ಅಪಘಾತ
ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಶರಣು ತಂದೆ ಜಗನ್ನಾಥ ಭೂಯ್ಯಾನೋರ ಸಾ:ಧನ್ನೂರ (ಆರ) ತಾ:ಬಸವಕಲ್ಯಾಣ ಜಿ:ಬೀದರ ರವರು
ದಿನಾಂಕ:23-12-2014 ರಂದು ಮುಂಜಾನೆಯ ವೇಳೆಯಲ್ಲಿ ನನ್ನ ಗೆಳೆಯ ಸುನೀಲ ತಂದೆ ಮಾರುತಿ ಜಮಾದಾರ ಮು:ಧನ್ನೂರ
ಆರ ಇವನ ಸಂಗಡ ಸನೀಲನ ಕಾಕ ರಮೇಶ ಇವರಿಗೆ ಬೇಟಿಯಾಗಲು ಹೋಸದಾಗಿ ಖರೀದಿ ಮಾಡಿದ ಹಿರೊ ಸ್ಪ್ಲೇಂಡರ ಐ
ಸ್ಮಾರ್ಟ ಮೊಟರ ಸೈಕಲ ನಂಬರ ಇಲ್ಲದ್ದು ಇದರ ಮೇಲೆ ಕಮಲಾಪೂರಕ್ಕೆ ಬಂದಿದ್ದು ದಿನಾಂಕ:23-12-2014
ರಂದು 08-50 ಪಿ.ಎಮದ ಸೂಮಾರಿಗೆ ನಾವು ಕಮಲಾಪೂರನಿಂದ ವಾಪಸ್ಸ ನಮ್ಮುರಿಗೆ ಹೋಗುವ ಸಂಬಂದ ಹಿರೊ ಸ್ಪ್ಲೇಂಡರ
ಐ ಸ್ಮಾರ್ಟ ಮೊಟರ ಸೈಕಲ ನಂಬರ ಇಲ್ಲದ್ದು ಇದರ ಮೇಲೆ ಕಮಲಾಪೂರನಿಂದ ಹುಮನಾಬಾದ ಕಡೆಗೆ ಹೋಗುವ ಹೆದ್ದಾರಿಯ
ಮೇಲಿಂದ ನಮ್ಮುರಿಗೆ ಹೋರಟಿದ್ದು. ರಾಜನಾಳ ಕ್ರಾಸ ದಾಟಿ ಅಂದಾಜು 500 ಮೀಟರ ಹೋದಾಗ ಸುನೀಲನು ತಾನು
ನಡೆಸುತ್ತಿದ್ದ ಮೊಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಒಮ್ಮಲೆ ಅಡ್ಡಾತಿಡ್ಡಯಾಗಿ
ಮೊಟರ ಸೈಕಲ ಕಟ್ಟ ಹೋಡೆದಾಗ ಸುನೀಲನು ಮೊಟರ ಸೈಕಲ ಮೇಲೆ ನಿಯಂತಯ್ರಣ ಕಳೆದುಕೊಂಡು ರಸ್ತೆಯ ಎಡಬಾಗದಲ್ಲಿದ್ದ
ಗುಟದ ಕಲ್ಲಿಗೆ ಡಿಕ್ಕಿ ಪಡಿಸಿದ್ದು. ನಾವು ಮೊಟರ ಸೈಕಲ ಸಮೇತ ರೊಡಿನ ಎಡಭಾಗಕ್ಕೆ ಬಿದ್ದೇವು. ನಂತರ
ನಾನು ಎದ್ದು ನೋಡಲು ನನ್ನ ಬಲಕೈ ಮೋಣಕೈಯಿಂದ ಕೆಳಗಿನ ಭಾಗ ಪೂರ್ತಿ ಕಟ್ಟಾಗಿ ಬೇರೆಯಾಗಿದ್ದು ಅಲ್ಲದೆ
ಎಡ ಮೋಣಕಾಲಿಗೆ ತರಚಿದ ರಕ್ತಗಾಯ ಎಡಗೈ ತೋರಬೇರಳ ಮದ್ಯ ರಕ್ತಗಾಯ ಕೆಳ ತುಟಿಗೆ ರಕ್ತಗಾಯ ಮತ್ತು ಅಲ್ಲಲ್ಲಿ
ತರಚಿದ ರಕ್ತ ಮತ್ತು ಗುಪ್ತಗಾಯಗಳಾಗಿದ್ದು ಇರುತ್ತದೆ. ಆಮೇಲೆ ಸುನೀಲನ ಹತ್ತೀರ ಹೋಗಿ ನೋಡಲು ಸುನೀಲನ
ಎಡ ರಟ್ಟೆಗೆ ಗುಪ್ತಗಾಯವಾಗಿದ್ದು ಅಲ್ಲದೆ ಅದೇ ಕೈ ಮುಂಗೈ ಕೀಲು ಕಟ್ಟಾಗಿ ಎಲುಬು ಹೋರಗೆ ಬಂದಿದ್ದು
ಬಲ ಭುಜದ ಹಿಂದೆ ರಕ್ತಗಾಯ ಬಲ ಎದೆಗೆ ತರಚಿದ ಗಾಯ ಮತ್ತು ಬಲಗಡೆ ಮೇಲಕಿಗೆ ಭಾರಿ ರಕ್ತಗಾಯವಾಗಿ ಕಟ್ಟಾಗಿ
ಸ್ಥಳದಲ್ಲೆ ವೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಗುರುಲಿಂಗಪ್ಪಾ ಹಲಕಟ್ಟಿ
ಸಾ: ನಬಿಕಾಲೋನಿ ಶೇಖರೋಜಾ ಕಲಬರುಗಿ ರವರು ದಿನಾಂಕ 24-12-2014
ರಂದು ಸಾಯಂಕಾಲ 7-15 ಗಂಟೆಗೆ ನಾನು ನನ್ನ ಬಂಡಿ ಹೋಟೇಲದಿಂದ ಗದಲೆಗಾಂವ ಕಾಂಪ್ಲೇಕ್ಸ
ಹತ್ತೀರವಿರುವ ಸೇರವಾಲಿ ಪೈನಾನ್ಸನಲ್ಲಿ ಚಹಾ ತಗೆದುಕೊಂಡು ಹೋಗುವಾಗ ಶಹಾಬಜಾರ ನಾಕಾ ಕಡೆಯಿಂದ
ಆಳಂಧ ಚೆಕ್ಕಪೋಸ್ಟ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ-32-ಇಡಿ-8332
ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ
ಮಾಡಿ ನನ್ನ ಎಡ ತೊಡೆಗೆ ಭಾರಿ ಗುಪ್ತ ಪೆಟ್ಟು ಗೊಳಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪ್ರೇಮಲಾ ಗಂಡ ಪ್ರಭುಲಿಂಗರೆಡ್ಡಿ ಚನ್ನಾರೆಡ್ಡಿ ಸಾ: ಹನುಮಾನ ಟೆಂಪಲ ಹತ್ತಿರ
ವೆಂಕಟೇಶ ನಗರ ಕಲಬರುಗಿ ರವರು ದಿನಾಂಕ 24-12-2014 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ
ನಮ್ಮ ಮನೆಯಿಂದ ಡಾ|| ಸುಮನ ಹೆರಿಗೆ ಆಸ್ಪತ್ರೆಗೆ ನನ್ನ ಬಾವನ ಮಗಳಿಗೆ ಊಟ ಕೊಡುವ ಸಲುವಾಗಿ ನಡೆದುಕೊಂಡು ಹೋಗುವಾಗ
ಸುಮನ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ
ಸೈಕಲ ನಂ ಕೆಎ-32-ಇಸಿ-8481 ನೇದ್ದರ ಸವಾರನು ಹಿಂದಿನಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಢಿ
ಬಲ ತೊಡೆಗೆ ಭಾರಿ ಗುಪ್ತಪೆಟ್ಟುಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಕಾಶಿನಾಥ ತಂದೆ ನರಸಪ್ಪ ಕುಂಬಾರ ಸಾ: ಕೇಸರಟಗಿ ಗ್ರಮ ತಾ:ಜಿ: ಕಲಬರುಗಿ ರವರು ದಿನಾಂಕ 24-12-2014 ರಂದು ಬೆಳಿಗ್ಗೆ 08-30 ಗಂಟೆಗೆ ನಾನು
ನಮ್ಮೂರಿನಿಂದ ಕಲಬುರಗಿಗೆ ಮೋಟಾರ ಸೈಕಲ ನಂ ಕೆಎ-32-ವ್ಹಿ-6472
ನೇದ್ದನ್ನು ಚಲಾಯಿಸಿಕೊಂಡು ಬರುತ್ತೀರುವಾಗ ರಾಮ ಮಂದಿರ ರಿಂಗ ವೃತ್ತದಲ್ಲಿ ಮೋಟಾರ
ಸೈಕಲ ನಂ ಕೆಎ-32-ಇಇ-4368
ನೇದ್ದರ ಸವಾರನು ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೈಕೊರ್ಟ ಕಡೆಗೆ ಹೋಗುವ ಕುರಿತು ರಿಂಗ ವೃತ್ತ ಸುತ್ತ
ಹಾಕದೆ ಒಮ್ಮಲೇ ಬಲಗಡೆ
ತಿರುಗಿಸಿ ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಎಡ ಭುಜಕ್ಕೆ ಭಾರಿ
ಗುಪ್ತ ಪೆಟ್ಟು ಮತ್ತು ಬಲಗೈ ಮುಂಗೈ ಹತ್ತೀರ ಗುಪ್ತ ಪೆಟ್ಟು ಗೊಳಿಸಿ ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ
ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ಅಲಿಯಾಸ ಮಲ್ಲಿನಾಥ ತಂದೆ ದೇವಿಂದ್ರಪ್ಪ ಕಡಗಂಚಿ ಸಾ:ತಾಜ
ಸುಲ್ತಾನಪೂರ ಗ್ರಾಮ ಇವರು ದಿನಾಂಕ 22-12-14
ರಂದು ಮಧ್ಯಾಹ್ನ 3-00 ಗಂಟೆಗೆ ತನ್ನ ಮಗಳಾದ 1) ಕು:ಅಶ್ವಿನಿ ತಂದೆ ಮಲ್ಲಿಕಾರ್ಜುನ ಅಲಿಯಾಸ
ಮಲ್ಲಿನಾಥ ಕಡಗಂಚಿ 2) ಕು:ನಾಗಮ್ಮಾ ತಂದೆ ಚಂದ್ರಕಾಂತ ಬೈರಾಮಡಗಿ ಸಾ: ತಾಜ ಸುಲ್ತಾನಪೂರ ಗ್ರಾಮ
ಇವರಿಬ್ಬರು ದಿನಾಂಕ 19-12-14 ರಂದು ಸಂಜೆ 5-00 ಗಂಟೆ ಸುಮಾರಿಗೆ ತಮ್ಮನಾದ ಪೀರಪ್ಪ ಕಡಗಂಚಿ ಇವರ ಮನೆಗೆ ಹೋಗಿ
ಬರುತ್ತೇನೆ ಅಂತಾ ಮನೆಯಿಂದ ಹೋದವರು ರಾತ್ರಿಯಾದರೂ ಮನೆಗೆ ಮರಳಿ ಬಂದಿರುವುದಿಲ್ಲಾ.ದಿನಾಂಕ
19-12-14 ರಂದು ರಿಂದ ಇವತ್ತಿನ ವರೆಗೆ ಎಲ್ಲಾ ಕಡೆಗೂ ನಾವೆಲ್ಲರೂ ಹುಡುಕಾಡಿದರೂ ಸಿಗದ ಕಾರಣ, ತಮ್ಮ ಮಕ್ಕಳು ಕಾಣೆಯಾಗಿರುತ್ತಾರೋ ಅಥವಾ ಯಾರಾದಾರೂ ಅಪಹರಿಸಿಕೊಂಡು ಹೋಗಿರುತ್ತಾರೆ ಅನ್ನುವ
ಬಗ್ಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 24-12-14 ರಂದು ಸಂಜೆ 6-15 ಗಂಟೆ ಸುಮಾರಿಗೆ
ಪ್ರಕರಣದಲ್ಲಿ ಕಾಣೆಯಾದ/ಅಪಹರಣಕ್ಕೆ ಒಳಗಾದ ಹುಡುಗಿಯರಾದ ಕು:ಆಶ್ವಿನಿ ಮತ್ತು ಕು:ನಾಗಮ್ಮಾ
ಇವರಿಬ್ಬರ ಶವ ಸೈಯ್ಯದ ಚಿಂಚೋಳಿ ಗ್ರಾಮದ ಸೀಮಾಂತರದ ಜಾಜಿ ಇವರ ಹೊಲದ ಬಾವಿಯಲ್ಲಿ ಶವ ಬಿದ್ದ
ಬಗ್ಗೆ ಮಾಹಿತಿ ಗೊತ್ತಾಗಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಭೇಟ್ಟಿ ಕೊಟ್ಟು ಹೋಗಿ ನೋಡಿ
ವಿಚಾರಣೆ ಮಾಡಲಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟವರು ಕು:ಆಶ್ವಿನಿ ಮತ್ತು ಕು:ನಾಗಮ್ಮಾ
ಗೊತ್ತಾಗಿದ್ದು, ಬಾವಿಯ ಹತ್ತಿರ ಮೃತನ
ತಂದೆ, ತಾಯಿಯವರು ಬಂದಿದ್ದು, ಅವರಿಗೆ ವಿಚಾರಣೆ ಮಾಡಲಾಗಿ ಕು:ಆಶ್ವಿನಿ ಮತ್ತು ಕು:ನಾಗಮ್ಮಾ ಇವರ ತಂದೆ ,ತಾಯಿಯವರು ತಿಳಿಸಿದ್ದೆನೆಂದೆರೆ, ತಮ್ಮ ಮಕ್ಕಳಾದ
ಕು:ಆಶ್ವಿನಿ ಮತ್ತು ಕು:ನಾಗಮ್ಮಾ ಇವರಿಬ್ಬರು ತಾಜ ಸುಲ್ತಾನಪೂರ ಕೆ.ಎಸ್.ಅರ್.ಪಿ. ಕ್ಯಾಂಪ
ಶಾಲೆಯಲ್ಲಿ ಓದುತ್ತಿದ್ದು, ಅವರಿಗೆ ತಂದೆ. ತಾಯಿವರು
ಸರಿಯಾಗಿ ವಿದ್ಯಾಭ್ಯಾಸ ಮಾಡಿರೀ ಅಂತಾ
ಬುದ್ಧಿವಾದ ಹೇಳಿದ್ದಕ್ಕೆ ಬಾವಿಯಲ್ಲಿ ಬಿದ್ದು ಆತ್ಮಹ್ಯತೆ ಮಾಡಿಕೊಂಡಿರುತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :ರೇವೂರ ಠಾಣೆ : ಶ್ರೀಮತಿ ಫಿರ್ಯಾದಿ ಶ್ರೀದೇವಿ ಗಂಡ ಶಿವಲಿಂಗಪ್ಪಾ ಬಿರಾದಾರ ಸಾ:ಕುಲಾಲಿ ಸ್ಟೇಶನ ಇವರ ಮಗಳಾದ ಸಂಗೀತಾ ತಂದೆ ಶಿವಲಿಂಗಪ್ಪಾ ಬಿರಾದರ ವಯಾ 17 ವರ್ಷ ದಿನಾಂಕ: 23-12-2014 ರಂದು ಮುಂಜಾನೆ 09 ಗಂಟೆ ಸುಮಾರಿಗೆ ಪ್ರತಿ ದಿನದಂತೆ ಇಂದು ಕೂಡಾ ಮಾಹಂತೆಶ್ವರ ಶಾಲೆಗೆ ಹೊಗಿ ಬರುತ್ತೆನೆ ಅಂದು ಹೇಳಿ ಮನೆಯಿಂದ ಹೊದವಳು, ಸಾಯಂಕಾಲ 06.00 ಗಂಟೆ ಯಾದರು ಸಹ ನನ್ನ ಮಗಳಾದ ಸಂಗೀತಾ ಮರಳಿ ಮನೆಗೆ ಬರಲ್ಲಿಲ್ಲಾ. ಯಾಕೆ ಬರಲಿಲ್ಲಾ ಅಂತ ಸಂಶಯ ಬಂದು ಶಾಲಾ ಶಿಕ್ಷಕರಲ್ಲಿ ಫೊನ ಮಾಡಿ ವಿಚಾರಿಸಲಾಗಿ ಶಾಲಾ ಶಿಕ್ಷಕರು ನಿಮ್ಮ ಮಗಳು ಇಂದು ಶಾಲೆಗೆ ಬಂದಿರುವದಿಲ್ಲಾ. ಅಂತ ತಿಳಿಸಿದ ಮೇರೆಗೆ ಅವಳ ಸಹ ಪಾಟಿಗಳಿಗೆ ಸಹ ವಿಚಾರಿಸಲಾಗಿ ನಾವು ಶಾಲೆಗೆ ಹೊಗಿರುವದಿಲ್ಲಾ ಅಂತ ತಿಳಿಸಿರುತ್ತಾರೆ. ಹಾಗು ನಮ್ಮ ಬಂದು ಬಳಗದವರ ಹತ್ತಿರ ಫೋನ ಮುಖಾಂತರ ವಿಚಾರಿಸಲಾಗಿ ನಿಮ್ಮ ಮಗಳು ಸಂಗೀತಾ ಬಂದಿಲ್ಲ ಅಂತ ತಿಳಿಸಿದರು. ನನ್ನ ಮಗಳನ್ನು ಯಾರೊ ಅಪರಿಚಿತ ವ್ಯಕ್ತಿಗಳು ಯಾವೂದೊ ದುರುದ್ದೇಶದಿಂದ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment