ ತಡೆದು ಇನ್ನು ಮುಂದೆ ನಮ್ಮ
ಮನೆಗೆ ಬರಬೇಡ ರಂಡೀ ಎಂದು ಇಮ್ರಾನ್ ಬೈದಾಗ ಯಾಕೋ ನಾನೇ ಮನೆ ಕಟ್ಟಿಸಲು ಹಣ ಕೊಟ್ಟಿನಿ ನನಗೆ ಏಕೆ
ಹೀಗೆ ಅನ್ನುತ್ತಿಯೋ ಎಂದಾಗ ನೀನು ಏನು ಮಾಡಬೇಡ ರಂಡಿ ಎಂದು ಬೈದು ಕೈಯಿಂದ ನನ್ನ ಎಡಕಿವಿಯ ಮೇಲೆ
ಹೊಡೆದಾಗ ನನ್ನ ಎಡ ಕಿವಿ ಸರಿಯಾಗಿ ಕೇಳುತ್ತಿಲ್ಲಾ ಆಗ ಅಲ್ಲಿಯೇ ಇದ್ದ ಮೋಶಿನ್ ಅತ್ತಿಗೆಯರಾದ ಮೆದಿನಾ, ತಸ್ಲಿಮ ಇವರು ಬಂದು
ರಂಡೀ ನಿನಗೆ ಇಡುವುದಿಲ್ಲಾ ನೀನು ಅಪ್ಪನಿಗೆ ಹುಟ್ಟಿರುವುದಿಲ್ಲಾ ಅಂತಾ ನುಕಿಸಿಕೊಟ್ಟು
ಇಲ್ಲದಿದರೆ ನಿನಗೆ ಜೀವ ಸಹಿತ ಇಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಸದರಿ ಘಟನೆ ನಡೆದಾಗ ನನ್ನ ಜೊತೆಗೆ ಇದ್ದ ನೋನಿ, ಜರಿನಾ ನೋಡಿದ್ದು ತಮ್ಮ
ತಮ್ಮಂದಿರರಿಗೆ ಅಂಜಿ ಯಾರು ಬಿಡಿಸಲು ಬಂದಿಲ್ಲಾ. ಜಗಳದಲ್ಲಿ ಬಲ ಕಿವಿಯ ಓಲೆ ಬಂಗಾರದು ಕಳೆದು
ಹೋಗಿದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀಮತಿ
ಶೇಕಮ್ಮಾ ಗಂಡ ಶಿವರಾಯ ಬಜಂತ್ರಿ ಸಾ : ಕೊಡದೂರ ತಾ : ಚಿತ್ತಾಪೂರ ಇವರ ಮಗಳಿಗೆ 6 ವರ್ಷಗಳ ಹಿಂದೆ ಜಗನಾಥ ಬಜಂತ್ರಿ
ಇತನೊಂದಿಗೆ ಮದುವೆ ಮಾಡಿದ್ದು, ಸಧ್ಯ 2 ಗಂಡು ಮಕ್ಕಳು ಇರುತ್ತೇವೆ. ದಿನಾಂಕ 23-03-15 ರಂದು
ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಫಿರ್ಯಾದಿ ಮಗಳಾದ ವಿಜಯಲಕ್ಷ್ಮೀ ಇವಳು ಒಬ್ಬಳೇ ತವರು
ಮನೆಗೆ ಹೋಗಿ ಮನೆಯಲ್ಲಿದ್ದ
ತನ್ನ ತಂದೆ, ತಾಯಿಗೆ ಅಜ್ಜಿ ಗಂಗಮ್ಮಾ, ಚಿಕ್ಕಮ್ಮಾ ಜಗಮ್ಮಾಗೆ ಎಲ್ಲರಿಗೂ ತಿಳಿಸಿದ್ದೆನೆಂದೆರೆ ಬೆಳಿಗ್ಗೆ 7-00 ಗಂಟೆ ಸುಮಾರಿಗೆ ತನ್ನ ಗಂಡ ಜಗನ್ನಾಥ,
ಇತನು ಮತ್ತೆ ನನ್ನ ಶೀಲದ ಬಗ್ಗೆ ಸಂಶಯ ಪಟ್ಟುಕೊಂಡು ಹೊಡೆ ಬಡಿ ಮಾಡಿದ್ದು, ಅದಕ್ಕೆ ಮಾವ ಭೀಮರಾಯ
ಮತ್ತು ಮೈದನ ಬಸವರಾಜ ಇವರು ಈ ರಂಡಿ ಬಹಳ ಹೊಲಸ ಇದ್ದಾಳ ನಮ್ಮ ಮನೆಯ ಮಾನ ಮರ್ಯಾದೆ
ಕಳೆಯುತ್ತಿದ್ದಾಳೆ ಈ ರಂಡಿಗೆ ಸರಿಯಾಗಿ ಹೊಡೆ
ಅಂತಾ ಕುಮ್ಮಕ್ಕು ನೀಡಿರುತ್ತಾರೆ ಅಂತಾ ತಿಳಿಸಿದಳು. ಮತ್ತು ನನ್ನ ಗಂಡ, ಮಾವ, ಮೈದನ ಬಸವರಾಜ
ಮೂವರು ನನಗೆ ನೀನು ಹೊಲಸು ರಂಡಿ ಇದ್ದೀ ಎಲ್ಲಿಯಾದರೂ ಬಿದ್ದು ಸಾಯಿ ನಮ್ಮ ಮನೆಯಲ್ಲಿ ಇರಬೇಡಾ
ಅಂತಾ ಬೈದಿರುತ್ತಾರೆ ಅಂತಾ ಕೂಡಾ ತಿಳಿಸಿದಳು.
ಅದನ್ನೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮೃತ ವಿಜಯಲಕ್ಷ್ಮೀ ಇವಳು ತನ್ನ ಶೀಲದ ಬಗ್ಗೆ ಅವಳ ಗಂಡ ಜಗನಾಥ, ಮಾವ ಭೀಮರಾಯ, ಮೈದನ
ಬಸವರಾಜ ಇವರು ಸಂಶಯ ಪಟ್ಟು ಅವಳಿಗೆ ದಿನಾಲೂ ಹೊಡೆ ಬಡೆ ಮಾಡಿ ಮಾನಸಿಕ ಮತ್ತು
ದೈಹಿಕ ಹಿಂಸೆ ಕೊಟ್ಟಿದ್ದರಿಂದ ಅವರು ಕೊಟ್ಟ ದೈಹಿಕ ಹಿಂಸೆ ತಾಳಲಾರದೇ ನಿನ್ನೆ ದಿನಾಂಕ 25-03-15 ರಂದು ರಾತ್ತಿ 8-00
ಗಂಟೆಯಿಂದ ದಿನಾಂಕ 26-03-15 ರಂದು ಮಧ್ಯಾಹ್ನ 3-30 ಗಂಟೆಯ ಮಧ್ಯದ ಅವಧಿಯಲ್ಲಿ ಬಾವಿಯಲ್ಲಿ ಬಿದ್ದು
ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment