ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಸೇಡಂ ಠಾಣೆ :
ಶ್ರೀ. ಬಸವರಾಜ ತಂದೆ ಗುರುಪಾದಪ್ಪ ಅಲ್ಲೂರ,
ಸಾ:ಕೊಡ್ಲಾ, ತಾ:ಸೇಡಂ. ಇವರ ಮಗಳಾದ ಕುಮಾರಿ, ವಯ:16 ವರ್ಷ, ಇವಳು ಮತ್ತು ನಮ್ಮೂರ ಜ್ಞಾನವ
ವಾಹಿನಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ಅಂತ ಕೆಲಸ ಮಾಡಿಕೊಂಡು ಇದ್ದ ಹಂದರಕಿ ಗ್ರಾಮದ ಶರಣಪ್ಪ ತಂದೆ
ಮಲ್ಲಪ್ಪ ಮೇತ್ರಿ ಇವರು ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುವ ವಿಷಯ ನಮಗೆ ಗೊತ್ತಾಗಿದ್ದರಿಂದ
ನಾವು ಬುದ್ದಿವಾದ ಹೇಳಿದ್ದು ಇತ್ತು. ದಿನಾಂಕ:28-06-2014 ರಂದು ಮುಂಜಾನೆ 09-00 ಗಂಟೆಗೆ ನನ್ನ
ದೊಡ್ಡ ಮಗಳಾದ ಕುಮಾರಿ ಸಂಡಾಸಕ್ಕೆಂದು ಹೋದವಳು ಮತ್ತೆ ಮನೆಗೆ ವಾಪಸ್ ಬರಲಿಲ್ಲ ಅವಳು ಮತ್ತೆ
ಮನೆಗೆ ಬರುತ್ತಾಳೆಂದು ನಾವು ಕಾದೇವು ಆದರೆ ಬರಲಿಲ್ಲ. ಆಮೇಲೆ ನಮಗೆ ಗೊತ್ತಾಗಿದ್ದೇನೆಂದರೆ,
ನಮ್ಮ ಮಗಳಾದ ಪ್ರೀಯಾಂಕ ಇವಳಿಗೆ ಹಂದರಕಿ ಗ್ರಾಮದ ಶರಣಪ್ಪ ತಂದೆ ಮಲ್ಲಪ್ಪ ಮೇತ್ರಿ ಇತನೇ
ಅಪಹರಿಸಿಕೊಂಡು ಹೋದ ಬಗ್ಗೆ ನಮಗೆ ತಿಳಿದು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸೇಡಂ ಠಾಣೆಯಲ್ಲಿ
ಅಪಹರಣ ಪ್ರಕರಣ ದಾಖಲಗಿದ್ದು ದಿನಾಂಕ:02-07-2014 ರಂದು ಸಾಯಂಕಾಲ 06-30 ಗಂಟೆಗೆ
ಅಪಹರಣವಾದ ಹುಡುಗಿ ಕುಮಾರಿ. ಇವಳನ್ನು ಸೇಡಂ ಪೊಲೀಸ್ ಠಾಣೆಯ ಸುಭಾಶ್ಚಂದ್ರ ಎ.ಎಸ್.ಐ ಹಾಗೂ
ಶಿವಕುಮಾರ ಪಿಸಿ-861 ಮತ್ತು ಪ್ರೇಮಲತಾ ಮಹಿಳಾ ಪಿಸಿ-746 ಇವರು ತಂದು ಹಾಜರುಪಡಿಸಿದ್ದು ಅವಳು
ತಿಳಿಸಿದ್ದೆನೆಂದರೆ, ನಾನು ನಮ್ಮ ಗ್ರಾಮದ ಜ್ಞಾನವಾಹಿನಿ ಪ್ರೌಢ ಶಾಲೆಯಲ್ಲಿ ಒಂದನೇ ತರಗತಿಯಿಂದ
10ನೇ ತರಗತಿಯವರೆಗೆ ಓದಿರುತ್ತೇನೆ. ನನ್ನ ಹುಟ್ಟಿದ ದಿನಾಂಕ:17-12-1998 ಇರುತ್ತದೆ. ಇದೇ ವರ್ಷ
ಹತ್ತನೇ ತರಗತಿಯಲ್ಲಿ ಉತ್ತೀರ್ಣಳಾಗಿರುತ್ತೇನೆ. ನಾನು ಶಾಲೆ ಕಲೆಯುವಾಗ ಕಳೆದ ಒಂದು ವರ್ಷದಿಂದ
ಜ್ಞಾನ ವಾಹಿನಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶರಣಪ್ಪ ತಂದೆ ಮಲ್ಲಪ್ಪಾ
ಮೇತ್ರಿ ಸಾ:ಹಂದರಕಿ ಗ್ರಾಮ ಇವರೊಂದಿಗೆ ಪ್ರೀತಿಸಿದ್ದು. ಈ ವಿಷಯ ನಮ್ಮ ತಂದೆ-ತಾಯಿಯವರಿಗೆ
ಗೊತ್ತಾಗಿ, ನನಗೆ ಮನೆಯಲ್ಲಿ ಟಾರ್ಚರ್ ಕೊಡಲು ಪ್ರಾರಂಭಿಸಿದರು. ಆದರೆ
ಶರಣಪ್ಪ ಮೇತ್ರಿ ಇತನು ನನಗೆ ಮೇಲಿಂದ ಮೇಲೆ ಫೋನ ಮಾಡಿ ನನ್ನೊಂದಿಗೆ ಬಾ ನಾವಿಬ್ಬರೂ ಮದುವೆ
ಮಾಡಿಕೊಳ್ಳೊಣ ಅಂತ ಅಂದಿದ್ದು ಅದಕ್ಕೆ ನಾನು ನನಗೆ ಈಗ ‘16’ ವರ್ಷ ಇದ್ದು ಇನ್ನೂ ಎರಡು ವರ್ಷ ಕಾಯೋಣ ಆ ಮೇಲೆ ಮದುವೆ
ಮಾಡಿಕೊಳ್ಳೊಣ ಅಂತ ಹೇಳುತ್ತಾ ಬಂದಿದ್ದು ದಿನಾಂಕ:28-06-2014 ರಂದು ಬೆಳಗ್ಗೆ 09-00 ಗಂಟೆಯ
ಸುಮಾರಿಗೆ ನಾನು ಮನೆಯಿಂದ ಸಂಡಾಸಕ್ಕೆ ಹೋಗುವಾಗ ನಾನು ಪ್ರೀತಿಸುತ್ತಿದ್ದ ಶರಣಪ್ಪ ಮೇತ್ರಿ ಇತನು
ನಮ್ಮ ಮನೆಯ ಹತ್ತಿರವೇ ಬಂದು ನನಗೆ ಜಬರದಸ್ತಿಯಿಂದ ಬೇಗ ಬಾ ಅಂತ ಕೈ ಹಿಡಿದು ಎಳೆದುಕೊಂಡು ಯಾದಗೀರಿಗೆ
ಕರೆದುಕೊಂಡು ಹೋಗಿ, ಅಲ್ಲಿಂದ ರಾತ್ರಿ 11-00 ಗಂಟೆಯ ಸುಮಾರಿಗೆ ಯಾದಗೀರ ಬಿಟ್ಟು,
ದಿ:29-06-2014 ರಂದು ಬೆಳಗಿನಜಾವ 05-00 ಗಂಟೆಯ ಸುಮಾರಿಗೆ ಸಿಕಿಂದ್ರಾಬಾದಗೆ ಹೋಗಿ ಆತನ
ಸಂಬಂಧಿಕರಾದ ಸಾಬಣ್ಣ ತಂದೆ ಅಯ್ಯಪ್ಪ ಹಳಿಮನಿ ಇವರ ಮನೆಯಲ್ಲಿ ಉಳಿದೇವು. ಮರುದಿವಸ
ದಿನಾಂಕ:29-06-2014 ರಂದು ಕೂಡಾ ಅಲ್ಲಿಯೇ ಉಳಿದೇವು ಮರುದಿವಸ ದಿನಾಂಕ:30-06-2014 ರಂದು
ರಾತ್ರಿ 11-00 ಗಂಟೆಯ ಸುಮಾರಿಗೆ ಸಿಕಿಂದ್ರಾಬಾದ ಬಿಟ್ಟು ದಿನಾಂಕ:01-07-2014 ರಂದು ಸಾಯಂಕಾಲ
07-00 ಗಂಟೆಯ ಸುಮಾರಿಗೆ ಮುಧೋಳ ಗ್ರಾಮಕ್ಕೆ ಬಂದು, ಶರಣಪ್ಪ ಮೇತ್ರೆ ಇತನ ಸಂಬಂಧಿಕರಾದ ನಾಗಪ್ಪ
ತಂದೆ ಹಣಮಂತ ಇವರ ಮನೆಗೆ ಬಂದು ಉಳಿದೇವು. ನಿನ್ನೆ ದಿನಾಂಕ:01-07-2014 ರಂದು ರಾತ್ರಿ ಅವರ
ಮನೆಯಲ್ಲಿ ಮಲಗಿಕೊಂಡಾಗ ಶರಣಪ್ಪ ಇತನು ನನ್ನೊಂದಿಗೆ ಜಬರದಸ್ತಿಯಿಂದ ದೈಹಿಕ ಸಂಪರ್ಕ ಮಾಡಲು
ಯತ್ನಿಸುತ್ತಿದ್ದನು. ಆಗ ನಾನು ಮದುವೆಯಾಗುವವರೆಗೆ ಬೇಡ ಅಂತ ಹೇಳಿದರೂ ಅವನು ಕೇಳದೇ ನಾನು ನಿನಗೆ
ಮದುವೆ ಮಾಡಿಕೊಳ್ಳುವವನು ಇದ್ದೇನೆ ಅಂತ ನನಗೆ ಫುಸಲಾಯಿಸಿ ಎರಡು ಸಲ ಸಂಭೋಗ ಮಾಡಿರುತ್ತಾನೆ ಅಂತಾ ತಿಳಿಸಿದ್ದರ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಸಿದ್ರಾಮ ತಂದೆ ತುಕಾರಾಮ ಗೌಳಿ ಸಾ: ಗಣೇಶ ನಗರ ಹಳೆ ಜೆವರ್ಗಿ
ರೊಡ ಗುಲಬರ್ಗಾ ರವರು ದಿನಾಂಕ 02-07-2014 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ಸುಪರ
ಮಾರ್ಕೆಟದಿಂದ ನಮ್ಮ ಮನೆಯ ಮೋಟಾರ ಸೈಕಲ ನಂಬರ ಕೆಎ-32 ಎಲ್-4860 ರ ಮೇಲೆ ಹಳೆ ಜೇವರ್ಗಿ ರೋಡ ಮೇಲೆ ಹೋಗುವಾಗ
ಹೌಸಿಂಗ ಭೋರ್ಡ ಕಾಲೋನಿ ಕ್ರಾಸ ಹತ್ತಿರ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ವಾಯಿ-9112 ರ
ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ
ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಹಚ್ಚಿ
ಬೈಕ ಸುಟ್ಟ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ನಾಗರಾಜ ತಂದೆ ಚನ್ನಬಸಪ್ಪ
ಕಲಶಟ್ಟಿ ವ:36 ವರ್ಷ ಸಾ:ಸುಭಾಸ ಚೌಕ ಬ್ರಹ್ಮಪೂರ ಗುಲಬರ್ಗಾ ಇವರು ಗುಲಬರ್ಗಾ ನಗರದ ಉದಯನಗರದ
ಅಮರ ತಂದೆ ಮನೋಹರ ಪ್ಯಾಟಿ ಇವರು ಕಳೆದ ಎರಡು ವರ್ಷಗಳ ಹಿಂದೆ ನನ್ನ ಹತ್ತಿರ ಕೈಗಡ ಅಂತಾ 2 ಲಕ್ಷ
ರೂಪಾಯಿ ಪಡೆದುಕೊಂಡು ಆರು ತಿಂಗಳ ವಾಯಿದೆ ಪಡೆದುಕೊಂಡಿದ್ದು 6 ತಿಂಗಳವಾದರೂ ಹಣ ಕೊಡದಕ್ಕೆ ಕಳೆದ
ವರ್ಷ ದಿನಾಂಕ: 21/08/2013 ರಂದು ನಾನು ಹಣ ಕೇಳಲು ಹೋದರೆ ಅಮರ ಮತ್ತು ಅವನ ತಂದೆ
ಕೂಡಿಕೊಂಡು ನನಗೆ ಚಾಕುವಿನಿಂದ ಹೊಡೆದಿದ್ದು ಅದರ
ಬಗ್ಗೆ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ. ಸದ್ಯ ನ್ಯಾಯಾಲಯದ
ವಿಚಾರಣೆಯಲ್ಲಿರುತ್ತದೆ. ಅಮರ ಇತನು ನನ್ನ ಮೇಲೆ ಮಾಡಿದ ಕೇಸು ವಾಪಸ ಪಡೆದುಕೋ ಅಂತಾ ನನಗೆ ಜೀವದ
ಬೆದರಿಕೆ ಹಾಕಿರುತ್ತಾನೆ. ದಿನಾಂಕ :03/07/2014 ರಂದು ರಾತ್ರಿ 1.40 ಗಂಟೆ ಸುಮಾರಿಗೆ ನಾನು
ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನಮ್ಮ ಮುಂದಿನ ಮನೆಯವ ನಾದ ದೌಲತ ಇವನು ನನಗೆ ಕೂಗಿ ಎಬ್ಬಿಸಿ
ನಿಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನಿಮ್ಮ ಮೋಟಾರ ಸೈಕಲಗೆ ಬೆಂಕಿ ಹತ್ತಿ ಉರಿಯುತ್ತಿದೆ ಅಂತಾ
ಹೇಳಿದ್ದಕ್ಕೆ ನಾನು ಗಾಬರಿಯಾಗಿ ಮನೆಯಿಂದ ಹೊರಗೆ ಹೋಗಿ ನೋಡಲು ನಾನು ನನ್ನ ಮನೆಯ ಮುಂದೆ
ನಿಲ್ಲಿಸಿದ ನನ್ನ ಟಿ.ವಿ.ಎಸ್ ವಿಕ್ಟರ ಮೋಟರ ಸೈಕಲ ನಂ ಕೆಎ-32 ಕ್ಯೂ-4443 ಕಪ್ಪುಬಣ್ಣದ್ದು ಅ.ಕಿ.12000/-ರೂ
ಬೆಂಕಿಹತ್ತಿ ಉರಿಯುತ್ತಿರುವಾಗ ನಾನು ಮನೆಯಿಂದ ನೀರು ತಂದು ಹಾಕಿ ಆರಿಸಿರುತ್ತೇನೆ. ನಂತರ
ಸ್ವಲ್ಪ ಸಮಯದಲ್ಲಿ ಅಮರ ತಂದೆ ಮನೋಹರ ಪ್ಯಾಟಿ ಇವನು ಸ್ವಲ್ಪ ದೂರಿನಿಂದ ನೋಡುತ್ತಿದ್ದನು ಆಗ
ಅವನಿಗೆ ನಾನು ನೋಡಿ ಎ ಅಮರ ನನ್ನ ಮೋಟಾರ ಸೈಕಲಗೆ ನೀನೆ
ಬೆಂಕಿ ಹಚ್ಚಿದಿ ಅಂತಾ ಕೇಳಲು ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment