POLICE BHAVAN KALABURAGI

POLICE BHAVAN KALABURAGI

25 August 2014

Gulbarga District Reported Crimes

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೆಮಾನ ತಂದೆ ಅಲ್ಲಾಬಕ್ಷ ಶೇಖ ಸಾ :ಚಾಂದಬಡಾ ಶಹಾಬಾದ ರವರಿಗೆ ನಮ್ಮ ತಂದೆಯವರ ಕಾಲದಿಂದ  ಬೆಂಡಿ ಬಜಾರದಲ್ಲಿ  3 ಅಂಗಡಿಗಳ ಕೋಣೆಗಳಿದ್ದು,  ಒಂದು  ಕೋಣೆಯಲ್ಲಿ  ನಾನು ಸ್ವಂತ ಮೆಣಸಿಕಾಯಿ ಕುಟ್ಟುವ ಮಶೀನ ಹಾಕಿ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಇನ್ನುಳಿದ 2 ದುಕಾನಗಳು ಬಾಡಿಗೆಗೆ ಕೊಟ್ಟಿರುತ್ತೇವೆ.  ಆ ಅಂಗಡಿಗಳ ವಿಷಯದಲ್ಲಿ  ನನಗೂ  ಮತ್ತು ನನ್ನ ತಮ್ಮ ಅಬ್ದುಲ  ಜಬ್ಬಾರನಿಗೂ  ಸುಮಾರು  6 ತಿಂಗಳಿಂದ  ತಕರಾರು ಆಗಿ ಮನೆಯಲ್ಲಿ ನಮ್ಮ ತಂದೆಯವರು  ಅವನಿಗೂ ಕೂಡ ವ್ಯಾಪಾರಕ್ಕಾಗಿ 3 ಲಕ್ಷ ರೂಪಾಯಿ ಕೊಟ್ಟಿದ್ದರು,  ಸದರಿ ನನ್ನ ತಮ್ಮ ನನಗೆ ಮತ್ತು ನಮ್ಮ ತಂದೆಯವರಿಗೆ 3 ಲಕ್ಷ ಹಣ ಮತ್ತು ಎರಡು ಅಂಗಡಿಗಳು ನನಗೆ ಕೊಡು ಅಂತಾ ತಕರಾರು ಮಾಡುತ್ತಿದ್ದನು. ಇಲ್ಲದಿದ್ದರೆ, ಇನ್ನು 3 ಲಕ್ಷ ರೂಪಾಯಿ ಕೊಡು ಅಂತಾ ನನಗೆ ಮತ್ತು ನಮ್ಮ ತಂದೆತಾಯಿಯವರೊಂದಿಗೆ ಹಲವಾರು ಬಾರಿ ಜಗಳಮಾಡಿ  ತೊಂದರೆ ಮಾಡುತ್ತಾ ಬಂದಿದ್ದು ದಿನಾಂಕ: 22/08/2014 ರಂದು ಸಾಯಂಕಾಲ ನಾನು ಮನೆಯ ಮುಂದೆ ನಿಂತುಕೊಂಡಾಗ ನನ್ನ ತಮ್ಮ ಅಬ್ದುಲ ಜಬ್ಬರ ಇತನು ಬಂದು ನನಗೆ ಏ ಬೋಸಡಿ ಮಗನೆ ಇನ್ನೂ 3 ಲಕ್ಷ್ಮ ರೂಪಾಯಿ ಕೊಡುತ್ತಿ ಇಲ್ಲಾ ನಿನ್ನ ಜೀವ ತೆಗೆದು ಎಲ್ಲಾ ಅಂಗಡಿಗಳು ನಾನೇ ತೆಗೆದುಕೊಳ್ಳುತ್ತೇನೆ. ಅಂತಾ ಚಿರಾಡಿ ಹೋಗಿದ್ದು ದಿನಾಂಕ: 24/08/2014 ರಂದು ರಾತ್ರಿ 7-30 ಗಂಟೆಗೆ ನಾನು ಬೆಂಡಿ ಬಜಾರದಿಂದ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಬರುವಾಗ ಮನೆಯ ಹತ್ತಿರದ ರೋಡಿನಲ್ಲಿ   ಲೋಹರಗಲ್ಲಿ  ಕಡೆಯಿಂದ  ನನ್ನ ತಮ್ಮ ಅಬ್ದುಲ ಜಬ್ಬರ ಇತನು ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು  ಏ ರಾಂಡಕೆ ಅಂತಾ ಅವಾಚ್ಯ ಬೈದು  ನನಗೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಚಾಕುವಿನಿಂದ ಹೊಡೆಯಲು ಬಂದಾಗ,  ನಾನು ತಪ್ಪಿಸಿಕೊಳ್ಳು  ಒಮ್ಮೇಲೆ ತಿರುಗಿದೆನು.   ಅದ್ದರಿಂದ ನನ್ನ ಬೆನ್ನಿಗೆ  ಚಾಕು ಹತ್ತಿ   ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾಹಾಗಾಂವ ಠಾಣೆ : ಸಿದ್ರಾಮಪ್ಪಾ ಹುಡಗಿ ಈತನು ಸುಮಾರು 6-7 ವರ್ಷಗಳಿಂದ ವಿಪರಿತ ಕುಡಿತ ಚಟಕ್ಕೆ ಬಲಿಯಾಗಿ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದು   ನಿನ್ನೆ ದಿ: 23/08/14 ರಂದು ಸೆರೆ ಕುಡಿದ ನಶೆಯಲ್ಲಿ ರಕ್ತವಾಂತಿ ಮಾಡಿಕೊಂಡಿದ್ದ ರಿಂದ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಇಂದು ದಿನಾಂಕ:24/08/2014 ರಂದು ಬೆಳಿಗ್ಗೆ 7-30 ಗಂಟೆಯಿಂದ 10-00 ಗಂಟೆ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಸಿದ್ರಾಮಪ್ಪಾ ಹುಡಗಿ ಸಾ: ಹೊಳಕುಂದಾ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ಮಾನಂದಾ ಗಂಡ ಶಿವುಪುತ್ರ ಹೊಸಗೌಡ ಸಾ: ಗುಂಡಗುರ್ತಿ ಇವರ ಗಂಡನಾದ ಶಿವಪುತ್ರ ಈತನು ಟೇಲರ ಕೆಲಸ ಮಾಡಿಕೊಂಡಿದ್ದು ಇಂದು ಬೆಳ್ಳಿಗಿನ ಜಾವ 4-45 ಸುಮಾರಿಗೆ ನನ್ನ ಗಂಡ ಈತನು ರೊಡಿನ ಕಡೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದರು ನಂತರ 5-20 ಎ.ಎಮ್ ಕ್ಕೆ ನಮ್ಮ ಗ್ರಾಮದ ಮಲ್ಲಿಕಾರ್ಜುನ ಈತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ ತಾನು ಹಾಗೂ ನಿಮ್ಮ ಗಂಡ ಶಿವುಪುತ್ರ ಇಬ್ಬರು ಕೂಡಿ ಸಂಡಾಸ ಕುಳಿತು ಮರಳಿ ಮನೆಗೆ ಬರಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ರವರ ಮನೆ ಹತ್ತಿರ ರೊಡಿನ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಸಿಲ್ವರ ಬಣ್ಣದ ವಾಹನ ನಂ ಕೆಎ-32 ಎಮ್-9284 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೊಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿನ್ನ ಗಂಡನ ಟೊಂಕಿಗೆ ಭಾರಿ ರಕ್ತಗಾಯ ತೆಲೆಗೆ ರಕ್ತಗಾಯ ಬಲಗೈಗೆ ಭಾರಿ ರಕ್ತಗಾಯವಾಗಿ ಎರಡು ಮೂಳಕಾಲಗಳು ಕಿತ್ತಿರುತ್ತವೆ. ಸದರಿ ವಾಹನ ಚಾಲಕನು ತನ್ನ ವಾಹನ ನಿಲ್ಲಿಸಿದಂತೆ ಮಾಡಿದಾಗ ನಾನು ನಂಬರ ನೋಡಿದ್ದು ಆಗ ಸದರಿ ವಾಹನ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಿನ್ನ ಗಂಡ ಸ್ಥಳದಲ್ಲಿಯೇ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಹಾಗೂ ನಮ್ಮ ಮೈದುನನಾದ ಜಗನ್ನಾಥ ಹಾಗೂ ಅಣ್ಣಾರಾವ ಕೂಡಿ ಸ್ಥಳಕ್ಕೆ ಬಂದು ನನ್ನ ಗಂಡನಿಗೆ ನೋಡಲಾಗಿ ಭಾರಿ ರಕ್ತಗಾಯ & ತೆಲೆಗೆ ರಕ್ತಗಾಯ , ಬಲಗೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಬಿದ್ದಿದ್ದು ನಂತರ ನನ್ನ ಗಂಡನಿಗೆ ಅಂಬುಲೈನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀಮತಿ ಮಾಹಾದೇವಿ ಗಂಡ  ಬಸವರಾಜ ಜೋತೆಪನೋವರ್ @ ಚಂದಾಪ್ಪನೋವರ್ ಸಾ:ಮುಕರಂಬಾ ಇವರು ದಿನಾಂಕ 24/08/2014 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಇನ್ನು 3-4 ಜನರು ಕೂಡಿ ಪ್ರತಿ ವರ್ಷದಂತೆ ಶ್ರೀ ರೇವಣಸಿದ್ದೇಶ್ವರ ದೇವರ ದರ್ಶನಕ್ಕೆಂದು ಕ್ರೂಸರ್ ವಾಹನ ನಂಬರ ಕೆಎ-28 ಎಮ್-4361 ನೇದ್ದರಲ್ಲಿ ಹೋಗುತ್ತಿರುವಾಗ ಚಾಲಕನು ಅತೀ ವೇಗ ಹಾಗೂ ನಿಲಕ್ಷ್ಯತನದಿಂದ ವಾಹನ ಓಡಿಸಿ ಬೇಡಸೂರ ದಾಟಿ ಭೀಮಾಶಂಕರ ಕುಲಕರ್ಣಿ ಇವರ ಹೊಲದ ಹತ್ತಿರ ಅಪಘಾತ ಪಡಿಸಿದ್ದರಿಂದ ಅದರಲ್ಲಿ ಕುಳಿತ ಬಸವರಾಜ ಜೋತೆಪನೋರ ಭಾರಿ ಗಾಯ ಹೊಂದಿದ್ದು ಹಾಗೂ ಇನ್ನು 3 ಜನರಿಗೆ ರಕ್ತಗಾಯಗಳಾಗಿ 108 ವಾಹನನದಲ್ಲಿ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಿದ್ದು ನನ್ನ ಗಂಡನಿಗೆ ಖಾಸಗಿ ಜೀಪಿನಲ್ಲಿ ಗುಲಬರ್ಗಾಕ್ಕೆ ಉಪಚಾರಕ್ಕೆಂದು ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: