ಹಲ್ಲೆ ಮಾಡಿ
ಸುಲಿಗೆ ಮಾಡಿದ ಆರೋಪಿತರ ಬಂಧನ :
ಸ್ಟೇಷನ ಬಜಾರ ಠಾಣೆ : ಗುಲಬರ್ಗಾ
ನಗರದ ಐವಾನ-ಏ-ಶಾಹಿ ರಸ್ತೆಯಲ್ಲಿಯಲ್ಲಿರುವ ಇನಾಮದಾರ ಕಾಂಪ್ಲೆಕ್ಸ್ ನಲ್ಲಿ ಹೋರ ರಾಜ್ಯದ ಮೆಡಿಕಲ್
ಮತ್ತು ಇಂಜಿನಿಯರ ವಿದ್ಯಾರ್ಥಿಗಳು ವಾಸವಾಗಿರುವ ರೂಮಿಗೆ ನುಗ್ಗಿ ಮಾರಕಾಸ್ತ್ರದಿಂದ ಹೆದರಿಸಿ ಬೆಲೆಬಾಳುವ
ಮೋಬೈಲಗಳು ಹಾಗು ನಗದು ಹಣ ದೋಚಿಕೊಂಡು ಹೋದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಾನ್ಯ ಎಸ್ ಪಿ ಸಾಹೇಬರು, ಮಾನ್ಯ ಅಪರ ಎಸ್.ಪಿ ಸಾಹೇಬರು ಹಾಗು ಮಾನ್ಯ ಡಿ ಎಸ್ ಪಿ ಸಾಹೇಬರು “ಎ” ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ
ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ರಾಜಶೇಖರ ಹಳಿಗೋಧಿ ಹಾಗು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ
1. ಇರ್ಫಾನ ಅಹ್ಮದ ಖಾನ ತಂದೆ ಶಕೀಲ ಅಹ್ಮದ ಖಾನ ಸಾ:ಸಂಪಿಗೆ
ನಗರ ಗುಲಬರ್ಗಾ 2. ವಾಹೀದ ಅಹ್ಮದ ತಂದೆ ರುಕ್ಮೋದ್ದಿನ ಪಟೇಲ ಸಾ:ಎಮ್.ಎಸ್.ಮಿಲ್
ಗುಲಬರ್ಗಾ 3. ಶಹಾಬಾಜ ಅಹ್ಮದ ತಂದೆ ಅಬ್ದುಲ ಮಜೀದ ಸಾ:ಬಿಲಾಲಾಬಾದ
ಕಾಲೋನಿ ಗುಲಬರ್ಗಾ 4. ಮಹ್ಮುದ ಅಮಾನುಲ್ಲಾ ತಂದೆ ಮಹ್ಮುದ ಕರಿಮುಲ್ಲಾ ಸಾ:ವಿದ್ಯಾ
ನಗರ ಗುಲಬರ್ಗಾ 5. ಸೈಯದ ಆದಿಲ ತಂದೆ ಸೈಯದ ಶೌಕತ ಸಾ:ವಿದ್ಯಾ ನಗರ ಗುಲಬರ್ಗಾ
ಇವರನ್ನು ದಿನಾಂಕ: 24-08-2014 ರಂದು ಬಂಧಿಸಿ ಬಂಧಿತರಿಂದ 8 ಮೋಬೈಲಗಳು, ನಗದು ಹಣ ಮತ್ತು ಅಪರಾಧಕ್ಕೆ ಬಳಸಿದ 4
ಸೈಕಲ್ ಮೋಟಾರಗಳು ಸೇರಿ ಹೀಗೆ ಒಟ್ಟು ಅಂದಾಜು 3 ಲಕ್ಷ
ರೂಪಾಯಿ ಕಿಮ್ಮತ್ತಿನ ಮಾಲನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ
ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ
ಅಂಬೇಡ್ಕರ ಕಟ್ಟೆಯ
ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ
ಸಾರ್ವಜನಿಕರ ಮನವೂಲಿಸಿ ಅವರಿಂದ
ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು
ಕೊಡುತ್ತಿದ್ದಾನೆ ಅಂತಾ ಬಾತ್ಮಿ
ಬಂದ ಮೇರೆಗೆ
ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ
ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಂಬೇಡ್ಕರ ಕಟ್ಟೆಯ
ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು
ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು
ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು
ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ
ಶ್ರೀಶೈಲ ತಂದೆ ಪುಂಡಲಿಕ ಮಾಶಾಳ
ಸಾ|| ಆಲಮೇಲ ಹಾ||ವ||
ಉಸ್ಮಾನಿಯಾ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ
ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 320/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ
ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ
ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ
ಸರಕಾರಿ ಪ್ರೌಡ
ಶಾಲೆ ಹತ್ತಿರ
ರಾಜಧಾನಿ ಧಾಬಾದ
ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ
ಸಾರ್ವಜನಿಕರ ಮನವೂಲಿಸಿ ಅವರಿಂದ
ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು
ಕೊಡುತ್ತಿದ್ದಾನೆ ಅಂತಾ ಬಾತ್ಮಿ
ಬಂದ ಮೇರೆಗೆ
ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ
ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು
ನೋಡಲು ರಾಜಧಾನಿ
ಧಾಬಾದ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು
ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು
ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು
ದಾಳಿ ಮಾಡಿ ಹಿಡಿದು ಸದರಿಯವನ
ಹೆಸರು ವಿಳಾಸ
ವಿಚಾರಿಸಲಾಗಿ ಶ್ರೀಕಾಂತ ತಂದೆ ಮಲ್ಲಿಕಾರ್ಜುನ ಮಲ್ಲಾಬಾದಿ ವಯ; 23 ವರ್ಷ ಉ; ವ್ಯಾಪಾರ
ಸಾ|| ಎ.ಪಿ.ಎಮ್.ಸಿ ಹತ್ತಿರ
ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ
ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ
ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಅಪಘಾತ ಪ್ರಕರಣ ;
ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ಸಾಃ ಮ. ನಂ. 11-970/2 ರಾಮಚಕ್ಕಿ ಹತ್ತಿರ
ಎಮ್.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ
23-08-2014 ರಂದು ರಾತ್ರಿ 8-00 ಪಿ.ಎಮ್ ದಿಂದ ದಿನಾಂಕ 24-08-2014 ರ ಬೆಳಗಿನ ಜಾವ 6-00
ಗಂಟೆಯ ಮಧ್ಯದ ಅವಧಿಯಲ್ಲಿ ಗಾಯಾಳು ಅರುಣಾ ನಡೆದುಕೊಂಡು ಮನೆಗೆ ಬರುತ್ತಿರುವಾಗ ಯಾವುದೋ ಒಂದು ವಾಹನ
ಡಿಕ್ಕಿ ಪಡಿಸಿ ಹೋಗಿರುತ್ತದೆ. ಗಾಯಾಳು ತನ್ನ ಮನೆಯ ಮುಂದೆ ಮಲಗಿಕೊಂಡಿದನ್ನು ದಿನಾಂಕ
24-08-2014 ರಂದು ಬೆಳಗ್ಗೆ ಆಕೆಯ ಮಗನಾದ ಫರೀದ ಈತನು ನೋಡಿ ಅಕ್ಕಪಕ್ಕದದವರ ಸಹಾಯದಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾನೆ. ಅಪಘಾತದಲ್ಲಿ ಗಾಯಾಳು ತಲೆಗೆ ಪೆಟ್ಟಾಗಿ ಅಲ್ಲಲ್ಲಿ
ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣಗಳು :
ಚೌಕ ಠಾಣೆ : ಶ್ರೀ ದೇವಿಂದ್ರ ತಂದೆ ನಾಗಪ್ಪ ಪಾಟೀಲ ಸಾ ;ಆಳಂದ ಕಾಲೋನಿ ಗುಲಬರ್ಗಾ ರವರು ದಿನಾಂಕ; 25/08/2014 ರಂದು ಬೆಳ್ಳಿಗ್ಗೆ 9.30 ಗಂಟೆಯ
ಸುಮಾರಿಗೆ ನನ್ನ ಹೆಂಡತಿ ಮಕ್ಕಳು ದೇವಸ್ತಾನಕ್ಕೆ ಹುಣಸಗಿ ಗ್ರಾಮಕ್ಕೆ ಹೋಗಿದ್ದು ನಾನು ಸಹ 9.30 ಗಂಟೆಯ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು
ಕೆಲಸಕ್ಕೆ ಹೋಗ್ಗಿದ್ದು ಮರಳಿ ನನ್ನ ಹೆಂಡತಿ ಮಕ್ಕಳು ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದು
ನೋಡಿದಾಗ ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದು ಕೆಳಗಡೆ ಬಿದ್ದಿದ್ದು ನೋಡಿ ಗಾಬರಿಗೊಂಡು
ನನಗೆ ಪೋನ ಮಾಡಿದ್ದರಿಂದ ನಾನು ಬಮದು ನೋಡಿದಾಗ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೊಂಡಿ ಮತ್ತು
ಕೀಲಿ ಮುರಿದಿದ್ದು ಮನೆಯೊಳಗೆ ಹೋಗಿ ನಾವು ಪರೀಶೀಲಿಸಿ ನೋಡಿದಾಗ ನಮ್ಮ ಮನೆಯಲ್ಲಿರುವ
ಅಲ್ಮಾರಿಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 3.35.750/- ಬೆಲೆ ಬಾಳುವ ಆಭರಣಗಳನ್ನು ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ
ಸಿದ್ರಾಮಪ್ಪಾ ಪಾಟೀಲ ಸಾಃ ಪ್ಲಾಟ ನಂ 29 ಸ್ವಸ್ತೀಕ ನಗರ ಬೀಲಗುಂಡಿ ಲೇಔಟ ಗುಲಬರ್ಗಾ ಇವರು ಮನೆಯ
ಕಟ್ಟಡ ಕಟ್ಟುತ್ತಿದ್ದು, ಸದರ ಮನೆಯ ನೆಲ ಅಂತಸ್ತಿನಲ್ಲಿ ನಡುಭಾಗದಲ್ಲಿರುವ ಬೇಡ ರೂಮಿನಲ್ಲಿ
ಪಿ.ಓ.ಪಿ ಮಾಡುವ ಗುತ್ತೆದಾರರಾದ 1. ಮಹ್ಮದ ಶಬ್ಬಿರ ಅಹ್ಮದ 2. ಶರಣಬಸಪ್ಪಾ ಔರಾದ ಇವರುಗಳಿಗೆ
ಸೇರಿದ 1.ಒಂದು ಬಾಷಾ ಮಶೀನ 2. ಒಂದು ಹ್ಯಾಮರ ಮಶೀನ 3. ಚೇನಲ್ ಮಶೀನ ಎರಡು ಜೋತೆ 4. ದಾಗರ ಚಂದ ಕಟಿಂಗ ಮಶೀನ 5.
ಕಟಿಂಗ್ ಮಶೀನ್ ಅಃಕಿಃ 6. ಗ್ರಾಂಡರ್ ಹೈಟೆಕ್ ಪವರ್ ಅಲ್ಲದೇ ಮನೆ ಕೆಲಸಕ್ಕಾಗಿ ತಂದು ಇಡಲಾಗಿದ್ದ
ನಳದ ತೊಟ್ಟಿ ಜೋಡಣೆಯ ಬಿಡಿಭಾಗಗಳು ಹಾಗು ವಿದ್ಯುತ್ ಛಕ್ತಿ ಸರಬರಾಜು ಬೋರ್ಡ ಹಾಗು ಇತರೆ
ಸಾಮಾನುಗಳು ದಿನಾಂಕಃ 24/08/2014 ರಂದು ರಾತ್ರಿ 08:00 ಗಂಟೆಗೆ ಬೆಡ್ ರೂಮಿನಲ್ಲಿ ಇಟ್ಟು ಕೀಲಿ
ಹಾಕಿಕೊಂಡು ಹೋಗಿದ್ದು ದಿನಾಂಕಃ 25/08/2014 ರಂದು ಬೆಳಗ್ಗೆ 06:00 ಗಂಟೆಗೆ ಬಂದು ನೋಡಲಾಗಿ
ಬೆಡ್ ರೂಮಿಗೆ ಹಾಕಿದ ಕೀಲಿ ಮುರಿದಿದ್ದು ಒಳಗಡೆ ಇದ್ದ ಮೇಲಿನ ಸಾಮಾನುಗಳು ಇರಲಿಲ್ಲಾ ಯಾರೋ
ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರ4ಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಶ್ರೀರಂಗ ವರದಪಾಂಡೆ ತಂದೆ ಅಶೋಕ ವರದಪಾಂಡೆ ವಿಳಾಸ: ನಂ;13 1-3-183/40/68/1 ಗಾಂಧಿನಗರ ಹೈದ್ರಾಬಾದ. ಸದ್ಯದ
ವಾಸ: ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾ ರವರು 4 ವರ್ಷಗಳಿಂದ ನಾನು ನನ್ನ
ಕುಟುಂಬದವರೊಂದಿಗೆ ಬಸಣ್ಣ ಎಸ್. ಸಿಂಪಿ ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾದಲ್ಲಿ ಮೋದಲ
ಮಹಡಿಯಲ್ಲಿ ವಾಸವಾಗಿರುತ್ತೇವೆ. ಕೆಳಗಡೆ ನೆಲ
ಮಹಡಿಯ್ಲಲಿ ಮಾಲಿಕರು ವಾಸವಾಗಿರುತ್ತಾರೆ. ದಿನಾಂಕ: 21/08/2014 ರಂದು ರಾತ್ರಿ 8:00 ಗಂಟೆಗೆ
ನಮ್ಮ ಮನೆಯ ಮಾಲಿಕರಾದ ಬಸಣ್ಣ ಸಿಂಪಿ ಮತ್ತು ಅವರ ಹೆಂಡತಿಯಾದ ಶ್ರೀಮತಿ ಶೈಲಜಾ ರವರೊಂದಿಗೆ
ಬೆಂಗಳೂರಿಗೆ ಹೋಗಿ ಬರುತ್ತೇವೆ ಮನೆಯಲ್ಲಿ ಯಾರು ಇರಲ್ಲ ಮನೆ ಬೀಗ ಹಾಕಿದ್ದು ನೋಡಿಕೊಳ್ಳುವಂತೆ
ತಿಳಿಸಿ ಹೋಗಿರುತ್ತಾರೆ. ನಂತರ ನಾನು ದಿನಾಂಕ 25/08/2014 ರಂದು ಮುಂಜಾನೆ 7:00 ಗಂಟೆಗೆ ಕೆಳಗಡೆ ಬಂದಾಗ ಮನೆಯ ಮಾಲಿಕರ
ಮನೆಯ ಬಾಗಿಲು ತೆರೆದಿದ್ದು ಕಂಡು ಬಂತು ಹತ್ತಿರ ಹೋಗಿ ನೋಡಲು ಮನೆಯ ಕಬ್ಬಿಣ ಗೇಟಬಾಗಿಲದ ಕೊಂಡಿ
ಮುರಿದಿದ್ದು ಒಳಗಡೆ ಬಾಗಿಲ ಕಿಲಿ ಕೂಡಾ ಮುರಿದಿದ್ದು ಬೇಡ್ ರೂಂ ನಲ್ಲಿನ ಅಲಮಾರಿಯ ಬಾಗಿಲು ತೆರೆದಿದ್ದು ಅದರಲ್ಲಿರುವ ಬಟ್ಟೆಗಳೆಲ್ಲಾ
ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನಂತರ ನಾನು ನನ್ನ ಮನೆಯ ಮಾಲಿಕರಾದ ಬಸಣ್ಣ.ಸಿಂಪಿ ಅವರಿಗೆ ಫೋನ ಮಾಡಿ ನಡೆದ ಘಟನೆ ಬಗ್ಗೆ
ತಿಳಿಸಿದೆನು. ಆಗ ಮಾಲಿಕರು ನನಗೆ ತಿಳಿಸಿದ್ದು ಒಂದು ಕಪ್ಪು ಬಣ್ಣದ ಪರ್ಸಿನಲ್ಲಿ ನನ್ನ ವಿಳಾಸದ
ಕಾಗದ ಪತ್ರಗಳೊಂದಿಗೆ 7 ಸಾವಿರ ರೂ.ಗಳು ನಗದು ಹಣ ಇದ್ದವು ಎಂದು ತಿಳಿಸಿದರು. ಯಾರೊ ಕಳ್ಳರು
ನಮ್ಮ ಮಾಲಿಕರ ಮನೆಯ ಬೀಗ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಅಲಮಾರಿ ಇತ್ಯಾದಿ ಚಲ್ಲಪಿಲ್ಲಿ
ಮಾಡಿದ್ದು ನಗದು ಹಣ 7 ಸಾವಿರ ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
No comments:
Post a Comment