ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ:
22-10-2014 ರಂದು ವಿಶ್ವವಿದ್ಯಾಲಯ
ಪೊಲೀಸ ಠಾಣೆಯ ಹದ್ದಿಯ ಕೆಸರಟಗಿ ಸೀಮೆಯ ಸೇರಿಕಾರ ಹೊಲದ ಬೇವಿನ ಗಿಡದ ಕೆಳಗೆ ಸಾರ್ವಜನಿಕ
ಸ್ಥಳದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಹಸೇನ ಬಾಷಾ
ಪಿ.ಎಸ್.ಐ (ಕಾ.ಸು) ವಿಶ್ವವಿದ್ಯಾಲಯ ಪೊಲೀಸ ಠಾಣೆ ಹಾಗು ಸಿಬ್ಬಂದಿ ಜನರು ಮತ್ತು ಪಂಚರೊಂದಿಗೆ ಸ್ಥಳಕ್ಕೆ
ಹೋಗಿ ದಾಳಿ ಮಾಡಿ 1) ಬಾಬುರಾವ ತಂದೆ ಶ್ರೀಮಂತ ಅಫಜಲಪೂರ, ಸಾ : ಪಿ &
ಟಿ ಕ್ವಾರ್ಟಸ್ ರಹೆಮತ ನಗರ ಗುಲಬರ್ಗಾ 2) ಮುನೀರ
ತಂದೆ ತಾಹೇರಸಾಬ ಇನಾಮದಾರ, ಸಾ : ಮಿಲತ ನಗರ ಶಹಾಬಾದ, ಹಾಲ ವಸ್ತಿ ಮಹೆಬೂಬ
ನಗರ ಗುಲಬರ್ಗಾ 3) ಶಿವರಾಜ ತಂದೆ
ಭೀಮಶಾ ಪೂಜಾರಿ, ಸಾ : ಶಿವಶಕ್ತಿ
ನಗರ ಸುಲ್ತಾನಪೂರ ರೋಡ ಗುಲಬರ್ಗಾ 4) ವಾಹೇದ
ಅಲಿ ತಂದೆ ಶಹಾಬಾಜ ಮಿಯಾ ಸಾ : ಎಮ.ಎಸ್.ಕೆ ಮಿಲ್ ಮದಿನಾ ಕಾಲೋನಿ ಗುಲಬರ್ಗಾ 5) ಮಲ್ಲಿಕಾರ್ಜುನ ತಂದೆ ದಶರಥ ಅರ್ಜುನಕರ್, ಸಾ : ನಂದಿಕೂರ 6) ಮಹ್ಮದ ಸರ್ದಾರ
ತಂದೆ ಖಾಸಿಂ ಸಾಬ ಸಾ : ಸ್ಟೇಷನ ಬಜಾರ ಐ.ಬಿ ರೋಡ ಗುಲಬರ್ಗಾ ಇವರನ್ನು
ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು
ಹಣ 18430/-
ರೂಪಾಯಿ ಇವುಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ವಿರುಪಾಕ್ಷ ತಂದೆ ಗಂಗಣ್ಣಾ
ಬೀರಾದಾರ ಸಾ|| ಬಸವಂತವಾಗಿ ಇವರು ದಿನಾಂಕ 21/10/2014 ರಂದು 1145 ಗಂಟೆಗೆ ತಾನು ಮತ್ತು ತಮ್ಮ ಇಬ್ಬರೂ ಸೇರಿ ಮೋಟಾರ ಸೈಕಲ ನಂ. ಕೆ.ಎ 37, ಕೆ 1911 ನೇದ್ದರ ಮೇಲೆ ನಿಂಬರ್ಗಾ ಕಡೆಗೆ ಹೊರಟಿದ್ದು ಸದರಿ ಮೋಟಾರ
ಸೈಕಲ ತನ್ನ ತಮ್ಮನಾದ ಅರವಿಂದ ಇತನು ಚಲಾಯಿಸುತ್ತಿದ್ದು ನಿಂಬರ್ಗಾ ತಾಂಡಾದ ಹತ್ತಿರ ಎದುರಿನಿಂದ
ಕಮಾಂಡರ ಜೀಪ ನಂ. ಕೆ.ಎ 11, 4687 ನೇದ್ದರ ಚಾಲಕನು ತನ್ನ ಜೀಪನ್ನು ಅತೀ
ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ನಿಲ್ಲದೆ ಹೊರಟು
ಹೋಗಿದ್ದು ಸದರಿ ಅಪಘಾತಿದಲ್ಲಿ ಫಿರ್ಯಾದಿ ಬಲಗೈ ಹಸ್ತ, ಎದೆಗೆ, ಬಲಗಾಲ ಮೋಳಕಾಳ ಕೆಳಗೆ ಭಾರಿ ರಕ್ತಗಾಯ
ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 21.10.14 ರಂದು ಸಾಯಂಕಾಲ ನಾನ ಮತ್ತು ನನ್ನ ಗೆಳೆಯ
ನಡೆಸುತ್ತಿದ್ದ ಮೋಟಾರು ಸೈಕಲ್ ಮೇಲೆ ಇಬ್ಬರು ಕೂಳಿತುಕೊಂಡು ಜೇವರ್ಗಿಕಡೆಗೆ ಬರುತ್ತಿದ್ದಾಗ
ಚಿಗರಳ್ಳಿ ಕ್ರಾಸ್ ಹತ್ತಿರ ಪೆಟ್ರೋಲ ಪಂಪ್ ಮುಂದೆ ಬರುತ್ತಿದ್ದಾಗ ಟಂಟಂ ನಂ ಕೆ.ಎ33-7349
ನೇದ್ದರ ಚಾಲಕನು ತನ್ನ ಟಂ.ಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಹಿಂದುಗಡೆಯಿಂದ
ನಡೆಸಿಕೊಂಡು ಬಂದು ಒಮ್ಮೆಲೆ ಕಟ್ ಹೊಡೆದು ನಾವು ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಅಪಘಾತ ಪಡಿಸಿ ನನಗೆ ಮತ್ತು ನನ್ನ ಗೆಳೆಯ ಇರ್ಫಾನ್ ಈತನಿಗೆ ಸಾಧಾ
ಮತ್ತು ಭಾರಿ ರಕ್ತ ಗಾಯ ಪಡಿಸಿ ಟಂಟಂ ಅನ್ನು ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment