ಅಪಘಾತ
ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಪ್ರಕಾಶ ತಂದೆ ಬಸವರಾಜ ಬಿರಾದಾರ ಸಾ; ಗೋಬ್ಬುರವಾಡಿ ಇವರ ತಮ್ಮನಾದ ವಿಕಾಶ ತಂದೆ ಬಸವರಾಜ ಬಿರಾದಾರ ವಯ ಸಾ; ಗೋಬ್ಬುರವಾಡಿ ಇವರ ಅಣ್ಣನಾದ ಪ್ರಕಾಶನು ಇವರು ಗೌರವ ಉಪನ್ಯಾಶಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ
22-10-2014 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣನಾದ ಪ್ರಕಾಶನು
ಇಬ್ಬರು ಕೂಡಿ ನಮ್ಮ ಹೊಂಡಾ ಸ್ಪೇಂಡರ ಮೋಟಾರ ಸೈಕಲ್ ನಂ ಕೆಎ-32-ಇಸಿ-1747 ನೇದ್ದನ್ನು ತೆಗೆದುಕೊಂಡು ದೀಪಾವಳಿ ಹಬ್ಬದ ನಿಮಿತ್ಯ ನಮ್ಮೂರಿಗೆ ಬಂದೆವು. ರಾತ್ರಿ 7-00
ಗಂಟೆ ನಮ್ಮ ಅಣ್ಣನಾದ ಪ್ರಕಾಶ ಇವರು ಮೋಟಾರ ಸೈಕಲ್ ತೆಗೆದುಕೊಂಡು ಗುಲಬರ್ಗಾಕ್ಕೆ ಹೋಗುತ್ತೇನೆ
ಅಂತ ಹೇಳಿ ಹೋದರು, ನಾನು ಇನ್ನರಡು ದಿವಸ ಊರಲ್ಲೆ ಉಳಿಯಬೇಕೆಂದು ಉಳಿದೆನು.
ಸ್ವಲ್ಪ ಹೊತ್ತಿನಲ್ಲಿ ಅಂದರೆ 7-30 ಗಂಟೆ ಸುಮಾರಿಗೆ ನಮ್ಮೂರ ಸಂತೋಷಕುಮಾರ ತಂದೆ ದೇವಿಂದ್ರಪ್ಪ
ಜಮದಾರ ಈತನು ದೂರವಾಣಿ ಮುಖಾಂತರ ನನ್ನಗೆ ತಿಳಿಸಿದೆನೆಂದರೆ ನಿಮ್ಮ ಅಣ್ಣಿನಿಗೆ ಮುಲ್ಲಾಮಾರಿ
ಬ್ರಿಡ್ಜ ಹತ್ತಿರ ಅಪಘಾತವಾಗಿದೆ ಅಂತ ತಿಳಿಸಿದ್ದು ನಾನು ಗಾಬರಿಗೊಂಡು ನಮ್ಮ ಮನೆಯಲ್ಲಿ ತಿಳಿಸಿ ಘಟನಾ
ಸ್ಥಳಕ್ಕೆ ಬಂದೆನು, ಆಗಾ ನಾನು ಮತ್ತು ಸಂತೋಷಕುಮಾರ ಇಬ್ಬರು ಕೂಡಿ ನಮ್ಮ
ಅಣ್ಣನಿಗೆ ರೋಡಿನ ಬದಿಯಲ್ಲಿ ಎತ್ತಿಕೊಂಡು ಬಂದು ಕೂಡಿಸಿ ನೋಡಲಾಗಿ ನಮ್ಮ ಅಣ್ಣನಿಗೆ ಹಣೆಯ ಮೇಲೆ
ಭಾರಿಗಾಯವಾಗಿ ರಕ್ತ ಹರಿಯುತ್ತಿತು, ಬಾಯಿಗೆ ಬಡೆದು ತುಟಿ ಹರಿದು ಅಲ್ಲಿಯು ಸಹ ರಕ್ತ
ಬರುತ್ತಿತು, ಅಲ್ಲದೆ ನಮ್ಮ ಅಣ್ಣನ ಎಡಗೈ ಮುರಿದ ಹಾಗೆ ಕಂಡುಬರುತ್ತಿತು ಮತ್ತು ಟೊಂಕಕ್ಕೆ ಎರಡು ತೊಡೆಗಳಿಗೆ ಗುಪ್ತ
ಪೆಟ್ಟಾಗಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ
ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಕುಮಾರಿ. ಸುಶ್ಮಿತಾ ತಂದೆ ನಂದಕುಮಾರ ರಘು ಸಾಃ ಸಾಯಿರಾಮ ನಗರ
ಜೇವರ್ಗಿ ರೋಡ್ ಗುಲಬರ್ಗಾ ಇವರು ತಮ್ಮ ಹೊಂಡಾ ಆಕ್ಟಿವಾ ಮೋಟಾ ಸೈಕಲ ನಂ. ಕೆ.ಎ 32 ಎಸ್ 6815 ನೇದ್ದನ್ನು
ಎಂದಿನಂತೆ ದಿನಾಂಕಃ 10/10/2014 ರಂದು 08:00 ಎ.ಎಂ. ಕ್ಕೆ ಬಸವೇಶ್ವರ ಆಸ್ಪತ್ರೆಯ ಆವರಣದಲ್ಲಿ
ಮೋಟಾರ ಸೈಕಲ್ ಸ್ಟ್ಯಾಂಡಿನಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ಹೋಗಿ ನಂತರ 01:40 ಪಿ.ಎಂ. ಕ್ಕೆ ಕರ್ತವ್ಯ
ಮುಗಿಸಿಕೊಂಡು ಬಂದು ನೋಡಲಾಗಿ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
ಎಲ್ಲಾ ಕಡೆ ಹುಡುಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
No comments:
Post a Comment