POLICE BHAVAN KALABURAGI

POLICE BHAVAN KALABURAGI

26 December 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಭೀಮಶಾ ತವಡೆ ಸಾ|| ಸನಗುಂದಿ ಹಾ|| || ಎಸ್.ಎಮ್ ಕೃಷ್ಣಾ ಕಾಲೋನಿ ಡಬರಾಬಾದ ಗುಲಬರ್ಗಾ ಇವರು ದಿನಾಂಕ 25-12-2014 ರಂದು ಬೆಳಿಗ್ಗೆ ದಿನಂಪ್ರತಿಯಂತೆ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಸಿಸಿ ರಸ್ತೆ ಮಾಡುವ ಕೆಲಸಕ್ಕೆಂದು ನಾನು ಮತ್ತು ವೆಂಕಟೇಶ ಹಾಗೂ ಸುನೀಲ, ಮಲ್ಲಿಕಾರ್ಜುನ ರವರೆಲ್ಲರೂ  ಬಸವರಾಜ ವಡ್ಡಿನಮನಿ ಈತನು ನಡೆಸುತ್ತಿದ್ದ ಟ್ಯಾಕ್ಟರ ನಂ ಕೆಎ-38 ಟಿ-2135 ನೇದ್ದರಲ್ಲಿ ಸಿಮೆಂಟ ಚೀಲಗಳನ್ನು ಹಾಕಿಕೊಂಡು ನಾವು 4 ಜನರು ಟ್ಯಾಕ್ಟರ ಇಂಜೆನನಲ್ಲಿ ಡ್ರೈವರ ಪಕ್ಕದಲ್ಲಿ ಕುಳಿತುಕೊಂಡು ಹೊರಟಿದ್ದು ಟ್ಯಾಕ್ಟರ ಚಾಲಕ ಬಸವರಾಜ ವಡ್ಡಿನಮನಿ ಈತನು ತನ್ನ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸುತ್ತಿದ್ದನು. ಆಗ ನಾವು ಸದರಿಯವನಿಗೆ ನಿದಾನವಾಗಿ ನಡೆಸು ಅಂತಾ ಹೇಳಿದರು ತನ್ನ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ದೇಸಾಯಿ ಕಲ್ಲೂರ ಪಂಚಾಯತ ಕಾರ್ಯಾಲಯದ ಹತ್ತಿರ ರೋಡಿನ ಪಕ್ಕದ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಟ್ಯಾಕ್ಟರ ಪಲ್ಟಿಆದ ಕೂಡಲೆ ಚಾಲಕ ಬಸವರಾಜನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ವೆಂಕಟೇಶನಿಗೆ ಎದೆಯ ಎಡಭಾಗಕ್ಕೆ, ಹೊಟ್ಟೆಗೆ ಮತ್ತು ಬಲಭಾಗದ ಸೊಂಟಕ್ಕೆ ಭಾರಿ ಒಳಪೆಟ್ಟಾಗಿ ಬೆನ್ನಿಗೆ ತರಚಿದ ರಕ್ತಗಾಯಗಳಾಗಿರುತ್ತವೆ. ಹಾಗೂ ಮಲ್ಲಿನಾಥ ಮತ್ತು ಸುನೀಲ ಇವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ನಂತರ ನಾವು ಗಾಯಾಳುದಾರರಾದ  ವೆಂಕಟೇಶ, ಮಲ್ಲಿನಾಥ ಮತ್ತು ಸುನೀಲ ರವರಿಗೆ ಅಫಜಲಪೂರದ ಕಡೆಗೆ ಬರುವ ಯಾವುದೊ ಒಂದು ಟಂ ಟಂ ದಲ್ಲಿ ಕೂಡಿಸಿಕೊಂಡು ಬರುತ್ತಿದ್ದಾಗ ಅಫಜಲಪೂರ ಸಮೀಪ ವೆಂಕಟೇಶನು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 25-12-2014 ರಂದು ಬೆಳಿಗ್ಗೆ 08-15 ಗಂಟೆಗೆ ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32-ಇಎಫ್-1947 ನೆದ್ದರ ಮೆಲೆ ನನ್ನ ಮಗ ಶಿವಕುಮಾರ ಇತನನ್ನು ಕೂಡಿಸಿಕೊಂಡು ಚಂದ್ರಶೆಖರ ಪಾಟೀಲ ಕ್ರಿಡಾಂಗಣಕ್ಕೆ ಹೊಗಿ ವಾಕಿಂಗ ಮುಗಿಸಿಕೊಂಡು ವಾಪಸ್ಸ ಮನೆಯ ಕಡೆಗೆ ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ಮೇಲೆ ಹೋಗುವಾಗ ಮಹಾಲಕ್ಷ್ಮಿ ಲೇಔಟನಲ್ಲಿ ಬರುವ ಜ್ಞಾನೋದಯ ನರ್ಸರಿ ಶಾಲೆಯ ಎದುರು ರೋಡ  ಮೆಲೆ ಹಿಂದಿನಿಂದ ಕಾರ ನಂ ಕೆಎ-32-ಎಮ್-6733 ರ ಚಾಲಕ ತನ್ನ ಕಾರನ್ನು ಅತಿವೆಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಮಗನಿಗೆ ನಡು ಹಣೆಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ ಎಡ ಮೆಲಕಿನ ಮೇಲೆ ಎಡ ಕಪಾಲ ಮೆಲೆ ಗದ್ದಕ್ಕೆ ರಕ್ತಗಾಯ ಎಡ ಎಡೆಗೆ ಬಲ ಮೊಳಕಾಲಗೆ ಎಡ ಮೊಳಕಾಲಗೆ ಬಲಗೈ ಹಸ್ತಕ್ಕೆ ಹಸ್ತದ ಹಿಂದುಗಡೆ ತರಚಿದ ಗಾಯವಾಗಿ ಉಪಚರ ಕುರಿತು ಬಸವೆಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗ ಉಪಚಾರ ಫಲಕಾರಿಯಾಗದೆ ಬೆಳಿಗ್ಗೆ 11-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶ್ರೀಪಾದ ತಂದೆ ಶಂಬುಲಿಂಗ ಜುಮ್ಮಣ್ಣ  ಸಾ: ವಿರೇಶ ನಗರ   ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 25-12-2014 ರಂದು 08-00 ಎ.ಎಮ್ ಕ್ಕೆ ಟಾಟಾ ಸುಮೊ ನಂ. ಕೆ.ಎ 29 ಪಿ 1111 ನೇದ್ದರ ಚಾಲಕನು ತನ್ನ ವಾಹನವನ್ನು ಲಾಲಗೇರಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಸುಪರ ಮಾರ್ಕೆಟ ಕಡೆಗೆ ಹೋಗುತ್ತಿದ್ದಾಗ ಸುಪರ ಮಾರ್ಕೆಟ ಕಡೆಯಿಂದ ಜೋತಿಬಾ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 29 ಕ್ಯೂ 8625 ನೇದ್ದರ ಮೇಲೆ ಹಿಂದೆ ಅಭಿನಂದನ ಈತನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಟಾತ್ತಿಡ್ಡಿಯಾಗಿ ಚಲಾಯಿಸಿಕೊಂಡ ಬಂದು ಒಬ್ಬರಿಗೊಬ್ಬರು ಮುಖಾಮುಖಿಯಾಗಿ ರೋಡಿನ ಮಧ್ಯದಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಮೋಟಾರ ಸೈಕಲ ಮತ್ತು ಹಿಂದೆ ಕುಳಿತ ಅಭಿನಂದನ ಇಬ್ಬರಿಗು ಗಾಯಗಳಾಗಿದ್ದು  ಪೆಟ್ಟಾಗಿದ್ದು ಟಾಟಾ ಸುಮೊ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸೈಫನಸಾಬ ಜಮಾದಾರ ಸಾ|| ಮಾಶಾಳ ಇವರು ದಿನಾಂಕ 25/12/2014 ರಂದು ಫಿರ್ಯಾದಿದಾರನದು ಮಾಶಾಳ ಗ್ರಾಮದ ರಾಮನಗರ ನೀರಿನ ಗುಮ್ಮಿ ಇದ್ದು ಅಲ್ಲಿ ಫಿರ್ಯಾದಿದಾರನು ನೀರು ತುಂಬುತಿದ್ದಾಗ ಆರೋಪಿತನಾದ ಜಗನ್ನಾಥ ಇತನು ಫಿರ್ಯಾದಿಯ ಕೊಡಾ ತಗೆದು ತನ್ನ ಕೊಡಾ ಚ್ಚಿದಕ್ಕೆ ಪಿರ್ಯಾದಿ ಕೇಳತಿದ್ದಾಗ ಆರೋಪಿತನು ಅವಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: