POLICE BHAVAN KALABURAGI

POLICE BHAVAN KALABURAGI

03 July 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ರೇಷ್ಮಾ ಗಂಡ ಶಿಲವಂತ ಕಲಕುಟಗಿ ಸಾ: ಭೂಸನೂರ  ಇವರು ದಿನಾಂಕ 02-07-2014 ರಂದು ರಾತ್ರಿ 8 ಗಂಟೆ ಸುಮಾರಿಗೆ ಕೂಲಿ ಕೆಲಸ ಮಾಡಿಕೊಂಡು ತಾನು ಮತ್ತು ತನ್ನ ಗಂಡ ಭೂಸನೂರ ಗ್ರಾಮಕ್ಕೆ ಹೋಗುತ್ತಿರುವಾಗ ಭೂಸನೂರ ಕ್ರಾಸ್ ಪ್ಯಾಕ್ಟರಿ ಹತ್ತಿರ ತನ್ನ ಗಂಡ ಕುಡಿಯಲು ಹಣ ಕೊಡು ಅಂತಾ ಕೇಳಿದಕ್ಕೆ ಹಣ ಕುಡುವುದಿಲ್ಲಾ ಅಂತಾ ಅಂದ ಪ್ರಯುಕ್ತ ಅಲ್ಲೇ ಇದ್ದ ಕಲ್ಲಿನಿಂದ ಏ ರಂಡಿ ಕುಡಿಯಲು ಯಾಕೆ ಹಣ ಕೊಡುವುದಿಲ್ಲಾ ಅಂತಾ ಅಂದು ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಪಡೆಸಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪಾಂಡು ತಂದೆ ಗುರುಸಿದ್ದಪ್ಪ ನಿಂಬರಗಿ ಸಾ||ಗೌರ (ಬಿ) ಇವರು  ಹೊಲ ಸರ್ವೇ ನಂ 58 ನೇದ್ದರಲ್ಲಿ ಆರೋಪಿತರು ನಿರಾವರಿ ವಿಧ್ಯೂತ್ ವಾಯರ ಕಿತ್ತಿ ಹಾಕಿದ್ದು ಹಾಗೂ ದಿನಾಂಕ 27-06-2014 ರಂದು 12 ಪಿಎಮ್ ಸುಮಾರಿಗೆ ಫಿರ್ಯಾದಿ ವಾಯರ ಜೋಡಿಸುತೊದ್ದಾಗ ಆರೋಪಿನಾದ ಸಾಯಬಣ್ಣ ಕೊಡಲಿಯಿಂದ ಫಿರ್ಯಾದಿಗೆ ಜೀವ ಭಯ ಹಾಕಿದ್ದು ಇರುತ್ತದೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಕೃಷ್ಣಾ ತಂದೆ ರಾಜಪ್ಪ ಸಾ; ಬೋರಿಂಗ ಹೂಡಾ ಇವರು ದಿನಾಂಕ: 01-07-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ, ನಮ್ಮ ಪಕ್ಕದ ಮನೆಯವರಾದ 1] ಅಂಬಣ್ಣಾ ತಂದೆ ದ್ಯಾವಪ್ಪ ಚಿತ್ತಾಪೂರ ಹಾಗು ಅವರ ಅಣ್ಣ-ತಮ್ಮಂದರು ಕೂಡಿ ಹಳೆಯ ಜಗಳದ ವೈಮನಸ್ಸಿನಿಂದ ನಮಗೆ ಬೈಯುತ್ತಿದ್ದಾಗ, ನಾನು ಹಾಗು ನಮ್ಮ ಅಣ್ಣತಮ್ಮಂದರು ಬಂದು ಅವರ ಮನೆಯ ಮುಂದೆ ಬಂದು ಯಾಕೆ ಬೈಯುತ್ತಿದ್ದಿರಿ, ಈ ಹಿಂದೆ ಆದ ಜಗಳದ ವಿಷಯ ಬಿಟ್ಟು ಮುಂದೆ ಸರಿಯಾಗಿ ಇರೋಣ ಅಂತಾ ಹೇಳಿದಕ್ಕೆ ಅವರು ನಮಗೆ ಬೊಸಡಿ ಮಕ್ಕಳೆ ನಿಮಗೆ ಬಿಡುವದಿಲ್ಲಾ ಅಂತಾ 1] ಅಂಬಣ್ಣಾ ತಂದೆ ದ್ಯಾವಪ್ಪ ಚಿತ್ತಾಪೂರ ಹಾಗು ಅವರ ತಮ್ಮಂದಿರಾದ 2] ಜಗಪ್ಪ ತಂದೆ ದ್ಯಾವಪ್ಪ ಚಿತ್ತಾಪುರ 3] ತೂಳಜಪ್ಪ ತಂದೆ ದ್ಯಾವಪ್ಪ ಚಿತ್ತಾಪೂರ 4] ಯಂಕಮ್ಮ ಗಂಡ ಮಾರುತಿ ಬೊಳೋಡಗಿ 5] ಬುಗ್ಗಪ್ಪ ತಂದೆ ಬಾಲಪ್ಪ ಮೇದಕ, 6] ಕಿಷ್ಟಪ್ಪ ತಂದೆ ಬಾಲಪ್ಪ  ಮೇದಕ ಇವರು ಕೂಡಿ ಕಯಲ್ಲಿ ಬಡಿಗೆ ಕೊಡಲಿ, ಕಲ್ಲು ಹಿಡಿದುಕೊಂಡು ಬಂದು ನನಗೆ ಹಾಗು ನಮ್ಮ ತಂಮಂದಿರಾದ 1] ಭೀಮಪ್ಪ @ ಜೈಭೀಮ 2] ಅಂಜಯ್ಯಾ 3] ಅಂಜಯ್ಯಾನ ಹೆಂಡತಿ ಸುನೀತಾ ನಮ್ಮ ತಾಯಿ 4] ಯಂಕಮ್ಮ ಮತ್ತು ಬಿಡಿಸಲು ಬಂದ 5] ಶಿವು ತಂದೆ ಬಸ್ಸಣ್ಣಾ ಶಾಬಾದಿ 6] ನಾಗಮ್ಮ ಗಂಡ ಬಸ್ಸಣ್ಣಾ ಶಾಬಾದ ಇವರುಗಳಿಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಕೊಡಲಿಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ತಲೆಗೆ ಕೈಕಾಲುಗಳಿಗೆ ಹಾಗು ಇತರೆ ಕಡೆಗೆ ಹೊಡೆದು ಭಾರಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಜಗಪ್ಪ ತಂದೆ ದ್ಯಾವಪ್ಪ ಸಾ: ಬೋರಿಂಗ ಹುಡಾ ಇವರು  ದಿನಾಂಕ: 01.07.14 ರಂದು 10:30 ಪಿ ಎಮ್ ಸುಮಾರಿಗೆ ನಾನು ಹಾಗೂ ನಮ್ಮ ಅಣ್ಣನಾದ ಅಂಬಣ್ಣ ತಂದೆ ದೇವಪ್ಪ ಹಾಗೂ ತಮ್ಮನಾದ ತುಳಜಪ್ಪ ತಂದೆ ದೇವಪ್ಪ ನಾವು ಮನೆಯವರೆಲ್ಲರೂ ಊಟ ಮಾಡಿ ನಮ್ಮ ಮನೆಯ ಮುಂದೆ ಅಂಗಳದಲ್ಲಿ ಮಾತನಾಡುತ್ತಾ ಕುಳಿತ್ತಿದ್ದಾಗ ನಮ್ಮ ಪಕ್ಕದ ಮನೆಯವರಾದ 1) ಅಂಜಪ್ಪ ತಂದೆ ರಾಜಪ್ಪ ವಾಡಿ ಹಾಗೂ 2) ಭೀಮಪ್ಪ @ ಜೈಭೀಮ ತಂದೆ ರಾಜಪ್ಪ ವಾಡಿ 3) ಕೃಷ್ಣಪ್ಪ ತಂದೆ ರಾಜಪ್ಪ ವಾಡಿ ತಾಯಿಯಾದ 4) ಯಂಕಮ್ಮ ಗಂಡ ರಾಜಪ್ಪ ವಾಡಿ ಅವರ ಮಾವನಾದ 5) ಶೇಕು @ ಶೇಖಪ್ಪ ತಂದೆ ಬಸಪ್ಪ ಇವರು ಐದು ಜನರು ಕೂಡಿ ನಮ್ಮ ಮನೆಯ ಮುಂದೆ ಅಂಗಳದಲ್ಲಿ ಬಂದು ಕುಳಿತ್ತಿದ್ದು ನಮಗೆ ಸದರಿ ಅಂಜಪ್ಪ ಹಾಗೂ ಅವರ ಅಣ್ಣತಮ್ಮಂದಿರು ನಮಗೆ ಬೋಸಡಿ ಮಕ್ಕಳೆ  ನಮ್ಮ ಬಗ್ಗೆ ಏನು ಮಾತನಾಡುತ್ತಿದ್ದಿರಿ ಮೊನ್ನೆ ಹೀಗೆ 8 ದಿನಗಳ ಹಿಂದೆ ತುಳಜಪ್ಪ ಈತನು ನಮಗೆ ಹೊಡೆದಿದ್ದಾನೆ ಇವತ್ತು ನೀಮಗೆ ಬಿಡುವುದಿಲ್ಲ ನಿಮ್ಮ ಎಲ್ಲರಿಗೆ ಕಲ್ಲಿನಿಂದ ಹಾಗೂ ಬಡಿಗೆಯಿಂದೆ ಹೊಡೆದು ಖಲಾಸು ಮಾಡುತ್ತೇವೆ ಅಂತಾ ಹಳೆಯ ಜಗಳದ ವೈಮನಸ್ಸಿನಿಂದ ನಮಗೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ 2) ಭೀಮಪ್ಪ @ ಜೈಭೀಮ ತಂದೆ ರಾಜಪ್ಪ ವಾಡಿ ಈತನು ತನ್ನ ಕೈಯಲ್ಲಿದ್ದ ಕೊಡಲಿ ಕಾವಿನಿಂದ ನಮ್ಮ ತಮ್ಮನಾದ ತುಳಜಪ್ಪ ತಂದೆ ದೇವಪ್ಪ ಈತನಿಗೆ ತಲೆಗೆ ಹಿಂದುಗಡೆ ಹೊಡೆದು ಭಾರಿ ಗುಪ್ತಗಾಯ ಪಡಿಸಿದ್ದು ಅದೆ. ಬಲಕಿವಿಯ ಹತ್ತಿರ ತಲೆಗೆ ಮತ್ತು ಬಲಕಿವಿಗೆ ಕೊಡಲಿಯಿಂದ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮೋಹಿಯೊದ್ದಿನ ತಂದೆ ರಿಯಾಜ ಅಹ್ಮದ ಪಟೇಲ ಸಾ : ಅಫಜಲಪೂರ ಇವರ  ಬನ್ನಟ್ಟಿ ಕ್ರಾಸ ಹತ್ತಿರ ನಮ್ಮ ಪಿತ್ರಾರ್ಜಿತ ಆಸ್ತಿ ಇದ್ದು ಅದರ ಸರ್ವೆ ನಂ 6 ಇರುತ್ತದೆ. ಇದರಲ್ಲಿ ನಮ್ಮ ತಂದೆ ಹೆಸರಿಗೆ 8 ಎಕರೆ 10 ಗುಂಟೆ ಮತ್ತು ನಮ್ಮ ಮಾವ ಅಬ್ದುಲ್ ಖದೀರ ತಂದೆ ಖಾಸಿಮಸಾಬ ರಟಕಲ್ ರವರ ಹೆಸರಿಗೆ 7 ಎಕರೆ 32 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಅರನಿ ಹಾಕುವ ವಿಷಯಕ್ಕೆ ಸಂಬಂಧ ನಮ್ಮ ಮತ್ತು ನಮ್ಮ ಮಾವ ಅಬ್ದುಲ್ ಖದೀರ ರವರ ಮದ್ಯ ಸುಮಾರು ಸಲ ತಕರಾರು ಆಗಿದ್ದು ಇರುತ್ತದೆ. ದಿನಾಂಕ 02-07-2014 ರಂದು ಮದ್ಯಾಹ್ನ 1;30 ಗಂಟೆಗೆ ನಾನು ಮತ್ತು ನಮ್ಮ ತಂದೆ ಹಾಗು ಅಫಜಲಪೂರ ಪಟ್ಟಣದ ಇಲಾಹಿ ತಂದೆ ಬಾಶಾಸಾಬ ಸಿಲೇದಾರ ಮತ್ತು ಮಹಿಮೂದ ತಂದೆ ಹುಸೇನಬಾಶಾ ಅಫರಾದ ರವರೆಲ್ಲರೂ ಕೂಡಿಕೊಂಡು ನಮ್ಮ ಹೋಲಕ್ಕೆ ಹೋಗಿ ನೋಡಲಾಗಿ, ನಮ್ಮ ಮಾವ ಅಬ್ದುಲ್ ಖದೀರ ತಂದೆ ಖಾಸಿಮಸಾಬ ರಟಕಲ್ ಹಾಗು ಅವರ ಸಂಬಂಧಿಕರಾದ ಅಲೀಮ ತಂದೆ ಇಬ್ರಾಹಿಮ ಚಪ್ಪು ಅಂದಾಜ ಅನವರ ತಂದೆ ತಾಜೋದ್ದಿನ ಪಟೇಲ , ಮಹಿಬೂಬ, ಲಾಲಅಹ್ಮದ, ಯಾಸಿರ, ಮಡಿವಾಳಪ್ಪ, ಮತ್ತು ಶಿವಶಂಕ್ರೆಪ್ಪ ಪಾಟೀಲ; ಸಾ|| ಎಲ್ಲರು ಗುಲಬರ್ಗಾ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅರನಿ ಹಾಕುತ್ತಿದ್ದರು. ಆಗ ನಾನು ಮತ್ತು ನಮ್ಮ ತಂದೆ ಕೂಡಿ ಅವರ ಹತ್ತಿರ ಹೋಗಿ ಹೊಲ ಸರ್ವೆ ಆಗುವವರೆಗೆ ಅರನಿ ಹಾಕಬ್ಯಾಡ ಅಂತಾ ಹೇಳಿದರು ಯಾಕ ಅರನಿ ಹಾಕತಾ ಇದ್ದಿರಿ ಅಂತಾ ಕೇಳಿದೆವು. ಆಗ ಎಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ,ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ನನ್ನ ಎಡಗಡೆ ಗಲ್ಲದ ಮೇಲೆ ಹೊಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾತರ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸೂರ್ಯಪ್ರಕಾಶ ತಂದೆ ನಾರಾಯಣಪ್ಪ ಸಾಃ ಬಡೇಪೂರ್ ಕಾಲೋನಿ, ಗುಲಬರ್ಗಾ ಇವರು ಕೆ.ಹೆಚ್.ಬಿ ಕಾಂಪ್ಲೆಕ್ಸನ ಪಾಸಪೋರ್ಟ ಆಫಿಸದಲ್ಲಿ ಕೆಲಸಕ್ಕಾಗಿ ವಿದ್ಯುತ್ ಜನರೇಟರ್ ಬ್ಯಾಟರಿ ಉಪಯೋಗಿಸುತ್ತಿದ್ದು, ಸದರ್ ಬ್ಯಾಟರಿಯನ್ನು ಕೆಹೆಚ್.ಬಿ ಕಾಂಪ್ಲೆಕ್ಸ್ನ ಹಿಂದುಗಡೆ ಅಲವಡಿಸಿದ್ದು, ದಿನಾಂಕಃ- 27-06-2014 ರಂದು 6.00 ಪಿಎಂ ದ ಸುಮಾರಿಗೆ ಕೆಲಸ ಮುಗಿಸಿಕೊಂಡು ಹೋಗಿದ್ದು, ರಜೆ ಇದ್ದ ಕಾರಣ ದಿನಾಂಕಃ- 30-06-2014 ರಂದು ಬೆಳಿಗ್ಗೆ 9.00 ಗಂಟೆಗೆ ಆಫೀಸಿಗೆ ಬಂದು ನೋಡಲಾಗಿ ಜನರೇಟರ್ ಬ್ಯಾಟರಿ ಹಾಗೂ ಅದಕ್ಕೆ ಸಂಬಂಧಿಸಿದ ಕೇಬಲ್ ವೈರ್ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಕಿಮ್ಮತ್ತು 10,000/- ರೂ ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಣೆ ಕಿರುಕಳ ಪ್ರಕರಣಗಳು :
ಕಾಳಗಿ ಠಾಣೆ : ಶ್ರೀಮತಿ ಬಸಮ್ಮ ಗಂಡ ನಾಗಪ್ಪ ಸಾ:ಸುಲೇಪೇಟ ತಾ:ಚಿಂಚೋಳಿ ಇವರ ಮಗಳಾದ ಲಕ್ಷ್ಮಿ ಇವಳನ್ನು ಶ್ರೀ ಅನೀಲ ತಂದೆ ಹಣಮಂತ ಯಡ್ರಾಮಿ ಸಾ: ಸಾಲಹಳ್ಳಿ ಗ್ರಾಮ ತಾ:ಚಿತ್ತಾಪೂರ ಇವನಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು, ಮದುವೆ ಸಮಯದಲ್ಲಿ 1 ½  ತೊಲೆ ಬಂಗಾರ ಹಾಗೂ 15 ಸಾವಿರ ನಗದು ಹಣ ಹಾಗೂ ವರೊಪಚಾರ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು, ಮದುವೆಯಾದ ಒಂದು ವರ್ಷದವರೆಗೆ ಆನೂನ್ಯವಾಗಿದ್ದರು ನಂತರ ಆಕಳು, ಬಂಗಾರ, ರೂಪಾಯಿ ತರಲು ಮಾನಸಿಕ ಹಾಗೂ ದೈಹಿಕ ಕಿರಕುಳ ಕೊಟ್ಟು ನನ್ನ ಮಗಳನ್ನು  3 ಸಲಾ ತವರು ಮನೆಗೆ ಕಳಿಸಿರುತ್ತಾರೆ, ಆದರಂತೆ ದಿನಾಂಕ 01-07-2014 ರಂದು ನನ್ನ ಮಗಳಿಗೆ ಅತ್ತೆ 1] ಚಂದ್ರಮ್ಮ ಗಂಡ ಹಣಮಂತ, ಭಾವ 2] ಸಂತಪ್ಪ ತಂದೆ ಹಣಮಂತ 3] ಹಣಮಂತ ಯಡ್ರಾಮಿ, 4] ಸುನೀತಾ ಗಂಡ ಸಂತಪ್ಪ, ಮತ್ತು ಗಂಡನಾದ 5] ಅನೀಲ ತಂದೆ ಹಣಮಂತ ಯಡ್ರಾಮಿ ಇವರೆಲ್ಲಾರು ಸೇರಿ ನನ್ನ ಮಗಳಿಗೆ ಮಾನಸಿಕ, ದೈಹಿಕ ಕಿರುಕಳ ನೀಡಿ ಹಣ, ಬಂಗಾರ, ಅಕಳು ಕರು ತೆಗೆದುಕೊಂಡು ಬಾ ಅಂತ ಕೊಟ್ಟ ಕಿರುಕಳ ತಾಳದೇ ಸಾಯಾಂಕಲ 6-00 ಗಂಟೆಯ ಸುಮಾರಿಗೆ ತನ್ನ ಗಂಡನ ಮನೆಯಾದ ಸಾಲಹಳ್ಳಿ ಗ್ರಾಮದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಮೈಸುಟ್ಟಗಾಯಾದಿಂದ  ಗುಲಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 02-07-2014 ರಂದು 00-15 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.:
ಅಫಜಲಪೂರ ಠಾಣೆ : ಶ್ರೀಮತಿ ಮೋಹಿನಿ ಗಂಡ ಪ್ರವೀಣ ರಾಠೋಡ ಸಾ|| ಕರಜಗಿ ತಾಂಡಾ ಇವರ ತಂದೆ ತಾಯಿ 3 ವರ್ಷದ ಹಿಂದೆ ನನಗೆ ಚಿತ್ತಾಪೂರ ತಾಲೂಕಿನ ಮುಗಳನಾಗಾಂವ ಗ್ರಾಮದ ಪ್ರವೀಣ ತಂದೆ ಶಂಕರ ರಾಠೋಡ ಈತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನ್ನ ಗಂಡನ ಅಣ್ಣ ತಮ್ಮರು ಮೂರು ಜನರಿದ್ದು, 1) ಪ್ರಕಾಶ 2) ಪ್ರದೀಪ  ಮೂರನೇದವನು ನನ್ನ ಗಂಡ ಇರುತ್ತಾನೆ, ನಮ್ಮ ಮಾವ ಶಂಕರ ಇವರು ಕೆ.ಇ.ಬಿ ಇಲಾಖೆಯಲ್ಲಿ ಲೈನ ಮೇನ್ ಅಂತಾ ಕೆಲಸ ಮಾಡುತ್ತಿದ್ದರಿಮದ ಈಗ ಎಲ್ಲರೂ ಮಾದನಹಿಪ್ಪರಗಾದಲ್ಲಿಯೆ ವಾಸವಾಗಿ ಇದ್ದಿರುತ್ತಾರೆ, ನಮಗೆ ಈಗ 2 ಜನ ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡನಿಗೆ ಕುಡಿಯುವ ಚಟವಿದ್ದು, ದಿನಾಲು ಕುಡಿದು ಬಂದು ನನಗೆ ಹೊಡೆಯುತ್ತಿದ್ದರಿಂದ ಈಗ 2 ತಿಂಗಳಿಂದ ನಾನು ನನ್ನ ಮಕ್ಕಳೊಂದಿಗೆ  ನನ್ನ ತವರು ಮನೆಯಾದ ಕರಜಗಿ ತಾಂಡಾದಲ್ಲಿ ಬಂದು ನನ್ನ ತವರು ಮನೆಯಲ್ಲಿ ಇದ್ದಿರುತ್ತೆನೆ. ಹಿಗಿದ್ದು ದಿನಾಂಕ 30-06-2014 ರಂದು ರಾತ್ರಿ 11:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ತಾಯಿ ಮಾಹಾದೇವಿ, ನನ್ನ ತಮ್ಮಂದಿರಾದ  ಮೋಹನ, ಸಂಜು ಎಲ್ಲರೂ ಕರಜಗಿ ತಾಂಡಾದ ನನ್ನ ತವರು ಮನೆಯಲ್ಲಿದ್ದಾಗ, ನನ್ನ ಗಂಡನಾದ ಪ್ರವೀಣ ತಂದೆ ಶಂಕರ ರಾಠೋಡ, ನನ್ನ ಮಾವ ಶಂಕರ ತಂದೆ ನೇಜು ರಾಠೋಡ,  ಅತ್ತೆ ಜೈನಾಬಾಯಿ ಗಂಡ ಶಂಕರ ರಾಠೋಡ  ಸಾ|| ಎಲ್ಲರೂ ಮುಗಳನಾಗಾಂವ ತಾ|| ಚಿತ್ತಾಪೂರ ಹಾ|| || ಮಾದನಹಿಪ್ಪರಗಾ ಮೂರು ಜನರು ನಮ್ಮ ಮನೆಗೆ ಬಂದು ನನಗೆ ನನ್ನ ಗಂಡ ಏ ರಂಡಿ ನನ್ನ ಮಕ್ಕಳು ನನಗೆ ಕೋಡು ಎಂದು ಬೈಯುತ್ತಿದ್ದನು, ನನ್ನ ಮಾವ ಮತ್ತು ಅತ್ತೆ ಇಬ್ಬರು ಈ ಬೋಸಡಿಗೆ ಏನು ಕೇಳ್ತಿ ನಮ್ಮ ಹುಡಗರಿಗೆ ಕರಕೊಂಡು ನಡಿ ಅಂತಾ ಅಂದರು, ಆಗ ನನ್ನ ತಾಯಿ ಮಾಹಾದೇವಿ  ಇವರು ಈಗ ನನ್ನ ಗಂಡ ಮನೆಯಲ್ಲಿ ಇಲ್ಲ ಬಂದ ನಂತರ ಕರಕೊಂಡು ಹೋಗರಿ ಈಗ ಯಾಕ ಜಗಳ ತಗಿತಿರಿ ಎಂದು ಹೇಳಿದಳು, ಅದಕ್ಕೆ ನನ್ನ ಗಂಡ ಏಕಾ ಏಕಿ ನನ್ನ ತಾಯಿಯ ಮೇಲೆ ಸಿಟ್ಟು ಮಾಡಿಕೊಂಡು, ನನಗೆ ಬೋಸಡಿ ನೀನು ತಂದಿ ತಾಯಿ ಮಾತೆ ಕೇಳು ಎಂದು ಕೈಯಿಂದ ನನ್ನ ಬೆನ್ನಿನ ಮೇಲೆ ಮತ್ತು ಮೈ ಕೈಗೆ ಹೊಡೆದನು, ನಂತರ ನನ್ನ ಅತ್ತೆ ಮಾವ ಇಬ್ಬರು ರಂಡಿ ಇಲ್ಲೆ ಎಷ್ಟು ದಿನ ಇರ್ತಿ ಇರು, ನಮ್ಮ ಮನೆಗೆ ಬಂದಾಗ ನಿನಗ ನೊಡಿಕೊಳ್ಳುತ್ತೆವೆ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: